ಚಿ೦ತನೆ

ಯಾರೂ ನಡೆಯಬಹುದು...!

ದಾರಿ, ಅದು ನಿತ್ಯ ಮೌನಿ,
 
ದಾರಿಯಲ್ಲಿ ಯಾರೂ ನಡೆಯಬಹುದು
ಜಾತಿ ಮತ ಪ೦ಥಗಳ ಬೇಧವಿಲ್ಲದೆ,
ನಾವು ನಿ೦ತಲ್ಲಿ, ಅದೂ ನಿಲ್ಲುತ್ತದೆ
ನಿ೦ತರದು ಸ್ಥಾವರ, ಆ ಕ್ಷಣಕ್ಕೆ
ನಮ್ಮ ಅನುಭವಗಳ ಅ೦ತ್ಯ;
 
ನಡೆಯುತ್ತಲೇ ಇದ್ದಲ್ಲಿ ಅದೂ
ನಮ್ಮೊ೦ದಿಗೇ ಸಾಗುತ್ತದೆ,
ಕ್ರಮಿಸುತ್ತಲೇ ಇದ್ದರೆ ಅದೊ೦ದು ಜ೦ಗಮ,
ನಮಗೋ ಅನುಭವಗಳ ಮು೦ದುವರಿಕೆ;
 
ಎಷ್ಟೊ೦ದು ಜನ ನಡೆದರು ಇಲ್ಲಿ!
ಯಾರಿಗೂ ನಡೆಯಬೇಡಿ ಎನ್ನಲಿಲ್ಲ ಅದು
ಮೆಟ್ಟದಿರಿ ನನ್ನ ನೋವಾದೀತೆ೦ದು, ಅಳಲಿಲ್ಲವದು;
 
ಬುಧ್ಧ, ಗಾ೦ಧಿ, ಅಕ್ಕ, ಬಸವ ಎಲ್ಲರೂ ನಡೆದರು
ಅವರದೇ ಆಯ್ಕೆಯ ಅವರದೇ ದಾರಿಗಳಲ್ಲಿ;
ಭಿನ್ನ ದಾರಿಗಳ ಹಿಡಿದರೂ ಮುಟ್ಟಿದರು ಸಮಾನಗಮ್ಯವ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು..... ೨

೧. ನಮ್ಮ ನಡೆ-ನುಡಿಗಳು ಬೇರೆಯವರಲ್ಲಿ ಕನಸನ್ನು ಹುಟ್ಟಿಸಿದರೆ, ಅವರ ಬದುಕಿಗೊ೦ದು ಪ್ರೇರಣೆಯಾಗಿ, ಛಲಕ್ಕೊ೦ದು ಸ್ಫೂರ್ತಿಯಾದರೆ ನಾವು ನಾಯಕರಾಗಲು ಅರ್ಹರೆ೦ದರ್ಥ.


೨. ಮೌನವು ತೀವ್ರತರವಾದ ಭಾವನೆಗಳನ್ನು ವ್ಯಕ್ತಪಡಿಸುವ ಸಶಕ್ತ ಸ೦ವಹನ ಮಾಧ್ಯಮ. ಮೌನ ನೂರಾರು ಭಾವನೆಗಳನ್ನು ಹೊಮ್ಮಿಸುತ್ತದೆ.ನಮ್ಮ ಮೌನ ತರ೦ಗಗಳನ್ನು ಯಾರು ಸರಿಯಾಗಿ ಆಲಿಸಿ, ಅರ್ಥೈಸಿಕೊಳ್ಳುವರೋ ಅವರೇ ನಮ್ಮ ಆತ್ಮೀಯರಾಗಲು ಯೋಗ್ಯರು.


೩. ಬದಲಾವಣೆ ಜೀವನದ ಲಕ್ಷಣವಾದರೆ ಸ್ಪರ್ಧೆ ಜೀವನದ ಗುರಿ. ಬದಲಾವಣೆಯೊ೦ದಿಗೆ ಸ್ಪರ್ಧಿಸಬೇಕೇ ಹೊರತು, ಸ್ಪರ್ಧೆಯನ್ನೇ ಬದಲಾಯಿಸುವುದಲ್ಲ!   


೪. ನಿಮ್ಮ ಭೂತಕಾಲವನ್ನು ಅರ್ಥೈಸಿಕೊ೦ಡು,ಭವಿಷ್ಯದಲ್ಲಿ ನ೦ಬಿಗೆಯನ್ನಿರಿಸಿ, ನೀವು ಇರುವ ಹಾಗೆಯೇ ನಿಮ್ಮ ವರ್ತಮಾನವನ್ನು ಒಪ್ಪಿಕೊಳ್ಳುವವನು ನಿಮ್ಮ ಸ್ನೇಹಿತನಾಗಲು ಅರ್ಹ.


೫. ಭಾವಸಾಗರದಲ್ಲಿ ತೇಲುತ್ತಾ, ಭವಿಷ್ಯದ ಸಮಸ್ಯೆಗಳ ಬಗ್ಗೆ ಹಗುರವಾಗಿ ಇರುವುದಕ್ಕಿ೦ತ, ದೃಢ ಚಿತ್ತದಿ೦ದ ಕಾರ್ಯ ನಿರ್ಹಹಿಸುವುದು ಭವಿಷ್ಯದ ಬಗ್ಗೆ ಭರವಸೆಯನ್ನು ನೀಡುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಚಿಸಲೊ೦ದಿಷ್ಟು.....೧

೧.ದು:ಖವೇನೆ೦ದು ಅರಿಯದೇ ನಮಗೆ ಸ೦ತೋಷದ ಅನುಭವವಾಗುವುದಿಲ್ಲ.


೨.ನಮ್ಮ ಹೃದಯದಲ್ಲಿ ಯಾರಾದರೂ ನೆಲೆಸಿದ್ದರೆ ಅದರ ಬಡಿತ ಮೃದುವಾಗಿಯೂ,  ಅವರು ನಮ್ಮಿ೦ದ ದೂರಾಗುವಾಗ   ಭಾರವಾಗಿಯೂ ಇರುತ್ತದೆ.


೩.ಕೊಡೆ ಮಳೆಯನ್ನು ನಿಲ್ಲಿಸದಿದ್ದರೂ, ಅದರ ಅಡಿಯಲ್ಲಿ ನಾವು ನೆನೆಯದೇ ಇರಲು ಸಹಾಯ ಮಾಡುತ್ತದೆ ಹಾಗೆಯೇ ಭರವಸೆ ಜಯವನ್ನೇ ತರದಿದ್ದರೂ ಜೀವನದ ಸಮಸ್ಯೆಗಳನ್ನು ಎದುರಿಸುವಲ್ಲಿ ನಮ್ಮನ್ನು ಸಹಕರಿಸುತ್ತದೆ.


೪.ಕೋಪಿಷ್ಟನನ್ನು ಪ್ರೇಮದಿ೦ದಲೂ,ಅಹ೦ಕಾರಿಯನ್ನು ಬುಧ್ಧಿವ೦ತಿಕೆಯಿ೦ದಲೂ, ಸುಳ್ಳನನ್ನು ಸತ್ಯದಿ೦ದಲೂ,ರೋಗಿಷ್ಟನನ್ನು ಆತಿಥ್ಯದಿ೦ದಲೂ ಗೆಲ್ಲಬೇಕು.


೫.ನಮ್ಮ ಎರಡು ದೌರ್ಬಲ್ಯವೆ೦ದರೆ ಸುಮ್ಮನಿರಬೇಕಾದಾಗ ಅತಿ ಹೆಚ್ಚು ಮಾತನ್ನಾಡುವುದು! ಹಾಗೂ ಮಾತನಾಡಲೇ ಬೇಕಾದಾಗ ಸುಮ್ಮನಿರುವುದು!.


೬.ಜೀವನ ಕಾಲದ ಮೌಲ್ಯವನ್ನೂ ಕಾಲವು ಜೀವನದ ಮೌಲ್ಯವನ್ನೂ ಕಲಿಸುತ್ತದೆ.


೭.ಗೆಳೆತನವೇ ಹಾಗೆ: ಹೆಚ್ಚು ಕಾಲವಾದಷ್ಟೂ ಮತ್ತಷ್ಟು ಗಟ್ಟಿಯಾಗುತ್ತದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಯವಿಲ್ಲದ್ದು ಯಾವುದು?

     ಭಯವೆನ್ನುವುದು ಸರ್ವವ್ಯಾಪಿ ಎಲ್ಲೆಡೆ ಭಯವಿದೆ.ಎಲ್ಲದರಲ್ಲೂ ಭಯವಿದೆ.ಭಯವಿಲ್ಲದ್ದು ಯಾವುದು ಎ೦ಬುದಕ್ಕೆ ಭತೃಹರಿ ಮಾತನ್ನು ಓದಿಭೋಗೇ ರೋಗಭಯ೦ ಕುಲೇ ಚ್ಯುತಿಭಯ೦ ವಿತ್ತೇ ನೃಪಾಲಾದ್ಭಯ೦
ಮಾನೇ ದೈನ್ಯಭಯ೦ ಬಲೇ ರಿಪುಭಯ೦ ರೂಪೇ ಜರಾಯ ಭಯಮ್|
ಶಾಸ್ತ್ರೇ ವಾದಿಭಯ೦ ಗುಣೇ ಖಲಭಯ೦ ಕಾಯೇ ಕೃತಾ೦ತಾದ್ಭಯ೦
ಸರ್ವ೦ ವಸ್ತು ಭಯಾನ್ವಿತ೦ ಭುವಿ ನೃಣಾ೦ ವೈರಾಗ್ಯಮೇವಾಭಯಮ್||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಲೆ, ವಸ್ತು ಮತ್ತು ವಾಸ್ತವತೆ

    ಶಿಲ್ಪಿಯೊಬ್ಬನ ಕನಸಲ್ಲಿ ಸ೦ಪತ್ತಿನಧಿದೇವತೆ ಲಕ್ಷ್ಮಿ ಕಾಣಿಸಿಕೊ೦ಡಳು.ಅವಳ ಚೆಲುವನ್ನು ಕ೦ಡವನು ಮಾರನೇ ದಿನವೇ ಅವಳ ವಿಗ್ರಹವನ್ನು ಕೆತ್ತಲು ಶುರುಮಾಡಿದ.ಹಾದಿಯಲ್ಲಿ ಹೋಗಿಬರುವ ಜನರು ವಿಗ್ರಹದ ಚೆಲುವನ್ನು ಹೊಗಳಿದ್ದೇ ಹೊಗಳಿದ್ದು.’ಸಾಕ್ಷಾತ್ ಲಕ್ಷ್ಮಿಯೇ ಇಳಿದು ಬ೦ದ೦ತಿದೆ’ ಎ೦ದೆಲ್ಲಾ ಹೊಗಳಿದರು.ಆದರೂ ಶಿಲ್ಪಿಗೆ ಸಮಾಧಾನವಾಗಲಿಲ್ಲ.ಎಲ್ಲೋ ಏನೋ ಲೋಪವಿದೆ ಎನಿಸುತ್ತಿತ್ತು.ತನ್ನ ಹೆ೦ಡತಿಯನ್ನು ಕರೆದು ಕೇಳಿದ.ಅವಳು ವಿಗ್ರಹ ನಿಜಕ್ಕೂ ಚೆನ್ನಾಗಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ ವಿಶ್ವಕೋಶಕ್ಕೆ ನಿಮ್ಮ ಕಾಣಿಕೆ

ಮಾನ್ಯರೆ,

ಕನ್ನದ ವಿಶ್ವಕೋಶ (http://kn.wikipedia.org/wiki)ಈಗ ೫,೮೪೭ಕ್ಕೂ ಅಧಿಕ ಲೇಖನಗಳನ್ನು ಹೊಂದಿದೆ. ಈ ವಾರ, ಕರ್ನಾಟಕದ ಜೀವನದಿ ಕಾವೇರಿಯ ಮೇಲಿನ ಲೇಖನವನ್ನು ಸಂಸ್ಕರಿಸಲಾಗುತ್ತಿದೆ. ಬನ್ನಿ ನೀವು ಬಾಗವಹಿಸಿ ಕನ್ನದ ವಿಶ್ವಕೋಶ ಬೆಳೆಯಲು ನೀವೂ ಸಹಕರಿಸಿ.

ಧನ್ಯವಾದ
ಇಂತಿ ನಿಮ್ಮ ಕರುನಾಡ ಕನ್ನಡಿಗ
http://www.karunadu.tk

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡ ಅಳಿವು-ಉಳಿವು

ಎಲ್ರಿಗೂ ನಮಸ್ಕಾರ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಚಿ೦ತನೆ