ಮೈಸೂರು

ಚೆನ್ನಪಟ್ಟಣದ ಬೊಂಬೆಗಳು

ಜಯನಗರ ೪ನೇ ಬ್ಲಾಕ್ ನ ರಸ್ತೆ ಬದಿಯ ಗಾಡಿಯಲ್ಲಿ, ಮೈಸೂರು ರೋಡ್ ನ ನಡುನಡುವೆ ಚಿಕ್ಕ ಪುಟ್ಟ ಅಂಗಡಿಗಳಲ್ಲಿ ಮಾರಾಟಕಿರುತ್ತಿದ್ದ ಚೆನ್ನಪಟ್ಟಣದ, ಚಿರಪರಿಚಿತ ಮರದ ಬೊಂಬೆಗಳು, ಈಗ ಮಾಲ್ ಗಳಲ್ಲಿ ಅತ್ಯುನ್ನತ ಪಾಕಿಂಗ್ ಹಾಗು ದುಬಾರಿ ದರದಲ್ಲಿ ಸಿಗುತ್ತಿದೆ.

ಬನ್ನೇರುಘಟ್ಟ ಮೀನಾಕ್ಷಿ ಮಾಲ್ ನ Mother Earth ಶಾಪ್ ನಲ್ಲಿ ತೆಗೆದ ಚಿತ್ರವಿದು.

ಚಿಕ್ಕವಳಿದ್ದಾಗ ಮರದ ಕುದುರೆಯನೇರಿ ಆಟವಾಡಿತ್ತಿದ್ದ ನೆನಪಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಧಾರವಾಡ ಪೆದ್ದನ.... ಮೈಸೂರು ಶಾಕ್ ....

ಸುಮಾರು ಆರು ವರ್ಷದ ಹಿಂದಿನ ಮಾತು ಅಲ್ಲಲ್ಲ ಸುದ್ದಿ. ಸುದ್ದಿ ಆಗುವಷ್ಟು ದೊಡ್ಡವನೇನು ನಾನಲ್ಲ ಬಿಡ್ರಿ. ಬಿಡ್ರಿ ಅಂದಿದ್ದಕ್ಕೆ, "ಎಲ್ಲೇ ಹಿಡುಕೊಂಡೆ ನಿನ್ನ ಲೇ" ಅಂತ ಮಾತ್ರ ಕೇಳಬ್ಯಾಡ್ರಿ. ಇದು ನಮ್ಮ ಭಾಷಾ ಸೊಗುಡು. ಸೊಗಡೋ ಅಥವಾ ಸುಡುಗಾಡೋ... ಅರ್ಥ ಆದ್ರ ಸಾಕು ಅಂತೀರೇನು.. ಅದು ಖರೇನ.. ಯಾಕಂದ್ರ ನಾನು ಧಾರವಾಡದವ ಇದ್ದೇನಲ್ಲ ಅದಕ್ಕ. ಮೈಸೂರಿಗೆ ನೌಕ್ರಿಗೆ ಅಂತ ಬಂದಿದ್ದ. ಅವರ ಭಾಷೆ ನೋಡಿ, ಅಂದ್ರ ಕೇಳಿ ನನಗ ಅಲ್ಲೇ ಹೊಂದಾಣಿಕಿ ಆಗೋದ ಸ್ವಲ್ಪ ತ್ರಾಸ(ಕಷ್ಟ) ಆತು. ಯಾಕಂದ್ರ ನಾವು ಯಾವುದ ವಿಷ್ಯ ಇರಲಿ ಬಹಳ ಎಳಯನ್ಗಿಲ್ಲ. ಆದ್ರ ಮೈಸೂರಿನವರು ರಬ್ಬರ್ ಏಳದ ಹಂಗ ಏಳಿತಾರ ರೀ...ನಾವು ಆರಾಮ ಇದ್ದೀಯೇನಲೇ ಅಂತ, ನನ್ನ ಪ್ರೀತಿ 'ರಾಮ'ನ ಹೆಸರನ್ನು ಸೇರಿಸಿಕೊಂಡು ಕ್ಷೇಮ ಸಮಾಚಾರ ಕೇಳಿದ್ರ, ಇವರು "ಏನ ಸರ್ ಚೆನ್ನಾಗಿದ್ದೀರಾ?" ಎಂದು ಕೇಳ್ತಾರ ಅದು ಪೂರ್ತಿ ಎಳ್ದು. ಎಳ್ದು ಅಂದ್ರ ತಮ್ಮ ಕಡೆ ಜಗ್ಗಿ ಅಲ್ಲ ಮತ್ತ. ಭಾಷೆ ಮಾತ್ರ ಎಳ್ದು ಅಂತ ಹೇಳಿದೆ.. ತಪ್ಪು ತಿಳ್ಕೋಬ್ಯಾಡ್ರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಜೊತೆಯಿರುವೆನಾ ಎಂದೆಂದಿಗು

ROAD CROSS
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ನವರಾತ್ರಿಯ ದಿನಗಳು - ಮತ್ತೊಮ್ಮೆ

ಮೂರುವರ್ಷಗಳ ಹಿಂದೆ ಇದೇ ಸಮಯದಲ್ಲಿ ಸಂಪದದಲ್ಲಿ ’ನವರಾತ್ರಿಯ ದಿನಗಳು’ ಎನ್ನುವ ಸರಣಿಯನ್ನು, ಎರಡು ವರ್ಷಗಳ ಹಿಂದೆ ’ಸಂಗೀತ ನವರಾತ್ರಿ’ ಅನ್ನುವ ಸರಣಿಯನ್ನೂ ಬರೆದಿದ್ದೆ. ಅದಾದನಂತರ ಹೇಮಾವತಿಯಲ್ಲಿ ಬಹಳ ನೀರು ಹರಿದು ಹೋಗಿದೆ. ಗ್ವಾಡಲೂಪೆಯಲ್ಲೂ  ಅಷ್ಟಲ್ಲದಿದ್ದರೂ, ತಕ್ಕ ಮಟ್ಟಿಗೆ ನೀರು ಹರಿದು ಹೋಗಿದೆ! ಅದಾದ ನಂತರ ಸಂಪದಕ್ಕೂ ಬಹಳ ಹೊಸಬರ ಬರೋಣವಾಗಿದೆ ಹಾಗಾಗಿ, ಆ ಹಳೆಯ ಬರಹಗಳಿಂದ ಕೆಲವನ್ನು ಹೆಕ್ಕಿ, ಕೆಲವು ಹೊಸತಾಗಿ ಬರೆದು ಈ ಬಾರಿಯ ದೇವೀ ನವರಾತ್ರಿಯಲ್ಲಿ ಹಾಕೋಣವೆಂದಿದ್ದೇನೆ. 


ಆಸಕ್ತರು ಕೆಳಗಿನ ಕೊಂಡಿಗಳನ್ನು ನೋಡಬಹುದು: 


ನವರಾತ್ರಿಯ ದಿನಗಳು  - ಕನ್ನಡದಲ್ಲಿ


The Days of Navaratri - ಇಂಗ್ಲಿಷ್ ನಲ್ಲಿ


ಯಾವುದೇ ಅಡ್ಡಿ ಆತಂಕವಿಲ್ಲದೇ ಹೋದರೆ ಪ್ರತಿ ದಿನವೂ ಒಂದು ಬರಹವನ್ನು ಹಾಕುವ ಯೋಚನೆ ಇದೆ. ನೋಡೋಣ, ಹೇಗಾಗುವುದೋ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

’ಹರಿ’ಸ್ಮರಣೆ ಮಾಡುತ್ತಾ ಒಂದು ಸರಸತಿಯ ಸ್ತುತಿ


ಮೈಯ ಬಣ್ಣ ಮಂಜುಮಲ್ಲಿಗೆಚಂದಿರರ ಬಿಳುಪು; ಬಿಳಿಯರಿವೆಯನುಟ್ಟು
ಕೈಯಲ್ಲಿ ಹೊಳೆವವೀಣೆಯ ಹಿಡಿದು ನಿಂದಿರುವೆ ಬೆಳ್ದಾವರೆಯಲಿ;
ತಾಯೆ! ಆ ಹರಿಹರ**ಬೊಮ್ಮರೂ ಅನುದಿನವು ಪೂಜಿಸುತಲಿಹರು ನಿನ್ನನು!
ಕಾಯೆನ್ನ ಸರಸತಿಯೆ ಎನ್ನನೆಂದಿಗೂ ಬಿಡದೆ ತೊಲಗಿಸುತ ಜಡತೆಯನ್ನು

ಸಂಸ್ಕೃತ ಮೂಲ:

ಯಾ ಕುಂದೇಂದು ತುಷಾರಹಾರ ಧವಳಾ ಯಾ ಶ್ವೇತ ವಸ್ತ್ರಾವೃತಾ
ಯಾ ವೀಣಾವರದಂಡಮಂಡಿತ ಕರಾ ಯಾ ಶ್ವೇತಪದ್ಮಾಸನಾ
ಯಾಬ್ರಹ್ಮಾಚ್ಯುತ ಶಂಕರಪ್ರಭೃತಿಭಿಃ ದೇವೈಃ ಸದಾ ಪೂಜಿತಾ
ಸಾ ಮಾಂ ಪಾತು ಸರಸ್ವತೀ ಭಗವತೀ ನಿಶ್ಶೇಷ ಜಾಡ್ಯಾಪಹಾ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಶಾಸ್ತ್ರೀಯ ಕನ್ನಡ ಯೋಜನೆಗಳು: ಸಂವಾದ

(ಪ್ರಿಯ ಸಂಪದ ಬಂಧುಗಳೇ,

ನಮಸ್ಕಾರ. ಕಾರಣಾಂತರಗಳಿಂದ ಹೆಚ್ಚೂ ಕಮ್ಮಿ ಒಂದು ವರುಷದಿಂದ ಸಂಪದದಲ್ಲಿ ಕಾಣಿಸಿಕೊಳ್ಳಲಾಗಲಿಲ್ಲ. ಈಗ ಮತ್ತೆ ಸಂಪದದ ಅಂಗಳಕ್ಕೆ ಕಾಲಿರಿಸಿದ್ದೇನೆ. ಸಂಪದ ಬಂಧುಗಳು ಎಂದಿನಂತೆ ಓದಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಪ್ರೀತಿಯಿಂದ,
ಶಶಿ)

ಕನ್ನಡಕ್ಕೆ  ಶಾಸ್ತ್ರೀಯ ಸ್ಥಾನಮಾನ ದೊರೆತು ವರುಷವೇ ಕಳೆದಿದೆ. ಕನ್ನಡ 'ಶಾಸ್ತ್ರೀಯ ಭಾಷೆ'ಎಂದು ಘೋಷಣೆಯಾದ ಬಳಿಕ ಒಂದು ಕನ್ನಡ ರಾಜ್ಯೋತ್ಸವ ಕಳೆದು ಮತ್ತೊಂದು  ಕನ್ನಡ ರಾಜ್ಯೋತ್ಸವಕ್ಕೆ ಕರ್ನಾಟಕ ಸಜ್ಜಾಗಲಿದೆ. ಆದರೆ, ಹಲವಾರು ತಾಂತ್ರಿಕ ಕಾರಣಗಳಿಂದಾಗಿ ಕನ್ನಡ ಶಾಸ್ತ್ರೀಯ ಸ್ಥಾನಮಾನದ ಪಟ್ಟದಿಂದಾಗಿ ಸಿಗಬೇಕಾದ ಸವಲತ್ತುಗಳನ್ನು ಸಂಪೂರ್ಣವಾಗಿ ಇನ್ನೂ ಪಡೆಯಲಾಗಲಿಲ್ಲ. ಇದಕ್ಕೆ ಕನ್ನಡಿಗರ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮುಖ್ಯವಾದ ಕಾರಣವಾದರೂ, ತಮಿಳುನಾಡಿನಲ್ಲಿ ಗಾಂಧಿ ಎಂಬ ವ್ಯಕ್ತಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿರುವುದರ ವಿರುದ್ಧ ಹೂಡಿದ್ದ ಮೊಕದ್ದಮೆಯೂ ಕಾರಣವಾಗಿತ್ತು. ಕೇಂದ್ರದಲ್ಲಿ ಹೊಸ ಸರಕಾರ ರಚನೆಯಾದ ನಂತರ, ಸರಕಾರ ರಚಿಸಿದ ಯುಪಿಎನಲ್ಲಿ ಪ್ರಮುಖ ಸ್ಥಾನಗಳನ್ನು ಅಲಂಕರಿಸಿರುವವರು ಕನ್ನಡಿಗರೇ ಆಗಿರುವುದು ಕನ್ನಡಕ್ಕೆ ಒಂದು ರೀತಿಯ ವರವಾಗಿದೆ. ಹಾಗಾಗಿಯೇ, ಇಂದು ಶಾಸ್ತ್ರೀಯ ಕನ್ನಡಕ್ಕೆ ಸಂಬಂಧಿಸಿದ ಯೋಜನೆಗಳನ್ನು ಮುಂದುವರಿಸಲು ಕೇಂದ್ರ ಸರಕಾರ ಸಂಬಂಧಿಸಿದ ಇಲಾಖೆಗೆ ಹಸಿರು ನಿಶಾನೆ ತೋರಿಸಿದೆ.

ಈ ಯೋಜನೆಗಳನ್ನು ಮುಂದುವರಿಸುವ ಸಲುವಾಗಿಯೇ ಶಾಸ್ತ್ರೀಯ ಕನ್ನಡ ಯೋಜನೆಗಳು ಕುರಿತು ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಏಪ್ರಿಲ್ 19&20ರಂದು 2 ದಿನಗಳ ಕಾಲ ಐತಿಹಾಸಿಕ ಸಮಾವೇಶ ನಡೆಯಿತು. ನಾಡಿನ ಬೇರೆ ಬೇರೆ ಮೂಲೆಗಳಿಂದ ಹಳೆ ತಲೆಮಾರಿನ ಹಳೆಗನ್ನಡ ವಿದ್ವಾಂಸರು ಹಾಗೂ ಹೊಸ ತಲೆಮಾರಿನ ಕನ್ನಡ ವಿದ್ವಾಂಸರು ಎಲ್ಲರೂ ಈ ಸಮಾವೇಶದಲ್ಲಿ ನೆರೆದಿದ್ದರು. ಪ್ರಮುಖವಾಗಿ ಕನ್ನಡಕ್ಕೆ ಶಾಸ್ತ್ರೀಯ ಕನ್ನಡ ಪಟ್ಟ ದೊರೆಕಿಸಿಕೊಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದ ಡಾ.ಎಂ.ಚಿದಾನಂದ ಮೂರ್ತಿಯವರು ಸಮಾವೇಶದ ಪ್ರಮುಖ ಆಕರ್ಷಣೆಯಾಗಿದ್ದರು. ಇವರೊಂದಿಗೆ ನಾಡಿನ ಪ್ರಮುಖ ಹಳೆಗನ್ನಡ ವಿದ್ವಾಂಸ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಕೂಡ ಸೇರಿದ್ದರು. ಇವರು ಈಗಾಗಲೇ ಕನ್ನಡ ಅಭಿಜಾತ ಸಾಹಿತ್ಯ - ಅಧ್ಯಯನದ ಅವಕಾಶಗಳು ಆಹ್ವಾನಗಳು ಪುಸ್ತಕ ರಚಿಸಿದ್ದು, ಕನ್ನಡ ವಿಶ್ವವಿದ್ಯಾಲಯ,ಹಂಪಿಯು ಪ್ರಕಟಿಸಿದೆ. ಆದರೆ,ಕನ್ನಡವನ್ನು 'ಶಾಸ್ತ್ರೀಯ ಭಾಷೆ'ಎಂದು ಪಟ್ಟ ಹಿಡಿದು ನಮ್ಮ ನಾಡಿನಲ್ಲಿ ಹಾಗೂ ದೆಹಲಿಯಲ್ಲಿ ಹಲವು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ನಾಡೋಜ ದೇಜಗೌ ಅನಾರೋಗ್ಯದ ಕಾರಣ ಸಮಾವೇಶಕ್ಕೆ ಬಂದಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮನು ಬಳಿಗಾರ್ ಹಾಗೂ ಕಾರ್ಯದರ್ಶಿಗಳಾದ ಶ್ರೀ ಜಯರಾಮ ರಾಜೇ ಅರಸ್ ಕೂಡ  ಭಾಗವಹಿಸಿದ್ದರು. ಹಿರಿಯ ಭಾಷಾತಜ್ಞ, ನಾಟಕಕಾರ ಹಾಗೂ ಕನ್ನಡಕ್ಕೆ  ಶಾಸ್ತ್ರೀಯ ಸ್ಥಾನಮಾನ ಸಿಗಲು ಅಧಿಕೃತವಾಗಿ ಶ್ರಮಿಸಿದ ಪ್ರೊ.ಲಿಂಗದೇವರು ಹಳೆಮನೆ ಸಮಾವೇಶವನ್ನು ಸಂಯೋಜಿಸಿದ್ದರು.ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ ಪ್ರಭಾರ ನಿರ್ದೇಶಕರಾದ ಡಾ.ರಾಜೇಶ್ ಸಚ್ ದೇವ್ ಕೂಡ ಸಮಾವೇಶದಲ್ಲಿ ಹಾಜರಿದ್ದು, ಕನ್ನಡೇತರರಾಗಿದ್ದರೂ ಕನ್ನಡದಲ್ಲಿಯೇ ಮಾತನಾಡಿ ಹಲವಾರು ವರುಷಗಳ ಕಾಲ ಮೈಸೂರಿನಲ್ಲಿ ವಾಸವಾಗಿರುವುದರಿಂದ ಕನ್ನಡದೊಂದಿಗೆ ತಾವು ಹೊಂದಿರುವ ಒಡನಾಟವನ್ನು ತೋರಿಸಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

KRS ನಲ್ಲಿ ತೆಗೆದ ಚಿತ್ರ

ಇದು ಮೂರ್ನಾಲ್ಕು ತಿಂಗಳ ಮುಂಚೆ KRS ನಲ್ಲಿ ತೆಗೆದ ಚಿತ್ರ. 

ಈಗ ನನ್ನ ಕ್ಯಾಮೆರಾ ಹಾಳಾಗಿದೆ, ರಿಪೇರಿಗೆ ಕೊಡಬೇಕು ಅಂದುಕೊಂಡೇ ಬಹಳ ದಿನಗಳಾಗಿವೆ...  ನಾ ತೆಗೆದ ಹಳೆಯ ಫೋಟೋಗಳನ್ನೊಮ್ಮೆ ನೋಡುತ್ತಿದ್ದಾಗ ಇದು ಸಿಕ್ಕಿತು  :)

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ರಂಗಾಯಣದಲ್ಲೊಂದು ಸಂಜೆ

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು
ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ,
ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ್ಬ ಸ್ನೇಹಿತ ಬಂದು ನಾನು ಬರ್ತೀನಿ,
ಆದ್ರೆ ಈಗ್ಲೇ ಹೋಗ್ಬೇಕು ಕುಕ್ಕರಹಳಳಿ ಕೆರೆ ಸುತ್ತ ಒಂದು ವಾಕ್ ಮಾಡಿ ಹಾಗಿಂದಾನೇ
ಬರ್ತೀನಿ ಅಂದ್ರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಸರಣಿ: 

ಮೈಸೂರಲ್ಮಳೆ ಬಂತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಓಶೋ ಸನ್ನಿಧಿಯ ಮೂವರು ಧ್ಯಾನಿಗಳು

ನಮಗೆಲ್ಲ ಅಂದರೆ ಶಿಬಿರಾರ್ಥಿಗಳಿಗೆ ಶಿಬಿರದ ಬಗ್ಗೆ, ಹೊಸದಾಗಿ ಕಟ್ಟಲಾಗಿರುವ ಧ್ಯಾನ ಸಭಾಂಗಣದ ಬಗ್ಗೆ ವಿವರಿಸಿದ ಮಹಾನುಭಾವರೇ ವೇಣುಗೋಪಾಲ್ ಎಂದು ತಿಳಿದದ್ದು ಅವರು ತಮ್ಮನ್ನು ಪರಿಚಯಿಸಿಕೊಂಡ ಮೇಲೆಯೇ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಂಬಾರಿ ದಿನಚರಿ

ಆ ಇಂಜಿನೀಯರಿಂಗ್ ಕಾಲೇಜಿನ ಕಾರ್ಯಕ್ರಮ ಹೋದವರ್ಷ ತಪ್ಪಿಸಿಕೊಂಡಿದ್ದೆ. ಕೊನೆಯ ಘಳಿಗೆಯಲ್ಲಿ ಬರಲಾಗದು ಎಂದು ಹೇಳಿದ್ದರ ಅಳುಕು ಮನಸ್ಸಿನಲ್ಲಿತ್ತು. ಹೀಗಾಗಿ ಈ ಬಾರಿ ಅಲ್ಲಿಯ ಹುಡುಗರು ಎಂದಿನ enthusiasmನಲ್ಲಿಯೇ ಕರೆದಾಗ ಬರುತ್ತೇನೆ ಎಂದು ಒಪ್ಪಿಕೊಂಡದ್ದು. ಹೆಚ್ಚಿನಂತೆ ನಾನು ಕಾರ್ಯಕ್ರಮಗಳಿಗೆ ಏನಾದರೂ ಸಬೂಬು ಹೇಳಿ ಚಕ್ಕರ್ ಹೊಡೆಯೋದೇ ಹೆಚ್ಚು.

ಕಾರ್ಯಕ್ರಮ ಎಂದಿನಂತೆ ದೀಪ ಹಚ್ಚುವುದರ ಜೊತೆಗೆ ಪ್ರಾರಂಭವಾದದ್ದು ಸ್ವಲ್ಪ ಇರುಸುಮುರುಸಾದದ್ದು, ಕಾರ್ಯಕ್ರಮದ "ಮುಖ್ಯ ಅತಿಥಿ"ಯಾದದ್ದು ನನಗೆ ಹೊಸತು. ತದನಂತರ ನಾನು ಎಂದಿನಂತೆ ಬಡಬಡನೆ ಮಾತನಾಡಿದ್ದು. ವಿದ್ಯಾರ್ಥಿಗಳು ಕೇಳಿದ ಕೆಲವು ಪ್ರಶ್ನೆಗಳು ಬಹಳ ಚೆನ್ನಾಗಿದ್ದವು. ಇದೆಲ್ಲ ಮುಗಿದ ನಂತರ ಅವರೊಡನೆ ಹಾಗೂ ಉಳಿದ ಅತಿಥಿಗಳೊಡನೆ ಮಾತುಕತೆ ಖುಷಿ ತಂದಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು

ಸೆಪ್ಟಂಬರ್ ತಿಂಗಳಲ್ಲೊಂದು ದಿನ ಎಂದೂ ಇಲ್ಲದವನು ಪುಸ್ತಕ ಮಳಿಗೆಯೊಂದರಲ್ಲಿ ಓಶೋ ವಚನ ಮಾಸಪತ್ರಿಕೆ ನೋಡಿದೆ. ಯಾಕೋ ಬಹಳ ದಿನಗಳ ನಂತರ ಓಶೋವನ್ನು ಓದುವ (ಅದೂ ಕನ್ನಡದಲ್ಲಿ) ಮನಸ್ಸಾಯಿತು. ಮನೆಗೆ ತಂದವನೇ ಕೆಲ ಪುಟಗಳನ್ನು ತಿರುವಿ ಹಾಕಿದೆ. Interesting ಅನ್ನಿಸ್ತು. Of course, ಓಶೋ ಬಗ್ಗೆ ಎಲ್ಲವೂ Interesting ಅಂತ ಅನ್ನಿಸಿಯೇ ಅನ್ನಿಸುತ್ತೆ. ಅಂಥಾ Interesting ವ್ಯಕ್ತಿ ಅವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ ಮೈಸೂರು ಮತ್ತು ಹಿಮವದ್ ಗೋಪಾಲನನ್ನು ನೋಡಲು ಸರಿ ಸಮಯ ಎಂದು ಲೆಕ್ಕ ಹಾಕಿದ ನಾವು, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿದೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.

ಸಂಗೀತ ನವರಾತ್ರಿ - ವಿಜಯ ದಶಮಿ

ಇವತ್ತು ವಿಜಯ ದಶಮಿ.ನವರಾತ್ರಿಯ ಕಡೇ ದಿನ. ಮೈಸೂರಿನಲ್ಲಿ ಜಂಬೂಸವಾರಿಯಲ್ಲಿ  ದೇವಿ ಚಾಮುಂಡೇಶ್ವರಿಯ ಮೆರವಣಿಗೆ ಹೋಗುವ ಈ ದಿನ ಕೇಳಿಸಲು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಿಲಹರಿ ರಾಗದ ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಎನ್ನುವ ರಚನೆ ಈ ವರ್ಷದ ಸರಣಿಗೆ ಸರಿಯಾದ ಮಂಗಳವೆಂದು ನನ್ನ ಅನಿಸಿಕೆ.

ಮೈಸೂರು ವಾಸುದೇವಾಚಾರ್ಯರು ಅವರ ಸಂಗೀತ ಪರಂಪರೆಯಂತೆ ಸಂಸ್ಕೃತ ಮತ್ತು ತೆಲುಗು ಭಾಷೆಗಳಲ್ಲೇ ಕೃತಿಗಳನ್ನು ರಚಿಸಿದವರು. ಈ ಬಿಲಹರಿ ರಾಗದ ಕೃತಿಯಂತೂ ಸೊಗಸಾದ ರಚನೆ. ವಾಸುದೇವಾಚಾರ್ಯರ ಅತೀ ಪ್ರಸಿದ್ಧ ರಚನೆಗಲ್ಲಿದೂ ಒಂದು ಎಂದು ಖಂಡಿತ ಹೇಳಬಹುದು. ಈ ಹಾಡಿನ ಸಾಹಿತ್ಯ ಹೀಗಿದೆ.

ಶ್ರೀ ಚಾಮುಂಡೇಶ್ವರಿ ಪಾಲಯ ಮಾಂ ಕೃಪಾಕರಿ ಶಂಕರಿ
ಶೃತಜನಪಾಲಿನಿ ಮಹಾಬಲಾದ್ರಿವಾಸಿನಿ ಮಹಿಷಾಸುರ ಮರ್ದಿನಿ|| ಪಲ್ಲವಿ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ

ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ನಮ್ಮನೇ ಹತ್ರ ಒಂದು ಮಂಟಪ ಇತ್ತು. ಅದನ್ನ ಕಟ್ಟಿಸಿದವರ್ಯಾರು ಅಂತ ಗೊತ್ತಿಲ್ಲ. ಅಂತೂ ದೇವ್ಸ್ಥಾನದ ಅಕ್ಕ ಪಕ್ಕ ಕೆಲವ್ಕಡೆ ಇರತ್ತಲ್ಲ ಆ ತರಹ ಮೂರು ಗೋಪುರದ ಮಂಟಪ. ಅಲ್ಯಾವ್ದೂ ದೇವಸ್ಥಾನ ಇಲ್ದಿದ್ರೂ,ಅಲ್ಲಿ ಆ ಮಂಟಪ ಯಾಕೆ ಕಟ್ಟಿದ್ರೋ? ಅಥವಾ ಮನೆ ಮಠ ಇಲ್ಲದೇ ಇರೋವ್ರಿಗೇ ಅಂತಲೇ ಯಾರಾದ್ರೂ ಪುಣ್ಯಾತ್ಮರು ಕಟ್ಟಿಸಿದ್ರೋ ಗೊತ್ತಿಲ್ಲ - ಅಂತೂ ಅಲ್ಲಿ ಪಾಪ ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳೋ ಎಷ್ಟೋ ಸಂಸಾರಗಳು ನೆಲೆ ನಿಂತಿದ್ರು.ಅವರಿಗೆ ವರ್ಷಕ್ಕೆ ಮುನ್ನೂರಅರವತ್ತೆರಡು ದಿನ ಆ ಮಂಟಪವೇ ಮನೆ. ಒಂದುವೇಳೆ ಮನೆಯಲ್ಲಿ ಏನೋ ಸಮಾರಂಭವೋ ಏನೋ ಆದಾಗ ಊಟ ತಿಂಡಿ ಮಿಕ್ಕರೆ ಅಲ್ಲಿಗೆ ಹೋಗಿ ಕರೆದು, ಮತ್ತೆ ಮಾಡಿದ ಅಡುಗೆಗೆ ಆಗೋ ದಂಡವನ್ನ ತಪ್ಪಿಸ್ತಿದ್ವಿ. ಒಂದೊಂದ್ಸಲ ಕಲಾಯ ಮಾಡೋ ಮನುಷ್ಯ ಬಂದರೂ ಅಲ್ಲೇ ಮಂಟಪದ ಪಕ್ಕದಲ್ಲೇ ಅವನ ಅಗ್ಗಿಷ್ಟಿಕೆ ಹೂಡ್ಕೋತಿದ್ದ. ಸುತ್ತ ಮುತ್ತಲಿನ ಮನೆಯವರೆಲ್ಲ ಅವರ ಕೊಡವೋ, ಕೊಳದಪ್ಪಲೆಯೋ, ಯಾವುದಕ್ಕಾದ್ರೂ ಕಲಾಯ ಮಾಡಿಸ್ಬೇಕಾಗಿದ್ರೆ ಅಲ್ಲಿಗೇ ತರ್ತಿದ್ರು. ಹಾಗೇನಾದ್ರೂ ಕೊಟ್ಟಾಗ, ನಾನೂ ಕಲಾಯದ ಮನುಷ್ಯ ತವರ ಕಾಸೋದು, ತಿದಿ ಒತ್ತೋದು ಇದೆಲ್ಲ ನೋಡ್ತಾ ಕೂತಿರ್ತಿದ್ದೆ. ಒಂದೊಂದು ಸಲ ಸಂಜೆ ಹೋಗಿ ಆ ಮಂಟಪದ ಹಿಂದಿನ ಬಯಲಲ್ಲಿ ಗೆಳೆಯರ ಜೊತೆ ಆಡ್ತಿದ್ದಿದ್ದೂ ಉಂಟು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ

ನವರಾತ್ರಿಯ ಎಂಟನೇ ದಿನ ದುರ್ಗಾಷ್ಟಮಿ. ದುರ್ಗಿ ಎಂದರೇನು? ಕಾಳಿ ಎಂದರೇನು? ಗೌರಿ ಎಂದರೇನು? ಸರ್ವದೇವ ನಮಸ್ಕಾರಃ ಕೇಶವಂ ಪ್ರತಿ ಗಚ್ಛತಿ ಎನ್ನುವ ಭಾವನೆ ನಮಗಿದ್ದರೂ ಕೂಡ ಅದೇನೋ ನವರಾತ್ರಿಯ ಏಳನೇ ದಿನ ಸರಸ್ವತಿಗೂ, ಎಂಟನೇ ದಿನ ದುರ್ಗಿಗೂ, ಒಂಬತ್ತು ಹತ್ತನೇ ದಿನಗಳು ಚಾಮುಂಡಿಗೂ ಇರುವುದು ಹಳೇ ಮೈಸೂರಿನ ಸಂಪ್ರದಾಯವಿರಬಹುದು. ದುರ್ಗಾಷ್ಟಮಿಯ ದಿನ ಮನೆ ಚಿಕ್ಕ ಹುಡುಗಿಯರನ್ನು ಕರೆದು ಅವರನ್ನಾದರಿಸುವ ಸಂಪ್ರದಾಯವೂ ಎಷ್ಟೋ ಕುಟುಂಬಗಳಲ್ಲಿದೆ.

ನೆನ್ನೆ ಶೃಂಗೇರಿ ಶಾರದೆಯ ಮೇಲೆ ಒಂದು ಕನ್ನಡದಲ್ಲಿರುವ ಹಾಡನ್ನು ಕೇಳಿಸಿದ್ದೆ. ಹೇಗಿದ್ದರೂ ಈಗ ನವರಾತ್ರಿಯಲ್ಲವೇ, ಅದಕ್ಕೆ ಇವತ್ತು ’ನವರಸ’ಕನ್ನಡದ ಒಂದು ಹಾಡನ್ನು ಕೇಳಿಸೋಣ ಎಂದುಕೊಂಡೆ :). ಹೌದು, ನವರಸ ಕನ್ನಡ ಅನ್ನುವುದೊಂದು ರಾಗದ ಹೆಸರು. 

ಈ ರಚನೆ ಮುತ್ತಯ್ಯ ಭಾಗವತರದ್ದು. ನವರಾತ್ರಿಯ ಮೊದಲ ದಿನವೇ ಇವರದೊಂದು ದರು ವರ್ಣವನ್ನು ಕೇಳಿಸಿದ್ದೆನಲ್ಲ? ನೆನಪಿರಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಚೌತಿ

ಲಲಿತಾ! ಆ ಪದವೇ ಒಂದು ಇನಿದಾದ ಹೆಸರು!

ಲಲಿತಾ! ಆ ಹೆಸರೇ ಒಂದು ಸವಿಯಾದ ನೆನಪು!!

..

..

..

..

..

(ಕ್ಷಮಿಸಿ - ನಾನು ’ಎರಡು ಕನಸು’ ಸಿನೆಮಾದಿಂದ ಹೇಳ್ತಾ ಇರೋ ಸಾಲುಗಳಲ್ಲ ಇವು!)

ದೇವಿಯ ಬೇರೆ ಹೆಸರುಗಳಾದ ಪಾರ್ವತಿ,ಶೈಲಜಾ,ಶಂಕರಿ,ಕಾಳಿ, ದುರ್ಗಾ,ಗೌರಿ ಮೀನಾಕ್ಷಿ,ವಿಶಾಲಾಕ್ಷಿ ಇಂತಹವೆಲ್ಲ ಒಂದೋ ದೇವಿಯು ಪರ್ವತರಾಜನ ಮಗಳು, ಶಿವನ ಹೆಂಡತಿ ಎನ್ನುವುದನ್ನೋ, ಅಥವಾ ಅವಳ ಬಣ್ಣವನ್ನೋ, ಕಣ್ಣನ್ನೋ ವರ್ಣಿಸುತ್ತವೆ. ಆದರೆ ಅವಳ ಎಲ್ಲ ಗುಣಗಳನ್ನೂ ಒಟ್ಟುಸೇರಿಸುವಂತಹ ಒಂದು ಹೆಸರಿದ್ದರೆ, ಅದು ಲಲಿತಾ ಎಂಬ ಹೆಸರೇ ಆಗಿರಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ತದಿಗೆ

ಹಬ್ಬದ ಸಂಭ್ರಮವಿರಬೇಕಾದ ಸಮಯದಲ್ಲಿ ಏಕೋ ಎಲ್ಲೆಲ್ಲೂ ಅಶಾಂತಿಯ ವಾತಾವರಣ. ನೂಕು-ನುಗ್ಗಲಿನಲ್ಲಿ ನೂರಾರು ಮಂದಿಯ ಮರಣ. ಬೀಳುತ್ತಿರುವ ಶೇರು ಮಾರುಕಟ್ಟೆ. ಮತ್ತೆ ಅದರಿಂದ ತೊಂದರೆಗೊಳಗಾಗುತ್ತಿರುವ ಸಾಮಾನ್ಯ ಜನತೆ. ಕೆಲವು ತಡೆಯಲಾರದ ದುರಂತಗಳಾದರೆ, ಕೆಲವು ಸ್ವಯಂಕೃತಾಪರಾಧಗಳು. ಈಗ ಗಾಂಧೀಜಿಯವರು ಹೇಳುವಂತೆ ’ಸಬ್ ಕೋ ಸನ್ಮತಿ ದೇ ಭಗವಾನ್’ ಎಂದು ಹೇಳಿಕೊಳ್ಳುತ್ತ ಮುನ್ನಡೆವುದೊಂದೇ ದಾರಿಯೋ ಏನೋ ಎನ್ನಿಸುತ್ತೆ. ಕಾಲದ ಪ್ರವಾಹದಲ್ಲಿ ತಡೆದು ನಿಲ್ಲಬಲ್ಲವರಾರು?

ಅದೇ ರೀತಿ, ಸಂಗೀತ ಅನ್ನುವುದೂ ನಿಂತ ನೀರಲ್ಲ. ಅದರಲ್ಲಿಯೂ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಸಂಗೀತ ಹೇಗೆ ಒಂದು ಕಲಾಪ್ರಕಾರವೋ, ಅದೇ ರೀತಿ ಒಂದು ಗಣಿತದ ಬುನಾದಿಯಮೇಲೂ ನಿಂತಿದೆ. ಹೇಗೆ ಹೊಸ ಹೊಸ ರಸಾಯನಗಳನ್ನು ಪ್ರಯೋಗಶಾಲೆಯಲ್ಲಿ ತಯಾರಾಗುತ್ತಿರುತ್ತವೋ, ಅದೇ ರೀತಿ ಹೊಸ ಹೊಸರಾಗಗಳೂ ಸಂಗೀತ ಪ್ರಪಂಚಕ್ಕೆ ಸೇರುತ್ತಲೇ ಹೋಗುತ್ತವೆ. ಅದರಲ್ಲಿ ಜಳ್ಳು ಯಾವುದು, ಒಳ್ಳೆಯದು ಯಾವುದು ಎನ್ನುವುದನ್ನು ಕಾಲವೇ ಹೇಳುತ್ತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕನ್ನಡಿಗನಿಗಲ್ಲ ಈ ದಸರಾ..!!

ದಸರಾ ಬ೦ದೇ ಬಿಡ್ತು. ನಮ್ಮ ನಾಡ ಹಬ್ಬವನ್ನು ಇನ್ನೂ ಹೆಚ್ಚಿನ ಆಡ೦ಬರದೊ೦ದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಆದರೆ ನಮ್ಮೂರ ದಸರಾ ಇತಿಹಾಸವನ್ನು ಮತ್ತದರ ಕಾರ್ಯಕ್ರಮಗಳನ್ನು ದಯವಿಟ್ಟು ಕನ್ನಡದಲ್ಲಿ ಮಾತ್ರ ಕೇಳಬೇಡಿರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗ್ನು/ಲಿನಕ್ಸ್ ಹಬ್ಬದ ದಿನ ಅರವಿಂದ ಕನ್ನಡದಲ್ಲಿ ಬರೆದಾಗ

ಮೈಸೂರಿನಲ್ಲವತ್ತು ಗ್ನು/ಲಿನಕ್ಸ್ ಹಬ್ಬ. ಕನ್ನಡದಲ್ಲಿ passionate ಆಗಿ ಬರೆಯಬೇಕೆಂದರೆ [:user/aravinda|ಅರವಿಂದನಿಗಿಂತ] ಉತ್ತಮ ಬೇರೆ ಯಾರೂ ಇರಲಿಕ್ಕಿಲ್ಲ. ಕನ್ನಡ ಅಂದ ಕೂಡ್ಲೆ ಇವನಿಗೆ ಶ್ರದ್ಧೆ, ಆಸಕ್ತಿ ದುಪ್ಪಟ್ಟು ಆಗುವುದು ಅಂತ ಹೇಳಿದರೂ ಉತ್ಪ್ರೇಕ್ಷೆಯಲ್ಲ! ನೀವೇ ನೋಡಿ. :-)
ಅವನಿಗೂ ತಿಳಿಸದೆ ಈ ಚಿತ್ರಗಳ ಸಿರೀಸ್ ಇರುವ ಅನಿಮೇಶನ್ ಹಾಕುತ್ತಿದ್ದೇವೆ ಇಲ್ಲಿ. :-)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಪಾಡ್ಯ

ಮೊನ್ನೆ ಶನಿವಾರ ಒಂದು ಸೊಗಸಾದ ಸಂಗೀತ ಕಚೇರಿಗೆ ಹೋಗುವ ಅವಕಾಶ ದೊರೆತಿತ್ತು. ಒಂದು ಒಳ್ಳೇ ಉದ್ದೇಶಕ್ಕಾಗಿ ಆಯೋಜಿತವಾಗಿದ್ದ ಕಾರ್ಯಕ್ರಮ ಅದು. ಹಾಡುಗಾರ್ತಿ ಹಾಡಲು ಕರ್ನಾಟಕದ ವಾಗ್ಗೇಯಕಾರ ರಚನೆಗಳನ್ನೇ ಆಯ್ದಿದ್ದರು. ಮೈಸೂರು ಸಂಗೀತದ ಒಂದು ಪ್ರಮುಖ ಕೇಂದ್ರವಾದ್ದರಿಂದ ಮೈಸೂರಿನ ವಾಗ್ಗೇಯಕಾರರ ರಚನೆಗಳೇ ಅದರಲ್ಲಿ ಹೆಚ್ಚಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ.

ಅವರು ಹಾಡಿದ ರಚನೆಗಳಲ್ಲಿ ಮೊದಲ ರಚನೆಯನ್ನು ನವರಾತ್ರಿಯ ಮೊದಲ ದಿನವಾದ ಇಂದು ನಿಮಗೆ ಕೇಳಿಸೋಣ ಎನ್ನಿಸಿತು. ಅದಕ್ಕೆ ಎರಡು ಮೂರು ಕಾರಣಗಳಿವೆ. ಒಂದು ದಸರ ಅಂದರೆ ಮೈಸೂರು, ಮೈಸೂರು ಅಂದರೆ ದಸರಾ ಅನ್ನಿಸುವ ಈ ನವರಾತ್ರಿ ಹಬ್ಬದಲ್ಲಿ, ಮೈಸೂರಿನಲ್ಲಿ ರಚನೆಯಾದ ಇದು ಒಳ್ಳೇ ಆರಂಭವನ್ನು ತರುತ್ತೆ ಎನ್ನುವುದು. ಎರಡನೆಯದು, ಸಂಗೀತ ಕಚೇರಿಯನ್ನು ವರ್ಣದೊಂದಿಗೆ ಆರಂಭಿಸಿದಾಗ ಅದು ಸೊಗಸುತ್ತೆಂಬ ನಂಬಿಕೆಯಂತೆ, ಈ ಹಾಡನ್ನು ಕೇಳುತ್ತ ನವರಾತ್ರಿ ಹಬ್ಬವೂ ಎಲ್ಲರಿಗೂ ಸೊಗಸಲಿ ಎನ್ನುವುದು ನನ್ನ ಆಸೆ. ಮೂರನೆಯ ವಿಷಯಕ್ಕೆ
ಮತ್ತೆ ಬರುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

“ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

[:http://kannada.indiawaterportal.org|ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ] ಕಾವೇರಿ ಕುರಿತು ಒಂದು ಫೀಚರ್ ರೆಡಿ ಮಾಡುತ್ತ ತಲಕಾಡು ಫೋಟೋಗಳನ್ನು ನೋಡುತ್ತಿರುವಾಗ ಈ ವಿಷಯ ಮತ್ತೆ ನೆನಪಾಯಿತು. ಅಲ್ಲಿ ವಿವರಣೆಗೆಂದು ಇದ್ದ ಈ ವಿಷಯವನ್ನು ನೆನಪಿಸಿದ ಅನುವಾದದ ಸಾಲುಗಳು ಇಲ್ಲಿದೆ ನೋಡಿ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (6 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಾನುವಾರದ ಹಬ್ಬ

ಸರಿಯಾಗಿ ನಿದ್ರೆಯಿಲ್ಲದೆ, ಕಣ್ಣು ಸ್ಟ್ರೇಯ್ನ್ ಮಾಡಿಕೊಂಡು - ಇನ್ನು ಗ್ನು/ಲಿನಕ್ಸ್ ಹಬ್ಬ ಮಾಡೋದೇನೆ ಎಂದುಕೊಂಡು ಕುಳಿತಿದ್ದೆ. ಮುಂಜಾನೆ ನಾಲಕ್ಕಾಗಿತ್ತು. ಇನ್ನು ನಿದ್ರೆ ಮಾಡಲಾಗದೆಂದು LHC shutdown ಆದದ್ದರ ಬಗ್ಗೆ ಓದುತ್ತ ಕುಳಿತಿದ್ದೆ. ಒರಿಸ್ಸಾ ಪ್ರವಾಹದ ಬಗ್ಗೆ ಓದುತ್ತ ಕುಳಿತಿದ್ದೆ. ಸರಿಯಾಗಿ ಐದಕ್ಕೆ ಫೋನು ಬಂತು:
"ಎದ್ದಿದೀಯಾ ಹರಿ?"
"ಹೂಂ ಕಣೋ"
"ಸರಿ, ಈಗ ಹೊರಟೆ. ಕಾರು ತಗೊಂಡು ಇನರ್ಧ ಗಂಟೆಯಲ್ಲಿ ಅಲ್ಲಿರ್ತೀನಿ"

ಸರಿ, ರೆಡಿಯಾಗಿ ಬ್ಯಾನರ್ ಕೆಳಗಿಳಿಸಿ ಲ್ಯಾಪ್ಟಾಪ್ ಪ್ಯಾಕ್ ಮಾಡಿ ಹೊರಟೆ. ಕಾರಿನ ಸ್ಪೀಡು, ಡೆಕ್ ನ ವೂಫರ್ ಸದ್ದು ನಿದ್ರೆಯಿಲ್ಲದ ಮನಸ್ಸಿಗೆ ಸವಾಲೆಸೆದಿತ್ತು. ಈ ನಡುವೆ ಮುಂಜಾನೆಯ ಮಂಜಿನಲ್ಲಿ ರೋಡು ಮಿಸ್ ಆಗಿ ಕಳಕೊಂಡ ಕೆಲವು ಘಳಿಗೆಗಳು. ಅಂಕುಡೊಂಕಿನ ಮೈಸೂರು ರಸ್ತೆಯಲ್ಲಿ ರಾಮನಗರದ ಲೋಕರುಚಿ ತಲುಪುವಷ್ಟರಲ್ಲಿ ಎಂಟಾಗಿತ್ತು. ಸುತ್ತ ಹುಸಿ ಜನಪದ ಓಡಾಡಿಕೊಂಡಿದ್ದ ಹೋಟೆಲಿನಲ್ಲಿ ಕಡುಬು, ರಾಗಿ ರೊಟ್ಟಿ (ಅಷ್ಟೊತ್ತಿಗೇ) ನಮ್ಮ ತಿಂಡಿ. ಅತ್ತಿತ್ತ ಕಂಡ ಮೈಸೂರು-ಬೆಂಗಳೂರು ಹುಡುಗಿಯರ ಮುಖಗಳು ನಮ್ಮ ದಂಡಯಾತ್ರೆಯ ಸಿಪಾಯಿಗಳ ಕಣ್ಣುಗಳನ್ನು busy ಇಟ್ಟಿತ್ತು.

ಫ್ಯೂಶನ್, ಭಾವಗೀತೆ, ಹಿಂದಿ ಸಿನೆಮಾ ಹಾಡು, ಮೆಟಲ್, ರಾಕ್ - ಹೀಗೆ ಎಲ್ಲ ಹಾಡುಗಳ ಕಲಸುಮೇಲೋಗರದೊಡನೆ ಮೈಸೂರು ವಿ.ವಿ. ತಲುಪಿದ್ದು ಸರಿಯಾಗಿ ೧೦ಕ್ಕೆ. ಆಡಿಟೋರಿಯಮ್ ಆಗಲೇ ಭರ್ತಿಯಾಗಿತ್ತು!
ಹಲವರು ನಿಂತುಕೊಂಡು ಕೇಳುತ್ತಿದ್ದದ್ದು ಕಾಣಿಸಿತು.

ಗ್ನು/ಲಿನಕ್ಸ್ ಟಿ-ಶರ್ಟ್ ಹಾಕಿಕೊಂಡು ಒಂದೆರಡು ಕೆಲಸಗಳನ್ನು ಕೈಗೆತ್ತಿಕೊಂಡು ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ (Physics) ಡಿಪಾರ್ಟ್ಮೆಂಟ್ ಲ್ಯಾಬಿಗೆ ಹೋದಾಗ ಅಲ್ಲಿರುವ ಹಲವು ಸಿಸ್ಟಮುಗಳಲ್ಲಿ ಗ್ನು/ಲಿನಕ್ಸ್ ಇದ್ದದ್ದು, ಜೊತೆಗೆ ಕನ್ನಡಕ್ಕೆ ಬೇಕಾದ ಸಕಲ ತಂತ್ರಾಂಶಗಳೂ ಅದರಲ್ಲಿದ್ದದ್ದು ನೋಡಿ ಖುಷಿಯಾಯ್ತು.

ಅತ್ತ ಗ್ನು/ಲಿನಕ್ಸ್ ಪರಿಚಯ ಜೋರಾಗಿ ನಡೆದಿತ್ತು. ದಣಿವಾಗಿದ್ದ ಕಾರಣ ಸ್ಟೇಜು ಬಿಟ್ಟು ಸ್ವಲ್ಪ ದೂರ ಉಳಿದೆ. ಒಂದೆರಡು ಬಾರಿ ಮಾತ್ರ ಇಂಗ್ಲಿಷ್ ಬಳಕೆ ಜೋರಾದಾಗ "ಸಂಪೂರ್ಣ ಇಂಗ್ಲೀಷ್ ಬೇಡ, ಕನ್ನಡ ಹೆಚ್ಚಾಗಿ ಇರಲಿ" ಎಂದು ಹೇಳಿ ಬಂದೆ. ಮೈಸೂರಿಗರಲ್ಲಿ ಸ್ವಚ್ಛ ಭಾರತೀಯ ಇಂಗ್ಲೀಷಿಗಿರುವ ಒಲವು ಅಚ್ಚರಿ ಮೂಡಿಸಿತು. ಈ ಬಾರಿ ಮೈಸೂರಿನ ತಂಡದವರ ಬಯಕೆಯಂತೆ ಗ್ನು/ಲಿನಕ್ಸ್ ಹಬ್ಬದ ನಕ್ಷೆ ಸ್ವಲ್ಪ ಬದಲಾಗಿತ್ತು. ಮೊದಲರ್ಧ ದಿನ ಗ್ನು/ಲಿನಕ್ಸಿನಲ್ಲಿರುವ ದಿನನಿತ್ಯದ ಬಳಕೆಯ ತಂತ್ರಾಂಶಗಳನ್ನು ಬಳಸುವುದು ಹೇಗೆ ಎಂಬುದರ ದೃಶ್ಯಾವಳಿ, ಮಾತುಕತೆ. ಉಳಿದರ್ಧ ದಿನ ಗ್ನು/ಲಿನಕ್ಸ್ installationಉ - ಗ್ನು/ಲಿನಕ್ಸ್ ಹಾಕಿಕೊಂಡು ಪ್ರಯತ್ನಿಸುವಲ್ಲಿ ಸಹಾಯ ಮಾಡುವ ಸಮಯ.

ನೂರಾರು ಜನ ಭಾಗವಹಿಸಿ ಗ್ನು/ಲಿನಕ್ಸ್ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರಿದ್ದು ಖುಷಿ ತಂದಿತು. ಕನ್ನಡದ ಸುತ್ತ ಕೆಲಸ ಮಾಡುತ್ತಿರುವ ಕೆಲವು ಹಿರಿಯರ ಪರಿಚಯ ಮುಖತಃ ಆದದ್ದು ಮತ್ತಷ್ಟು ಖುಷಿ ಕೊಟ್ಟಿತು.
ಪರಿಸರದ ಸುತ್ತ ಕಾಳಜಿವಹಿಸಿ ಕೆಲವು ಚಿಕ್ಕಪುಟ್ಟ ಸಂಶೋಧನೆಗಳನ್ನು ಮಾಡುತ್ತಿರುವ ಹಿರಿಯರೊಬ್ಬರು ಸ್ವತಃ ಮಾತನಾಡಿಸಲೆಂದು ಬಂದು ತಾವು ಮಾಡುತ್ತಿರುವ ಕೆಲಸದ ಬಗ್ಗೆ ತಿಳಿಸಿದರು. ಆಸಕ್ತಿ ಹುಟ್ಟಿಸಿತು.
ಬಂದವರಲ್ಲೊಬ್ಬರು ನನ್ನ ಮುಖ ಗುರುತಿಸಿ ನೀನು ಮೈಸೂರಿನಲ್ಲಿ ನಮ್ಮ ಸ್ಕೂಲಿನಲ್ಲೇ ಓದ್ತಾ ಇದ್ದಿ, ನಮ್ಮ ಜೂನಿಯರ್. ನಾವೆಲ್ಲ ಒಟ್ಟಿಗೇ ಕ್ರಿಕೆಟ್ ಆಡ್ತಾ ಇದ್ವಿ, ನೆನಪಿದೆಯಾ ಎಂದು ಕೇಳಿದ್ದು ನೆನಪಿನ ಪುಟಗಳನ್ನು ಮತ್ತೊಮ್ಮೆ ತಿರುವಿ ಹಾಕುವಂತೆ ಮಾಡಿತು. ನೆನಪು ಮಾತ್ರ ಆಗಲಿಲ್ಲ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಾಳೆ ಹಬ್ಬ!

ನನಗೂ ಮರೆತು "ನಾಳೆ ಹಬ್ಬ ಅಲ್ವ?" ಅಂತ ಮಾತ್ರ ಹೇಳಿದೆ, ಪರಿಚಯದವರೊಬ್ಬರೊಂದಿಗೆ ಫೋನಿನಲ್ಲಿ ಮಾತನಾಡುವಾಗ. "ನಾಳೆ ಯಾವ ಹಬ್ಬಾರಿ?" ಎಂದು ಒಂದು ಕ್ಷಣ ತಲೆಕೆಡಿಸಿಕೊಂಡರು "ನಾಳೆ ಯಾವುದೂ ಇದ್ದ ಹಾಗಿಲ್ವಲ್ಲ?"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕೆಂಪು Apache ಬೈಕೂ ... ಕಪ್ಪು ಟೀ ಶರ್ಟೂ... ಒಂದು ಕಹಿ ಅನುಭವ

ಕಳೆದ  ವಾರ  WiFi  router ತಗೋಳೋಣ ಅಂತ  ಆಫೀಸಿಂದ  KT Street(ಮೈಸೂರು) ಕಡೆ ಹೊರಟೆ.  ಕಾಳಿದಾಸ ರಸ್ತೆ ಯಿಂದ ಬಸ್ ಸ್ಟಾಂಡ್ ಕಡೆ ಹೋಗಲು  ಒಂದು ಶಾರ್ಟ್ ಕಟ್ ದಾರಿ ಇದೆ , ಅಲ್ಲಿ ಹೋಗುತ್ತಾ ಇದ್ದೆ. ಒಬ್ಬ  ಪೋಲೀಸಿನವ  ಅಡ್ಡ ಹಾಕಿ ನಿಲ್ಲಿಸಿದ ಅವರು ಹಾಗೇ ನನ್ನನ್ನು ನೋಡಿ ಮತ್ತೆ  ಹೋಗಪ್ಪಾ ಅಂದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ರಾಜರಲ್ಲೊಬ್ಬ ರತ್ನ

ಜುಲೈ ೧೮, ೨೦೦೮.

ಜಯಚಾಮರಾಜೇಂದ್ರ ಒಡೆಯರು ಬದುಕಿದ್ದಿದ್ದರೆ, ಅವರು ಇಂದು ತಮ್ಮ ತೊಂಬತ್ತನೇ ವರ್ಷಕ್ಕೆ ಕಾಲಿಡುತ್ತಿದ್ದರು.

ಮೈಸೂರಿನ ಕೊನೆಯ ಅರಸರಾಗಿದ್ದ ಅವರು, ಕರ್ನಾಟಕ ಸಂಗೀತದಲ್ಲೂ, ಪಾಶ್ಚಾತ್ಯ ಸಂಗೀತದಲ್ಲೂ ಪ್ರವೀಣರಾಗಿದ್ದರು ಎನ್ನುವ ವಿಷಯ ಗೊತ್ತಿತ್ತೇ ನಿಮಗೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬ್ರೋಚೇವಾರೆವರುರಾ ನಿನುವಿನಾ?

ಇದೇನಿದು, ಕನ್ನಡ ಬರಹಕ್ಕೆ ತೆಲುಗು ತಲೆಬರಹವೇ ಎಂದಿರಾ? ಕಾರಣವಿದೆ. ಇಂದು ಮೇ ೨೮ -ಮೈಸೂರು ವಾಸುದೇವಾಚಾರ್ಯರು ೧೮೬೫ರಲ್ಲಿ ಇದೇ ದಿನ ಹುಟ್ಟಿದ್ದು. ಮೈಸೂರು ವಾಸುದೇವಾಚಾರ್ಯ ಎಂದ ಕೂಡಲೆ, ನನಗೆ ನೆನಪಿಗೆ ಬರುವ ಕೃತಿ ಖಮಾಚ್ ರಾಗದ ಬ್ರೋಚೇವಾರೆವರುರಾ ಎನ್ನುವ ರಚನೆ. ಕೆ.ವಿಶ್ವನಾಥರ, ಮತ್ತು ಕೆ.ವಿ.ಮಹಾದೇವನ್ ಅಂತಹವರ ದಯದಿಂದ ಸಂಗೀತದ ಪರಿಚಯ ಇಲ್ಲದವರಿಗೂ, ಶಂಕರಾಭರಣಂ ಮೊದಲಾದ ತೆಲುಗು ಸಿನೆಮಾಗಳ ಮೂಲಕ ಶಾಸ್ತ್ರೀಯ ಸಂಗೀತದ ಅಲ್ಪ ಸ್ವಲ್ಪ ಪರಿಚಯವಾದದ್ದು, ಬ್ರೋಚೇವಾರೆವರುರಾ, ಸಾಮಜವರಗಮನ ಮೊದಲಾದ ಕೃತಿಗಳು ಎಲ್ಲರ ಬಾಯಲ್ಲೂ ನಲಿದಾಡಿದ್ದು ೮೦ರ ದಶಕದ ಸಂಗತಿ.

ಮೈಸೂರು ವಾಸುದೇವಾಚಾರ್ಯರು ಕರ್ನಾಟಕ ಸಂಗೀತದ ವಾಗ್ಗೇಯಕಾರರಲ್ಲಿ ಮೊದಲಸಾಲಿನಲ್ಲಿ ನಿಲ್ಲಬಲ್ಲಂತಹವರು. ತ್ಯಾಗರಾಜಾದಿ ಸಂಗೀತ ತ್ರಿಮೂರ್ತಿಗಳ ನಂತರ ಬರಬಲ್ಲ ಹೆಸರುಗಳಲ್ಲಿ ಮೊದಲದ್ದೇ ವಾಸುದೇವಾಚಾರ್ಯರದ್ದು ಎಂದರೂ ತಪ್ಪಿಲ್ಲ. ತ್ಯಾಗರಾಜರ ಶಿಷ್ಯ ಪರಂಪರೆಯಲ್ಲಿ ಬಂದ ವಾಸುದೇವಾಚಾರ್ಯರು, ಪಟ್ಟಣಂ ಸುಬ್ರಮಣ್ಯ ಅಯ್ಯರ್ ಅವರ ಪಟ್ಟ ಶಿಷ್ಯ.

ತ್ಯಾಗರಾಜರ ರೀತಿಯಲ್ಲಿ ರಚನೆ ಮಾಡಿದ ವಾಸುದೇವಾಚಾರ್ಯರು, ತಮ್ಮ ರಚನೆಗಳಿಗೆ ತ್ಯಾಗರಾಜರಂತೆಯೇ ಆಯ್ದದ್ದು ಸಂಸ್ಕೃತ ಹಾಗೂ ತೆಲುಗು ಭಾಷೆಗಳನ್ನು. ಅಲ್ಲದೆ, ಅವರಂತೆಯೇ ವಾಸುದೇವಾಚಾರ್ಯರೂ ಸ್ವನಾಮಮುದ್ರೆಯನ್ನೇ ಉಪಯೋಗಿಸಿದರು. ತ್ಯಾಗರಾಜರ ರಚನೆಗಳಲ್ಲಿ, ತ್ಯಾಗರಾಜ ಎಂಬ ಮುದ್ರೆ ಕಂಡುಬಂದರೆ, ವಾಸುದೇವಾಚಾರ್ಯರು ವಾಸುದೇವ ಅನ್ನುವ ಅಂಕಿತವನ್ನು ಉಪಯೋಗಿಸಿದ್ದಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಮೈಸೂರು ನಾಗರಾಜ್ ಮತ್ತು ಮಂಜುನಾಥ್


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಹತ್ತನೇ ದಿನ

ಇಂದು ನವರಾತ್ರಿಯ ಹತ್ತನೇ, ಹಾಗೂ ಕಡೆಯ ದಿವಸ. ವಿಜಯ ದಶಮಿ. ರಾಮ ರಾವಣನನ್ನು ಕೊಂದು, ವಿಜಯ ಪಡೆದ ದಿನವೆಂದೂ, ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ ದಿನವೆಂದೂ ನಾವು ಈ ದಿನವನ್ನು ಆಚರಿಸುತ್ತೇವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ನವರಾತ್ರಿಯ ಒಂಬತ್ತನೆಯ ದಿನ

ಇವತ್ತು ನವರಾತ್ರಿಯ ಒಂಬತ್ತನೆಯ ದಿವಸ. ಮಹಾನವಮಿ. ಆಯುಧಪೂಜೆ. ಎಷ್ಟೋ ಕನ್ನಡಿಗರಿಗೆ ಸರಸ್ವತೀ ಪೂಜೆಯೂ ಇಂದೇ. ಇವತ್ತು ಕರ್ನಾಟಕದ ಒಬ್ಬ ವಾಗ್ಗೇಯಕಾರರ ರಚನೆ ನೋಡೋಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಎಂಟನೇ ದಿನ

ಇಂದು ನವರಾತ್ರಿಯ ಎಂಟನೇ ದಿನ. ದುರ್ಗಾಷ್ಟಮಿ. ಬಂಗಾಳದಲ್ಲಿ ಇಂದು ದುರ್ಗಾ ಪೂಜೆಯ ಸಂಭ್ರಮವೋ ಸಂಭ್ರಮ. ಅಂದಹಾಗೆ, ಸಂಗೀತ ಪ್ರಪಂಚಕ್ಕೆ ಬಂದಾಗ, ಮೂರು ರಾಜ್ಯಗಳ ಹೆಸರುಗಳು ರಾಗಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವು ಕರ್ನಾಟಕ, ಬಂಗಾಳ, ಮತ್ತು ಗುಜರಾತ್. ಇವುಗಳ ಬಗ್ಗೆ ಮತ್ತೊಮ್ಮೆ ಯಾವಾಗಲಾದರೂ ಬರೆಯುವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನವರಾತ್ರಿಯ ಏಳನೇ ದಿನ

ಇವತ್ತು ನವರಾತ್ರಿಯ ಏಳನೇ ದಿನ. ಈ ದಿನ ತಲಕಾವೇರಿಯಲ್ಲಿ ತೀರ್ಥೋದ್ಭವವಾಗುವ ತುಲಾ ಸಂಕ್ರಮಣವೂ ಹೌದು. ನೃಪತುಂಗನ ಕಾಲದಿಂದಲೂ, ಕನ್ನಡನಾಡು ಕಾವೇರಿಯಿಂದ ಗೋದಾವರಿಯವರೆಗೆ ಎಂಬ ಹೇಳಿಕೆ ಇದೆ. ಕಾವೇರಿ ಕನ್ನಡಿಗರಿಗೆ, ಅದರಲ್ಲೂ ದಕ್ಷಿಣ ಕರ್ನಾಟಕದ ಭಾಗದವರಿಗೆ ಜೀವನದಿ ಎಂಬುದರಲ್ಲಿ ಎರಡುಮಾತಿಲ್ಲ. ಕಾವೇರಿ ಮತ್ತೆ ಅದಕ್ಕೆ ಸೇರಿಕೊಳ್ಳುವ ನದಿಗಳಾದ ಹೇಮಾವತಿ, ಲಕ್ಷ್ಮಣತೀರ್ಥ, ಶಿಂಷಾ, ಅರ್ಕಾವತಿ, ಕಣ್ವಾ, ಹಾರಂಗಿ ಮೊದಲಾದುವು ಮೈಸೂರು,ಹಾಸನ,ಕೊಡಗು, ಮಂಡ್ಯ, ತುಮಕೂರು, ಚಿಕ್ಕಮಗಳೂರು,ಬೆಂಗಳೂರು ಮತ್ತು ಚಾಮರಾಜನಗರ ಜಿಲ್ಲೆಗಳ ಬಹುಪಾಲು ಭೂಮಿಗೆ ನೀರುಣಿಸುತ್ತವೆ. ಇಂತಹ ಮಹಾತಾಯಿ ಕಾವೇರಿಗೆ ಇಂದು ಮೊದಲು ನಮಿಸೋಣ.

ಇವತ್ತು ಈ ಮೊದಲ ಆರು ದಿನಕ್ಕಿಂತ ಸ್ವಲ್ಪ ಬೇರೆ. ಬೇರೆ ಸಂಗೀತಗಾರರು ಹಾಡಿದ, ದೇವಿಯ ಬಗ್ಗೆಯ ರಚನೆಯ ಕೊಂಡಿಗಳನ್ನು ಕೊಡುವ ಬದಲು ಇವತ್ತು ಒಂದು ಬದಲಾವಣೆ ಮಾಡಿದ್ದೇನೆ. ಕನ್ನಡದ ಮೂರು ಕವಿಗಳು ಸರಸ್ವತಿಯ ಬಗ್ಗೆ ಮಾಡಿರುವ ಸ್ತುತಿಯನ್ನು, ಹವ್ಯಾಸಿ ಸಂಗೀತಾಭ್ಯಾಸಿಯೊಬ್ಬರ ಕಂಠದಲ್ಲಿ ಕೇಳಿಸುವೆ. ಇದಕ್ಕೆ ಕಾರಣ, ಕನ್ನಡಕ್ಕೂ-ಕಾವೇರಿಗೂ ಇರುವ ಬಿಡಿಸದ ನಂಟು. ಹಾಗಾಗಿ, ಕಾವೇರಿ ಸಂಕ್ರಮಣದ ದಿನ ಒಂದಲ್ಲ, ಮೂರು ಕನ್ನಡ ರಚನೆಗಳು ಇವತ್ತು ಇಲ್ಲಿ ಕೇಳಿ ಬರುತ್ತಿವೆ. ಇವಕ್ಕೆ ಹಿನ್ನಲೆ ವಾದ್ಯಗಳ ಅಲಂಕಾರವಿಲ್ಲ. ಆದರೂ ಪರವಾಗಿಲ್ಲ, ಎನ್ನುವ ಭಾವನೆ ನನ್ನದು.

ಮೊದಲಿಗೆ ಕನ್ನಡದ ಮೊದಲ ಕಾವ್ಯ ಕವಿರಾಜ ಮಾರ್ಗದಿಂದ ಆಯ್ದ ಸರಸ್ವತೀ ಸ್ತುತಿಯಾದ ಒಂದು ಕಂದಪದ್ಯ:

ಶ್ರೀ ವಿಶದವರ್ಣೆ ಮಧುರಾ

ರಾವೋಚಿತೆ ಚತುರ ರುಚಿರ ಪದರಚನೆ ಚಿರಂ

ದೇವಿ ಸರಸ್ವತಿ ಹಂಸೀ

ಭಾವದಿ ಕೂರ್ತು ನೆಲೆಗೊಳ್ಗೆ ಮನ್ಮಾನಸದೊಳ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನವರಾತ್ರಿಯ ಆರನೇ ದಿನ

ಈ ದಿವಸ ನವರಾತ್ರಿಯ ಆರನೇ ದಿನ. ಹತ್ತುದಿನಗಳ ಹಬ್ಬದಲ್ಲಿ, ಅರ್ಧಭಾಗ ಕಳೆದಿದೆ. ಕೆಲವರು ಸರಸ್ವತೀ ಪೂಜೆಯನ್ನು

ನವರಾತ್ರಿಯ ಒಂಬತ್ತನೇ ದಿನ ಬರುವ ಮಹಾನವಮಿಯಂದು ಮಾಡಿದರೆ, ಮತ್ತೆ ಕೆಲವರು, ನವರಾತ್ರಿಯಲ್ಲಿ ಎಂದು ಚಂದ್ರ

ಮೂಲಾ ನಕ್ಷತ್ರದ ಬಳಿ ಇರುತ್ತಾನೋ, ಆ ದಿನ ಮಾಡುತ್ತಾರೆ. ಇದು ಸಾಧಾರಣವಾಗಿ, ನವರಾತ್ರಿಯ ಆರನೇ ಅಥವಾ

ಏಳನೆಯ ದಿನ ಬರುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ನವರಾತ್ರಿಯ ನಾಲ್ಕನೇ ದಿನ

ಇವತ್ತು ದಸರಾ ಹಬ್ಬದ ನಾಲ್ಕನೇ ದಿನ. ಈಗಾಗಲೇ ಮೊದಲ ಮೂರು ದಿನಗಳಲ್ಲಿ, ತ್ಯಾಗರಾಜರ, ಮುತ್ತಯ್ಯಭಾಗವತರ ಮತ್ತು ಶಾಮಾಶಾಸ್ತ್ರಿ ಅವರ ಒಂದೊಂದು ರಚನೆಗಳ ಬಗ್ಗೆ ಬರೆದಿದ್ದೆ. ಕೇಳಿಲ್ಲದವರು ಕೇಳಿ ಆನಂದಿಸಿ.

ನವರಾತ್ರಿಯ ನಾಲ್ಕನೇ ದಿನ ತಿರುವನಂತಪುರದ ನವರಾತ್ರಿ ಮಂಡಪದಲ್ಲಿ ಹಾಡುವ ಸ್ವಾತಿ ತಿರುನಾಳರ ಕೃತಿ ತೋಡಿ ರಾಗದಲ್ಲ್ರಿರುವ ಭಾರತಿ ಮಾಮವ ಎಂಬ ರಚನೆ. ಅಂದಹಾಗೆ, ಸಂಗೀತದ ಸೊಗಸು ಬರೀ ಮಾತಾಡಿದಾಗ- ಬರೆದಾಗ ಸಿಗುವುದಿಲ್ಲವಲ್ಲ? ಹಾಗಾಗಿ, ನೆನ್ನೆ ಇಲ್ಲಿ ನಡೆದ ಸಂಗೀತ ಕಚೇರಿಗೆ ಹೋಗುವ ಅವಕಾಶ ಸಿಕ್ಕಿತು ನನಗೆ- ಹಾಗಾಗಿ ನನ್ನ ಬರೀ ಮಾತುಗಳಲ್ಲೂ ಸ್ವಲ್ಪ ಅರ್ಥ ಕೂಡಿದಂತಾಯಿತು ನನಗೆ. ನನ್ನ ಬಾಲ್ಯದಲ್ಲಿ, ನನ್ನ ಊರಿನಲ್ಲಿ ನಡೆಯುತ್ತಿದ್ದ ನವರಾತ್ರಿ-ಗಣೇಶೋತ್ಸವದ ನೆನಪು ಮರುಕಳಿಸಿತು.

ಇವತ್ತು ನಾನು ವಿವರಿಸಹೊರಡಲಿರುವ ದೇವೀ ಪರವಾದ ಕೃತಿ ೨೦ನೇ ಶತಮಾನದಲ್ಲಿ ಬಂದ ಒಬ್ಬ ಮಹಾನ್ ಕಲಾವಿದರ ರಚನೆ. ಇವರು ಸಂಗೀತಗಾರರಷ್ಟೇ ಅಲ್ಲದೆ, ತಮಿಳು ಸಿನಿಮಾ ರಂಗದಲ್ಲೂ ಹೆಸರು ಮಾಡಿದ್ದವರು. ಇವರೇ ಜಿ.ಎನ್.ಬಿ. ಎಂಬ ಹೆಸರಿನಲ್ಲೇ ಚಿರಪರಿಚಿತರಾದ ಜಿ.ಎನ್.ಬಾಲಸುಬ್ರಮಣಿಯನ್.

ಜಿ.ಎನ್.ಬಿ. (೧೯೧೦- ೧೯೬೫) ಸಂಗೀತ ರಂಗಕ್ಕೆ ಪರಿಚಿತರಾಗಿದ್ದು ಒಂದು ವಿಶಿಷ್ಟ ಸಂದರ್ಭದಲ್ಲಂತೆ. ಒಮ್ಮೆ, ಯಾರೋ ವಿದ್ವಾಸರು ಒಂದು ಕಚೇರಿಗೆ ಬರಲಾಗಲಿಲ್ಲ. ಆಗ, ಆ ಸಮಯದಲ್ಲಿ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ಜಿ.ಎನ್.ಬಿ. ಅವರನ್ನು, ಅವರ ಸ್ಥಾನ ತುಂಬಲು ಕಳಿಸಲಾಯಿತಂತೆ. ಅಂದು ತಮ್ಮ ಶೈಲಿಯಿಂದ ಇವರು ಎಲ್ಲ ರಸಿಕರ ಮನಗೆದ್ದುಬಿಟ್ಟ ಜಿ.ಎನ್.ಬಿ. ಮತ್ತೆ ಹಿಂತಿರುಗಿ ನೋಡಲಿಲ್ಲ.

ಕೇವಲ ಐವತ್ತೈದು ವರ್ಷದ ಕಿರಿಯ ವಯಸ್ಸಿನಲ್ಲೇ ರಸಿಕರು ಇವರನ್ನು ಕಳೆದುಕೊಳ್ಳಬೇಕಾಯಿತು. ಆದರೆ, ಇವರ ಹಲವಾರು ಶಿಷ್ಯರು ಇವರ ಪರಂಪರೆಯನ್ನು ಮುಂದುವರೆಸಿಕೊಂಡುಹೋಗಿದ್ದಾರೆ. ಪ್ರಸಿದ್ಧ ಸಂಗೀತಗಾರರಾದ ಎಮ್.ಎಲ್.ವಸಂತಕುಮಾರಿ, ತ್ರಿಶೂರು ರಾಮಚಂದ್ರನ್, ರಾಧಾ-ಜಯಲಕ್ಷ್ಮಿ ಇವರೆಲ್ಲ ಜಿ.ಎನ್.ಬಿ. ಪರಂಪರೆಯವರೇ.

ಜಿ.ಎನ್.ಬಿ. ಅವರು ಸುಮಾರು ಐವತ್ತಕ್ಕೂ ಹೆಚ್ಚು ರಚನೆಗಳನ್ನು ಸಂಸ್ಕೃತ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ರಚಿಸಿದ್ದಾರೆ. ಹಿಂದೆ ಕೇಳಿಲ್ಲದ ಹೊಸ ರಾಗಗಳನ್ನು ಸೃಷ್ಟಿಸಿ, ಅದರಲ್ಲಿ ಕೃತಿಗಳನ್ನು ಮಾಡಿದ್ದಾರೆ. ಆದರೆ, ಇವರು ತಮ್ಮ ಕಚೇರಿಗಳಲ್ಲಿ ತಮ್ಮ ಕೃತಿಗಳನ್ನು ಹೆಚ್ಚಾಗಿ ಹಾಡುತ್ತಿರಲಿಲ್ಲ ಎಂದು ಕೇಳಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಎರಡನೇ ದಿನ

ನೆನ್ನೆ ನವರಾತ್ರಿ ಹಬ್ಬದ ಮೊದಲ ದಿನ ದ ಬಗ್ಗೆ ಬರೆದಿದ್ದೆ. ಇವತ್ತು ಇನ್ನು ದಸರೆಯ ಎರಡನೆಯ ದಿವಸ.ನಮಗೆಲ್ಲ ತಿಳಿದ ಹಾಗೆ ನವರಾತ್ರಿ ಕನ್ನಡಿಗರಿಗೆ ದೊಡ್ಡ ಹಬ್ಬ. ವಿಜಯ ನಗರದ ಅರಸರ ಕಾಲದಲ್ಲಿ ದಸರೆಯ ಸಂಭ್ರಮ ನಡೆಯುತ್ತಿದ್ದದ್ದರ ವಿಷಯವಾಗಿ, ಆ ಕಾಲದಲ್ಲಿ ಬಂದಿದ್ದ ಪರ್ಶಿಯನ್ ಹಾಗೂ ಫ್ರೆಂಚ್ ಯಾತ್ರಿಕರ ಬರಹಗಳಿಂದ ತಿಳಿದುಬರುತ್ತದೆ. ಆ ವೈಭವಕ್ಕೆ, ಈಗಲೂ ಹಂಪೆಯಲ್ಲಿರುವ ಮಹಾನವಮಿ ದಿಬ್ಬವೂ ಸಾಕ್ಷಿಯಾಗಿದೆ. ನಂತರ, ಈ ಸಂಪ್ರದಾಯ ಮೈಸೂರಿನ ಅರಸರಲ್ಲೂ ಮುಂದುವರೆದದ್ದು ಆಶ್ಚರ್ಯವೇನಿಲ್ಲ.

ಮೈಸೂರರಸರು ದಸರೆಯ ಆಚರಣೆಯೊಂದರಲ್ಲೇ ಅಲ್ಲ - ಅವರು ವಿವಿಧ ಕಲಾಪ್ರಕಾರಗಳಿಗೆ ಕೊಡುತ್ತಿದ್ದ ಪ್ರೋತ್ಸಾಹದಲ್ಲೂ ಆ ಕಾಲದ ರಾಜ್ಯಗಳ ಮುಂಚೂಣಿಯಲ್ಲಿದ್ದರು. ೧೮-೧೯ ನೇ ಶತಮಾನಗಳಲ್ಲಿ ಮೈಸೂರು ವೀಣೆಯ ಬೆಡಗೆಂದಾಗುವುದಕ್ಕೂ ಇದೇ ಕಾರಣ. ಹಲವಾರು ವಿದ್ವಾಂಸರು ಹಾಗೇ ಮೈಸೂರರಸರ ಆಶ್ರಯ ಅರಸಿ ಬಂದದ್ದೂ ಉಂಟು. ಹಾಗೆ ಬಂದವರಲ್ಲಿ, ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು ಪ್ರಮುಖರು.
ಕೃಷ್ಣರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿ ಇವರು ಬಂದದ್ದರ ಬಗ್ಗೆ ಒಂದು ಕುತೂಹಲಕಾರಿ ಸಂಗತಿಯೊಂದಿದೆ. ಅದೇನೋ, ಮುತ್ತಯ್ಯ ಭಾಗವತರಿಗೆ ಮಹಾರಾಜರ ಮುಂದೆ ಕಚೇರಿ ಕೊಡುವ ಅವಕಾಶ ಸಿಕ್ಕ ದಿನ ಅವರ ಗಂಟಲಿಗೆ ಏನೋ ತೊಂದರೆಯಾಗಿ, ಕಾರ್ಯಕ್ರಮ ಹೆಚ್ಚು ಕಳೆಕಟ್ಟಲಿಲ್ಲ. ಸಾಧಾರಣವಾಗಿ, ಅರಮನೆಯಲ್ಲಿ ಹಾಡುವ ವಿದ್ವಾಂಸರಿಗೆ, ಅವರಿಗೆ ತಕ್ಕ ಮರ್ಯಾದೆ ಕೊಡಲಾಗುತ್ತಿತ್ತು. ಆ ರೀತಿ ಅವರಿಗೂ ಮರ್ಯಾದೆ ಮಾಡಿ ಕಳಿಸಲಾಯಿತಂತೆ. ಭಾಗವತರಿಗೆ ಸ್ವಲ್ಪ ನಿರಾಸೆಯೇ ಆಯಿತು. ನಂತರ ಕೆಲವು ದಿನಗಳ ನಂತರ, ಅವರು ಚಾಮುಂಡಿ ಬೆಟ್ಟದ ಮೇಲೆ, ದೇವಾಲಯದಲ್ಲಿ ತಮ್ಮ ಪಾಡಿಗೆ ಹಾಡಿಕೊಳ್ಳುತ್ತಿದ್ದಾಗ ಆ ದಿನ ದೇವಿಯ ದರ್ಶನಕ್ಕೆ ಬಂದ ಒಡೆಯರಿಗೆ ಅದು ಕೇಳಿ, ಅವರ ಮೇಲೆ ಬಂದಿದ್ದ ಅಭಿಪ್ರಾಯ ಬದಲಾಯಿತಂತೆ. ನಂತರ ಅವರನ್ನು ತಮ್ಮ ಆಸ್ಥಾನ ವಿದ್ವಾಂಸರನ್ನಾಗಿ ಮಾಡಿಕೊಂಡರಂತೆ. ಇದು ನಡೆದದ್ದು ೧೯೨೭ರಲ್ಲಿ.

ರಾಜರು ತಮ್ಮ ಇಷ್ಟದೇವಿ ಮೈಸೂರಿನ ನಗರ ದೇವತೆ, ಚಾಮುಂಡಿಯ ಮೇಲೆ ೧೦೮ ಕೃತಿಗಳನ್ನು ರಚಿಸಲು ಕೇಳಿದರಂತೆ, ಅಂತೆಯೇ ಮುತ್ತಯ್ಯ ಭಾಗವತರು ೧೦೮ ಕೃತಿಗಳನ್ನು ರಚಿಸಿದರು - ಕನ್ನಡದಲ್ಲಿರುವ ಈ ಕೃತಿಗಳ ಸಾಹಿತ್ಯವನ್ನು ದೇವೋತ್ತಮ ಜೋಯಿಸರೆಂಬುವರು ಬರೆದುಕೊಟ್ಟರಂತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನವರಾತ್ರಿಯ ಮೊದಲ ದಿನ

ಇಂದು ನವರಾತ್ರಿಯ ಮೊದಲ ದಿನ. ದುಷ್ಟರ ಮುಂದೆ, ಒಳ್ಳೆಯ ಶಕ್ತಿ ವಿಜೃಂಭಿಸಿದ ದಿನವನ್ನು ನೆನೆಯಲು ನಾವು ಆಚರಿಸುವ ಹಬ್ಬ ನವರಾತ್ರಿ. ಹಳೆಯ ಮೈಸೂರಿನ ಕಡೆಯವರಿಗಂತೂ, ಅರಸರ ಕಾಲದಿಂದ ಬಂದಿರುವ ನಾಡಹಬ್ಬದ ಸಂಭ್ರಮ. ಮನೆಮನೆಯಲ್ಲೂ ಗೊಂಬೆಗಳ ಅಲಂಕಾರ. ಅಲ್ಲಲ್ಲಿ ಸಂಗೀತೋತ್ಸವಗಳು - ಹೀಗಾಗಿ ಧಾರ್ಮಿಕ ಕಾರಣಗಳಿಗಿಂತ, ಸಾಂಸ್ಕೃತಿಕ ಕಾರಣಗಳಿಗೆ ನವರಾತ್ರಿ ನನಗೆ ಮೆಚ್ಚುಗೆಯಾಗುವ ಹಬ್ಬ.

ಮೈಸೂರಿನಂತೆಯೇ, ವೈಭವದ ನವರಾತ್ರಿ ನಡೆಯುವ ಊರು ತಿರುವನಂತಪುರ. ಅಲ್ಲಿಯ ಪದ್ಮನಾಭದೇವಸ್ಥಾನದ ಪಕ್ಕದ ನವರಾತ್ರಿ ಮಂಡಪಂ ನಲ್ಲಿ, ಇನ್ನೂರಕ್ಕೂ ಹೆಚ್ಚು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಗೀತೋತ್ಸವದ ಆಚರಣೆ ಇದೆ. ಮಹಾರಾಜ ಸ್ವಾತಿ ತಿರುನಾಳ್ ( ಕ್ರಿ.ಶ. ರಿಂದ ಕ್ರಿ.ಶ. ) ಕರ್ನಾಟಕ ಸಂಗೀತದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಅವರು ನವರಾತ್ರಿಯ ಸಂದರ್ಭದಲ್ಲೇ ಹಾಡಬೇಕೆಂದು ರಚಿಸಿರುವ ಒಂಬತ್ತು ದೇವೀ ಪರವಾದ ಕೃತಿಗಳನ್ನು, ಈ ಸಂಗೀತೋತ್ಸವದಲ್ಲಿ ಪ್ರತಿ ದಿನ ತಲಾ ಒಂದು ಕೃತಿಯನ್ನು ವಿಸ್ತರಿಸಿ ಹಾಡಲಾಗುತ್ತೆ. ಈ ರಚನೆಗಳಿಗೆ ನವರಾತ್ರಿ ಕೃತಿಗಳೆಂದೇ ಕರೆಯಲಾಗುತ್ತೆ. ದಸರೆಯ ಮೊದಲ ದಿವಸ ಸಂಜೆ ಹಾಡುವ ಕೃತಿ ಶಂಕರಾಭರಣ ರಾಗದ ದೇವಿ ಜಗಜ್ಜನನಿ ಎಂಬುದು.

ಈ ಸಂದರ್ಭದಲ್ಲೇ, ನನಗೆ ಇಷ್ಟವಾದ ಕೆಲವು ರಚನೆಗಳನ್ನೂ ಸಂಗೀತಾಸಕ್ತರೊಂದಿಗೆ ಹಂಚಿಕೊಳ್ಳೋಣವೆನಿಸಿತು. ಪ್ರತಿ ದಿನ ಒಂದು ಕೃತಿಯ ಬಗ್ಗೆ ಸ್ಬಲ್ಪ ಮಾಹಿತಿಯನ್ನೂ, ಸಾಧ್ಯವಾದರೆ ಕೇಳಲು ಕೊಂಡಿಗಳನ್ನೂ ಕೊಡುವ ಇರಾದೆ ನನ್ನದು. ನವರಾತ್ರಿ ಆದ್ದರಿಂದ, ದೇವಿಯ ವಿವಿಧ ರೂಪಗಳ ( ಪಾರ್ವತಿ, ಸರಸ್ವತಿ, ದುರ್ಗೆ, ಇತ್ಯಾದಿ) ಬಗ್ಗೆ ಇರುವ ಕೃತಿಗಳಿವು ಅನ್ನುವುದನ್ನು ಬಿಟ್ಟರೆ, ಯಾವುದೇ ಕ್ರಮವನ್ನು ನಾನು ಅನುಸರಿಸುತ್ತಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
Subscribe to ಮೈಸೂರು