ಅಮ್ಮ

ಅಮ್ಮನ ಪ್ರೀತಿ

ಅಮ್ಮ ನಿನ್ನ ಬಗೆಗೆ ಬರೆಯ ಹೊರಟೆ
ಬರಿಯ ಪದಗಳು ನಿಲುಕವು ಆ ನಿನ್ನ ಪ್ರೀತಿ
ಬಿಡಿಸಿದೆ ಬಣ್ಣವ ಸಿಡಿಸಿದೆ
ತೋರಲಾಗದೆ ಹೋದೆ ನಿನ್ನ ಮಮತೆಯ ರೀತಿ
ಅಮ್ಮ ನಿನ್ನ ಹಿಡಿಯಲಾರೆ
ನಿನ್ನ ಪೂರ್ಣ ಅರಿಯಲಾರೆ
ಬೆಳೆದರೆಷ್ಟು ಎತ್ತರ
ಕೂಸೆ ಅಲ್ಲವೆ ಎಂದಿಗೂ ನಾನು
ಅಮ್ಮನೆ ತಾನೆ ಎಂದೆಂದಿಗೂ ನೀನು
ಅಮ್ಮನಿಗೂ ಹಸಿವಿಗೂ ಅದೆಂತ ಜೋಡಿ?
ಅಮ್ಮನ ಬಗೆಗೆ ಬರೆಯ ಹೊರಟೆ
ಬರೆವುದ ನಿಲ್ಲಿಸಿ ಅಡುಗೆ ಕೋಣೆಗೆ ಓಡಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಪ್ಪ ಅಮ್ಮ ರೈತರು

ಮೂಡಣದಲಿ ಸೋರ್ಯಬಂದಿಲ್ಲ
ಮಂಜ ಹನಿಯು ಚಳಿಯು ಹೊರಗೆಲ್ಲ
ಆಗಲೆ ಎದ್ದ ನನ್ನಪ್ಪ
ಎದ್ದಳು ನನ್ನಮ್ಮ
ಹಾಲು ಕರೆದು ಕರುವ ಬಿಟ್ಟು
ಅಂಗಳಕೆ ರಂಗೋಲಿ ಇಟ್ಟು
ಭುಜವ ತಟ್ಟಿ ಎಚ್ಚರಿಸಿದಳು
'ಏಳಿಮಕ್ಕಳೆ, ಏಳಿ'
ನಾನು ನನ್ನ ತಂಗಿ
ಎದ್ದು ಹಲ್ಲ ಉಜ್ಜಲು
ಬೆಳಗಾಗಿತ್ತು ಬಿಸಿಲು ತಾಕಿತ್ತು
ಪ್ರತಿದಿನ ಪ್ರಾತಃ ಕಾಲ
ತಪ್ಪದೆ ಏಳುವನು ಅಪ್ಪ
ಚಳಿಗೂ ಮಳೆಗೂ ಲೆಕ್ಕಿಸದೆ
ಹೊಲಕೆ ಹೋಗಿ ಹಸುವಕಟ್ಟಿ
ತೋಟಕ್ಕೊಂದು ಸುತ್ತು ಹಾಕಿ
ನಾನು ತಂಗಿ ಏಳೊ ವೇಳೆಗೆ
ಮನೆಗೆ ಬರುವನು
ಆಟ ಪಾಠ ನಮ್ಮ ಚಿಂತೆ
ಜೀವನ ನಡೆಸುವುದೇ ಅವರ ಚಿಂತೆ
ನಮ್ಮನು ಶಾಲೆಗೆ ಹೊರಡಿಸಿ
ಕೆಲಸಕೆ ಹೊರಡುವರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಈಗ ನಾನವಳಿಗೆ ಅಮ್ಮನಾಗುತ್ತೇನೆ..!!

ಸುಮ್ಮನೇ ಬಿಡಲಾಗದು.. ಕೊಡುವುದೆಲ್ಲವನ್ನೂ
ಕೊಟ್ಟರೆ ತಡೆದುಕೊಳ್ಳುವ ಶಕ್ತಿ ಬೇಡವೇ
ಸುಮ್ಮನಿದ್ದು ಬಿಡಿ! ಏನೂ ಔಷಢ ಕೊಡಿಸೋದೇ ಬೇಡ!
ಮದ್ದೇ ಕೊಡದಿದ್ದರೆ ಬದುಕುವುದಾದರೂ ಹೇಗೆ?

ಮಾತುಗಳು ತಲೆಗಳಿಗೊ೦ದಾದರೂ ತಡೆಯುವುದು ಕಷ್ಟವಾಗಲಿಕ್ಕಿಲ್ಲ!!
ನೋವನುಭವಿಸುವ ಕ೦ಗಳಲ್ಲಿನ ನರಳಿಕೆಗಳ
ಗೆರೆಗಳ ನೋಡಿ ತಡೆಯಲಾಗಲಿಕ್ಕಿಲ್ಲ..
ಅ೦ಥಿ೦ಥಾದ್ದಲ್ಲ ಅದು ಅರ್ಬುದ!

ಎಲ್ಲವನ್ನೂ ತಿ೦ದು, ಕುಡಿಯುವ ಆಸೆಯಾದರೂ
ಗ೦ಟಲು ಒಳಗಿಳಿಸಿಕೊಳ್ಳಬೇಕಲ್ಲ!
ಜೀವಜಲವೂ ತಿರಸ್ಕರಿಸಲ್ಪಟ್ಟರೆ ದೇಹಕ್ಕಿನ್ನಾವ ಆಸರೆ?

ದಯಾಮರಣ ಬೇಡ! ಇರುವಷ್ಟು ದಿನ ನವೆಯುವುದೂ ಬೇಡ..
ಅವಳು ನನ್ನಮ್ಮ.. ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿಯೇ
ನೋಡಿಕೊಳ್ಳುವುದಕ್ಕೆ ನನಗೇನೂ ಬೇಸರವಿಲ್ಲ!
ಮಾಡಿದ ಖರ್ಚು ಜೀವ ವುಳಿಸುವುದೇ?
ಮು೦ದಿನದಕ್ಕೆ ಈಗ್ಯಾಕೆ ಚಿ೦ತೆ?
ಮಾಡುವ ಪ್ರಯತ್ನ ನಮ್ಮದು!

ನಮಗೂ ಅವಳು ಹಾಗೇ ಮಾಡಿದ್ದರೇ?
ತಾನು೦ಡು ನಮ್ಮನ್ನು ಉಪವಾಸ ಕೆಡವಿದ್ದರೆ!
ನಮ್ಮ ಕ೦ಬನಿಗಳಿಗೆ ತಾನೂ ಕ೦ಬನಿಯಾಗಿರದಿದ್ದರೆ,
ಅವಳು ನನ್ನಮ್ಮ... ಈಗ ನಾನವಳಿಗೆ ಅಮ್ಮನಾಗುತ್ತೇನೆ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಗೆಳತಿ

ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು...

... ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಸರಣಿ: 

ಅಮ್ಮ

ಅವಳು ಹಾಗೆ,ಚಿಂತೆಯಲ್ಲ ಒಡಲಲಿಟ್ಟು
ಹೂ ನಗೆಯ ಮಳೆಯ ಸುರಿಸುವವಳು
ಉಕ್ಕಿಬರುವ ದುಃಖವನ್ನು ನಗೆಯನಾಗಿಸುವವಳು
ತನ್ನ ತಾನೆ ಸುಟ್ಟುಕೊಂಡು
ನಮ್ಮ ಮನೆಯ ಬೆಳಗುತಿಹಳು
ಎಲ್ಲರುಂಡಮೇಲೆ ಉಂಡು
ನಮ್ಮ ಹಸಿವ ನೀಗಿಸುವವಳು
ನಮ್ಮ ನಲಿವೆ ಅವಳ ನಲಿವು
ನಮ್ಮ ನೋವೆ ಅವಳ ನೋವು
ನಮ್ಮ ಕನಸಿಗಾಗಿ ತನ್ನ ಕನಸ
ಕೊಲ್ಲುತಿಹಳು.
*********************
ಎಮ್.ಡಿ.ಎನ್.ಪ್ರಭಾಕರ್
******************

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಲ್ನೋಡಲ್ಲಿ ಗೊಗ್ಗಯ್ಯ

ಈ ಲೇಖನ ಯಾವತ್ತೋ ಬರೀ ಬೇಕಿತ್ತು ಆಗಿರ್ಲಿಲ್ಲ. ಇಷ್ಟೊಂದು ದಿನ ಗೊಗ್ಗಯ್ಯನ್ನ ತಮ್ಮ ಮಕ್ಕಳಿಗೆ ತೋರಿಸ್ಲಿಕ್ಕಾಗದಿದ್ದ ತಾಯಂದಿರೇ ಕ್ಷಮೆಯಿರಲಿ :).. ಇನ್ಮುಂದೆ ಮಕ್ಕಳನ್ನ ಹೆದರಿಸ್ತೀರೋ, ನಗಿಸ್ರೀರೋ ನಿಮಗೆ ಬಿಟ್ಟ ವಿಷಯ. ಯಾಕಂದ್ರೆ ಗೊಗ್ಗಯ್ಯ ಇಲ್ಲವನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮ್ಮನ ಕೋಪ...

ತುಂಟಾಟ ತಾಳದೆ ಮುನಿದು, ದುರುದುರನೆ ದೂರ ಸರಿದಳು ಅಮ್ಮ
ಒಲವೇ ಕಂಡ ಕಂದನಿಗೆ ಅವಳ ಕಂಗಳಲೂ ಕಂಡಿತು ಗುಮ್ಮ

ಅಮ್ಮನವತಾರವ ಕಂಡು ಬೆದರಿ ಥರಥರನೆ ನಡುಗಿದನು ಪುಟ್ಟ
ಚೆನ್ನಿಲ್ಲದಾ ಕೋಪ ಬೇಡವು ಎಂದು ನಿಂತ ನೆಲದೀ ತಾನು ನೆಟ್ಟ

ತಣಿಯದಮ್ಮನ ಕೋಪ, ಬರಳು ಅಮ್ಮನು ಬಳಿಗೆ, ಸರಿಯಿತು ವಿರಸದಾ ಗಳಿಗೆ
ಮುನಿದ ಅಮ್ಮನಾ ಒಲಿಸುವುದು ಹೇಗೆಂದು ಎಣಿಸುತಾ ನಿಂತನೊಂದುಗಳಿಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಂದಿರನ ನೋಡಿದವ

ಡರ್ಶು ಸಹಜ ಜೀವನ ನಡೆಸುವ ಸಾಮಾನ್ಯ ಮನುಷ್ಯ. ಅವನನ್ನು ಕಳ್ಳನೆಂದೂ, ಕೆಟ್ಟವನೆಂದೂ ಓರೆಗಣ್ಣಿನಲ್ಲಿ ನೋಡುವವರೇ ಹೆಚ್ಚು. ಇವ ಕಾಡಿನಲ್ಲಿ ಬೇಟೆಯಾಡುತ್ತ, ಅಲೆಯುತ್ತ ಜೀವನ ಸಾಗಿಸುವವ. ಒಂದು ದಿನ ಇವನನ್ನು ಭೇಟಿ ಮಾಡುವವರಲ್ಲಿ ಸರ್ವೇ ತಂಡದ ಮುಖ್ಯಸ್ಥ ಸರಕಾರದ ಆಫೀಸರ್ ಕೂಡ ಇರುತ್ತಾನೆ. ಅವನು ಡರ್ಶುವಿನಲ್ಲೂ ವಿಶಿಷ್ಟವಾದ ಗುಣವೊಂದನ್ನು ಕಾಣುತ್ತಾನೆ. ಆದರೆ ಅದು ಉಳಿದವರಿಗೆ ಬಯಲಾಗುವುದು ಡರ್ಶು ಅವರೊಂದಿಗೆ ತನಗಿರುವ ಕಾಡಿನ ಮೂಲೆ ಮೂಲೆಯ ಪರಿಚಯವನ್ನು ಹಂಚಿಕೊಳ್ಳುತ್ತ ಕಷ್ಟ ಸುಖಗಳಲ್ಲಿ ಭಾಗಿಯಾದ ಮೇಲೇನೆ. ಡರ್ಶು ಏನೂ ಬಯಸದೆ, ಕೊನೆಗೆ ಬರಬಹುದು ಎಂದೂ ಆಲೋಚಿಸದ ಒಂದು ಕೋವಿಗಾಗಿ ಎಲ್ಲ ಕೆಲಸ ಮಾಡುವುದು ಈಗಿನ ನಮ್ಮ urban ಜಗತ್ತಿಗೆ ಪರಿಚಯವೇ ಇಲ್ಲದ ಗುಣ. ಅದೆಲ್ಲ ಇರಲಿ, ಸರ್ವೇ ಉದ್ದಕ್ಕೂ ಜೊತೆ ನೀಡಿದ ಡರ್ಶು ಹೊಸ ಕೋವಿ ಹಿಡಿದು ಒಮ್ಮೆ ಕಾಡಿನಲ್ಲಿ ಬೇರೇನೋ ಹೊಡೆಯಲು ಹೋಗಿ ಹುಲಿಯೊಂದನ್ನು ಹೊಡೆದುಬಿಡುತ್ತಾನೆ. ಹುಲಿ ಹೊಡೆದಿದ್ದೇನೆಂದು ತಿಳಿದ ಕೂಡಲೆ ಅವನಲ್ಲಿ ಖಿನ್ನತೆ ಆವರಿಸಿಬಿಡುತ್ತದೆ.

ಏನು ಬೇಟೆಯಾಡಿದರೂ ಹುಲಿಯನ್ನು ಹೊಡೆಯಬಾರದು, ಹುಲಿ ಹೊಡೆದರೆ ಅದು ಪಾಪ ಎನ್ನುವ ನಂಬಿಕೆ ಅವನದು. ಕೊನೆಗೆ ಪಾಪ ಮಾಡಿದೆನೆಂಬ ಅದೇ ಕೊರಗು ಜೀವನದಲ್ಲಿನ ಆಸೆ ಹೋಗಿಸಿಬಿಡುತ್ತದೆ. ಕಾಡಿಗೆ ಹೋದರೆ ಹುಲಿರಾಯ ಬಿಡನು, ಊರ ಮನೆಯ ಜೀವನ ಒಗ್ಗದು. ಕೊನೆಗೊಂದು ದಿನ ಹೊಸ ಕೋವಿ ಹಿಡಿದು ಕಾಡಿನೆಡೆಗೆ ಹೊರಟ ಇವನು ಮತ್ತೆ ಕಾಣಿಸುವುದಿಲ್ಲ, ಅವನು ತೆಗೆದುಕೊಂಡು ಹೋದ ಕೋವಿ ಮಾತ್ರ ಪೋಲಿಸರಿಗೆ ಸಿಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬೀಸಣಿಗೆಯ ನೆಪದಲ್ಲಿ ...

ಮೊನ್ನೆ ಒಂದು ದಿನ ವಿಪರೀತ ಸೆಖೆ ಇಲ್ಲಿ. ಬೇಸಿಗೆ ಶುರುವಾಗಿದೆ. ಪ್ರತಿ ದಿನ 10 - 12 ಡಿಗ್ರಿ ಇದ್ದ ವಾತಾವರಣ ... ಈಗ ಕೆಲವೊಮ್ಮೆ 20 ಡಿಗ್ರಿ ಆದಾಗಲೂ ಸೆಖೆ ತಡೆಯಲಾಗುವುದಿಲ್ಲ. ಅಮ್ಮ ಕೊಟ್ಟ ಲಾವಂಚದ ಬೀಸಣಿಗೆಯಿಂದ ಗಾಳಿ ಹಾಕುತ್ತಾ ಕುಳಿತವಳಿಗೆ ಜತಿನ್ ದಾಸ್ ರ ನೆನಪಾಯಿತು .

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅವ್ವನಿಗಾಗಿ

ಅವ್ವನಿಗಾಗಿ

ನಾ ಮೆಚ್ಚಿ ಬರೆವ ಈ ಕವನ
ನನ್ನವ್ವನಿಗೆ ಮುಡಿಪು
ತನ್ನೆದೆಯನುಣಿಸಿ ಎನಗೆ
ಆಕೆ ತುಂಬಿಕೊಟ್ಟ ಭಾವನೆಗಳಲಿ ಮಿಂದೊಮ್ಮೆ
ನಾ ಕವನವಾಗುವಾಸೆ ಅವಳಿಗಾಗಿ
ಅವಳು ನನಗೆ ಕೊಟ್ಟ ಪ್ರೀತಿಗಾಗಿ

ನನ್ನಳುವು ಕಿವಿಗಪ್ಪಳಿಸಲು
ಓಡಿಬಂದು ನನ್ನನೆತ್ತಿ
ತನ್ನೆದೆಗಪ್ಪಿ ಮುತ್ತನಿಟ್ಟವಳು
ಜೋಗುಳವ ಪೊರೆದು
ನನ್ನ ಪವಡಿಸಿದವಳು
ನಾ ಕವನವಾಗುವಾಸೆ ಅವಳಿಗಾಗಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮ್ಮ

ಹೀಗೆ, ಅಮ್ಮನ ಬಗ್ಗೆ ಒಂದು ಕವನ ಬರೀಬೇಕು ಅಂತ ಶುರು ಆಗಿ, ಅದೇಕೋ ಸ್ವಲ್ಪ ಪದಗಳ ಜೊತೆ ಆಟ ಆಡೋ ಮನಸಾಗಿ ಈ ಕವಿತೆ ಬರೆದಿದ್ದೇನೆ.

ಈ ಕವನದ ವಿಶೇಷ ಏನೆಂದರೆ, ಈ ಕವನದ ಶೀರ್ಷಿಕೆಯಲ್ಲಿ ತಪ್ಪಿ ಹೋದ ಒಂದು ಅಕ್ಷರ, ಕವನದ ಪ್ರತಿ ಪದದಲ್ಲೂ ಪದೇ ಪದೇ ಇಣುಕಿ ಹಾಕುತ್ತೆ :-).

------------------
ಮ್ಮ.

ಅಪರಿಮಿತ ಅಕ್ಕರೆಯ,
ಅನ್ವರ್ಥವೇ..
ಅಮ್ಮ.

ಅನ್ಯಾಯವ ಅರಿಯದ,
ಅನುರಕ್ತೆ..
ಅಮ್ಮ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅಮ್ಮ