ಹನಿಗವನ

ಹೋಲಿಕೆ

ಅಂದು:
ಕರಿಮೋಡಗಳನ್ನು
ನಿನ್ನ ಕೇಶಕ್ಕೆ ಹೋಲಿಸಿ
ಕವಿತೆ ಬರೆದಿದ್ದೆ
ಓದಿ ನೀ ಕಣ್ಣಲ್ಲಿ ಮಿಂಚು ಹರಿಸಿ
ನಾಚಿ ನೀರಾಗಿದ್ದೆ
 
ಇಂದು:
ಅದೇ ಕೇಶರಾಶಿ
ಬಿಳಿ ಮೋಡಕ್ಕೆ ಹೋಲಿಸಿ
ಕವಿತೆ ಬರೆದೆ
ನೀನು ಓದಬಾರದಿತ್ತು:
ಈಗ ಅಡುಗೆಮನೆಯಲ್ಲಿ
ಪಾತ್ರೆಗಳ ಗುಡುಗಿನ ಸದ್ದು !
 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹನಿ-ಹನಿಗಳು

                       ಅತ್ತರೂ....

                      ನಲ್ಲೆ..

                      ನಿನ್ನ ಮೈ ಬೆವರ ವಾಸನೆಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎರಡು ಸಾಲುಗಳು - ೫

ಒಂದು ದಿನ ಎಲ್ಲರನ್ನೂ ಗೆದ್ದು ನಿಲ್ಲುತ್ತೇನೆ
ಆಗ ಬಳಿ ಯಾರೂ ಇರಲ್ಲ, ಗೊತ್ತು. ಈಗಲೂ ಯಾರೂ ಇಲ್ಲ

ಅವರವರು ಹೇಳಿದ್ದೆ ಸತ್ಯ, ಎಲ್ಲರೂ ಹೇಳಿದ್ದು
ಸಾರ್ವಕಾಲಿಕ ಸತ್ಯ. ಆದರೆ ಅದು ಸತ್ಯವಾಗಬೇಕಿಲ್ಲ

ನಿನ್ನ ಮೇಲೆ ಕವನ ಬರೆದೂ ಬರೆದೂ ಇಂದು
ಈ ಭಣಗುಟ್ಟುವ ಕವಿತೆಗಳ ಮಧ್ಯೆ ಕಳೆದು ಹೋದವ, ನಾನು!

ಕೆಲವೊಮ್ಮೆ ಪ್ರೀತಿ ಎಂದರೆ ಪ್ರೀತಿ ಕೊಡುವುದು ಮಾತ್ರ
ಎಳ್ಳಷ್ಟು ಪ್ರೀತಿಯ ನಿರೀಕ್ಷಿಸುವುದಲ್ಲ

ಸಾವಿರ ಜನರನ್ನು ಕೊಂದವ ಕೊನೆಗೂ
ಹೇಳಿದ್ದು, ನನಗೆ ನೆನಪಿಲ್ಲ

ಮನುಷ್ಯ ತಪ್ಪು ಮಾಡುತ್ತಾನೆ ನಿಜ
ಆದರೆ ಅರುವತ್ತು ವರ್ಷಗಳಲ್ಲ

ನಿನ್ನ ಮೇಲೆ ಪ್ರೀತಿಯ ಹಾಲಿನ ಧಾರೆಯೆರೆದೆ
ಒಂದು ಹನಿ ಹುಳಿ ಎಲ್ಲವನ್ನು ಕದಡಿತೇಕೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದಷ್ಟು ಹನಿಗಳು

ಸಾಕ್ಷಿ
ಬದುಕೆಂಬ ಬತ್ತಿಹೋದ ನದಿ ಹಿಂದೊಮ್ಮೆ
ಹರಿದಿತ್ತೆಂಬುದಕ್ಕೆ ಸಾಕ್ಷಿ ನನ್ನ ಕಣ್ಣಿರು....
ನ. ಗೋ. ಪ್ರ.

******************************

ವಿಪರ್ಯಾಸ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗುಲಾಬಿಗಿಡ

ಮೊದಲ ಚಿಕ್ಕ ಕವನ:

ಕಾವೇರಿ

ಕಾವೇರಿ ಇರಬೇಕು
ನಮ್ಮೆಲ್ಲರ ಜೀವನದಿ
ಏಕೆಂದರೆ ಕಾವೇರಿ
ಕನ್ನಡಿಗರ ಜೀವನದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡಾ.ರಾಜ್ ಗೇ ಗುದ್ದು!

ಆಗ

ಕನ್ನಡದ ಕಣ್ಮಣಿ ರಸಿಕರರಾಜ

ನಟಸಾರ್ವಭೌಮ ಪದ್ಮಭೂಷಣ

ಡಾ.ರಾಜಕುಮಾರ್

ನಾಯಕರಾಗಿ

ನೂರಾರು ಖಳನಾಯಕರ

ಮೂತಿಗೇ ಗುದ್ದಿದ್ದರು.ಈಗ

ಪೋಸ್ಟಾಫೀಸಿನವರು

ನಿತ್ಯವೂ ಗುದ್ದುತ್ತಿದ್ದಾರೆ

ರಾಜ್ ಮುಖದ (ಸ್ಟ್ಯಾಂಪಿನ) ಮೇಲೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಲ್ಕು ಹನಿ

ನನಗೆ ನನ್ನಾಕೆಯೇ
ಸ್ಪೂತ್ರಿ: ನನ್ನ
ನೂರಾರು
ಕವನಕ್ಕೆ!
ಕೊನೆಗೆ ನನಗೆ
ಕೈ ಕೊಟ್ಟು
ಸೇರಿಸಿದಳು
ಕಾನನಕ್ಕೆ!!

------------

ನನ್ನವಳು ನೀನು ನಗುತ್ತಾ
ಹರಿದಾಡಿದ ಕಡೆ
ಹೂ ಬೀರಿದು ಆಗುವುದು
ಹೂಬನ!
ನನ್ನ ಮೇಲೆ ಕೋಪಿಸಿ
ಕೊಂಡರೆ ಮನೆಯಲ್ಲ ಅದು
ನಾಗಬನ!!

----------------

ಗೆಳತಿ ಪ್ರೀತಿಗೆ
ಬಣ್ಣವಿಲ್ಲ
ಾಕಾರವಿಲ್ಲ
ಆದ್ದರಿಂದ
ಕಾಲಕಳೆದಂತೆ
ಅದಕ್ಕೆ ಬೆಲೆ ಇಲ್ಲ!!

---------------------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಲ್ಕು ಹನಿ

ನನ್ನಾಕೆ ಆಗಾಗ್ಗೆ
ನೀಡುತ್ತಿದ್ದ ಮುತ್ತಿನ
ಹಿಂದೆ!
ಮುತ್ತಿನ ಹಾರದ
ರಹಸ್ಯ ಇದೆ ಎಂದು
ನಾ ತಿಳಿಯದಾದೆ.

----------------

ನಾಚಿದಾಗಲೆಲ್ಲ
ಈಗಲೂ ಮೂಡುತ್ತದೆ
ನನ್ನವಳ ಗಲ್ಲದಲ್ಲಿ
ಹೊಳಿ ಹಬ್ಬದ
ರಂದು!!

---------------

ಎಲ್ಲವನ್ನು
ಮರೆಯುವೆ
ನನ್ನವಳ ಸಿಹಿ
ಮುತ್ತಿನ ಮತ್ತಿನಲ್ಲಿ!!
ಎಲ್ಲದನ್ನು
ಕತ್ತಲಾಗಿಸುವೆ
ನನ್ನವಳ ಸೀರೆ
ಸೆರಗಿನ ಮರೆಯಲ್ಲಿ!!

-----------------
ಸಂಗೀತ ಇಷ್ಟ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಲ್ಕು ಹನಿ

ನನ್ನವಳಿಗೆ ಮೊಬೈಲ್
ಎಂದರೆ ಮಹಾ
ಸಿಟ್ಟು!

ಏಕೆಂದರೆ ಅವಳ ಜೊತೆಗಿಂತ
ಮೊಬೈಲ್ ನಲ್ಲೆ
ನನ್ನ ಮಾತು
ಹೆಚ್ಚು!!

-------------

ಮೊದಲು ನನ್ನವಳ
ಕೈ ಸೇರಬೇಕು
ದಿನ ಪತ್ರಿಕೆ!
ಒಂದು ಕ್ಷಣ
ರಾಶಿ ಫಲದ ಮೇಲೆ
ಕಣ್ಣಾಡಿಸಲು
ಮಾತ್ರಕ್ಕೆ!!

------------

ತಿಂಗಳ ಕೊನೆಯಲ್ಲಿ
ಏನೇ ಕೇಳಿದರೂ
ಕೋಪಗೊಳ್ಳುವ
ನನ್ನವಳು!!
ತಿಂಗಳ ಮೊದಲಿಗೆ
ಏನೇ ಹೇಳಿದರೂ
ಕಿರುನಗು
ಬೀರುವಳು!!

-------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾಲ್ಕು ಹನಿ

ಗೆಳತಿ ಮಹಾಭಾರತದ
ಶ್ರೀಕೃಷ್ಣನಂತೆ ನಾನು
ಎನ್ನುವ ನಿನಗೆ!
ಅದೇ ಮಹಾಭಾರತದಲ್ಲಿ
ದೌಪಧಿಯು ಇದ್ದಾಳೆ
ಎನ್ನುವುದು ತಿಳಿದಿಲ್ಲವೇ?!

----------------

ಇದ್ದಿದ್ದು ಇಲ್ಲದಂತೆ
ಇಲ್ಲದಿರುವುದು ಬೇಕೆನ್ನುವಂತೆ
ಬೇಕೆನ್ನುವುದು ಹೇಗಾದರೂ
ಪಡೆಯುವುದೇ ಬದುಕು!!

------------------

ರಾಮಾಯಣದಲ್ಲಿ
ಶ್ರೀರಾಮನೇ
ಸೀತೆಯನ್ನು ವನದಲ್ಲಿ
ಬಿಟ್ಟನಂತೆ!
ಪ್ರೀಯೆ ನಾನೇನು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎತ್ತಣಿಂದೆತ್ತ...?? :)

ಎಸೆಯುತ್ತಿದ್ದಳು ಕಲ್ಲು,
ಸಾಗರದತ್ತ....
ಕುಡಿನೋಟದಿ೦ದ,
ನೋಡಿದನು ಅವಳತ್ತ,
ಅಳುಕುತ್ತಲೇ ಓರೆನೋಟವ,
ಬೀರಿದಳು ಅವನತ್ತ..

ತಿರುಗಿತು ಅವರ ನೋಟ,
ಪ್ರೇಮದತ್ತ...
ಸ್ವಲ್ಪದರಲ್ಲೇ ಏರಿದರು..
ಹಸೆಮಣೆಯತ್ತ..!!! :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಮ್ಮ ಹೂದೋಟ

ಸು೦ದರವಾದ ಹೂಗಳು..
ಅರಳಿದ್ದವು,ನಮ್ಮ ತೋಟದೊಳು
ದಿನವೂ ಎಣಿಸುತ್ತಿದ್ದೆನು,
ಅರಳಿರುವ ಹೂಗಳು ಎಷ್ಟು?
ಮೂಡಿರುವ ಮೊಗ್ಗುಗಳು ಎಷ್ಟು?

ಒ೦ದು ದಿನ ನೋಡಿದರೆ...
ಬರಿದಾಗಿದ್ದವು ಬನಗಳು!
ಹಾಗೆ ಅದನ್ನು ತಿ೦ದಿದ್ದವು,
ಪಕ್ಕದ ಮನೆಯ ದನಗಳು!!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

"ಬದುಕು"-- ಕವನ

ಜೀವನ ಎ೦ಬುದು
ಅರಣ್ಯರೋಧನದ೦ತೆ..
ದಾರಿಯು ಸಿಕ್ಕಿತೆನ್ನಲು,
ಪುನಃ ತಪ್ಪಿದ೦ತೆ..
ಬೆಳಕು ಹರಿದರೂ
ಕತ್ತಲು ಕವಿದಿರುವ೦ತೆ..

ಕಣ್ಣ ನೀರನು ಒರೆಸಿದರೂ,
ಇನ್ನೊ೦ದು ಹನಿ ಮೂಡಿದ೦ತೆ..
ಒ೦ದು ಮೃಗದಿ೦ದ ತಪ್ಪಿಸಿದಾಗ,
ಇನ್ನೊ೦ದರ ಆರ್ಭಟವಾದ೦ತೆ..

ಒ೦ದು ರೆ೦ಬೆಯನು ಹತ್ತಿದಾಗ,
ಇನ್ನೊ೦ದು ತನ್ನನು ಏರು ಎ೦ದ೦ತೆ..
ಏರಿ ತುದಿಯನು ಮುಟ್ಟಿದಾಗ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅವಳ ಉತ್ತರ

ಅವಳ ಉತ್ತರ..!!
*********

ಸು೦ದರವಾದ ಸ೦ಜೆಯಲಿ,
ಕಡಲ ತೀರದಲಿ,
ದಿನವೂ ಕಾಣುತ್ತಿದ್ದೆನು,
ಓರೆ ನೋಟದಲ್ಲೇ ಮಾತಾಡಿಸುತ್ತಿದ್ದೆನು,
ಪ್ರತಿ ಮುಸ್ಸ೦ಜೆಯಲ್ಲೂ,
ಹುಡುಕಿದೆನು...
ಅವಳ ಸನಿಹಕೆ ನಾ ಕಾದೆನು..
ಒ೦ದು ಕಡು ಸ೦ಜೆ,
ಕೆ೦ಗುಲಾಬಿಯ ಕೊಟ್ಟು,
ನಾ.. ಅವಳಲ್ಲಿ ಹೇಳಿದೆ..,
"ಪ್ರಿಯೇ.. ನಾ ನಿನ್ನ ಪ್ರೀತಿಸುವೆ"!
ನನ್ನ ಕೆನ್ನೆ ಕೆ೦ಪಾಗಿಸಿ..,
ಒಲ್ಲೆನೆನುತ ಉತ್ತರಿಸಿದಳಾಕೆ!!!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಡುಂಡಿರಾಜರೇ, ರಜೆ ಹಾಕಿ!

ರೀ
ಡುಂಡಿರಾಜರೇ,
ಒಪ್ಪುತ್ತೇನೆ ನೀವು
'ಹನಿಗವನಗಳ ರಾಜರೇ';

ಸ್ವಾಮೀ, ದಯವಿಟ್ಟು
ಒಂದೆರಡು ತಿಂಗಳ
ರಜೆ ಹಾಕಿ ಬಿಡಿ,
ನಮ್ಮಂತವರಿಗೂ
ನಾಲ್ಕಾರು ಕವನಗಳ
ರಚಿಸಲು ಬಿಟ್ಟು ಬಿಡಿ;

ನಮ್ಮ ಭಾವನೆಗಳಿಗೆ
ನಾವು ಕವನಗಳ
ರೂಪ ಕೊಡುವ
ಮೊದಲೇ,
ನಾವೆಣಿಸಿದ್ದೆಲ್ಲಾ
ನಿಮ್ಮ ಹೆಸರಿನಲಿ
ಪ್ರಕಟವಾಗಿರುತ್ತವೆ
ಆಗಲೇ!
*-*-*-*-*

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮನದಲ್ಲಿ ಮೂಡಿದ ಸಾಲುಗಳು

ನಿರೀಕ್ಷೆ
ಎಲ್ಲೋ ಮಲಗಿದೆ ಬೇಸರ
ಕಣ್ಣ ತುಂಬ ಕಾತರ
ಬರುವನೇ ನನ್ನ ಚಂದಿರ
ಕೇಳಲು ನನ್ನ ಇಂಚರ

ಮಿಂಚು
ನೀ ಬಂದಾಗ ನಾನೆಣಿಸಿದೆ
ನೀ ನನ್ನ ಬಾಳ ಬೆಳಕೆಂದು
ನನ್ನ ಜೀವನದಲ್ಲಿ ಸದಾ ಬೆಳಗುವ ನಂದಾದೀಪವೆಂದು
ಆದರೆ ನೀನು ಮಿಂಚಿ ಮರೆಯಾಗುವ
ಬಾಳನ್ನೇ ಛಿದ್ರ ಮಾಡುವ ಸಿಡಿಲೆಂದು ತಿಳಿದದ್ದು
ಆ ಎದೆ ನಡುಗಿಸುವ ಶಬ್ದ ಕೇಳಿದ ನಂತರವಷ್ಟೇ….

ನೆನಪು
ಮಳೆಯ ಹನಿ ನಿಂತರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರಕೃತಿಯ Love failure case ಗಳು

೧ .ರವಿಯ ಸ್ವಾಗತಕ್ಕೆ
ಭೂರಮೆಯು ಸಂಭ್ರಮದಿ
ಇಬ್ಬನಿಯ ಹಾರ ತೊಟ್ಟಿಹಳು
ಪಾಪ! ಈ ಪ್ರೀತಿಯ ತಿಳಿಯದ
ಆ ಸೂರ್ಯನು ಸುಡುಸುಡು ತಾಪದಿ
ಆ ಹಾರವನ್ನೇ ನಾಶ ಮಾಡಿದನು..

೨. ಆಗ ತಾನೆ ತನ್ನ ಸೌಂದರ್ಯವನೆಲ್ಲ ತುಂಬಿಕೊಂಡು
ಸುತ್ತೆಲ್ಲ ಸೌಗಂಧ ಸೂಸಿ
ಪ್ರಿಯಕರನಿಗಾಗಿ ಅರಳಿ ನಿಂತಳು ಪಾರಿಜಾತ
ಎಷ್ಟೋ ಹೊತ್ತಾದ ಮೇಲೆ
ಹಿಂದಿರುಗಿದ ದಿನಕರನಿಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅತ್ತರೆ ಕಂಬನಿ.. ನಕ್ಕರೆ ಇಬ್ಬನಿ..

ಎದೆಯೊಳು
ಸಾವಿರ ಗುಟ್ಟುಗಳು

ಆದರೆ ಈ
ಕಣ್ಣುಗಳು
ಪರಮವಾಚಾಳಿ!

*****

ನನ್ನ ಪಾಲಿಗೆ
ತಾನೇ ಆಗಿದ್ದರೂ
ಅಮ್ಮ
ದೇವರನು ನೋಡಲು
ತೀರ್ಥಯಾತ್ರೆಗೆ
ಹೋಗ್ತಾಳಂತೆ!

*****

ಹಸಿವೆಯ
ನೂರೆಂಟು
ಸೂರ್ಯರು
ಕಾಡುವಾಗ
ಅನ್ನದಗುಳಗುಳೂ
ಬೆಳ್ದಿಂಗಳು!

******

ನನ್ನವಳು
ಸಾಗರವಾದರೆ

ನಾನು
ಎಲ್ಲ ಕಡೆಯಿಂದ
ಮುತ್ತಿಕ್ಕಿಸಿಕೊಳ್ಳುವ
ದ್ವೀಪ!

******

ಶಾಪ್ಪಿಂಗ್ ಮಾಲ್ ಗಳೇ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಳದಿಂಗಳ ಬಾಲೆ

ಬೆಳದಿಂಗಳ ಬೆಳಕಿನಲಿ.

ಬರುವಾಗ ನೀ ಬಳಕುತಲಿ..

ನಿನ್ನ ಕಣ್ಣೋಟ ನನ್ನ ಮನಸು ಕೆಣಕುತಲಿ....

ಹುಚ್ಚೆದ್ದು ಕುಣಿದೆನು ಹರುಷದಲಿ....

ನನ್ನ ಹುಚ್ಚು ಕಂಡ ಆ ಚಂದ್ರ ಬಾನಲಿ

ಮರೆಯಾದನು ಮೋಡದ ಮರೆಯಲಿ ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ

ತನುವು ಕನ್ನಡ ಮನವು ಕನ್ನಡ
ನೆತ್ತರ ಕಣಕಣದಿ ಕನ್ನಡ.
ಕಲೆತು ಹೋಗಿಹೆ ನೀನೆನ್ನ ದೇಹದಿ
ನಿನ್ನ ಮಡಿಲೆ ನನಗೆ ನೆಮ್ಮದಿ

-- ಅರುಣ ಸಿರಿಗೆರೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚುನಾವಣೆ

ಬಂದಿದೆ ಇನ್ನೊಂದು
ಚುನಾವಣೆ
ಅದಾಗೋವರೆಗೆ ಇವರು
ಹಾಕ್ತಾರೆ ಎಲ್ಲರಿಗೂ
ಮಣೆ
ಆದ್ಮೇಲೆ ಹಾಕೋದು
ಬರೀ ಚೂನಾ (चूना)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುನ್ನುಡಿ...............

ಪ್ರೀತಿ...

ತಡವಾಗಿ ಬಂದೆಯೆಂದು ಸಿಟ್ಟಿಲ್ಲ ಗೆಳತಿ
ಬಂದ್ದದ್ದು ನನಗಿಂತ ಕೊಂಚ ಎರಡು
ಗಳಿಗೆಯ ಅಂತರದಲ್ಲಿ
ನಿನ್ನ ಕಂಡ ಕ್ಷಣ ಏಕೋ ಎನೋ.....
ಮಾತಿಲ್ಲ ಕಥೆಯಿಲ್ಲ ......ಕೇವಲ
ಬರೀಯ ಮೌನದ ಉತ್ತರ !
ಹೃದಯ-ಹೃದಯಗಳ ಸಂಗಮ
ಏನೇನ್ನುವೇ ಎಂಬ ಸಂಶಯ ಬೇಡ....
ಮನಸ್ಸು ನಿನ್ನದೇ... ಈ ಮನುಷ್ಯನೂ
ನಿನ್ನವನೇ ಮುಗಿಸು ನನ್ನೀ .... ವಿರಹವನು...
ಬರೇ ಅವನ ಬಾಳಿನ
ಮುನ್ನುಡಿಯನು.........

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನಾಕೆಯಂತೆ....

ಪ್ರೀತಿಯ...
ಎಷ್ಟೊಂದು ಚೆಂದುಳ್ಳಿ ಚೆಲುವೆಯರು,
ಹೂ-ರಾಶಿ ನಕ್ಷತ್ರಗಳಂತೆ
ಆದರೇನು....?
ಅವರಲ್ಲಿ ಯಾರು ಇಲ್ಲಾ.....
ನನ್ನಾಕೆಯಂತೆ....

ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿನದೇ ಧ್ಯಾನ........

ಪ್ರೀತಿಯ...

ನೀನೊಮ್ಮೆ
ಇಳಿದೊಡೆ ಮನಸ್ಸಿನೊಳಗೆ,
ಚೈತ್ರ- ಸಂಭ್ರಮ ಕನಸು-ಮನಸುಗಳಿಗೆ,
ಹಸಿವೆ,ನಿದಿರೆ, ನೀರಡಿಕೆಗಳ ಅರಿವಿಲ್ಲ,
ನಿನದೇ ಧ್ಯಾನ ಹಗಲಿರುಳೆಲ್ಲಾ.....

ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಡತನದ ಅರಿವು

ಹುಟ್ಟಿದ ಊರನ್ನು
ಓಡಾಡಿದ ಕೇರಿಯನ್ನು,
ಮಾಡುತ್ತಿದ್ದ ಕಸುಬನ್ನು,
ಬದುಕುತ್ತ್ೞಿದ್ದ ರೀತಿಯನ್ನು,
ಬದಿಗಿಟ್ಟು,
ಕೇವಲ ಕೆಲಸಕ್ಕಾಗಿ
ಬೆಂಗಳೂರಿಗೆ ಬರುವ
ಎಷ್ಟೋ ಕುಟುಂಬಗಳು
ಇಂದು
ಬಡತನವನ್ನೇ ಬದುಕಾಗಿಸಿಕೊಂಡಿವೆ.

ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

' ಮುತ್ತು '

ಪ್ರೀತಿಯ...

ನಲ್ಲೆ ಕೇಳಿದಳೆಂದು ತಂದು ಕೊಟ್ಟೆ,
ಕೆಂಪು ಕಲ್ಲಿನ ಮುತ್ತೊಂದು
ಆದರೆ,
ಅದಕ್ಕೆ ,
ಅವಳು ಹೇಳಬೇಕೆ;
ನಾನು ಕೇಳಿದ್ದು ಚುಂಬನದ ಸಿಹಿ ಮುತ್ತೆಂದು...!

ಪ್ರೀತಿಯಿಂದ ಪ್ರೀತಿಗಾಗಿ
ಜಿ. ವಿಜಯ್ ಹೆಮ್ಮರಗಾಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾ ನಿನ್ನ

ನಾ ನಿನ್ನ

ನಾ ನಿನ್ನ ತಡೆಯುವುದರೊಳಗಾಗಿ
ನನ್ನೆದೆಯಲ್ಲಿ ಹೆಜ್ಜೆಯೂರಿದೆ
ಏಕೆಂದು ನಾ ಕೇಳುವುದರೊಳಗೆ
ಕಾಣದೆ ನೀ ಮಾಯವಾದೆ
ಗುರುತುಗಳ ಅಳಿಸಲಾಗದೆ
ನಾ ನಿನ್ನ ಹುಡುಕುತ್ತಿದ್ದೆ
ಆದರೆ ನೀ ಕಣ್ತಪ್ಪಿಸಿ
ನನ್ನ ಭಾವಗಳಲ್ಲಿ ಬೆರೆತಿದ್ದೆ...

-- ಅರುಣ ಸಿರಿಗೆರೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾ ನಲ್ಲೆ....!!

ಬಾ ನಲ್ಲೆ....!!

ಬಾ ನನ್ನ ನಲ್ಲೆ...
ಬಂದು ನನ್ನ ಮನದಲ್ಲಿ ನಿಲ್ಲೆ,
ತುಸು ಹೊತ್ತು ಮಾತ್ರ ನಿಲ್ಲೆ.
ಆದರೆ ನಿಂತ ನೀರಾಗಬೇಡ ಇಲ್ಲೆ
ಏಕೆಂದರೆ ಬರಲಿರುವಳು
ನನ್ನ ಮುಂದಿನ ನಲ್ಲೆ...!!!!!

-- ಅರುಣ ಸಿರಿಗೆರೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಹನಿಗವನ-ರಘೋತ್ತಮ್ ಕೊಪ್ಪರ

ಊರ ಹೊರಗೊಂದು ಬೋರು
ಅದರಲ್ಲಿ ಸಿಹಿ ನೀರು
ಊರ ಒಳಗೊಂದು ಬೋರು
ಅದರಲ್ಲಿ ಇಲ್ಲ ನೀರು
-ರಘೋತ್ತಮ್ ಕೊಪ್ಪರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಶಾವಾದಿ

ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ
ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ
ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿರಾಳ

ಕಾಡದಿರು ಗೆಳತಿ ಕಾಡಬೆಳಂದಿಗಳಲ್ಲಿ
ಸುಳಿಯದಿರು ಗೆಳತಿ ಒಲವ ತೋಟದಲ್ಲಿ
ನೂರಾರು ನೆನಪ ಬಿತ್ತಿ ಮನವ ಅರಳಿಸದಿರು
ನಿನ್ನೆಲ್ಲಾ ಬೆಸುಗೆ ಆಗಿದೆ ಸಂಕೋಲೆ
ಪ್ರೀತಿ ಹೆಸರಿನಲ್ಲಿ ತೊಡಿಸದಿರು ಮುಳ್ಳಿನ ಮಾಲೆ
ಹೇಗಿರಲಿ ನಾ ನಿನ್ನ ಜೊತೆ ಏಕಾಂತವ ಬಿಟ್ಟು
ಸರ್ವಸ್ವವ ನಿನ್ನ ಮಡಿಲಳಿಟ್ಟು
ತನ್ನ ತಾನಿರುವುದೇ ಏಳಿಗೆಯ ಗುಟ್ಟು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಳಕು

ನನ್ನ ಕಣ್ಣಿಗೆ ನನ್ನಾಕೆ
ತುಂಬಾ ಅಂದ.
ಕಾರಣ, ಅವಳಿಲ್ಲದಾಗ
ನಾನೊಬ್ಬ ಅಂಧ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿಪರ್ಯಾಸ

ನೋಡಿ ಮದುವೆಯಾದೆ ನನ್ನವಳ
ರ್‍ಯಾಂಕು, ಸರ್ಟಿಫಿಕೇಟು.
ಆದರೀಗ ನನ್ನ ಕೈಲಿರುವುದು
ಬರೇ ಪಾತ್ರೆ, ಸೌಟು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಹನಿಗವನ