August 2008

 • ‍ಲೇಖಕರ ಹೆಸರು: srinivasps
  August 31, 2008
  "ಕಳವು" ----------- "ಅರೆ! ಇದು ಮತ್ತೆ ಹೇಗಾಗಲು ಸಾಧ್ಯ!?" ಎಂದು ತಲೆ ಕೆಡಿಸಿಕೊಂಡ ರಾಜ... ತನ್ನ ಕಣ್ಣನ್ನು ನಂಬಲಾಗುತ್ತಿಲ್ಲ... ಮತ್ತೆ ತನ್ನ ಪರ್ಸ್ ನೋಡಿಕೊಂಡ...ಹೌದು! ದುಡ್ಡಿಲ್ಲ! ಈ ರೀತಿ ಕೆಲವು ದಿನಗಳಿಂದ ರಾಜನ ಪರ್ಸ್’ನಲ್ಲಿ...
 • ‍ಲೇಖಕರ ಹೆಸರು: kishoreyc
  August 31, 2008
  ಕನ್ನಡ ವಿಶ್ವವಿದ್ಯಾಲಯದ ಅ೦ತರ್ಜಾಲ ತಾಣವು ಮಾದರಿಯಾಗಿರಬೇಕೆ೦ದು ಎಲ್ಲರ ಮನದಾಳದ ಮಾತು ಅಲ್ಲವೇ. ಆದರೆ, ಹ೦ಪಿ ಕನ್ನಡ ವಿಶ್ವವಿದ್ಯಾಲಯದ ಅ೦ತರ್ಜಾಲದ ವ್ಯವಸ್ಥೆಯು ಅಷ್ಟೇನು ಹೇಳಿಕೊಳ್ಳುವ ಹಾಗಿಲ್ಲ. ತಾಣವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ...
 • ‍ಲೇಖಕರ ಹೆಸರು: ನಮ್ಮ ಕರುನಾಡು
  August 31, 2008
  ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್‍) ಮುಂಜಾನೆ ಎದ್ದು, ಒದ್ದ ಕಂಬಳಿಯ ಪಕ್ಕಕ್ಕೆ ಸರಿಸಿ - ನಮ್ನಮ್ ದೇವರ ಚಿತ್ರಾನ ನೋಡಿ, ನಂತರ ಮಡಚಿ ದಿಂಬಿನ ಮೇಲಿಟ್ಟು, ದಿನನಿತ್ಯದ ಕರ್ಮಗಳನ್ನು ಮುಗಿಸಿ,...
 • ‍ಲೇಖಕರ ಹೆಸರು: Vasanth Kaje
  August 31, 2008
    ನನ್ನ ಕಳೆದ ಬ್ಲಾಗ್ ಪೋಸ್ಟ್ ಗೆ ಪ್ರತಿಕ್ರಿಯಿಸಿ ಶೈಲಾ ಸ್ವಾಮಿಯವರು, ನಾನು ತೆಗೆದ ನೀರಿನ ಚಿತ್ರಗಳೆಲ್ಲಿ ಎಂದು ಕೇಳಿದ್ದರು... ಒಂದೆರಡು ವಾರಗಳ ಹಿಂದೆ ಕಾಸರಗೋಡು ಜಿಲ್ಲೆಯಲ್ಲಿ ನಮ್ಮ ಸಂಬಂಧಿಕರ ಮನೆಗೆ ಹೋಗಿದ್ದೆ. ಅವರು ಇನ್ನೂ...
 • ‍ಲೇಖಕರ ಹೆಸರು: Preetham Kemmayi
  August 31, 2008
  ವಿವೇಚನೆಯಿಲ್ಲದ ಒಂದೊಂದು ನಡೆಯೂ ದೊಡ್ಡ ದುರಂತಗಳನ್ನು ಸೃಷ್ಟಿಸಬಹುದು. ಅದರಲ್ಲೂ ಸರಕಾರ ತೆಗೆದುಕೊಳ್ಳುವ ನಿಧಾ೯ರಗಳು ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಪ್ರಸಿದ್ಧ ಕ್ಷೇತ್ರ ಗೋಕಣ೯ವನ್ನು ಶ್ರೀರಾಮಚಂದ್ರಾಪುರ ಮಠಕ್ಕೆ...
 • ‍ಲೇಖಕರ ಹೆಸರು: ಹರೀಶ ಕಲಕೋಟಿ
  August 31, 2008
  ಮನದ ದೀಪ ಇಂದು ಬಂದಿರುವೆ ಮನದಲಿ ಇಂಥಹ ಮನದ ಇರುಳಲಿ ಬೆಳಗು ನಿನ್ನ ನಗುವಿನ ದೀಪ ಸದಾ ಬೆಳಗುತಿರಲಿ ಆ ದೀಪ ನನ್ನಲ್ಲಿ ನಿನ್ನಯ ನಗುವಿನ ನೆನಪಲಿ ಈ ಹೃದಯ ಎಂಬ ಇಳೆಯಲಿ ಪ್ರೀತಿ ಎಂಬ ಬೀಜ ಬಿತ್ತಿ ನಿನ್ನಯ ನಗುವಿನ ಮಳೆಯು ಬರದೆ ಬೀಜ ಹೆಮ್ಮರ...
 • ‍ಲೇಖಕರ ಹೆಸರು: shylaswamy
  August 31, 2008
  ಅಗಲಿದ ಚೇತನ. ಅಪಾರಜ್ಞಾನ, ಅಷ್ಟೇ ಸೌಜನ್ಯತೆ, ಸರಳ ನೇರ ನಡೆ ನುಡಿ ಇವೆಲ್ಲವನ್ನೂ ಒಟ್ಟುಗೂಡಿಸಿದಾಗ ಎದ್ದು ಕಾಣುವ ರೂಪವೇ ಹಿರಿಯ ಸಾಹಿತಿಗಳಲ್ಲೊಬ್ಬರಾದ ಶ್ರೀಯುತ ಎಚ್.ಎಸ್.ಕೃಷ್ಣಸ್ವಾಮಿಯವರು. ಅಂಕಣಕಾರರೆಂದೇ ಖ್ಯಾತಿ ಹೊಂದಿರುವ ಅವರು...
 • ‍ಲೇಖಕರ ಹೆಸರು: Shrikantkalkoti
  August 31, 2008
  ಹೊರಟಿರುವೆ ನಾನಿಂದು ಗೆಳೆಯರನು ಅಗಲಿ ಬರುತಿರುವ ದು:ಖವನು ಹೇಗೆನಾ ನುಂಗಲಿ? ಮಾತು ಮಾತಿಗೂ ನಗುವಿನಾ ಹಾಸು ನಡುನಡುವೆ ಕೋಪದಾ ಗುಸುಗುಸು ಹ್ರದಯದೀ ಬಂದಂತಹ ಆ ಓಡನಾಟ ಕಂಡಿರದು ಜಗವು ಇಂತಹದೊಂದು ನೋಟ ಅಭ್ಯಾಸದ ಅವಧಿಯೊಳು ಮಾಡಿದಂತಹ ಮೋಜು...
 • ‍ಲೇಖಕರ ಹೆಸರು: Shrikantkalkoti
  August 31, 2008
  ವರುಷಗಳೇ ಕಳೆದವು ಆ ದಿನಗಳು ಉರುಳಿಆದರೂ ನಿನ್ನ ಕಣ್ಣಲ್ಲಿ ಅವಳ ನಿರೀಕ್ಷೆಯೇಕೆ ನಿನ್ನ ಪ್ರೀತಿಯ ಕಂಡೂ ಕಾಣದವರುನೆನೆಯಲು ಇನ್ನೂ ಅರ್ಹರೇ? ಏಕೆ ನಿನ್ನ ಪ್ರೀತಿಗೆ ಯಾರು ದ್ರೋಹ ಬಗೆದರೋಅವರ ಸ್ಥಿರಚಿತ್ರ ನಿನ್ನ ಬಳಿಯೇಕೆ ನಿನ್ನ ಹೂವಂತಹ...
 • ‍ಲೇಖಕರ ಹೆಸರು: Shrikantkalkoti
  August 31, 2008
  ನಿನ್ನ ಮೊಗದ ನಗುವಿಗಾಗಿ ಕ್ಷಣ ಕ್ಷಣ ನಾ ಜಪಿಸುವೆ ಆ ಕ್ಷಣದ ನಗುವಿನಲ್ಲಿ ಪ್ರತಿ ಕ್ಷಣ ನಾ ಬದುಕುವೆ ನಿನ್ನ ಮಧುರ ಮಾತುಗಳಲಿ ನನ್ನೇ ನಾ ಮರೆಯುವೆ ಆ ಮುತ್ತಿನ ಪ್ರತಿ ಶಬ್ದದಲ್ಲಿ ನನ್ನ ಹೆಸರ ಹುಡುಕುವೆ ನಿನ್ನ ಓರೆಗಣ್ಣಿನ ನೋಟಕ್ಕಾಗಿ ಹಗಲಿರುಳೂ...
 • ‍ಲೇಖಕರ ಹೆಸರು: Shrikantkalkoti
  August 31, 2008
  ವಾದನಗಳ ವಂದನೆ ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ ಸುರಗಳ ಪ್ರತಿಶಬ್ದದಲ್ಲಿ ಹಿಂದುತ್ವದ ಘೋಷಣೆ |ಪ| ಸಿಂಹಗಳ ಗುಂಪಿದು ತಾಳಕೆ ಹೊಂದುತ ರಾಷ್ತ್ರಾಭಿಮಾನದ ವಾದ್ಯವ ನುಡಿಸುತ ನಾಭಿಯಿಂದ ಬಂದಂತಹ ಹಿಂದುತ್ವದ ಧ್ವನಿಯಿದು...
 • ‍ಲೇಖಕರ ಹೆಸರು: ranjith
  August 31, 2008
  ಯಾಕೆ ದಡಕ್ಕೆ ಬಂದೂ ಬಂದೂ ಅಲೆಗಳು ಆತ್ಮಹತ್ಯೆ ಮಾಡಿ ಕೊಳ್ಳುತವೆ? ಯಾರದೋ ದುಃಖಕ್ಕೆ ಯಾಕೆ ಮಳೆ ಅಷ್ಟು ಭೋರೆಂದು ಅಳುತ್ತದೆ? ಯಾರಾದರು ಅದಕ್ಕೆ ಹೇಳಿ ಕೊಡಬೇಕಿದೆ ಈಗ.. ನನ್ನಂತೆ …. ಎಂಥ ನೋವಿದ್ದರೂ ಅವುಡುಗಚ್ಚಿ ಸುಮ್ಮನಾಗುವುದನ್ನು ......
 • ‍ಲೇಖಕರ ಹೆಸರು: ASHOKKUMAR
  August 31, 2008
  ಹರಿಣಿ ತರಂಗ ವಾರಪತ್ರಿಕೆ ಆರಂಭವಾದಾಗ,ಅದರಲ್ಲಿ ಗಮನ ಸೆಳೆದಿದ್ದು ವ್ಯಂಗ್ಯಚಿತ್ರಗಳು. ಅದುವರೆಗೆ ಕನ್ನಡ ಪತ್ರಿಕೆಗಳು ನೀಡದಿದ್ದ ಪ್ರಾಶಸ್ತ್ಯವನ್ನು ತರಂಗದಲ್ಲಿ ವ್ಯಂಗ್ಯಚಿತ್ರಕ್ಕೆ ನೀಡಲಾಗಿತ್ತು.ವ್ಯಂಗ್ಯಚಿತ್ರದಲ್ಲಿ ಹರಿಣಿ ಎನ್ನುವ...
 • ‍ಲೇಖಕರ ಹೆಸರು: pallavi.dharwad
  August 31, 2008
  ಆತ್ಮೀಯ ಸಂಪದಿಗರಿಗೆ, ಕಾರಣಾಂತರಗಳಿಂದ ಸಂಪದದಲ್ಲಿರುವ ನನ್ನ ಬ್ಲಾಗ್‌ಗೆ ವಿದಾಯ ಹೇಳುತ್ತಿದ್ದೇನೆ. ಇದಕ್ಕೆ ಖಿನ್ನತೆ ಖಂಡಿತ ಕಾರಣವಲ್ಲ. ಇಷ್ಟು ದಿನಗಳ ಕಾಲ ನನ್ನ ಬರಹಗಳನ್ನು ಪ್ರಕಟಿಸಲು ಅವಕಾಶ ಹಾಗೂ ಪ್ರೋತ್ಸಾಹ ನೀಡಿದ ಹರಿಪ್ರಸಾದ ನಾಡಿಗ್...
 • ‍ಲೇಖಕರ ಹೆಸರು: pallavi.dharwad
  August 31, 2008
  "ಬಹಳ ಕಷ್ಟ" ಹಾಗ೦ತ ನಾವೆಲ್ಲಾ ಎಷ್ಟು ಸಾರಿ ಅ೦ದುಕೊ೦ಡಿಲ್ಲ? ಸೀಟು ಹಿಡಿಯುವುದರಿ೦ದ ಹಿಡಿದು ಪ್ರಶಸ್ತಿ ಪಟ್ಟಿಯಲ್ಲಿ ಸೀಟು ಗಿಟ್ಟಿಸುವವರೆಗೆ, ಬರೆದ ಲೇಖನ ಪ್ರಕಟವಾಗುವದರಿ೦ದ ಹಿಡಿದು ಪತ್ರಿಕೆಯೊ೦ದನ್ನು ಯಶಸ್ವಿಯಾಗಿ ನಡೆಸುವ ತನಕ ಪ್ರತಿಯೊ೦ದು...
 • ‍ಲೇಖಕರ ಹೆಸರು: Jayalaxmi.Patil
  August 31, 2008
  ’ಮುಂಬೈ ಮೇರಿ ಜಾನ್’ ಒಂದು ಸದಭಿರುಚಿಯ ಚಿತ್ರ. ಮುಂಬೈ ನನ್ನ ಪ್ರೀತಿಯ ಊರು ಅನ್ನುವ ಕಾರಣಕ್ಕಷ್ಟೆ ಹೇಳುತ್ತಿಲ್ಲ ನಾನು, ೨೦೦೬ರಲ್ಲಿ ಲೋಕಲ್ ಟ್ರೇನ್‍ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಂತರ ಮುಂಬೈ ಜೀವಗಳ ತಲ್ಲಣಗಳನ್ನು ವೈಭವಿಕರಿಸದೆ ತುಂಬಾ...
 • ‍ಲೇಖಕರ ಹೆಸರು: venkatesh
  August 31, 2008
  * ಅಮೆರಿಕ ಕನ್ನಡ ಕೂಟಗಳ ಆಗರ "ಅಕ್ಕ" ಮತ್ತು ಸ್ಥಳೀಯ ವಿದ್ಯಾರಣ್ಯ ಕನ್ನಡ ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಈ ಸಮ್ಮೇಳನವು ಅದ್ದೂರಿಯಾಗಿ ಮತ್ತು ಅಚ್ಚುಕಟ್ಟಾಗಿ ನಡೆಯುತ್ತಿವೆ. ಆಗಸ್ಟ್, ೨೯, ಶುಕ್ರವಾರ ಸಾಯಂಕಾಲ ಆರಂಭವಾದ...
 • ‍ಲೇಖಕರ ಹೆಸರು: kannadakanda
  August 30, 2008
  ಮುಗುಳುನಗೆಯೆಂದರೇನು ನೀ ಕೇಳು ನೋಡಾ ನಗುವಾಗ ಕೋರೆಹಲ್ಗಳ ಮೊಗದೊಳು ತೋಱಿಯುಂ ತೋಱದಿರುವಂತೆ ನಗುವುದ್ದು ಜನರ ಮೋಡಿ ಮಾಡಿ||
 • ‍ಲೇಖಕರ ಹೆಸರು: kannadakanda
  August 30, 2008
  ಬಾಳೆಯ ಹೆಜ್ಜೆಯ ನೀರೊಳು ಗುಱುತಿಸುವುದು ಬಾೞೆಹಣ್ಣು ತಿಂದಂತಲ್ಲ ಬಾೞುವಾಗ ನೀತಿಗೆಡದಂತೆ ನಡೆವುದು ಬಾಳಲುಗ ಮೇಲೆ ನಡೆದಂತೆ|| ಈ ಮೇಲಿನ ಪದ್ಯ ೞ ಮತ್ತು ಳ ಕಾರದ ಪದಗಳ ಅರ್ಥವ್ಯತ್ಯಾಸ ಕುಱಿತು ಹೇೞುವ ಸರಳ ಪದ್ಯ.
 • ‍ಲೇಖಕರ ಹೆಸರು: Anil bharadwaj
  August 30, 2008
  ಹೀಗೆ ಎಂದಿನಂತೆ ಶನಿವಾರ ಸಂಜೆ ಸ್ಟುಡಿಯೋದಲ್ಲಿ ಲೈವ್ ಕಾರ್ಯಕ್ರಮ ನಡೆಸುತ್ತಿದ್ದೆ. ಅದು ಒರಿಸ್ಸಾದಲ್ಲಿನ ಕ್ರೈಸ್ತರ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಕ್ರೈಸ್ತ ಶಾಲೆಗಳು ರಾಜ್ಯದಲ್ಲಿ ಬಂದ್ ಮಾಡಿದ್ದ ಬಗ್ಗೆ ಪರ ವಿರೋದ ಚರ್ಚೆ ನಡೆಯುತ್ತಿತ್ತು...
 • ‍ಲೇಖಕರ ಹೆಸರು: D.S.NAGABHUSHANA
  August 30, 2008
  ಮಾನವತೆಯ ಬೆಳೆಗಾರ ಫುಕುವೋಕಾ ನಮ್ಮ ಬಹು ಪ್ರಾಚೀನ 'ಪ್ರಗತಿಪರ' ರೈತರಾದ ಶಿವಮೊಗ್ಗದ ಪ್ರಫುಲ್ಲಚಂದ್ರ ಕೊನೆಗೂ ತಮ್ಮ ಗದ್ದೆಯ ಕೂಳೆಯನ್ನು ಕಡಿದು ಹಾಕಿದ ದಿನವೇ, ಕೃಷಿಋಷಿ ಮಸನೊಬು ಫುಕುವೊಕಾ ನಿಧರಾದ ಸುದ್ದಿ ಬಂದಿದೆ! ಪ್ರಫುಲ್ಲಚಂದ್ರ 28...
 • ‍ಲೇಖಕರ ಹೆಸರು: D.S.NAGABHUSHANA
  August 30, 2008
  ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ _ ರೈತ ಭಾರತ: ಅವಸಾನದ ಅಂಚಿನಲ್ಲಿ ಸ್ವತಂತ್ರ ಭಾರತದ 61 ವರ್ಷಗಳ ಇತಿಹಾಸವನ್ನೊಮ್ಮೆ ತಿರುಗಿ ನೋಡಿದಾಗ ಅನೇಕ ಏಳು-ಬೀಳುಗಳು ಕಾಣಸಿಗುತ್ತವೆ. ಸ್ವಾತಂತ್ರ್ಯಕ್ಕಾಗಿ ಆರಂಭವಾದ ಹೋರಾಟ ಸಮಾನತೆಗಾಗಿ ನಡೆದ...
 • ‍ಲೇಖಕರ ಹೆಸರು: shashikannada
  August 30, 2008
  ಪ್ರಸ್ತುತ ಕಾಶ್ಮೀರದಲ್ಲಿ ಉಂಟಾಗಿರುವ ಅಮರ್‌ನಾಥ್ ಭೂವಿವಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ನಿನ್ನೆ "ಕಾಶ್ಮೀರ ಯಾರಿಗೆ ಸೇರಿದ್ದು" ಎನ್ನುವ ಲೇಖನವನ್ನು ನನ್ನ ಬ್ಲಾಗ್‌ನಲ್ಲಿ ಪ್ರಕಟಿಸಿದ್ದೆ. ಕಾಕತಾಳೀಯವೆಂಬಂತೆ ಕನ್ನಡ ಪತ್ರಿಕೋದ್ಯಮದ ಪ್ರಮುಖ...
 • ‍ಲೇಖಕರ ಹೆಸರು: omshivaprakash
  August 30, 2008
   ಎಲ್ಲಾ ಸರಿ, ಉಬುಂಟು ಹಾಕಿ ಕೊಂಡಿದ್ದಾಯಿತು. ಇದುವರೆಗೆ ಬರೀ ಕನ್ನಡದಲ್ಲಿ ಟೈಪ್ ಮಾಡಿದ್ದಾಯಿತು. ನನ್ನ ಗಣಕತೆರೆ‌(Desktop)ನಲ್ಲಿರೋ ಮೆನು, ಇತ್ಯಾದಿ, ಸೂಚನೆ ಸಲಗೆಗಳು, ದಿನಾಂಕ ಇತ್ಯಾದಿ ಕನ್ನಡದಲ್ಲಿ ಬರೋದಿಲ್ಲವೆ?  ಬರತ್ತೆ, ನಿಮ್ಮ...
 • ‍ಲೇಖಕರ ಹೆಸರು: ranjith
  August 30, 2008
  ನೀನಲ್ಲಿ ಹಾಯಾಗಿ ಮಗ್ಗಲು ಬದಲಿಸಿದರೆ ನನ್ನೊಳಗಿನ ಜೀವ ಮುದದಿ ಮಿಸುಕಾಡುವುದು… ಮಿದು ಪಾದಕ್ಕೊಂದು ಕಟು ಕಲ್ಲು ಚುಚ್ಚಿದರೆ ನನ್ನೀ ಕಾಲುಗಳಲ್ಲಿ ರಕುತ ಜಿನುಗುವುದು… ಕಣ್ಣ ಹನಿಯುಕ್ಕಿ ಉದುರುವ ಧೈರ್ಯ ತೋರಿದರೆ ನನ್ನೆದೆಯ ನೀಲಿ ಹೂವು...
 • ‍ಲೇಖಕರ ಹೆಸರು: navilugari
  August 30, 2008
  ಹೊರಗೆ ಹೊಟ್ಟೆಕಿಚ್ಚಾಗುವಷ್ಟು ಮಳೆ ಸುರೀತಿದೆ. ಇದೇ ಸರಿಯಾದ ಸಮಯ ಅಂದುಕೊಂಡ ನಿನ್ನ ನೆನಪುಗಳು ಅಂತ ಜಡಿಮಳೆಗೆ ಪ್ರತಿಸ್ಪರ್ದಿಯೇನೊ ಅನ್ನುವಂತೆ ಈ ಎದೆಯ ಹೊಲದೊಳಗೆ ಸುರೀತಿವೆ. ಅಲ್ಲಿ ಭೂರಮೆ ಹಚ್ಚ ಹಸಿರಿನಿಂದ ಶೃಂಗಾರಗೊಳ್ಳಲು ತಯಾರಿ...
 • ‍ಲೇಖಕರ ಹೆಸರು: navilugari
  August 30, 2008
  ಬೆಳಗ್ಗೆ ಎದ್ದು ಕೂತೆನೆಂದರೇ ರಾತ್ರಿ ಕನವರಿಸಿದ ನಿನ್ನ ಮಲ್ಲಿಗೆ ನೆನಪುಗಳ ಸರಮಾಲೆ ಮತ್ತೆ ಮತ್ತೆ ಕಾಡತೊಡಗುತ್ತದೆ ಗೆಳೆಯ. ಮೇಲೇಳಲಾಗದೇ ಮತ್ತೆ ನಿನ್ನ ನೆನಪುಗಳ ರಗ್ಗು ಹೊದ್ದು ಮಲಗಿದರೆ ಮತ್ತೆ ನಿನ್ನ ಬಂಗಾರದ ಬೆರಳ ಕಚಗುಳಿಯಿಟ್ಟಂತಾಗಿ...
 • ‍ಲೇಖಕರ ಹೆಸರು: ranjith
  August 30, 2008
  ಅಮ್ಮನಿಗೆ ಮೊಬೈಲ್ ಕಂಡರೆ ಆಗಲ್ಲ. ಮಗನ ಜತೆ ಮಾತನಾಡಬಹುದು ಅನ್ನುವ ಒಂದು ಕಾರಣ ಇಲ್ಲದೇ ಹೋಗಿರದಿದ್ದರೆ ಅದನ್ನು ಯಾವಾಗಲೋ ಎಸೆದಿರುತಿದ್ದಳು ಅನ್ನಿಸುತ್ತೆ. ಮೊಬೈಲ್ ನಲ್ಲಿ ಕರೆ ಸ್ವೀಕರಿಸುವ ಗುಂಡಿ ಬಿಟ್ಟರೆ ಬೇರೇನೂ ಒತ್ತಲು ಗೊತ್ತಿಲ್ಲ....
 • ‍ಲೇಖಕರ ಹೆಸರು: nagenagaari
  August 30, 2008
  ನಗು ಸಹಜವೋ, ಗಾಂಭೀರ್ಯ ಸಹಜವೋ? ಇದೊಂದು ಸರಳವಾದ ಪ್ರಶ್ನೆ. ಸಣ್ಣಸಣ್ಣದಕ್ಕೂ ನಗುತ್ತಾ, ಮುಸಿಮುಸಿ ಎಂದು ಹಲ್ಕಿರಿಯುತ್ತಾ, ವಿನಾಕಾರಣ ನಗುವ ಮಕ್ಕಳು ಕೊಂಚ ಬೆಳೆಯುತ್ತಿದ್ದಂತೆಯೇ ಅವರಿಗೆ ದೊಡ್ಡವರು ‘ಸ್ವಲ್ಪ ಗಂಭೀರವಾಗಿರುವುದನ್ನು ಕಲಿತುಕೋ’...
 • ‍ಲೇಖಕರ ಹೆಸರು: nagenagaari
  August 30, 2008
  (ನಗಾರಿ  ರಾಷ್ಟ್ರೀಯ ಸುದ್ದಿ ಬ್ಯೂರೋ) ಕಡೆಗೂ ತಾವು ವಿದೇಶಿ ಹಸ್ತಗಳ ಹಿಡಿತದಲ್ಲಿಲ್ಲ ಎಂಬುದನ್ನು ಮಾನುಅ ನಿಧಾನಿ ಮೋಹನ ಮನ ಸಿಂಗರು ಕಳೆದ ವಿಶ್ವಾಸಮತ ಕೋರಿಕೆಯ ಸಂದರ್ಭದಲ್ಲಿ ಜಗಜ್ಜಾಹೀರು ಮಾಡಿದ್ದಾರೆ. ದೇಶದ ಆಮ್ ಆದ್ಮಿಗೆ ನಮ್ಮ ನಿಧಾನಿ...

Pages