ಚುಟುಕು ಕವನ

ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ.....

ನಾನು ತೆಳ್ಳಗೇ ಇರಬಯಸುತ್ತೇನೆ, ಏಕೆಂದರೆ..... 
ನಾನು
ತೆಳ್ಳಗೆ ಇರಬಯಸುತ್ತೇನೆ,
ಏಕೆಂದರೆ
ನಾನು ಆರೋಗ್ಯವಾಗಿರಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.8 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರೇಮಪತ್ರ

ಹೌದು ಪ್ರಿಯೆ,
ನನ್ನ ಹನಿಗವನಗಳಲ್ಲಿ ನಿನ್ನದೇ
ಹಾಸ್ಯ ಪಾತ್ರ
ಎಂದಿನಂತೆ ಕೋಪಗೊಂಡು ನೀ
ಹರಿದು ಹಾಕಿದ್ದು ಮಾತ್ರ
ಅಪರೂಪಕೊಮ್ಮೆ ನಿನಗಾಗಿ ಬರೆದಿದ್ದ
ಪ್ರೇಮಪತ್ರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.2 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದಕಾಲ

ಸಂಪದಕಾಲ

ನಾನೊಬ್ಬ ಕನ್ನಡದ ಪರಮ ಪ್ರೇಮಿ
ಆಗಿರಲು ಆಕಾಂಕ್ಷೆ ಕನ್ನಡ ಕರ್ಮಿ
ಕನ್ನಡವೆಂದರೆ ನನಗತಿ ಹುಚ್ಚು
ಕನ್ನಡ ಭಾಷೆಯ ಕೃತಿ ಅಚ್ಚುಮೆಚ್ಚು!
ಬೆಂಗಳೂರ್’ಇನ ಹಳಬ ಪುರವಾಸಿ
’ಬರ್ಲಿನ್’ ಕಸಬಿನ ಪರದೇಸಿ
ನನ್ನ ಕಾವ್ಯನಾಮ ’ವಿಜಯಶೀಲ’
’ಸಂಪದ’ ತೆರೆದಿಹುದೆನಗೆ ನವಕಾಲ!

ವಿಜಯಶೀಲ (೦೮೦೬೦೯)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಇಂಟರ್‍ನೆಟ್ ಬಳಸೋದು ಹೇಗೆ??? (ಬಾಳಿಗರ ಚಿತ್ರಕ್ಕೆ ಬರೆದದ್ದು)

ಸಿಗುವುದೇನಿಲ್ಲಿ
ನನಗೊಂದು ಒಳ್ಳೆಯ ಹೊತ್ತಿಗೆ...?
ತಿಳಿಯಬೇಕಿಂದು ನಾ
ಬಳಸುವುದು ಹೇಗೆಂದು ಇಂಟರ್‍ನೆಟ್ಟು...

ನನಗಿಲ್ಲಿರುವುದು ಬೇಕಿಲ್ಲ,
ಕಳಚಿಕೊಳ್ಳುವೆ ಮೆತ್ತಗೆ...
ದಿನವೂ ಸಿಗುತಿಹುದು
ಬರೀ ಕಸ-ಕೊಳಕು-ಹೊಟ್ಟು...

ಪಡಬಾರದ ಪಾಡು
ನನ್ನ ಪುಟ್ಟ ಹೊಟ್ಟೆಗೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿರಾಳ

ಭಾವನೆಯಲ್ಲದ ಭಾವನೆ
ಅನುಭವಕ್ಕೆ ಸಿಗುವಲೊಲ್ಲದು
ಮನ ತುಂಬಿಬಂದಾಗ
ಕಂಬನಿ - ಆನಂದ ಭಾಷ್ಪ
ಹೃದಯ ತುಂಬಿಬಂದಾಗ
ಪ್ರೀತಿಯ ಹರಿವು
ಅಳೆಯಲಾದೀತೆ ತೀವ್ರತೆಯನ್ನ?
ಕಲ್ಪನಾತೀತ - ಪ್ರೀತಿಯ ಹರಿವೂ ಮನದ ದನಿಯೂ
ಅಳೆಯಳಾರದಷ್ಟು ಆಳ
ನಿರಾಳ ನಿರ್ಮಲ ಭಾವ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಿಸ್ಸಾದುದು

ಆ ಸು೦ದರ ಹುಡುಗಿಯ ಹೆಸರು ಶೀಲು

ಆಗಾಗ ಕೊಡ್ತಿದ್ದೆ ಅವಳಿಗೆ missed callಉ

ಅವಳಣ್ಣ ಅ೦ತೇ ರೌಡಿ ಬುಲೆಟ್ ಬಾಲು

ಅದಕ್ಕೇ ನನಗೂ ಈಗ ಒ೦ದು missed - ಕಾಲು..!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನಸಿನ ಕನಸು

ಸಿಗದ ಸುಖದ ಕನಸು,
ಸಿಕ್ಕ ಮೇಲೆ ಹೊಸೆಯುವ,
ಸುಖಸಿಂಚಿತ ಕನಸುಗಳಿಗಿಂತ,
ಸೊಗಸು.

ಬೆಚ್ಚಗೆ ಮನದಲ್ಲಿ ಹುದುಗಿರು,
ಆಕಾರವ ಪಡೆಯದಿರು,
ಎಂದೂ ನನಸಾಗದೆ,
ನನ್ನಲ್ಲೇ ಇರು ನನ್ನ,
ಕನಸು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏನಂತೀರಿ..??

ಹೊನ್ನು
ಮಾಯೆ ಎಂಬರು
ಹೌದು
ಹೊನ್ನು ಮಾಯೆ.
ಹೆಣ್ಣು
ಮಾಯೆ ಎಂಬರು
ಹೌದು
ಹೆಣ್ಣು ಮಾಯೆ.
ಮಣ್ಣು
ಮಾಯೆ ಎಂಬರು
ಹೌದು
ಮಣ್ಣೂ ಮಾಯೆ.

ಆದರೆ...

ಆದರೆ ...

ಈ ಹೊನ್ನು, ಹೆಣ್ಣು, ಮಣ್ಣುಗಳ
ಬೆನ್ನೇರಿ ಹೋಗುವ
ಹೋಗುವ
ಗಂಡು..ಹ್ಞಾಂ..ಗಂಡು...?
ನಾಯೇ..ನಾಯೇ...ನಾಯೇ..!!??
ಏನಂತೀರಿ..??

-ಪ್ರಶಾಂತ್ ಎಂ.ಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮ್ಮ

ಅಮ್ಮ

ಇರಲು ಅಮ್ಮನ ಮಡಿಲಲ್ಲಿ
ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ...
ಹೊಡಿ ವೈಕುಂಠಕ್ಕೆ ಗೋಲಿ,
ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ...

(೨೦-ಏಪ್ರಿಲ್-೨೦೦೭)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಚುಟುಕು ಕವನ