ಗೆಳತಿ

ಗೆಳತಿ

ಬದುಕಿನ ಅನೇಕ ಮಜಲುಗಳಲ್ಲಿ
ಬದುಕುವ ಹಂಬಲದಲ್ಲಿರುವವನಿಗೆ
ಗೆಳತಿಯೋ, ಅಮ್ಮನೋ, ಹೆಂಡತಿಯೋ,
ಅಕ್ಕನೋ, ತಂಗಿಯೋ ಆಗಿ
ವಿಭಿನ್ನ ರೂಪಗಳಲ್ಲಿ ಜೊತೆಯಾಗಿ
ಹಸಿ ಹುಸಿ ನಗೆಗಳ ಲೆಕ್ಕಾಚಾರದಿಂದ
ಮೊದಲ್ಗೊಂಡು, ಬದುಕ ನೆಡೆಸುವಾಚೆಗಿನ
ಲೋಕದವರೆಗಿನ ಸುಖ ದು:ಖದ
ದಾರಿಯೊಳಗಣ ಸರಾಗವಾಗಿ
ಸಾಥ್ ಕೊಡುವ ನಿನಗೆ ಪದಗಳಲ್ಲಿ
ಹೇಳಲಾಗದಷ್ಟು ಹೆಚ್ಚಿನ ಪ್ರೀತಿಯಿಂದ
ಅಭಿನಂದನೆಗಳನ್ನು ಸಲ್ಲಿಸಲು
ಗೊತ್ತಿರುವ ಪದಗಳೂ ಸಾಲದಾಗಿದೆ ಇಂದು...

... ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಸರಣಿ: 

ಕಣ್ಣಿನ ಕದ್ದಾಲಿಕೆಗಳು

ಮಿಂಚಿನ ಕಣ್ಣಿನ ಗುಣದ ಬಣ್ಣಗಳು
ಕಾಮನಬಿಲ್ಲಿನ ಬಣ್ಣಗಳನೆ ಮೀರಿದೆ.
ಕಡೆದ ಬೆಣ್ಣೆಯಂಥ ಮನಸ್ಸು
ಚಿಮ್ಮುವ ಚಿಲುಮೆಯಂತೆ ಚಂಗನೆ ಜಿಗಿಯುವ ಜಿಂಕೆ ನನ್ನ ಗೆಳತಿ - ಆನಂದ ನಂದನ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿರಾಳ

ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿ
ಸುಳಿಯದಿರು ಗೆಳತಿ ಒಲವ ತೋಟದಲ್ಲಿ
ನೂರಾರು ನೆನಪ ಬಿತ್ತಿ ಮನವ ಅರಳಿಸದಿರು
ನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆ
ಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆ
ಹೇಗಿರಲಿ ನಾ ನಿನ್ನ ಜೊತೆ ಏಕಾಂತವ ಬಿಟ್ಟು
ಸರ್ವಸ್ವವ ನಿನ್ನ ಮಡಿಲಳಿಟ್ಟು
ತನ್ನ ತಾನಿರುವುದೇ ಏಳಿಗೆಯ ಗುಟ್ಟು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಗೆಳತಿ