ಅರಿವು

ಹಳತಿನ ಹೊಸತನ...

ಹಳತು ಮಾಸಲು ಹೊಸತು ಮೀಸಲು


ಹಳತು ಅಳಿಯದೆ ಉಳಿಯಲಿ


ನಾಳೆಗೆ ಆಗಲಿ ಆಸರೆ ಹೊಸತಿಗೆ.


ಹಳತಿದ್ದರೆ ತಾನೇ ಹೊಸತಿಗೆ ಬೆಲೆ


ಹಳತು ಹೊಸತಿನ ನಡುವೆ ನಮ್ಮ ಜೀವನ


ಆಗಲಿ ಪಾವನ ಹಳತಿನ ಹೊಸತನವ ಮರೆಯದೆ.


ಹಳತು ಹೊಸತಿನ ಬೇಕು ಬೇಡಗಳ ನಡುವೆ ಇರಲಿ ಅರಿವಿನ ಚೇತನ.


ಎಲ್ಲಾ ಹೊಸತಲ್ಲಿ ಹುರುಳಿಲ್ಲ, ಹಳತೆಲ್ಲವೂ ವ್ಯರ್ಥವಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಲ್ಲವನೇ ಬಲ್ಲ ಬೆಲ್ಲದ ರುಚಿಯ

ಅರಿತವರ ಹೊರತು ಹೆರವರು ತಿಳಿವರೆ
ಗುಣಗಳ ನಡುವಲಿ ಇರುವ ದೂರವನು?
ಮೂಗಿನ ಹೊರತು ಕಣ್ಣು ತಿಳಿವುದೆ
ಜಾಜಿ-ಮಲ್ಲಿಗೆಯಲಿ ಕಂಪು ಬೇರೆಂಬುದನು?

ಸಂಸ್ಕೃತ ಮೂಲ:

ಗುಣಾನಾಮಂತರಂ ಪ್ರಾಯಸ್ತಜ್ಞೋ ವೇತ್ತಿ ನಾಪರಃ |
ಮಾಲತೀ* ಮಲ್ಲಿಕಾಮೋದಂ ಘ್ರಾಣಂ ವೇತ್ತಿನ ಲೋಚನಂ||

-ಹಂಸಾನಂದಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಸರಣಿ: 

ಬೆಲೆಯಿರದ ನಿಧಿ

ಹೊತ್ತಿಗೆಯೊಳಗಡೆ ಅಡಗಿದ ಅರಿವು
ಕಂಡವರ ಕೈ ಸೇರಿದ ಹಣವು
ಬೇಕಾದೊಡನೆ ಸಿಗದಂತಿರಲು
ಅದಲ್ಲ ಅರಿವು! ಅದಲ್ಲ ಹಣವು!

ಸಂಸ್ಕೃತ ಮೂಲ:

ಪುಸ್ತಕಸ್ತಾತು ಯಾ ವಿದ್ಯಾ ಪರಹಸ್ತಂ ಗತಂ ಧನಂ|
ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ನ ತದ್ಧನಂ||

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.

ಪೆದ್ದುಗುಂಡನ ರಗಳೆ - ೩

ನಭದ ಆಳೆತ್ತರ ಉದ್ದಗಲಗಳುಂಟೆ
ಅರಿವಿನ ಹರವು ಅದಕೆ ದುಪ್ಪಟ್ಟು
ಕಲಿಕೆ ಪಥ ಅಂತ್ಯವಿಲ್ಲದ ಪಯಣ
ಜ್ಞಾನದಾಹ ಚಿರಕಾಲ - ಪೆದ್ದುಗುಂಡ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸ್ವಾಭಿಮಾನ

ಇನ್ನಾದರೂ ಸೋಲು..
ಇಷ್ಟೆಲ್ಲಾ ಆದ ಮೇಲೂ..

ಬಂದ ಭಾವನೆಗಳಿಗೆ ಬೇಲಿ ಹಾಕಿ
ಬಂಧಿಸಿದಾದ ಮೇಲೂ ..

ಆಸರೆಗಾಗಿ ತಡಕಾಡುತಿದ್ದ ಕರಗಳಾ..
ಕಟ್ಟಿ ಹಾಕಿದ ಮೇಲೂ...

ಸಜ್ಜನರಿಗಾದರೂ ಬಾಗಬೆಕಿದ್ದ ಶಿರವ..
ಧಿಕ್ಕರಿಸಿ ಮೆರೆವಂತೆ ಮಾಡಿದ ಮೇಲೂ..

ಒತ್ತರಿಸಿ ಬಂದ ಕಂಬನಿಯಾ..
ಕಣ್ಣೆವೆಗಳ ತೇವಕ್ಕೆ ಮಾತ್ರ, ಮೀಸಲಾಗಿಸಿದ ಮೇಲೂ..

ಇನ್ನಾದರೂ ಬಿಡುವೆಯ ನನ್ನ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅರಿವು