ಹೊಸ ಸದಸ್ಯರ ಪರಿಚಯ...

1
ನವ ಸದಸ್ಯರು ತಮ್ಮ [:http://sampada.net/n...|ಪರಿಚಯವನ್ನು ಈ ಸಂಪರ್ಕದಲ್ಲಿ ನೀಡಬಹುದು]. ನಿಮ್ಮ ಹೆಸರು, ಉದ್ಯೋಗ, ಕನ್ನಡದೊಂದಿಗಿನ ನಂಟು, ಹಾಗೂ ವಾಸವಾಗಿರುವ ಸ್ಥಳ - ಈ ವಿಷಯಗಳನ್ನು ತಿಳಿಸಿ ನಿಮ್ಮ ಪರಿಚಯವನ್ನು ಸೇರಿಸಬಹುದು. ಹೊಸ ಫಾರಮ್ ವಿಷಯವೊಂದರಲ್ಲಿಿ ನಿಮ್ಮ ಪರಿಚಯವನ್ನು ನೀಡಿ. 'ಸಂಪದ'ದ ಬಗ್ಗೆ ನಿಮಗೆ ಹೇಗೆ ತಿಳಿದುಬಂತು ಎಂಬುದನ್ನೂ ತಿಳಿಸಿದರೆ ಉಪಯೋಗವಾಗುವುದು. ಪರಿಚಯ ನೀಡುವ ಮುನ್ನ [:http://sampada.net/w...|ಸ್ವಾಗತ ಪತ್ರವನ್ನು ಓದಿ].
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪದಕ್ಕೆ ನಾನು ಇವತ್ತು ಸದಸ್ಯಳಾದೆ. ಸಾಹಿತ್ಯದಲ್ಲಿ ನನಗೆ ತಕ್ಕಮಟ್ಟಿಗೆ ಅಭಿರುಚಿ ಇದ್ದರೂ ನಾನು ಸಕ್ರಿಯವಾಗಿ ಭಾಗವಹಿಸುವುದು ಕಷ್ಟವೋ ಏನೋ. ಹನ್ನೆರಡು ವರ್ಷಗಳ ಹಿಂದೆ ಮೆಡಿಕಲ್ ಕಾಲೇಜಿಗೆ ಸೇರಿದ್ದೇ ತಡ. ನನ್ನ ಕನ್ನಡ ಬರವಣಿಗೆ ಕ್ಷೀಣವಾಗುತ್ತಾ ಹೋಯಿತು. ಈಗ ಕನ್ನಡ ಶಬ್ದಪರದಾಡುವ ಪ್ರಸಂಗ ಬಂದಿದೆ. ಸಂಪದದಲ್ಲಿ ಭಾಗವಹಿಸುತ್ತಿರುವವರು ಹೆಚ್ಚಿನವರು ಸಾಫ್ಟ್ ವೇರ್ ಇಂಜಿನಿಯರ್ ಗಳು. ಅವರ ಕನ್ನಡದ ಅಭಿರುಚಿ ನನಗೆ ತುಂಬ ಸಂತಸ ಉಂಟುಮಾಡಿದೆ. ನಿಧಾನವಾಗಿ ನಾನೂ ಏನಾದರೂ ಬರೆಯಲು ಪ್ರಯತ್ನಿಸುತ್ತೇನೆ.

ಹೆಚ್ಚು ಹೆಚ್ಚು ಬರೆಯಲು ಯತ್ನಿಸಿ. ನೀವು ವಿಚಿತ್ರಾನ್ನ ಗುಂಪಿನ ಸದಸ್ಯೆ ಅನ್ನುವುದನ್ನು ಗಮನಿಸಿದೆ.