November 2014

 • ‍ಲೇಖಕರ ಹೆಸರು: Tejaswi_ac
  November 30, 2014
                  ಕನಸು      ನೆರಳು ಬೆನ್ನತ್ತುವದ ನಿಲ್ಲಬಹುದೇನೋ    ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು    ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ    ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ        ಎಲ್ಲ ವಾಸ್ತವ ಒಮ್ಮೆಲೇ ಮರೆಸಿ...
 • ‍ಲೇಖಕರ ಹೆಸರು: Sunil Kumar
  November 29, 2014
  ಮೋದಿಜಿ ಸರಕಾರಕ್ಕಿಲ್ಲ' ಹನಿಮೂನ್ ಪಿರಿಯಡ್'ಭಾಗ್ಯ ನಿನ್ನೆ ರಾಹುಲ್ ಗಾಂಧಿಯವರು ಜಾರ್ಕಂಡ್ ನ ಚುನಾವಣಾ ರ್ಯಾಲಿಯೊಂದರಲ್ಲಿ ಮಾಡಿದ ಭಾಷಣವನ್ನು ಕೇಳಿದೆ.ನೀವು... ರಾಹುಲ್ ಗಾಂಧಿಯ ಭಾಷಣ ಬೇರೆ ಕೇಳ್ತೀರಾ. .? ಅಂತ ನನ್ನ ಪ್ರಶ್ನೆ ಮಾಡಬಹುದು. ....
 • ‍ಲೇಖಕರ ಹೆಸರು: Sunil Kumar
  November 29, 2014
  ಒಂದು ಅನುಭವ. .. ನಾನು ಮತ್ತು ನನ್ನ ನಾಲ್ವರು ಗೆಳೆಯರು ಉತ್ತರ ಕರ್ನಾಟಕದ ಒಂದು ಹಳ್ಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆವು.ಉತ್ತರ ಕರ್ನಾಟಕ ಮೈದಾನ ಪ್ರದೇಶ. ದೃಷ್ಟಿ ಹಾಯಿಸಿದಷ್ಟು ದೂರ ಸಮತಟ್ಟಾದ ಭೂಮಿ.ಸ್ವಲ್ಪ ಎತ್ತರದಿಂದ...
 • ‍ಲೇಖಕರ ಹೆಸರು: Prakash Narasimhaiya
  November 29, 2014
  ಬೆಳಕು  ಜಗದಾಸೆಯ ಕೂಪದಲಿ ಬಿದ್ದು  ಬೇಕುಬೇಡಗಳ ವ್ಯತ್ಯಾಸ ತಿಳಿಯದೆ  ಕಂಡದ್ದೆಲ್ಲಾ ಬೇಕೇ ಬೇಕೆಂಬ ಹುಚ್ಚು ಮೋಹಕ್ಕೆ  ಬಲಿಯಾಗಿ ಕಲೆಹಾಕುತ್ತಾ ಹಾಕುತ್ತಾ ಸಾಗುವಾಗ....  ದಿನದಿಂದ ದಿನಕ್ಕೆ ಎಲ್ಲವೂ ನೀರಸವೆನಿಸಲು  ಅವ್ಯಕ್ತ ಭಯ ಎದೆಯಾಳದಲ್ಲಿ...
 • ‍ಲೇಖಕರ ಹೆಸರು: Tejaswi_ac
  November 28, 2014
                        ನಿಷ್ಟುರ       ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು     ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ      ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ     ನನ್ನ ಬಗ್ಗೆಯೇ ಇರುವ ಕೀಳು ಆತ್ಮ ಗೌರವದಿಂದೋ...
 • ‍ಲೇಖಕರ ಹೆಸರು: ravindra n angadi
  November 27, 2014
                   ಮನುಷ್ಯ ಸುಖವ ಬಯಸಿ ದುಡಿಯುವನು                   ಹಗಲಿರಳು ದುಡಿದು ಹಣವ ಗಳಿಸುವನು                  ಆಸೆಗಳೆಂಬ ಬಿಸಿಲುಗುದುರೆ ಬೆನ್ನುಹತ್ತಿ ಓಡುವನು                  ಹಣವ ಗಳಿಸಿವ  ಆತುರದಲ್ಲಿ ಸುಖವ ಮರೆವನು...
 • ‍ಲೇಖಕರ ಹೆಸರು: Prakash Narasimhaiya
  November 27, 2014
  ಗೆಲುವಿನ ದಾರಿ                ನಾವು ಕಷ್ಟ  ದುಃಖಗಳನ್ನು ಗೆಲ್ಲಬೇಕೆಂದು ಹೊರಟರೆ, ಅದಕ್ಕೆ ಬೇರೆ ಮಾರ್ಗವಿಲ್ಲ. ಅವುಗಳನ್ನು ಅನುಭವಿಸುವುದೇ ಉತ್ತಮ ಮಾರ್ಗ; ಅವುಗಳಿಂದ ದೂರ ಓಡಬೇಕೆಂದು  ಬಯಸಿ ಪಲಾಯನ ವಾದಿಗಳಾದರೆ, ಅವುಗಳು ನಮ್ಮನ್ನು...
 • ‍ಲೇಖಕರ ಹೆಸರು: Sunil Kumar
  November 26, 2014
  ಮೋದಿ ಸರಕಾರಕ್ಕೆ ತುಂಬಿತು ಆರು ತಿಂಗಳುಗಳು ಜಾರಿಗೆ ಬಂದವು ಹತ್ತು ಹಲವು ಯೋಜನೆಗಳು ಜನಧನ ಯೋಜನೆ ತರೆಸಿತು ಏಳುಕೋಟಿ ಬ್ಯಾಂಕ್ ಖಾತೆಗಳು ತಲೆಯೆತ್ತಲಿವೆ ಭವಿಷ್ಯದಲ್ಲಿ ಸಂಸದರ ಆದರ್ಶ ಗ್ರಾಮಗಳು ದೇಶಿ ಉತ್ಪಾದನೆ ಹೆಚ್ಚಳಕ್ಕೆ ಮೇಕ್ ಇನ್ ಇಂಡಿಯ...
 • ‍ಲೇಖಕರ ಹೆಸರು: kavinagaraj
  November 26, 2014
  "ಜೀವನವೆಂದರೆ  ಶೇ.10ರಷ್ಟು ನಿಮಗೆ ಏನು ಅನುಭವಕ್ಕೆ ಬರುತ್ತದೋ ಅದು ಮತ್ತು ಶೇ. 90ರಷ್ಟು ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರೋ ಅದು!"      ಪತಿ-ಪತ್ನಿ ಇಬ್ಬರೂ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿಯಲ್ಲಿ ಇಂಜನಿಯರರು....
 • ‍ಲೇಖಕರ ಹೆಸರು: anand33
  November 26, 2014
  ನೈತಿಕ ಪೋಲೀಸ್ಗಿರಿ ವಿರುದ್ಧ ಪ್ರತಿಭಟನೆಗಾಗಿ ಕೆಲವರು ಕಿಸ್ ಆಫ್ ಲವ್ ಆಯೋಜಿಸಲು ಮುಂದಾದಾಗ ಇದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಂದು ರಾಜ್ಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಯಿತು.  ಈ ರೀತಿಯ ಪ್ರತಿಭಟನೆ ವ್ಯಕ್ತಪಡಿಸಿದ...
 • ‍ಲೇಖಕರ ಹೆಸರು: Sunil Kumar
  November 26, 2014
  ಒಂದು 'ಪವರ್ ಫುಲ್' ಕತೆ ಪತ್ರಿಕೋದ್ಯಮ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ತಮ್ಮ ವಿದ್ಯಾರ್ಥಿಗಳಿಗೆ ರಾಜ್ಯದ ಯಾವುದಾದರೂ ಪ್ರಭಾವಿ ರಾಜಕಾರಣಿಗಳ ಸಂದರ್ಶನ ಪಡೆದು ವರದಿ ತಯಾರಿಸುವಂತೆ ಸೂಚಿಸುತ್ತಾರೆ.ಅದರಂತೆ ವಿದ್ಯಾರ್ಥಿಗಳು ಪ್ರಭಾವಿ...
 • ‍ಲೇಖಕರ ಹೆಸರು: roopesh kumar
  November 25, 2014
  ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು ಎಂತದೋ ಮೇಣದಂತ ಮಣ್ಣಾಕಿಸಿ  ದಾರಿ ಮೆದುವಾಗಿಸಿದೇನೆ  , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ .  ನಾನಿಲ್ಲದ ಪಯಣ,   ಒಂಟಿತನ...
 • ‍ಲೇಖಕರ ಹೆಸರು: roopesh kumar
  November 25, 2014
  ಈ ಕಥೆಗೆ ಹತ್ತು ವರುಶ ಸುಮಾರು ವಯಸ್ಸು ... ಆತ ಕೂಲಿಯವನು, ಕಟ್ಟುಮಸ್ತಾದ ಕಪ್ಪು ದೇಹ ವಯಸ್ಸು ಮೂವತೈದರ ಹಾಸು ಪಾಸು. ಸುಮಾರು ಹನೊನ್ದು ,ಹೊತ್ತು! ಯಾರೊ ಹೆಗಲ ಮೇಲೆ ಎರಿಕೊ೦ಡು ಬ೦ದ ಬ೦ದವನಿಗೆ ಈತ ನಿತ್ಯ ತನೊಟ್ಟಿಗೆ ಮೂಟೆ ಹೊರುವಾಗ ಕೈ...
 • ‍ಲೇಖಕರ ಹೆಸರು: roopesh kumar
  November 25, 2014
  ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ,  ಒಂದು ರೂಂನಷ್ಟು ಅಗಲ .. ಆ  ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್   ಪಿ ಯು  ..ಕೆಮಿಸ್ಟ್ರಿಯದ್ದು ಒಮ್ಮೆಗೆ ನೆನಪು ಹತ್ತು ವರುಷ...
 • ‍ಲೇಖಕರ ಹೆಸರು: roopesh kumar
  November 25, 2014
  ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು   ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ  ಹೆಸರ ??  ನೂರು ನೂರು ಪ್ರಶ್ನೆಗಳ ಸಲುಹುತಿರುವವನಿಗೆ ಆ...
 • ‍ಲೇಖಕರ ಹೆಸರು: roopesh kumar
  November 25, 2014
  ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ  ತೆಕ್ಕೆಯನು ಹರಸಿದ್ದು .., ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿಸಲೆಂದೇ ಹುಟ್ಟಿದವ ?...
 • ‍ಲೇಖಕರ ಹೆಸರು: Sunil Kumar
  November 25, 2014
  ಒಂದು ಘಟನೆ ಅದೊಂದು ಪ್ರತಿಷ್ಠಿತ ಖಾಸಗಿ ಪ್ರೌಢಶಾಲೆ.ಶಾಲಾ ಆವರಣದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅ ಶಾಲೆಯ ಆಡಳಿತ ಮಂಡಳಿಯು ಹುಡುಗಿಯರಿಗೆ ಹಾಫ್ ಸ್ಕರ್ಟ್ ಬದಲು ಚೂಡಿದಾರ ಡ್ರೆಸ್ ಕೋಡ್ ಜಾರಿಗೆ ತರಲು ತೀರ್ಮಾನ ಕೈಗೊಂಡಿತು...
 • ‍ಲೇಖಕರ ಹೆಸರು: rjewoor
  November 25, 2014
  ಒಂದು ಕೆಲಸ. ಇದರಿಂದ ಸಿಕ್ಕದ್ದು 7 ದಿನ ರಜೆ. ಎಂಜಾಯ್ ಮಾಡಿದ್ದು 6 ದಿನ. ದು:ಖ ಆವರಿಸಿದ್ದು ಒಂದು ದಿನ. ಎಲ್ಲವೂ ಸೇರಿ 6+1=7 ಆಗಿದೆ. ಎಲ್ಲರೂ ಸರಿನೇ. ಆದರೆ, ಅನುಭವದಲ್ಲಿ ವ್ಯತ್ಯಾಸವಿದೆ. ಅದನ್ನ ಹೇಳೋಕನೇ ಈ ಸೈಟ್ ಬಳಸಿಕೊಂಡಿದ್ದೇನೆ....
 • ‍ಲೇಖಕರ ಹೆಸರು: modmani
  November 25, 2014
  ೧. ತಪ್ಪು ಮಾಡದವ್ರ್ ಯಾರವ್ರೇ..? ೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ. ೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ. ೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ.  ತಿಳಿಯದೇ ಮಾಡಿದರೂ ತಪ್ಪು ತಪ್ಪೇ..! ೫. ಅತ್ಯಂತ ಕೆಟ್ಟ ಸಮಯದಲ್ಲೇ...
 • ‍ಲೇಖಕರ ಹೆಸರು: naveengkn
  November 25, 2014
  ನನಗೂ  ಹಾಗು  ಹಳೇ ನೆನಪುಗಳಿಗೂ  ಮಹಾ ಸಮರ  ನಾನು ಅವುಗಳನ್ನು ಕೊಲ್ಲಲ್ಲು  ಕತ್ತಿ, ಚೂರಿ, ಖಡ್ಗಗಳನ್ನು  ಮಸೆದು ದಿನವೂ ಇರಿಯುತ್ತೇನೆ, ಅವು ಸಾಯುವ ಯಾವ  ಸೂಚನೆಯೂ ಇಲ್ಲ.  ಆ ನೆನಪುಗಳೋ,  ಯಾವ ಹತಾರೆಯೂ ಇಲ್ಲದೇ  ನನ್ನೆದೆಯನ್ನು ಒಂಚೂರು...
 • ‍ಲೇಖಕರ ಹೆಸರು: nagaraju Nana
  November 25, 2014
  ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆಯಿಂದ ಕನ್ನಡ ನೋಟ್ ಎಂಬ ಆಪ್ ಬಿಡುಗಡೆ ಗೊಳಿಸಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.ಇದರಲ್ಲಿ ಹೊಸ ಕಡತ ತೆಗೆದು ನಮಗೆ ಅವಶ್ಯವಿರುವ ಮಾಹಿತಿಗಳನ್ನು...
 • ‍ಲೇಖಕರ ಹೆಸರು: GURURAJ DESAI14...
  November 24, 2014
  ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ ಇದು ಕುಂದಾಪುರ ವಸತಿ ನಿಲಯದ ವಿದ್ಯಾರ್ಥಿಗಳ ಕಣ್ಣೀರಿನ ಕಥೆ. ನಗರದ ಹೃದಯ ಭಾಗದಲ್ಲಿರುವ ಎಸ್ಸಿ- ಎಸ್ಟಿ ವಸತಿ ನಿಲಯದಲ್ಲಿ SFI ಘಟಕ ರಚಿಸಲು ಇಲ್ಲಿಯ ಸಂಗಾತಿಗಳೊಂದಿಗೆ ಹೋಗಿದ್ದೆವು....
 • ‍ಲೇಖಕರ ಹೆಸರು: Harish Athreya
  November 23, 2014
  ರೆಕ್ಕೆ ಟೇಬಲ್ಲಿನ ಮೇಲಿದ್ದ ಪತ್ರವನ್ನು ಅವನು ದಿಟ್ಟಿಸತೊಡಗಿದ್ದ, ಜ್ಞಾನವಿಭು, ಸಣ್ನಗಿನ ದೇಹದ ಅವನಿಗೆ ಯಾವುದೇ ಬಟ್ಟೆ ಹಾಕಿದರೂ ಅದು ಮೊಳೆಗೆ ನೇತುಹಾಕಿದ ಶರ್ಟಿನಂತೆಯೇ ಕಾಣುತ್ತಿತ್ತು. ಕೂದಲಲ್ಲಿ ಹೊಟ್ಟು ಹೆಚ್ಚಾಗಿ ಹುಬ್ಬಿನ ಮೇಲೆಲ್ಲಾ...
 • ‍ಲೇಖಕರ ಹೆಸರು: Sunil Kumar
  November 23, 2014
  ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ... ಅವರು ಜಿಲ್ಲಾ ಪಂಚಾಯ್ತಿ ಸದಸ್ಯ.ಹೆಸರು ನಾರಾಯಣಪ್ಪ.ತನ್ನೂರಿಗೆ ಯಜಮಾನನ ಸ್ಥಾನದಲ್ಲಿದ್ದವರು.ಮೂರು ವರ್ಷದ ಹಿಂದೆ ತನಗಿದ್ದ ಒಬ್ಬನೇ ಮಗನಿಗೆ ಪಕ್ಕದ ಊರಿನ ಹೆಣ್ಣನ್ನು ತಂದು...
 • ‍ಲೇಖಕರ ಹೆಸರು: kavinagaraj
  November 22, 2014
      ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀರುತ್ತಿವೆ. ಎಲ್ಲಾ...
 • ‍ಲೇಖಕರ ಹೆಸರು: Sunil Kumar
  November 21, 2014
  ಕಿಸ್ ಆಫ್ ಲವ್ ಕಥೆ ಅದೊಂದು ಕಲಬೆರಕೆ ಸಂಸ್ಕೃತಿಯ ಆಧುನಿಕ ಕುಟುಂಬ.ಒಂದರ್ಥದಲ್ಲಿ ಪ್ರಗತಿಪರ ಕುಟುಂಬ ಎನ್ನಬಹುದು...!ಅ ಕುಟುಂಬದಲ್ಲಿ ಒಬ್ಬಳು ವಯಸ್ಸಿಗೆ ಬಂದ ಮಗಳು ಮತ್ತು ವಯಸ್ಸಾದರು ಅದು ಗೊತ್ತಾಗದ ಅವಳ ಅಪ್ಪಅಮ್ಮ ಇದ್ದರು.ಒಮ್ಮೆ ಪತ್ರಿಕೆ...
 • ‍ಲೇಖಕರ ಹೆಸರು: partha1059
  November 21, 2014
  ಒಂದು ಹನಿ ಕಣ್ಣೀರು: ============== ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು. ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ. "ಏನಮ್ಮ ತುಂಬಾ ಕೆಮ್ಮು...
 • ‍ಲೇಖಕರ ಹೆಸರು: H A Patil
  November 20, 2014
    ರಾಮಾಯಣ ಮಹಾಭಾರತಗಳು ಅದ್ಭುತ ‘ಮಹಾ ಕಾವ್ಯಗಳು’ ರಾಮಾಯಣ ಸೋದರ ಪ್ರೀತಿ ಬಾಂಧವ್ಯಗಳ ಪ್ರತೀಕವಾದರೆ ಮಹಾಭಾರತ ಈರ್ಷೆ ದ್ವೇಷಗಳ ನಿಲ್ಲದ ಹೋರಾಟದ ಕಥನ   ಎಲ್ಲ ಸೋದರರ ಬೆಂಬಲವಿದ್ದೂ ಅಧಿಕಾರದ ಗುದ್ದುಗೆಗೆ ಆಶೆ ಪಡದ ರಾಮ ಒಂದೆಡೆಗಾದರೆ...
 • ‍ಲೇಖಕರ ಹೆಸರು: Sunil Kumar
  November 19, 2014
  ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ..ಓದಿ ಈ ಘಟನೆ. . ಹೊಸದಿಗಂತ ಪತ್ರಿಕೆಯ ಅಂಕಣಕಾರರದ ಶ್ರೀ ಸಂತೋಷ್ ತಮ್ಮಯ್ಯನವರು ಮೊನ್ನೆ ದೂರವಾಣಿಯ ಮೂಲಕ ಮಾತಿಗೆ ಸಿಕ್ಕಿದ್ದರು.ತಮ್ಮ'ಉಘೇ ವೀರ ಭೂಮಿಗೆ' ಅಂಕಣದ ಮೂಲಕ ಹಲವರಿಗೆ ಇವರು ಚಿರಪರಿಚಿತರು....
 • ‍ಲೇಖಕರ ಹೆಸರು: hamsanandi
  November 19, 2014
  ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!   -ಹಂಸಾನಂದಿ  ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://...

Pages