ಇಂಗ್ಲೀಷ್

ಜಮಾನಾದ ಜೋಕುಗಳು ೨೫: ಗುಂಡನ ಇಂಗ್ಲೀಷ್ ಕಲಿಕೆ

ನಮ್ಮ ಗುಂಡನಿಗೆ ಇಂಗ್ಲೀಷ್ ಕಲಿತು ಇಂಗ್ಲೀಷ್ನಲ್ಲೇ ಮಾತಾಡಬೇಕೆಂಬ ವ್ಯಾಮೋಹ. ಸರಿ ಕಾನ್ವೆಂಟ್ ಹುಡುಗರ ಹತ್ತಿರ ಹೋಗಿ ತನಗೂ ಇಂಗ್ಲೀಷ್ ಕಲಿಸಿಕೊಡಿರೆಂದು ಅಲವತ್ತುಕೊಂಡ. ಆ ಹುಡುಗರು ಇವನ ಆತುರತೆಯನ್ನು ನೋಡಿ ಮೂರು ಶಬ್ದಗಳನ್ನು ಹೇಳಿಕೊಟ್ಟರು: "Yes, No, Alright". ಇಷ್ಟು ಕಲಿತ ಗುಂಡನಿಗೆ ಸ್ವರ್ಗ ಮೂರೇ ಗೇಣು ಉಳಿಯಿತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲ್ಲಿ ತನ್ನ ಸಾಮಾನು ಕಳೆದುಕೊಂಡ ವಿಲಾಯತಿ ಒಬ್ಬ ಇವನನ್ನು ಕೇಳಿದ, "Sir, did you find my suitcase?" ಗುಂಡ ತಕ್ಷಣವೇ ಉತ್ತರಿಸಿದ "Yes". ಆಗ ಆ ವಿಲಾಯತಿಯವ ಇವನನ್ನು ಮರು ಪ್ರಶ್ನಿಸಿದ, "Will you give it back?" ಆಗ ಗುಂಡ, "No". " If you don't give back my baggage I will inform the police" ಎಂದ ಆ ಕೆಂಪು ಮೋರೆಯ ವಿಲಾಯತಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.8 (4 votes)
To prevent automated spam submissions leave this field empty.

ಮುಂಜಾವಿನ ಉದ್ಗೀತ

 

 

 

 

 

 

 

 

 

 

 

 

 

 

 

 

 

 

 

ಮುಂಜಾವಿನ ಉದ್ಗೀತವ ಕೇಳು!

ಈ ದಿನವ ಕಾಣು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಒಂದು ಪ್ರಶ್ನೆ

 ಒಂದು ಪ್ರಶ್ನೆ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹ್ಯಾರಿ ಪೊಟ್ಟರ್

BBC picture
ಮೊನ್ನೆ ಊರಿಂದ ಬಂದಿದ್ದ ಬಶ್ಯ "ಸ್ವಾಮ್ಯಾರೆ, ಏನ್ ಓದಕತ್ತೀರಿ, ಊಟ ಮಾಡ್ತಾನೂ. ಪರೀಕ್ಸೇನಾ?' ಎಂದು ಕೇಳಿದ.
ಪರೀಕ್ಷೆ ಅನ್ನೋ ಮಾತು ಕೇಳಿ ಮನಸ್ಸಿನಲ್ಲಿ ಸ್ವಲ್ಪ ಗಲಿಬಿಲಿಯಾದರೂ ಎಚ್ಚರಗೊಂಡು ಪರೀಕ್ಷೆ ಬರೆಯುವ ಸಂಪತ್ತು ಇನ್ನು ಬರೋದಿಲ್ಲವೆಂಬುದನ್ನು ಮನಸ್ಸಿನಲ್ಲಿಯೇ ಖಾತ್ರಿಪಡಿಸಿಕೊಂಡೆ - ಕಾಲೇಜು ಮುಗಿದು ಸರಿಯಾಗಿ ೩ ವರ್ಷ ಆಯ್ತಲ್ವ ಎಂದು ಕ್ಯಾಲೆಂಡರು ನೋಡುತ್ತ.

ಬಶ್ಯನಿಗೆ ನಾನವತ್ತು ಉತ್ತರವಾಗಿ "ಹ್ಯಾರಿ ಪಾಟರ್ ಪುಸ್ತಕ ಓದ್ತಿದೀನಿ ಕಣೋ" ಎಂದು ಹೇಳಿದ್ದರೆ ಹ್ಯಾರಿ ಪಾಟರ್ ಯಾರು, ಎಲ್ಲಿಂದ ಬಂದ, ಏನಾಗಿತ್ತು ಅವನಿಗೆ, ಯಾಕವನು ಇಷ್ಟು ಫೇಮಸ್ಸು ಎಂದೆಲ್ಲ ದೊಡ್ಡದೊಂದು ಉಪನ್ಯಾಸವೇ ಕೊಡಬೇಕಾಗಿತ್ತು. ಇಂಗ್ಲೀಷರ ಮಕ್ಕಳ ಕಥೆಯಾದರೂ ಇದನ್ನು ದೊಡ್ಡವರೇ ಜಾಸ್ತಿ ಓದ್ತಾರೆ ಅನ್ನೋದನ್ನ ಅವನಿಗೆ ಬಿಡಿಸಿ ಸವಿವರವಾಗಿ ಹೇಳಬೇಕಿತ್ತು.

"ಪರೀಕ್ಷೆಯೇನೂ ಇಲ್ಲ ಕಣೋ, ಈ ಪುಸ್ತಕ ಇದೆಯಲ್ಲಾ ಕೋಟಿಗಟ್ಲೆ ಮಾರಾಟ ಆಗಿದೆಯಂತೆ ಮಾರಾಯ. ನನಗೊಂದು ಕೋಟಿ urgent ಬೇಕಿತ್ತು ನೋಡು, ಇದರಲ್ಲೇನಿದೆ ನೋಡಿ ನಾನೂ ಹಾಗೇ ಬರೆಯೋಣಾಂತ" ಎಂದು ತಮಾಷೆ ಮಾಡಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ಇಂಗ್ಲೀಷ್