Skip to main content

ಗುರುವಾರ 22 August 2019

ಇತ್ತೀಚೆಗೆ ಸೇರಿಸಿದ ಪುಟಗಳು

ಅನುಭವ ಕಥನ

ಕಮಲೇ ಕಮಲೋತ್ಪತ್ತಿಃ....

ಮೊನ್ನೆ ನನ್ನ ಹಳೆಯ ಮಿತ್ರ ಪ್ರಶಾಂತ ಗಾಂಧೀ-ಬಜಾರಿನಲ್ಲಿ ಭೇಟಿಯಾದ, ಅವನನ್ನು ನಾವೆಲ್ಲರೂ ಪ್ರಳಯಾಂತಕ ಅಥವಾ ಪ್ರಣಯಾoತಕ ಎಂದು ಸಂಭೋದಿಸುತ್ತಿದ್ದೆವು. ನಮ್ಮ ಮಂಜ ಕೂಡ ಅವನಿಗೆ ಹೆದರುತ್ತಿದ್ದ.ಎಲ್ಲ ಕ್ಷೇಮ ಸಮಾಚಾರ ಅದ ಮೇಲೆ, ನಾನು ಬ್ಲಾಗ್,ಕಥೆ ಕವನ ಬರೆಯುತ್ತ ಇರುತ್ತೇನೆ ಎಂದಾಗ, ನನ್ನ ಗೆಳೆಯ ಪ್ರಶಾಂತ ಅಪಾದಮಸ್ತಕ ವಿಚಿತ್ರವಾಗಿ ನೋಡಿ, ನಗಲಾರಂಬಿಸಿದ. ಏಕೆ? ಎಂದು ಕೇಳಿದೆ. ನಿನಗೆ ಬರಹಗಾರರಿಗೆ ಇರಬೇಕಾದ ಆಭೂಷಣವೆ ಇಲ್ಲ ಎಂದ. ಏನಪ್ಪಾ? ಇರಬೇಕು ಎಂದು ಕೇಳಿದಾಗ, ನಿನಗೆ ಮೊದಲು ಒಂದು ಕನ್ನಡಕ ಇರಬೇಕು. ಅದು ಇಲ್ಲದಿದ್ದರೆ ಯಾರು ನೀನು ಒಬ್ಬ ಬರಹಗಾರ ಎಂದು ನಂಬುವುದಿಲ್ಲ ಎಂದ. ಕನ್ನಡಕದಲ್ಲಿ ಕನ್ನಡ ಅಡಕವಾಗಿದೆ ಗೊತ್ತ? ಎಂದು ಹಿಯಾಳಿಸಿದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಬಿಎಂಟಿಸಿ ಬಸ್ಸು ಪ್ರಯಾಣ: ಅನುಭವಗಳ ಬುತ್ತಿಯಿಂದ...

ಯಾವತ್ತೂ ನಮಗಾಗಿ ಪ್ರಾರ್ಥಿಸಬಾರದಂತೆ, ಇನ್ನೊಬ್ಬರಿಗೆ ಪ್ರಾರ್ಥಿಸಬೇಕು ಅಂತಾರಲ್ಲ...ನಾವೂ ಹಾಗೆ ಇನ್ನೊಬ್ಬರಿಗಾಗಿ ಪ್ರಾರ್ಥಿಸುತ್ತೇವೆ. ಅದ್ಯಾವಾಗ ಗೊತ್ತಾ? ಬಸ್ ಸ್ಟಾಪ್ ನಲ್ಲಿ ನಿಂತಿರುವಾಗ...ಬಸ್ ಸ್ಟಾಪ್ ನಲ್ಲಾ? ಆಶ್ಚರ್ಯ ಆಯ್ತಾ? ಹೌದಪ್ಪಾ...ಪಿಜಿಯಿಂದ ಅವಸರವಸರವಾಗಿ ಓಡಿಕೊಂಡು ಬಂದು ಹರಿಶ್ಚಂದ್ರ ಘಾಟ್! ಬಸ್ ಸ್ಟಾಪ್ ನಲ್ಲಿ ಶಿವಾಜಿನಗರಕ್ಕೆ ಹೋಗುವ ಬಸ್ ಗಾಗಿ ಕಾಯುತ್ತಿರುವಾಗ ಅಲ್ಲಿನ ಜನಸಂಖ್ಯೆ ಜಾಸ್ತಿಯಿದ್ದರೆ...ದೇವರೆ ಇವರೆಲ್ಲ ಮೆಜೆಸ್ಟಿಕ್ ಗೋ, ಮಾರ್ಕೆಟ್ ಕಡೆಗೋ ಹೋಗುವವರಾಗಿರಲಿ...ಶಿವಾಜಿನಗರಕ್ಕೆ ಹೋಗುವ ಬಸ್ ನವರಂಗ್ ನಿಂದ ಬರುವಾಗಲೇ ಜನರನ್ನು ತುಂಬಿಸಿಕೊಂಡು ಬರ್ತಿದೆ. ಇನ್ನು ಇವರೆಲ್ಲರೂ ಅದೇ ಬಸ್ ಗೆ ಬಂದ್ರೆ ಪಡ್ಚ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮ್ಮನ ಸೀರೆ

ಚಳಿಗಾಲ ಶುರು. ಹಸಿವೂ ಹೆಚ್ಚು, ನಿದ್ದೆಯೂ ಹೆಚ್ಚು.  ಅಮ್ಮ ಮಾಡಿ ಕೊಟ್ಟ ಕುರುಕು ತಿಂಡಿಯನ್ನು ಮೆಲ್ಲುತ್ತಾ, ರೇಡಿಯೋ ಹಾಕಿಕೊಂಡು ಬೆಚ್ಚನೆಯ ಹೊದಿಕೆಯಡಿ ಮಲಗಿದರೆ ಸ್ವರ್ಗಕ್ಕೇ ಕಿಚ್ಚು ಹಚ್ಚೆಂದ ಸರ್ವಜ್ಞ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬರಿಬೇಕು.. ಬರಿಬೇಕು ..

ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, ಇವತ್ತು ಏನಾದರು? ಬರೆದೆ ತೀರಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿದ್ದೆ.

ಕೆಲವರಿಗೆ ಕೆಲವೊಂದು ಹುಚ್ಚು ಖಂಡಿತ ಇರುತ್ತವೆ. ನಮ್ಮ ಮಂಜನಿಗೆ ಯಾವುದೇ ದೊಡ್ಡ ಸಮೆಸ್ಯೆಯಲ್ಲೂ ಹಾಸ್ಯ ಕಾಣುವ ಪ್ರವರ್ತಿ. ಒಮ್ಮೆ ನಾನು ಮಂಜ ನನ್ನ ಬೈಕ್ ನಲ್ಲಿ ಹೋಗುತ್ತಿರುವಾಗ, ಬೈಕ್ ಮುಂದಿನ ಒಂದು ಹುಡುಗಿಯ ಬೈಕ್ ಗೆ ತಾಗಿತು. ಅವಳು ಬಂದು ಜಗಳ ಶುರು ಮಾಡಿದಳು. ಅಷ್ಟರಲ್ಲಿ, ಮಂಜ ಏನೋ.. ಸ್ವಲ್ಪ ಪ್ರೆಸ್ ಆಯಿತು ಅಷ್ಟೇ ಎಂದ. ಏನ್ರೀ? ಹಾಗೆ ಅಂದರೆ ಎಂದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಯಾಕೋ ಹಳೆಯದೆಲ್ಲಾ ನೆನಪಾಗುತಿದೆ...

ಇಂಜಿನಿಯರಿಂಗ್ ಓದುತ್ತಿದ್ದ ಕಾಲದಲ್ಲಿ ಬೆಂಗಳೂರು ನಮ್ಮ ಕನಸಿನ ಊರಾಗಿತ್ತು. ಕಲಿಕೆಯಲ್ಲಿ ಅಷ್ಟೇನೂ ಮುಂದೆ ಇಲ್ಲದಿದ್ದರೂ ಹೇಗಾದರೂ ಪರೀಕ್ಷೆಯಲ್ಲಿ 'ಬಚಾವ್್' ಆಗಿ ಎದ್ದು ನಿಲ್ಲುತ್ತಿದ್ದೆ. ಅಂತಿಮ ವರ್ಷ ಕ್ಯಾಂಪಸ್ ಇಂಟರ್್ವ್ಯೂನಲ್ಲಿ ನನ್ನ ಬುದ್ಧಿವಂತ ಗೆಳೆಯರೆಲ್ಲ ಪಾಸಾದಾಗ ನಾವು ಕಂಗ್ರಾಟ್ಸ್ ಹೇಳುವ ಗುಂಪಿನಲ್ಲಿ ನಿಲ್ಲಬೇಕಾಗಿ ಬಂತು. ನನ್ನ ಹಾಗೆಯೇ ಎಂಟು ಹುಡುಗಿಯರು ನಮ್ಮ ಗ್ಯಾಂಗ್್ನಲ್ಲಿದ್ದರು. ಕೆಲಸ ಗಿಟ್ಟಿಸಿಕೊಳ್ಳಬೇಕೆಂದು ನಾವು ಕಂಪನಿಗಳಿಗೆ ರೆಸ್ಯೂಮೆ ಫಾರ್ವ್್ರ್ಡ್ ಮಾಡುತ್ತಿರಬೇಕಾದರೆ ನಿಮಗೆ ಯಾಕೆ ಕೆಲಸ? ಹೇಗಾದರೂ ಸಾಫ್ಟ್್ವೇರ್ ಇಂಜಿನಿಯರ್ ಒಬ್ಬ ಮದುವೆ ಆಗುತ್ತಾನೆ. ಆಮೇಲೆ ಗಂಡ, ಮನೆ ಮಕ್ಕಳು ಅಂತಾ ಲೈಫ್ ಕಳೆದುಹೋಗಿ ಬಿಡುತ್ತೆ ಎಂದು 'ಬಿಟ್ಟಿ' ಉಪದೇಶ ನೀಡುವ ಹುಡುಗರಿಗೂ ಏನೂ ಕಮ್ಮಿಯಿರಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ....

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗದ ಮಡದಿ, ಮಗ ಇಬ್ಬರು, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗೆ ಜೋರಾಗಿ ನಗುತ್ತಿದ್ದರು. ಯಾವತ್ತೂ ಗುಡ್.. ಗುಡ್ ..ಎನ್ನುವ ಹೊಟ್ಟೆ ಬ್ಯಾಡ್ ಆಗಿ ಸೌಂಡ್ ಮಾಡಿತ್ತು. ಈ ಗ್ಯಾಸ್ ಎನ್ನುವುದು ಸಾಮಾನ್ಯವಾಗಿ ತುಂಬಾ ಜನರಲ್ಲಿ ಇರುವ ಒಂದು ಕೆಟ್ಟ ರೋಗ. ಇದು ಏತಕ್ಕೆ ಬರುತ್ತೆ ಎಂಬುದು ಮಾತ್ರ ಯಕ್ಷ(ಲಕ್ಷ) ಪ್ರಶ್ನೆ. ಅದಕ್ಕೆ ಎಂದು ಅಂತರ್ಜಾಲ ತಡಕಾಡಿದ್ದು ಆಯಿತು. ಆನುವಂಶಿಕ ಎಂದು ಅನ್ನಿಸಿದ್ದೂ ಉಂಟು. ಅದಕ್ಕೆ ಉದಾಹರಣೆ ಎಂದರೆ, ನಾನು ಚಿಕ್ಕವನಿದ್ದಾಗ, ನಮ್ಮ ಚಿಕ್ಕಪ್ಪ ಬಜಾಜ್ ಸ್ಕೂಟರ್ ಹಾಗೆ ಸ್ವಲ್ಪ ಬಾಗಿದರು ಕೂಡ.. ನಾವು ಎದ್ದೋ, ಬಿದ್ದೋ ಎಂದು ಓಡಿ ಹೋಗಿ ನಗುತ್ತಿದ್ದೆವು. ಈಗ ಅದು ನನಗೆ ಬಳುವಳಿಯಾಗಿ ಬಂದಿದೆ. ಅದಕ್ಕೆ ನಮ್ಮ ಅಕ್ಕ ನನಗೆ ಗೋಪಾಲ್ ಗ್ಯಾಸ್ ದುರಂತ ಎಂದು.. ಭೋಪಾಲ್ ಗ್ಯಾಸ್ ದುರಂತಕ್ಕೆ ಹೋಲಿಸಿ ಆಡುವುದು ಉಂಟು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಹಾ ಗರಮ್ !!!!

ಹೆ೦ಡತಿಯ ಉಪದ್ರವ ತಾಳಲಾರದೆ ಹೊರಗೆ ಹೋಗಿದ್ದೆ. ಉಪದ್ರವ ಶುರು ಆಗಿದ್ದು ಚಹಾ ಎ೦ಬ ದ್ರವವನ್ನು ಕೇಳಿ, ಅದೇ ಧಾಟಿಯಲ್ಲಿ, ಹಚಾ ಎ೦ದು, ಸ೦ಜೆ ಸಮಯದಲ್ಲಿ ಚಹಾ ಕುಡಿದರೆ ನಿದ್ದೆ ಬರಲ್ಲ ಎ೦ದು ಬೈಯಿಸಿಕೊ೦ಡು ಹೊರಟಿದ್ದೆ. ದಿನವು ಯಾವುದೆ ತಗಾದೆ ಇಲ್ಲದೆ ಬಿಸಿ ಚಹಾ ಕೋಡುತ್ತಿದ್ದ ಮಡದಿ, ಈವತ್ತು ಸ್ವಲ್ಪ ಗರಮ್ ಅಗಿದ್ದಳು. ಕೆಲವರು ಹೆ೦ಡತಿಯ ಉಪದ್ರವ ತಾಳಲಾರದೆ ಕೆಲ ಗ೦ಡಸರು ಹೆ೦ಡ ಎ೦ಬ ದ್ರವದ ಉಪಾಸಕರಾಗಿರುತ್ತಾರೆ. ಸ೦ಜೆ ಸಮಯದಲ್ಲಿ ಚಹಾ ಸಿಗುವುದು ಸ್ವಲ್ಪ ಕಷ್ಟನೇ. ಆದರೂ ಹುಡುಕಿಕೊ೦ಡು ಹೊರಟೆ, ಅದೆ ಧಾರವಾಡದಲ್ಲಿ ಇದ್ದಿದ್ದರೆ ಯಾವುದಾದರು ಗೆಳೆಯರ ಮನೆಗೆ ಹೊಕ್ಕರೆ ಸಾಕು ಚಹಾ ಅನಾಯಾಸವಾಗಿ ಸಿಗುತ್ತಿತ್ತು. ಧಾರವಾಡದಲ್ಲಿ ಊರಿ ಬಿಸಿಲಲ್ಲೂ ಕೂಡ ಚಹಾ ಸರಾಗವಾಗಿ ಎಲ್ಲರೂ ಹೀರುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾಲ್ಯದ ಫ್ಲಾಶ್ ಬ್ಯಾಕ್...

ಇನ್ನೇನು ಶಾಲೆ ಆರಂಭವಾಗುತ್ತದೆ. ಏನೆಲ್ಲಾ ತಯಾರಿ ಆಗ್ಬೇಕು ನೋಡಿ. ಹತ್ತು ಪುಟದಷ್ಟು ಕಾಪಿ ಬರೆದು ಕೊಂಡು ಬನ್ನಿ, ಮನೆ ಹಿತ್ತಿಲಲ್ಲಿ ಸಿಗುವ ಔಷಧೀಯ ಸಸ್ಯಗಳ ಎಲೆ ಸಂಗ್ರಹ ಮಾಡಿ ಆಲ್ಬಂ ಮಾಡಿ...ನೀವು ರಜೆಯಲ್ಲಿ ಏನೆಲ್ಲಾ ಮಾಡಿದ್ದೀರಿ? ಎಂಬುದನ್ನು ಕ್ಲಾಸಿನಲ್ಲಿ ಹೇಳ್ಬೇಕು..ಹೀಗೆ ಬೇಸಿಗೆ ರಜೆ ಆರಂಭವಾಗುವ ಮುನ್ನ ಟೀಚರ್ ಹೇಳಿದ ಎಲ್ಲಾ ಆದೇಶಗಳು ಥಟ್ಟನೆ ನೆನಪು ಬರುವುದು ಶಾಲೆ ಆರಂಭವಾಗಿವುದಕ್ಕಿಂತ ಎರಡು ದಿನಗಳ ಮುಂಚೆಯೇ. ಅದರೆಡೆಯಲ್ಲಿ ಅಜ್ಜಿ ಮನೆಗೆ ಹೋಗಿಲ್ಲ, ಮಾವನ ಮನೆಗೆ ಹೋಗಿಲ್ಲ ಎಂದು ಗೋಳಿಡುತ್ತಿದ್ದ ನಾವುಗಳನ್ನು ರಜೆ ಮುಗಿಯುತ್ತಾ ಬರುತ್ತಿದ್ದಂತೆ ಅಪ್ಪ ಕರೆದುಕೊಂಡು ಹೋಗಿ ಅದೇ ದಿನ ಸಂಜೆ ಕರೆದು ತರುತ್ತಾರೆ. ಯಾಕಂದ್ರೆ ಆ ದಿನ ರಾತ್ರಿ ಕುಳಿತು 10 ಪುಟ ಕಾಪಿ ಬರೆಯಬೇಕಲ್ವಾ? ಇನ್ನು ಆಲ್ಬಂ ವಿಷಯ. ಅಲ್ಲಿಯವರೆಗೆ ಹಿತ್ತಿಲಲ್ಲಿ ಕಾಣಸಿಗುತ್ತಿದ್ದ ಔಷಧೀಯ ಗಿಡ ನಾವು ಹುಡುಕುವ ಹೊತ್ತಿಗೆ ನಾಪತ್ತೆಯಾಗಿರುತ್ತದೆ. ಕೊನೆಗೆ ಕೈಗೆ ಸಿಗುವುದು ಕೇವಲ ನಾಚಿಗೆ ಮುಳ್ಳು ಮಾತ್ರ. ಅದರ ಎಲೆಯನ್ನು ಲಾಂಗ್ ಬುಕ್್ಗೆ ಅಂಟಿಸಿ ಕೆಳಗೆ ಸ್ಕೆಚ್ ಪೆನ್ನಿನಲ್ಲಿ ನಾಚಿಕೆ ಗಿಡ ಎಂದು ಬರೆದದ್ದೂ ಆಯ್ತು. ಕೆಲವೊಮ್ಮೆ ಅಂಟು ಆರದೆ ಇದ್ದು, ಪುಸ್ತಕವನ್ನು ಮುಚ್ಚಿಟ್ಟಿದ್ದರೆ ಆ ಪುಟದ ಇನ್ನೊಂದು ಮುಗ್ಗುಲಲ್ಲಿ ನಾಚಿಕೆ ಮುಳ್ಳಿನ ಒಂದಷ್ಟು ಎಲೆಗಳು ಅಂಟಿಕೊಂಡು ಬಿಡುತ್ತಿದ್ದವು. ಈ ಆಲ್ಬಂ ತಯಾರಿಸಬೇಕು ಎಂದಾದರೆ ನಾವು ಸಂಗ್ರಹಿಸಿದ ಎಲೆಗಳನ್ನು ಮೊದಲು ಪುಸ್ತಕದ ನಡುವೆ ಇಟ್ಟು ಬಾಡುವಂತೆ ಮಾಡಬೇಕು. ಹಾಗಾದರೆ ಮಾತ್ರ ಅವು ಚೆನ್ನಾಗಿ ಕಾಣುತ್ತಿತ್ತು. ಕೊನೆ ಘಳಿಗೆಯಲ್ಲಿ ಎಲೆ ಸಂಗ್ರಹಿಸುವುದೇ ಕಷ್ಟ ಇನ್ನು ಬಾಡಿಸಲು ಸಮಯ ಎಲ್ಲಿದೆ ಹೇಳಿ? ಅಂತೂ ಅದನ್ನು ಹೊಗೆ ಮೇಲೆ ಹಿಡಿದೋ,ಇಸ್ತ್ರಿ ಪೆಟ್ಟಿಗೆಯ ಅಡಿಯಲ್ಲಿಟ್ಟೋ ಬಾಡಿಸಿದ್ದೂ ಆಯ್ತು. ಅಪ್ಪ, ಅಣ್ಣ, ಅಕ್ಕ, ಅಮ್ಮ ಹೀಗೆ ಎಲ್ಲರ ಸಹಾಯದಿಂದ ಶಾಲೆಗೆ ಹೊರಡುವ ಹೊತ್ತಿಗೆ ಆಲ್ಬಂ ರೆಡಿಯಾಗುತ್ತಿತ್ತು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....

ಮುಂಜಾನೆ ಬೇಗನೆ ಎದ್ದು "ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೆ ಕರದರ್ಶನಂ" ಎಂದು ಹೇಳುತ್ತ ಏಳುತ್ತಿದ್ದಂತೆ. ನನ್ನ ಮಗ ಕೂಗಿ "ಅಪ್ಪ ನಿಮ್ಮ ಚಪ್ಪಲಿ ಕಾಣುತ್ತಾ ಇಲ್ಲ" ಎಂದ. ಹೊರಗೆ ಹೋಗಿ ನೋಡಿದೆ. ಒಂದೇ ಚಪ್ಪಲಿ ಇತ್ತು. ಒಂದೇ ಚಪ್ಪಲಿ ಯಾರು ಕದ್ದರು ಎಂಬ ಯೋಚನೆಗೆ, ಯಾರಾದರೂ ಕು೦ಟ ಕಳ್ಳ ಇರಬಹುದು ಎಂದು, ಬರೀ ಕಾಲಲ್ಲಿ ಹೋಗಿ ನೋಡಿದೆ. ಒಂದು ಚಿಕ್ಕ ನಾಯಿ ಮರಿ ನನ್ನ ಚಪ್ಪಲಿ ತೆಗೆದುಕೊಂಡು ಆಟ ಆಡುತ್ತಾ ಇತ್ತು. ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಾಯಿ... ನಾಯಿನೆ ಅಲ್ಲವೇ. ಮೊದಲಿನಿಂದಲೂ ನಾಯಿ ಎಂದರೆ ಹೆದರಿಕೆ. ಅದನ್ನು ಕಷ್ಟ ಪಟ್ಟು ಓಡಿಸಿ, ಒಂದೇ ಚಪ್ಪಲಿ ಹಾಕಿಕೊಂಡು ಬರುತ್ತಾ ಇದ್ದೆ. ಮಂಜ "ಒಂದೇ ಚಪ್ಪಲಿ ಕೊಂಡು ಕೊಂಡಿದ್ದೀಯಾ ಜುಗ್ಗ" ಎಂದು ಅಪಹಾಸ್ಯ ಮಾಡಿದ. ನಾಯಿ ಮಾಡಿದ ಅವಾಂತರ ಹೇಳಿ, ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಮನೆ ಒಳಗಡೆ ನಡೆದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಳೇ ನಿದ್ರೆ ಪುರಾಣ...

ಇತ್ತೀಚೆಗೆ ಬ್ಲಾಗ್ ಬರೆಯೋದು ಕಡಿಮೆ ಆಗಿದೆ. ಕೆಲಸದ ಒತ್ತಡ, ಸಮಯದ ಅಭಾವ ಮತ್ತೊಮ್ಮೆ ಮೂಡ್ ಇಲ್ಲ ಹೀಗೆ ಹಲವಾರು ಕಾರಣಗಳಿಂದ ಬ್ಲಾಗ್ ಬರವಣಿಗೆ ನಿಂತುಹೋಗಿದೆ. ಏನಾದರೂ ಬರೆಯೋಣ ಎಂದು ಕೂತರೆ ವಿಷಯಗಳೇ ಸಿಗಲ್ಲ. ಈ ವಿಷಯಗಳೇ ಹಾಗೇ...ಏನಾದರೂ ಕೆಲಸ ಮಾಡುವಾಗ ಬ್ಲಾಗ್ ಬರೆಯೋಣ ಅಂತಾ ಅನಿಸುತ್ತೆ. ಟಾಯ್ಲೆಟ್್ನಲ್ಲೇ ಹೆಚ್ಚಿನ ವಿಷಯಗಳು ನೆನಪಿಗೆ ಬರುತ್ತೆ, ಆಮೇಲೆ ಬಂದು ಬರೆಯೋಣ ಎಂದು ಕೂತರೇ ಪದಗಳೇ ಸಿಗದು. ಕೆಲವೊಮ್ಮೆ ಬರೆಯಲು ವಿಷಯಗಳು ಸುಮಾರು ಇರುತ್ತದೆ, ಇವುಗಳಲ್ಲಿ ಯಾವುದನ್ನು ಬರೆಯಲಿ? ಎಂಬುದೇ ದೊಡ್ಡ ಪ್ರಶ್ನೆಯಾಗಿ ಕಾಡುವುದೂ ಉಂಟು. ಅಂತೂ ಬ್ಲಾಗ್್ಗೆ ಏನು ಬರೆಯಲಿ? ಎಂಬ ಚಿಂತೆಯಿಂದ ಮುಕ್ತಳಾಗಲು ಅಪ್ಪನಿಗೆ ಫೋನಾಯಿಸಿ, ಏನಾದರೂ ವಿಷಯ ಹೇಳಿ ಅಂದೆ. ನಿನಗಿಷ್ಟವಿರುವ ವಿಷಯದ ಬಗ್ಗೆ ಬರಿ..ಅಂದ್ರು. ಆಮೇಲೆ ನನಗಿಷ್ಟವಿರುವ ವಿಷಯಗಳನ್ನು ಪಟ್ಟಿ ಮಾಡತೊಡಗಿದೆ. ಅರೇ..ವಿಷಯ ಸಿಕ್ಕಿತು.. ನಿದ್ದೆ!


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಬಾಡಿಗೆ ಮನೆ ....

ಮಂಜನ ಮನೆಗೆ ಹೋಗಿದ್ದೆ. ಈ ಗ್ಯಾಸ್ ಆಗಿಬಿಟ್ಟರೆ ಊಟ ಮಾಡೋದು ಕಷ್ಟ ಎಂದು ಮಂಜ ಬೇಜಾರಿನಿಂದ ಮಾತನಾಡುತ್ತಾ ಇದ್ದ. ಹಾಗಾದರೆ ಮನೆಯಲ್ಲಿ ಅಡುಗೆ ನಿನ್ನದೆ ಎಂದು ಆಯಿತು ಎಂದೆ. ಲೇ....ನೀನು ನಿನ್ನ ವಿಷಯ ಬೇರೆಯವರ ಮೇಲೆ ಹಾಕಿ ಖುಷಿಪಡಬೇಡ ಎಂದು ನನಗೆ ತಿರುಗು ಬಾಣ ಬಿಟ್ಟ. ಆಗ ನಕ್ಕೂ, ಊಟಕ್ಕೆ ನಮ್ಮ ಮನೆಗೆ ಬಂದು ಬಿಡು ಎಂದೆ. ಹಾ... ಏನು? ಎಂದ. ಊಟಕ್ಕೆ ನಮ್ಮ ಮನೆಗೆ ಬಾ, ಇಲ್ಲ ನನ್ನ ಮನೆಯಲ್ಲಿರುವ ಸಿಲಿಂಡರ್ ತೆಗೆದುಕೊಂಡು ಹೋಗು ಎಂದೆ. ಲೇ ... ನಾನು ಅದನ್ನು ಹೇಳುತ್ತ ಇಲ್ಲ ಕಣೋ ಎಂದು ಗಹ.. ಗಹಿಸಿ.. ನಗುತ್ತಾ.... ಗ್ಯಾಸ್ ಆಗಿದ್ದು ಹೊಟ್ಟೆಯಲ್ಲಿ ಎಂದ. ನಾನು ತಮಾಷೆಗೆ ಇದನ್ನ ಭಾರತ್ ಅಥವಾ ಏಚ್ ಪೀ ಗ್ಯಾಸ್ ಏಜೆನ್ಸೀ ಅವರಿಗೆ ತಿಳಿದರೆ ಕಷ್ಟ ನಿನ್ನನ್ನು ಎತ್ತಿಕೊಂಡು ಹೋಗಿ ಬಿಡುತ್ತಾರೆ ಎಂದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತರ್ಲೆ ಮಂಜನ ರಥಸಪ್ತಮಿ....

ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ್ರಿಗೆ ಮೊದಲೇ ಒಂದು ಬಾಯಿ ಇದ್ದರೂ, ಮದುವೆ ಆದಮೇಲೆ ಇನ್ನೊಂದು ಬಾಯಿ ಸೇರಿ ಸಾವಿತ್ರಿಬಾಯಿ ಆದ ಮೇಲೆ ಇನ್ನೂ ಬಾಯಿ ಜೋರಾಗಿತ್ತು. ಮಂಜ ಮನೆಯಲ್ಲಿ ಇಲ್ಲದಿರಬಹುದಾ ಎಂದು ಕೂಡ ಅನ್ನಿಸಿತು. ವಾಪಸ್ ಹೋಗುವ ಸಮಯದಲ್ಲಿ, ಮಂಜನ ಪಕ್ಕದ ಮನೆಯಲ್ಲಿ ಇರುವ ಸಂತೋಷ ಭೇಟಿಯಾದರು. ಮಂಜನ ಬಗ್ಗೆ ಕೇಳಿದಾಗ ಮಂಜ ಮನೆಯಲ್ಲಿ ಇರುವನೆಂದು ತಿಳಿಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನ್ನಡ ಸಾಹಿತ್ಯ ಸಮ್ಮೇಳನ ....

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದೆ. ಬೇಗನೆ ಎದ್ದಿದ್ದು ನೋಡಿ, ಸೂರ್ಯನಿಗೂ ಆಶ್ಚರ್ಯವಾಗಿರಬೇಕು. ತನ್ನ ಹೊಳಪಿನ ಹಲ್ಲುಗಳನ್ನು ತೋರಿಸುತ್ತಾ ನಗುತ್ತಲಿದ್ದ ಎಂದು ಅನ್ನಿಸುತ್ತೆ. ತುಂಬಾ ಬಿಸಿಲು. ಆದರೂ ಗಾಂಧಿಬಜಾರ್ ತಲುಪಿ ನನ್ನ ಗಾಡಿ ಒಂದು ಕಡೆ ನಿಲ್ಲಿಸಿ, ಒಳಗಡೆ ಹೋದೆ. ಹೋದೊಡನೆ ಪ್ರೊ ಕೃಷ್ಣೇಗೌಡರು ಹಾಸ್ಯದ ಹೊನಲನ್ನು ಹರಿಸುತ್ತಿದ್ದರು.

ಕೆಲ ಹೊತ್ತು ಆದ ಮೇಲೆ ಪುಸ್ತಕ ಮಳಿಗೆಗೆ ಹೊರಟೆ, ತುಂಬಾ ಜನಜಂಗುಳಿ. ಜನರ ಪುಸ್ತಕ ಪ್ರೀತಿ ನೋಡಿ ತುಂಬಾ ಆನಂದವಾಯಿತು. ನನ್ನನ್ನು ಹಿಂದಿನವರೇ ದೂಡಿಕೊಂಡು ಹೋಗುತ್ತಿದ್ದರು, ಅಷ್ಟು ಜನ ಸೇರಿದ್ದರು. ಹಿಂದಿನಿಂದ ಒಬ್ಬ ಮನುಷ್ಯ ಹೊಟ್ಟೆ ಇಂದ ನನ್ನನ್ನು ನೂಕುತ್ತಾ ಹೊರಟಿದ್ದ. ಅವನು ನೂಕಿದ್ದು ನೋಡಿ ಕೋಪ ಬಂದರು, ಅವನ ಹೊಟ್ಟೆ ನೋಡಿ ನನಗೆ ಸಂತೋಷವಾಯಿತು, ಏಕೆಂದರೆ ನನ್ನ ಹೊಟ್ಟೆ, ಅವನ ಹೊಟ್ಟೆ ಮುಂದೆ ಏನು? ಅಲ್ಲ ಅಷ್ಟು ದೊಡ್ಡದಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅವಸರವೇ ಅಪಘಾತ ....

ಆಫೀಸ್ ಹೋಗುವುದಕ್ಕೆ ಲೇಟ್ ಆಗಿತ್ತು. ಲೇ ನನ್ನ ಬನಿಯನ್ ಯಾವ ಊರಿನಲ್ಲಿ ಇದೆ ಎಂದು ಕೇಳಿದೆ. ಧಾರವಾಡದಲ್ಲಿ ಇದೆ ಹೋಗಿ ತೆಗೆದುಕೊಳ್ಳಿ ಎಂದು ನನ್ನ ಕಪಿ ಚೇಷ್ಟೆಗೆ ಸಾತ್ ನೀಡಿದಳು. ಲೇ ಎಲ್ಲಿ ಇದೆ ಹೇಳೆ ಎಂದು ಮತ್ತೊಮ್ಮೆ ಕೇಳಿದೆ. ಪಕ್ಕದ ಮನೆಯಲ್ಲಿ ಇರುತ್ತಾ ಇಲ್ಲೇ ಯಲ್ಲೋ ಬಿದ್ದಿರಬೇಕು ನೋಡಿ ಎಂದಳು. ರಾತ್ರಿ ಪೂರ್ತಿ ನಿಶಾಚರನ ಹಾಗೆ ಕುಳಿತು ಕಂಪ್ಯೂಟರ್ ಕುಟ್ಟೊದು, ಈಗ ನಮ್ಮನ್ನು ಬೈಯೋದು ಎಂದು. ಅದು ಏನೋ? ಬರೀತಾರೆ ಎಂದು ಕೊಂಡರೆ, ನನ್ನ ಬಗ್ಗೆ ಹೀಯಾಳಿಸೋದು, ಇಲ್ಲ ತಮ್ಮ ಹೊಟ್ಟೆ ಮತ್ತು ತಲೆ ವರ್ಣಿಸೋದು ಬಿಟ್ಟು ಬೇರೆ ಏನು ಬರೆದಿದ್ದೀರ ಎಂದು ಬೈದಳು. ಕಡೆಗೆ ನಾನೇ ಹುಡುಕಿ ಬನಿಯನ್ ಹಾಕಿಕೊಂಡೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಲವೆ ಜೀವನ ಸಾಕ್ಷಾತ್ ಖಾರ ....

ಪುಟ್ಟ ನೋಡು, ನಿಮ್ಮ ಅಪ್ಪನ ಯುದ್ಧ ಮುಗಿಯಿತಾ? ಎಂದು ಮಗನಿಗೆ ಕೇಳಿದಳು. ಎರಡು ದಿನದಿಂದ ನನ್ನ ಮತ್ತು ನನ್ನ ಮಡದಿಯ ಮಧ್ಯೆ ಸಂಸಾರ ಸಮರ ನಡೆದೇ ಇತ್ತು. ಈಗ ಯುದ್ಧ ಮುಗಿಯಿತಾ? ಎಂದು ಕೇಳಿದ್ದು ನನ್ನ ಸ್ನಾನಕ್ಕೆ. ಸ್ನಾನಕ್ಕೆ ಅನ್ನುವದಕ್ಕಿಂತ ದಾಡಿ ಮಾಡಿಕೊಳ್ಳುವುದಕ್ಕೆ. ರಕ್ತವಿಲ್ಲದೇ ನನ್ನ ಮುಖ ಕೂದಲುಗಳನ್ನು ಬಲಿ ಕೊಡುವುದು ನನಗೆ ಅಸಾಧ್ಯದ ಸಂಗತಿ. ಒಂದು ಸಲ ಹೀಗೆ ರಕ್ತ ನೋಡಿ ನನ್ನ ಮಡದಿ, ಇಷ್ಟು ರಕ್ತದಿಂದ ನಾಲ್ಕು ಜನ ರಕ್ತದ ಅವಶ್ಯಕತೆ ಇರುವವರನ್ನು ಬದುಕಿಸಬಹುದಿತ್ತು ಎಂದಿದ್ದಳು. ಸಕಾಲದಲ್ಲಿ ಮಳೆ ಬರದೇ ಎಷ್ಟೋ ಸಸ್ಯ, ಜೀವ ಜಂತುಗಳು ಬಳಲಿ ಬಲಿಯಾಗುತ್ತವೆ, ಆದರೆ ಈ ದಾಡಿ, ಮೀಸೆಗಳಿಗೆ ಅದರ ಪರಿವೆ ಇಲ್ಲದೇ ಸೊಂಪಾಗಿ ಬೆಳೆಯುತ್ತವೆ. ಒಣಗಿರುವ ಪೈರು ಸಹಿತ ಮತ್ತೆ ಚಿಗುರೊಡೆಯುವದು ನಮ್ಮ ಮುಖದಲ್ಲಿ ಮಾತ್ರ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜನುಮ ಜನುಮದ ಅನುಬಂದ .......(ನನ್ನ ಹೊಟ್ಟೆ ಮತ್ತು ತಲೆ)

ಲೇ ಹೊಟ್ಟೆನೋವು ಕಣೇ ಎಂದೆ. ನಿಮ್ಮ ತಲೇಲಿ ಹೊಟ್ಟೇನೆ ತುಂಬಿಕೊಂಡಿದೆ ಅಂದ್ಲು. ನಿಜಾನೇ ಇರಬಹುದು ಅನಿಸ್ತು ಅದೇಕೋ ಗೊತ್ತಿಲ್ಲ ಹೊಟ್ಟೆಗೂ ಮತ್ತು ನನ್ನ ತಲೆಗು ಅವಿನಭಾವವಾದ ಸಂಭ೦ದ. ಅದೇಕೋ ಗೊತ್ತಿಲ್ಲ ಹೊಟ್ಟೆ ನೋವು ಬಂತು ಅಂದ್ರೆ ತಲೆ ನೋವು ನೂರಕ್ಕೆ ನೂರು ಬರಲೇಬೇಕು. ತಲೆಗೂ ಅಷ್ಟೇ ಯಾವಾಗಲು ಹೊಟ್ಟೇದೆ ಯೋಚನೆ. ಯಾಕೋ ಆದರು ಸ್ವಲ್ಪ ಅವಳು ಹೇಳಿರುವದನ್ನು ಅರಗಿಸಿಕೊಳ್ಳಲು ಆಗಲಿಲ್ಲಾ ಏಕಂದ್ರೆ ನಮ್ಮ ಅಪ್ಪ ಹೇಳ್ತಿದ್ರು ನಿನ್ನ ತಲೇಲಿ ಸಗಣಿ ಗೊಬ್ರನೆ ಇರೋದು ಅಂತ. ಈಗ ಶುರುವಾಯಿತು ನೋಡಿ ಗೊಬ್ರನ ಇಲ್ಲ ಹೊಟ್ಟೆನ ಅಂತ. ಸ್ವಲ್ಪ ತಲೆ ಕೆರೆದುಕೊಂಡೆ, ತಲೇಲಿ ಇರುವ ಹೊಟ್ಟು ಸ್ವಲ್ಪ ಕೆಳಗೆಡೆ ಬಿತ್ತು ಮಾತ್ರ. ಉತ್ತರ ಮಾತ್ರ ತನ್ನ ವಿರುದ್ಧ ದಿಕ್ಕಿಗೆ ಮುಖ ಮಾಡಿ ಮೂಕವಾಗಿ ಕುಳಿತುಬಿಟ್ಟಿತ್ತು....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಪ್ಪಗೆ ಬೇಕು... ಗುಟ್ಕಾ ಪ್ಯಾಕೇಟು

ಆಫೀಸು ೧೧ ಗಂಟೆಗಿದ್ದರೆ ಯಾರಿಗೆ ತಾನೇ ಬೆಂಗಳೂರಿನ ಈ ಛಳಿಯಲ್ಲಿ ಬೆಳಿಗ್ಗೆ ಬೇಗ ಏಳುವ ಹುಮ್ಮಸ್ಸಿರುತ್ತದೆ. ಅದೂ ಭಾನುವಾರದ ರಜಾ ದಿನ ಬೇರೆ. ಆದರೂ ನಾನಂದುಕೊಂಡಿದ್ದನ್ನು ಆರಂಭಿಸಬೇಕು. ನಾಳೆ ಬೆಳಿಗ್ಗೆ ಏನಾದರಾಗಲಿ ಬೇಗ ಏಳಬೇಕು ಎಂದು ತೀರ್ಮಾನಿಸಿ ಶನಿವಾರ ರಾತ್ರಿ ೧೧:೩೦ಕ್ಕೆ ಮಲಗಿದೆ. ಭಾನುವಾರ ಬೆಳಿಗ್ಗೆ ೬:೩೦ಕ್ಕೆ ಎಚ್ಚರ ಆಯಿತಾದರೂ ಏಳಬೇಕೆ ಬೇಡವೇ ಎಂಬ ಗೊಂದಲ. ನಾಳೆಯಿಂದ ಆರಂಭಿಸಬಹುದಲ್ಲಾ ಎಂದು ಒಮ್ಮೆ ಅಂದುಕೊಂಡರೂ, ಮನದೊಳಗಿದ್ದ ಆ ಏನೋ ನಿದ್ರಿಸಲು ಬಿಡಲಿಲ್ಲ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಾಲಕ್ಕೆ ಸರಿದ ಥ್ರಿಲ್ಲಿಂಗ್ ಘಟನೆಗಳು....

ತ್ತೆ ಬಂದಿದೆ ಹೊಸ ವರುಷ. ಎಷ್ಟು ಬೇಗ ವರ್ಷ ಕಳೆದು ಹೋಯಿತಲ್ಲಾ ಎಂದು ಹೇಳುವುದು ಸಾಮಾನ್ಯವೇ. ಇನ್ನು ಮುಂದಿನ ವರ್ಷ ಏನೇನು ಮಾಡಬೇಕೆಂಬುದರ ಬಗ್ಗೆ ಯೋಚಿಸುವುದು ಸಾಮಾನ್ಯವೇ ಆದರೆ ಆ ಯೋಜನೆ ಕಾರ್ಯಗಳು ಕೈಗೂಡಿವೆಯೇ? ಎಂದು ಯೋಚಿಸಿದರೆ ಹೆಚ್ಚಿನ ಯೋಜನೆಗಳಿಗೆ 'ಇಲ್ಲ' ಎಂಬ ಉತ್ತರವೇ ಲಭಿಸುತ್ತದೆ. ನನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಹೇಳುವುದಾದೆ ಈ ವರ್ಷ ಹಲವಾರು ಅನುಭವಗಳನ್ನು ನೀಡಿದೆ. 2010 ಜನವರಿಯಲ್ಲಿ ನನ್ನ ಕವನ ಸಂಕಲನ ಬಿಡುಗಡೆಗೊಳಿಸುವ ಮೂಲಕ ಹೊಸ ವರುಷಕ್ಕೆ ಭರ್ಜರಿ ಆರಂಭ ನೀಡಿದ್ದೆ. ನಂತರ ಕಾಲದೊಂದಿಗೆ ಸಿಹಿ ಕಹಿ ಘಟನೆಗಳು ಘಟಿಸಿ ಹೋದವು.


ಕೆಲವೊಂದು ಘಟನೆಗಳು ಮನಸ್ಸಲ್ಲಿ ಮಾಸದೆ ಉಳಿದಿವೆ. ಕೆಲವೊಂದು ಜೀವನದಲ್ಲಿ ಮೊದಲಸಲ ಎನ್ನುವವು. ಇನ್ನು ಕೆಲವು ಮಾಡಿದ ತಪ್ಪನ್ನೇ ಮತ್ತೆ ಮಾಡುತ್ತಿದ್ದೆ ಎಂದು ಅನಿಸುವಂತವುಗಳು.


ಇವುಗಳಲ್ಲಿ ಕೆಲವು ಥ್ರಿಲ್ಲಿಂಗ್ ಅಂತಾ ಅನಿಸುವ ಕೆಲವು ಘಟನೆಗಳೂ ಇವೆ.


 


ಅವುಗಳು...


1.ಸಿಗ್ನಲ್ ಜಂಪ್ ಮಾಡಿದ್ದು (ಪೋಲಿಸ್ ಕಣ್ತಪ್ಪಿಸಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲೈಫು ಇಷ್ಟೇ ಅಲ್ಲ!

ಬೆಂಗಳೂರಿನ ಚುಮು ಚುಮು ಚಳಿ. ಆಫೀಸಿನಲ್ಲಿನ ನಿತ್ಯ ಕೆಲಸ. ಅದೆರೆಡೆಯಲ್ಲಿ  ಹಳೇ ಬಾಯ್್ಫ್ರೆಂಡ್್ನ ನೆನಪುಗಳು, ಹೊಸ ಲೇಖನಗಳು, ಒಂದಿಷ್ಟು ಸಂದರ್ಶನಗಳು, ಕರೆನ್ಸಿ ಖಾಲಿಯಾಗುವ ತನಕ ಮಾತನಾಡುವ ಫ್ರೆಂಡ್ಸ್್ಗಳು, ಪಿಜಿಯಲ್ಲಿನ ಹೊಸ ಜಗಳಗಳು, ಅಪ್ಪ ಅಮ್ಮನ ಉಪದೇಶಗಳು ಹೀಗೆ 'ಗಳು' ಜತೆ ಬೆಂಗಳೂರಿನಲ್ಲಿ ಲೈಫು ಇಷ್ಟೇನೆ ಅಂತಾ ಸಾಗುತ್ತಿತ್ತು ದಿನಗಳು. ಅಬ್ಬಾ ...ಊರು ಬಿಟ್ಟು ಈ ಮಾಯಾನಗರಿಗೆ ಬಂದು 2 ವರ್ಷಗಳು ಕಳೆಯಿತಲ್ವಾ ಎಂದು ಅಚ್ಚರಿಯಾಗುತ್ತಿದೆ. ಮೊದಲು ಇಲ್ಲಿಗೆ ಬಂದಾಗ ಆಫೀಸಿನಿಂದ ಪಿಜಿಗೆ ಹೋಗಬೇಕಾದರೆ ಅದೆಷ್ಟು ಕನ್್ಫ್ಯೂಸ್ ಮಾಡಿಕೊಳ್ಳುತ್ತಿದ್ದೆ ಗೊತ್ತಾ. ಅದಿರಲಿ, ಬೇರೆ ಯಾವುದಾದರೂ ಜಾಗಕ್ಕೆ ಹೋಗಿ ಅಡ್ರೆಸ್ ಕೇಳಿದ್ರೆ ಸಿಗುತ್ತಿದ್ದ ಉತ್ತರ 'ಡೋಂಟ್ ನೋ'. ಏನಪ್ಪಾ ಈ ಬೆಂಗಳೂರಿನವರು ಎಲ್ಲದಕ್ಕೂ 'ಡೋಂಟ್ ನೋ' ಅಂತಾ ಹೇಳ್ತಾರಲ್ವ ಅಂತಾ ಸಿಟ್ಟು ಬರುತ್ತಿತ್ತು. ಚೆನ್ನೈಯಲ್ಲಿ ನನಗೆ ಭಾಷೆ ತಿಳಿಯದಿದ್ದರೂ ಆರಾಮವಾಗಿ ಅಲ್ಲಿ ಇಲ್ಲಿ ಅಡ್ಡಾಡಿದ್ದೆ. ಆದರೆ ಇಲ್ಲಿ ಭಾಷೆ ಗೊತ್ತಿದ್ದರೂ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗಬೇಕಾದರೆ ಕಷ್ಟ ಕಷ್ಟ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (12 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮರೆತೇನೆಂದರೆ ಮರೆಯಲಿ ಹ್ಯಾಂಗ!? ....

ನಾನು ತುಂಬಾ ಬಾರಿ ಭೂತವನ್ನು ಬೆನ್ನುಹತ್ತಿ ಹೋಗಿದ್ದೇನೆ. ಭೂತ ನನಗೆ ಯಾವತ್ತೂ ಹೆದರಿಸುವ ಕೆಲಸ ಮಾಡಿಲ್ಲ. ಅದರ ಜೊತೆಗಿನ ಅನುಭವ ಸುಮಧುರವಾಗಿದೆ. ಮತ್ತೆ.. ಮತ್ತೆ.. ಭೂತ ನನ್ನ ಮಾತನಾಡಿಸಿದೆ. ತಪ್ಪು ತಿಳಿಯಬೇಡಿ, ನಾನು ಮಾತನಾಡುತ್ತಿರುವದು ನಮ್ಮನ್ನು ಸದಾ ಕಾಡುವ ಭೂತ ಕಾಲದ ಬಗ್ಗೆ. ನನ್ನ ಕಳೆದ ಮಾಸಿದ ಮಧುರ ಅನುಭವಗಳನ್ನು ಮೆಲಕು ಹಾಕಿದ್ದೇನೆ. ನನಗೆ ತುಂಬಾ ಇಷ್ಟವಾಗುವ ಧಾರಾವಾಹಿ ಎಂದರೆ ವಿಕ್ರಮ್ ಬೆತಾಳ್. ಏಕೆಂದರೆ ಪ್ರತಿ ಬಾರಿ ನಾನು ಕಳೆದ ಮಧುರ ಕ್ಷಣಗಳ ಭೂತವನ್ನು ಹೊತ್ತು ತರುತ್ತೇನೆ. ಮತ್ತೆ ಅದರ ಜೊತೆ ಒಂದು ನೀತಿ ಪಾಠವನ್ನು ಕೂಡ ಕಲೆತಿರುತ್ತೇನೆ. ನಾನು ಅದನ್ನು ಬಿಟ್ಟು ಬಿಡುತ್ತೇನೆ. ಮತ್ತೆ ಅದರ ಹಿಂದೆ ಹೋಗಿ ಮತ್ತೊಂದು ಹೊಸ.. ಹೊಸ.. ಕಥೆಗಳನ್ನು ಹೊತ್ತ ಭೂತವನ್ನು ಹೆಗಲ ಮೇಲೆ ಕುಳ್ಳಿರಿಸಿ ಮುಂದೆ ನಡೆಯುತ್ತೇನೆ. ಇದು ನಿರಂತರವಾಗಿ ನಡೆಯುವ ಕ್ರಿಯೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ರುಕ್ಮಿಣಿ( ರೊಕ್ಕಾ + Money), ಮತ್ತು ಸತ್ಯ ಭಾಮೆ ....

ಸದಾ ಟ್ರ್ಯಾಫಿಕ್ ಫುಲ್ಲ್ ಇರೋ ನನ್ನ ಬಾಯಿಗೆ ರೆಡ್ ಸಿಗ್ನಲ್ ಹಾಕಿದ್ದಳು ನನ್ನ ಹೆಂಡತಿ. ಸಿಗ್ನಲ್ ಇಲ್ಲದೇ ಸರಾಸ್‌ಗಾಟವಾಗಿ ತಿಂಡಿ-ತಿನಿಸುಗಳು ಹೋಗುವ ನನ್ನ ಬಾಯಿಗೆ ಬೀಗ ಬಿದ್ದಿತ್ತು. ಏನೇ? ಇವತ್ತು ಉಪವಾಸ ಎಂದೆ. ದೇವರಿಗೆ ಪೂಜೆ ಆದ ಮೇಲೆನೇ ತಿಂಡಿ , ಊಟ ಎಲ್ಲಾ ಎಂದಳು. ಐದು ವರ್ಷದಲ್ಲಿ ಇರಲಾರದ ನೀತಿ ನಿಯಮ ಏನೇ ಇದು ಕರ್ಮ ಎಂದೆ. ನೀವು ಈ ನೀತಿ ನಿಯಮ ಮಾಡಲಾರದಕ್ಕೆ ನಿಮಗೆ ಹೀಗೆ ಆರೋಗ್ಯ ಸರಿ ಇರುವದಿಲ್ಲ ಎಂದಳು. ನಾನು ಏನು ತಿನ್ನದೇ ಇದ್ದರೆ ಆರೋಗ್ಯದ ಗತಿ ಏನು ಎಂದೆ. ಎಲ್ಲಾ ನಿಮ್ಮ ಆರೋಗ್ಯದ ದೃಷ್ಟಿಯಿಂದನೆ ಮಾಡುತ್ತಾ ಇರುವದು ಎಂದು ದಬಾಯಿಸಿದಳು. ಇವತ್ತು ಬೇರೆ ಶನಿವಾರ ಹೇಗಾದರೂ ಮಾಡಿ ಆಫೀಸ್ ಗೆ ಹೋಗಿಬಿಟ್ಟರೆ ಸಾಕು ತಾನೇ ಎಲ್ಲ ಸಿಗುತ್ತೆ ಎಂದು ಯೋಚಿಸಿ, ಇವತ್ತು ಸ್ವಲ್ಪ ಕೆಲಸ ಇದೆ ಆಫೀಸ್ ಹೋಗಬೇಕು ಎಂದೆ. ಸುಮ್ಮನೇ ರೈಲು ಬಿಡಬೇಡಿ ಎಂದಳು. ಹಳೆಯ ಒಂದು ಮಿಂಚಂಚೆ ತಾರೀಖು ಬದಲಿಸಿ ಅವಳಿಗೆ ತೋರಿಸಿದೆ. ಆಯಿತು ಹೋಗಿ ಬನ್ನಿ, ಆದರೆ ಆಫೀಸ್ ನಲ್ಲಿ ಏನು ತಿನ್ನ ಬೇಡಿ ಎಂದಳು. ಆಯಿತು ಎಂದು ಖುಶಿಯಿಂದ ನನ್ನ ಗಾಡಿ ಸ್ಟಾರ್ಟ್ ಮಾಡಿ ಆಫೀಸ್ ಹೋದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ

ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು ಎಂದು ಯೋಚಿಸುತ್ತಿದ್ದೆ. ಆದರೆ ಸೂರ್ಯನಿಗಿಂತ ಬೇಗ ಎದ್ದರೆ, ಸೂರ್ಯನ ಕರ್ತವ್ಯ ನಿಷ್ಟೆ ನಾನು ಹಾಳು ಮಾಡಿದ ಪಾಪ ನನಗೆ ಯಾಕೆ ಎಂದು ಸುಮ್ಮನಿದ್ದೆ. ದಿನಾಲೂ ಸೂರ್ಯ ಎದ್ದಮೇಲೆಯಾದರೂ ಏಳಬೇಕು ಎಂದು. ಆದರೆ ನನ್ನ ಕರ್ಮಕ್ಕೆ ಆ ಜ್ಯೋತಿಷಿ ಮನೋಜ ಬೆಳಗಿನ ಜಾವದ ಕನಸು ನನಸು ಆಗುತ್ತೆ ಕಣೋ ಎಂದು ಹೇಳಿದ್ದ. ದಿನಾಲೂ ಬೆಳಗಿನ ಜಾವದಲ್ಲಿ ಯಾವುದಾದರೂ ಒಳ್ಳೆಯ ಸುಂದರಿಯ ಕನಸು, ಇಲ್ಲ ಫಾರಿನ್ ನಲ್ಲಿ ಇದ್ದ ಹಾಗೆ ಕನಸು ಹೀಗೆ ಮಜ.. ಮಜ.. ಕನಸುಗಳು. ಎದ್ದರೆ, ಕನಸು ಹಾಳಾಗುತ್ತೆ ಎಂಬ ಭಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಿಹಿ ಮೊಗ್ಗೆ ಅರಳಿದಾಗ ....

ಬಳ್ಳಾರಿ ಸುಮಧುರ ನೆನಪಿನೊಂದಿಗೆ(http://sampada.net/blog/gopaljsr/21/02/2010/24120) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ ತುಂಬಾ ದಿನಗಳು ಆಗಿತ್ತು. ಅದನ್ನು ತೆಗೆದು ಕೊಂಡು ಬಂದಿದ್ದರು ಎನೂ ಪ್ರಯೋಜನ ಆಗುತ್ತಿರಲಿಲ್ಲ. ಏಕೆಂದರೆ ಅಷ್ಟು ಸುಮಧುರ ಪರಿಮಳ ಸೂಸುತಿತ್ತು. ಆಗ ತಾನೇ ಬೀಳುತ್ತಿದ್ದ ಮಂಜಿನ ಹನಿಗಳು ಮತ್ತು ಚಿಲಿಪಿಲಿ ಕಲರವ ನನಗೆ ಎಬ್ಬಿಸಿತ್ತು. ಎಚ್ಚರವಾದಾಗ ಶಿವಮೊಗ್ಗ ತಲುಪ್ಪಿದ್ದೆ. ಆ ಮಾಗಿಯ ಚಳಿಗೆ ನಾನು ನಡುಗುತ್ತಾ ಒಂದು ಕಪ್ ಕಾಫಿ ಹಿರಿ ಡೈರಿ ಬಸ್ ಹತ್ತಿದೆ.

ಹರ್ಷ ಅಗಲೆ ನನ್ನನ್ನು ಕಾಯುತ್ತಿದ್ದರು. ಡೈರಿಯವರೇ ನಮಗೆ ಒಂದು ಕ್ವಾರ್ಟರ್ಸ್(ಎಣ್ಣೆ ಅಲ್ಲ) ಕೊಟ್ಟಿದ್ದರು. ತುಂಬಾ ಚೆನ್ನಾಗಿ ಇತ್ತು ನಮ್ಮ ಕ್ವಾರ್ಟರ್ಸ್. ನಾನು ತುಂಬಾ ದಣಿವಾಗಿದ್ದರಿಂದ ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆ. ಆಗ ಮಂಜುನಾಥ್ ಎದ್ದು ರೆಡೀ ಆಗಿ ಆಫೀಸ್ ಹೊರಡಲು ಅನುವಾದರೂ. ನಾನು ಮತ್ತೆ ಹರ್ಷ ಇನ್ನೂ ಮಲಗಿದ್ದೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

'ಸ್ವಂತಿಕೆ'ಯ ಅನುಭವ ಅನುಭವಿಸಿದವನೇ ಬಲ್ಲ...

ಇಂದು ಬೆಳಗ್ಗೆ ಊರಿನಿಂದ ನನ್ನ ಸ್ನೇಹಿತ ಫೋನ್ ಮಾಡಿದಾಗ 'ಏನ್ ಮಾರಾಯ್ತಿ ಈವಾಗ ಏನೂ ಬರೆಯಲ್ವಾ?' ಅಂತಾ ಕೇಳಿದ್ದ. "ಸಿಕ್ಕಾಪಟ್ಟೆ ಬ್ಯುಸಿ ಮಾರಾಯಾ. ಆಫೀಸಿನಲ್ಲೇ ದಿನ ಪೂರ್ತಿ ಕಳೆದು ಹೋಗುತ್ತೆ. ಇನ್ನು ಬ್ಲಾಗ್ ಬರೆಯೋಕೆ ಸಮಯವೇ ಸಾಕಾಗ್ತಾ ಇಲ್ಲ" ಅಂತಾ ಹೇಳಿದ್ದೆ.
ನಿಜವಾಗಿಯೂ ನನ್ನ ಬ್ಲಾಗ್ ಅಪ್್ಡೇಟ್ ಆಗದೆ ತುಂಬಾ ಸಮಯ ಆಯ್ತು. ಏನಾದರೂ ಬರೆಯಬೇಕು ಅಂತ ಕುಳಿತುಕೊಂಡರೆ ಏನು ಬರೆಯಬೇಕು ಅಂತಾನೇ ಗೊತ್ತಾಗಲ್ಲ. ಯಾವ ವಿಷಯ ಬರೆಯ ಬೇಕು ಎಂದು ಯೋಚಿಸುತ್ತಲೇ ಆ ದಿನ ಕಳೆದು ಹೋಗುತ್ತದೆ. ಆಫೀಸಿಗೆ ಹೋದ ನಂತರ ಏನಾದರೂ ಬರೆಯಬೇಕು ಎಂದು ಯೋಚಿಸಿಕೊಂಡೇ ಪಿಜಿಯಿಂದ ಹೊರಡುತ್ತೇನೆ. ಆದರೆ ಆಫೀಸಿಗೆ ಬಂದ ಮೇಲೆ ಈ ಯೋಚನೆಗಳ್ಯಾವುದೂ ಅಕ್ಷರ ರೂಪಕ್ಕೆ ಇಳಿಯುವುದಿಲ್ಲ ಎಂಬುದು ಸತ್ಯ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೀರೆಯಲ್ಲಿರುವ ನೀರೆ ....

ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು. ಎರಡು ದಿನಗಳ ಹಿಂದೆ ಅಷ್ಟೇ ಮಹಾ ಸಂಗ್ರಾಮ ನಡೆದಿತ್ತು. ನೀನು ತವರು ಮನೆಗೆ ಹೋಗಬೇಡ ಎಂದು ಹೇಳಿದರು ಕೇಳಿರಲಿಲ್ಲ. ಸುಮ್ಮನೇ ಅವಳ ಮೇಲೆ ನನಗೆ ಎಷ್ಟು ಪ್ರೀತಿ ಎಂದು ತೋರಿಸಲು ಈ ಪೂರ್ವನಿಯೋಜಿತ ಸಂಗ್ರಾಮಕ್ಕೆ ನಾಂದಿ ಹಾಡಿದ್ದೇ. ನನಗೂ ಒಳಗೊಳಗೆ ಖುಷಿ, ಒಬ್ಬನೇ ಸಕ್ಕತ್ ಮಜಾ ಮಾಡಬಹುದು ಎಂದು. ಹೆಂಡತಿ ತವರು ಮನೆಗೆ ಹೋಗುತ್ತಾಳೆ ಎಂದರೆ ಯಾರಿಗೆ ತಾನೇ ಖುಷಿ ಇಲ್ಲ ನೀವೇ ಹೇಳಿ. ಇದೆಲ್ಲವೂ ನಮ್ಮ ಮಂಜ ಹೇಳಿ ಕೊಟ್ಟ ಟ್ರಿಕ್ಸ್.ಅದನ್ನು ನನ್ಮಗ ಮಂಜ ಟಿಪ್ಸ್(ಎಣ್ಣೆ ಪಾರ್ಟೀ) ಕೊಟ್ಟ ಮೇಲೆ ಟ್ರಿಕ್ಸ್ ಹೇಳಿಕೊಟ್ಟಿದ್ದ. ಮಂಜ ತನ್ನ ಮಡದಿಗೆ, ಗೊತ್ತು ಆಗಬಾರದು ಎಂದು ಕೆಮ್ಮಿನ ಔಷಧ ಬಾಟಲಿಯಲ್ಲಿ ಬ್ಲ್ಯಾಕ್ ಲೇಬಲ್ ಇಟ್ಟು ಕೊಂಡಿದ್ದಾನೆ. ಸುಮ್ಮನೆ ಕೆಮ್ಮಿದ ಹಾಗೆ ಮಾಡಿ ಅದನ್ನು ದಿನ ಸ್ವಾಹಾ ಮಾಡುತ್ತಾನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಮ್ಮನೆ ಕೆಲಸದವಳು

ಮನೆ ಕೆಲಸದವಳು ಕೆಲಸ ಬಿಟ್ಟಿದ್ದು, ನನಗೂ ಅಮ್ಮನಿಗೂ ತಲೆನೋವಾಗಿತ್ತು.  ಎಲ್ಲಾ ಕೆಲಸಗಳನ್ನು ಇಬ್ಬರೇ ಮಾಡಿಕೊಳ್ಳುತ್ತಿದ್ದೆವು.  ಆಗೊಬ್ಬಳು ಕೆಲಸಕ್ಕೆ ಸೇರಿಕೊಂಡಳು.  ನೋಡಲು ಬಹಳ ನೀಟಾಗಿದ್ದಳು.  ಮನದಲ್ಲಿ ಇವಳಿಗೆ ಮನೆಕೆಲಸಕ್ಕೆ ಬರುವಂತಹ ಅನಿವಾರ್ಯತೆ ಏನಿರಬಹುದು? ಅನ್ನೋ ಕುತೂಹಲ ನನಗೆ.  ಇಷ್ಟು ದಿನಗಳಲ್ಲಿ ಗಂಡ ಸರಿಯಿಲ್ಲ, ಅದೂ, ಇದೂ ಅಂತಾ ಕೇಳಿರುವ ನನಗೆ, ಇವಳ ಮನೆ, ಕಷ್ಟದ ಕಥೆ ಏನಿರಬಹುದು? ಅನ್ನೋ ಕುತೂಹಲ.  ಮದುವೆಯಾಗಿದೆ. ಮೂವರು ಗಂಡು ಮಕ್ಕಳು ಅಂದಳು. ದೊಡ್ಡವನಿಗೆ ೯ ವರ್ಷ, ಮಧ್ಯದವನು ೭, ಚಿಕ್ಕವನಿನ್ನೂ ೪ ವರ್ಷ ಅಂದಳು.  ನಾನದಕ್ಕೆ ಎರಡು ಗಂಡುಮಕ್ಕಳಿದ್ದರಲ್ವೇ? ಮತ್ಯಾಕೆ ಮೂರನೆಯದು? ಅಂದೆ.  ಅದಕ್ಕೆ ಅವಳು ’ಏನಕ್ಕಾ? ಹೀಗಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೊಡ್ಡವರಾಗುವುದೆಂದರೆ....?

"ಮಗಳು ದೊಡ್ಡವಳಾಗಿದ್ದಾಳೆ" ಎಂದು ಮಾವನ ಮನೆಯಿಂದ ಕರೆ ಬಂದಾಗ, ನನ್ನ ಅಪ್ಪ ಅಮ್ಮ ಎಲ್ಲರೂ ಸ್ವೀಟ್ಸ್ ತೆಗೊಂಡು ಮಾವನ ಮನೆಗೆ ದೌಡಾಯಿಸಿದ್ದು ಈಗಲೂ ನೆನಪಿದೆ. ಆವಾಗ ನಾನು ತುಂಬಾ ಚಿಕ್ಕವಳು. ಅಕ್ಕ (ಮಾವನ ಮಗಳು) ದೊಡ್ಡವಳಾಗಿದ್ದಾಳೆ ಎಂದು ಗಡದ್ದಾಗಿ ಫಂಕ್ಷನ್ ಮಾಡಿದಾಗ, ಅವಳಿಗೆ ಸಿಕ್ಕಿದ ಉಡುಗೊರೆ, ಸ್ವೀಟ್ಸ್ ಎಲ್ಲಾ ನೋಡಿ ಇದೆಲ್ಲಾ  ಯಾಕೆ ಮಾಡ್ತಾರೆ ಅಂತಾ ಅಮ್ಮನಿಗೆ ಕೇಳಿದ್ದೆ. ಅವಳು ದೊಡ್ಡವಳಾಗಿದ್ದಾಳೆ ಎಂದು ಅಮ್ಮ ಹೇಳಿದಾಗ, ಅಕ್ಕ ಮೊದಲಿನಂತೆಯೇ ಇದ್ದಾಳೆ. ಉದ್ದನೂ ಆಗಿಲ್ಲ, ದಪ್ಪನೂ ಆಗಿಲ್ಲ. ಮೊದಲ ಬಾರಿ ಸಾರಿ ಉಟ್ಟು ಮದುಮಗಳಂತೆ ಕಾಣಿಸ್ತಾ ಇದ್ಳು. ಅದು ಬಿಟ್ರೆ ಬೇರೇನೂ ವ್ಯತ್ಯಾಸ ನನಗೆ ಗೊತ್ತಾಗಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪಿನಾಳದಿ೦ದ.....೧೨......ಅಕ್ಕನ ಸಾವಿನ ಮರುದಿನ!

ಅನಿರೀಕ್ಷಿತವಾಗಿದ್ದ ಅಕ್ಕನ ಸಾವಿನಿ೦ದ ಏನು ಮಾಡಬೇಕೆ೦ದೇ ತೋಚದಾಗಿದ್ದ ನಾನು ಆಸ್ಪತ್ರೆಯ ಪಕ್ಕದಲ್ಲಿದ್ದ ಆ ವೈನ್ ಶಾಪಿಗೆ ಮತ್ತೆ ಬ೦ದು ಮೂರನೆಯ ಕ್ವಾರ್ಟರ್ ಬ್ಯಾಗ್ ಪೈಪರನ್ನು ಅನಾಮತ್ತಾಗಿ ಎತ್ತುವಾಗ ಆ ಕ್ಯಾಷಿಯರ್ ನನ್ನನ್ನೇ ವಿಚಿತ್ರ ಪ್ರಾಣಿಯ೦ತೆ ನೋಡುತ್ತಿದ್ದುದನ್ನು ಗಮನಿಸಿದ ನಾನು ಅವನ ಮೂತಿಗೊ೦ದು ಗುದ್ದಿ, ಅವನ ಬಿಲ್ಲು ತೆತ್ತು ಹೊರಬ೦ದೆ.  ನನ್ನೊಳಗೆ ಜಾಗೃತನಾಗಿದ್ದ ಆ ರಾಕ್ಷಸ ನನ್ನನ್ನು ಕೆಕ್ಕರಿಸಿ ನೋಡಿದವರಿಗೆಲ್ಲ ಗುದ್ದುವ೦ತೆ ನನ್ನನ್ನು ಪ್ರೇರೇಪಿಸುತ್ತಿದ್ದ.  ಪಕ್ಕದಲ್ಲಿದ್ದ ಎಸ್.ಟಿ.ಡಿ.ಬೂತಿನೊಳ ಹೋಗಿ ಎಲ್ಲರಿಗೂ ಫೋನ್ ಮಾಡಿ ಅಕ್ಕನ ಸಾವಿನ ಸುದ್ಧಿ ತಿಳಿಸಿ, ಮೈಸೂರಿನಲ್ಲಿದ್ದ ಅಕ್ಕನ ದೊಡ್ಡ ಮಗಳನ್ನು ಖುದ್ದಾಗಿ ಕರೆ ತರುವ೦ತೆ ನನ್ನ ಮೈಸೂರು ಮಾಮನಿಗೆ ಭಿನ್ನವಿಸಿದೆ.  ಘ೦ಟೆ ಅದಾಗಲೇ ಹತ್ತಾಗಿತ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಿಗ್ನಲ್ !!!

"ಹೇ ನಡೀಲೆ, ಪೋಲೀಸು ಯಾರದೋ ಜೊತೆ ಮಾತಾಡ್ತಾಯಿದ್ದಾರೆ, ಯಾವ ಗಾಡೀನು ಬರ್ತಾಯಿಲ್ಲ"

ಇನ್ನೂ ರೆಡ್ ಸಿಗ್ನಲ್ ಇದ್ದಿದ್ರೂ ಹೋಗು ಅಂತ ಮಿತ್ರ ಪುಸಲಾಯಿಸುತ್ತಿದ್ದ. "ಗ್ರೀನ್ ಸಿಗ್ನಲ್ ಬರ್ಲಿ ತಾಳು" ಅಂದರೆ, "ಅದೇನ್ ಹೆದರ್ತಿಯೋ ಪೋಲೀಸ್ ಕಂಡ್ರೆ" ಅಂತ ಒಂದೆ ಸಮನೆ ಗೊಣಗುತ್ತಲೆ ಇದ್ದ. ಜೊತೆಗೆ ಹಿಂದುಗಡೆಯಿಂದ ಹಾರ್ನ್ ಬೇರೆ. ಇನ್ನೂ ಗ್ರೀನ್ ಸಿಗ್ನಲ್ ಬರದಿದ್ದರೂ ಅದೇನ್ ಅವಸರ ಅಂತಿರಾ ಇವರಿಗೆಲ್ಲಾ ಅಂತ ಅಂದುಕೊಳ್ಳುವಷ್ಟರಲ್ಲಿ ಹಳದಿ ದೀಪ ಬಂತು, ಅದು ಮೂಡೋದೆ ತಡ ಎಷ್ಟೊಂದು ಜನ ಮನೆಗೆ ಬೆಂಕಿ ಹತ್ತಿದಾಗ ಸತ್ನೋ-ಬಿದ್ನೋ ಅಂತ ರಾಕೆಟ್ ವೇಗದಲ್ಲಿ ಗಾಳಿಯನ್ನು ಸೀಳಿಕೊಂಡು ಹೋಗೋ ಹಾಗೆ ಹೋದ್ರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

ಕೃಷ್ಣಸುಂದರಿಯ ಬಳಿಯಲ್ಲಿ

ಅವರ ಮನೆಯ ಕಡೆ ಹೆಜ್ಜೆ ಇಡುತ್ತಿದಂತೆಯೇ ನನ್ನ ಕಾಲೆಲ್ಲಾ ಕಣ್ಣಾಗಿತ್ತು. ಒಂದು ರೀತಿಯ ಅಳುಕು, ಭಯ ನನ್ನೆದಯನಾವರಿಸಿತ್ತು. ದಾರಿಯ ಅಕ್ಕ ಪಕ್ಕದ ಪೊದೆಯಲ್ಲಿ ಏನಾದರೂ ಮಿಸುಕಾಡಿದರೂ ಸಾಕು ಅಪ್ರಯತ್ನ ಪೂರ್ವಕವಾಗಿ ಮೈ ರೋಮ ನಿಮಿರಿ, ಭಯದ ರೋಮಾಂಚನವನ್ನುಂಟುಮಾಡಿತ್ತು. ಮನೆಯ ಕದ ತಟ್ಟುತ್ತಿದಂತೆಯೇ ನನ್ನ ಹೃದಯದ ಬಡಿತದ ಸದ್ದೂ ಅದರೊಡನೆ ಮಿಳಿತಗೊಂಡು ತಾಳ ಹಾಕಿದಂತೆ ಭಾಸವಾಯಿತು. ಒಳಗಡೆಯಿಂದ "ಯಾರು" ಎಂಬ ಹೆಂಗಸೊಬ್ಬರ ದನಿಗೆ ಮಾರುತ್ತರ ಕೊಡಲೂ ಬಾಯಿ ಒಣಗಿದಂತಾಗಿತ್ತು. ಆಕೆಯ ಹೆಜ್ಜೆ ಬಾಗಿಲ ಹತ್ತಿರ ಹತ್ತಿರ ಬರುತ್ತಿದ್ದಂತೆ ನನ್ನೊಳಗಿನ ಭಯ ನೂರ್ಮಡಿಸಿತು. ಬಾಗಿಲು ತೆರೆದ ಕೂಡಲೇ ಅದು ನನ್ನ ಮೇಲೆ ನುಗ್ಗಿ ಬಂದರೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (7 votes)
To prevent automated spam submissions leave this field empty.

ಹೀಗೊಂದು ದೆವ್ವದ ಕಥೆ - ಹೆದರಬೇಡಿ

ನಮ್ಮದು ವಟಾರದ ಮನೆ. ಅಕ್ಕಪಕ್ಕದಲ್ಲಿ ಇರುವವರೆಲ್ಲಾ ಚಿಕ್ಕಪ್ಪ ದೊಡ್ಡಪ್ಪಂದಿರು. ಎಲ್ಲರೂ ಓಡಾಡುವುದಕ್ಕೆ ಓಣಿ ಇದೆ. ಇಲ್ಲಿ ದೊಡ್ಡಪ್ಪ ಕಟ್ಟಿಗೆ ಹಾಕಿದ್ದಾರೆ. ನಾವೊಂದಿಷ್ಟು ಗಿಡಗಳನ್ನು ಹಾಕಿದ್ದೇವೆ. ಮುಂದೆ ದೊಡ್ಡ ಬಾವಿ ಇದೆ. ಹತ್ತಾರು ವರ್ಷಗಳ ಹಿಂದೆ ಇದರಲ್ಲಿ ಕೆಲವರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮ್ಮ ಬದುಕಿದ್ದಾಗ, ನಮ್ಮಲ್ಲಿ ಚಂಡಿ ಸಾಕಿದೀವಿ. ಅದು ಬೀಳೆ ಸೀರೇ ಉಡ್ಕೊಂಡು ರಾತ್ರಿಯೆಲ್ಲಾ ಓಡಾಡುತ್ತೆ. ಹಾಗೇ ನಿಮ್ಮ ದೊಡ್ಡಪ್ಪ ಸಾಯುವಾಗ ಅವರ ಇನ್ನೂ ಆಸೆ ತೀರಲಿಲ್ಲ. ಅವರೂ ಓಡಾಡುವ ಸಾಧ್ಯತೆ ಇದೆ. ಬಾವಿಯಲ್ಲಿ ಬಿದ್ದಿರೋರು ದೆವ್ವಾ ಆಗಿರೋ ಅವಕಾಶಗಳು ಹೆಚ್ಚು. ಹಂಗೆಲ್ಲಾ ರಾತ್ರಿ ಹೊತ್ತು ಹೊರ ಹೋಗಬೇಡ ಅನ್ನುತ್ತಿದ್ದಳು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (15 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನೂ ನನ್ನ ಸ್ವಂತ ಕನಸು...

ಶೀರ್ಷಿಕೆ ನೋಡಿದ ಕೂಡಲೇ ಪ್ರಕಾಶ್ ರೈ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ ಅಂತಾ ತಿಳಿದುಕೊಳ್ಳಬೇಡಿ. ಅದಕ್ಕೆ 'ಸ್ವಂತ 'ಎಂಬ ಪದವನ್ನು ತುರುಕಿಸಿದ್ದು. ಆ ಚಿತ್ರ ವೀಕ್ಷಿಸಿದಾಗ ಎಲ್ಲರಂತೆ ನನಗೂ ನನ್ನ ಅಪ್ಪನ ನೆನಪು ತುಂಬಾ ಕಾಡಿತ್ತು. ನನ್ನ ಪಪ್ಪ ಅಂದ್ರೆ ಹಾಗೇನೇ...ತುಂಬಾ ಸ್ವೀಟ್. ಪಪ್ಪನ ಮುದ್ದಿನ ಮಗಳು ನಾನು. ತನ್ನ ತಮ್ಮ ಅಮ್ಮನ ಸೀರೆ ಸೆರಗು ಹಿಡಿದು ಓಡಾಡುತ್ತಿದ್ದರೆ, ಅಪ್ಪನೇ ನನ್ನ ಬೆಸ್ಟ್ ಫ್ರೆಂಡ್. ನನಗೆ ಎರಡು ವರ್ಷವಿರುವಾಗಲೇ ನಾನು ಅಪ್ಪನ ಎದೆಗೆ ಅಂಟಿಕೊಂಡು ನಿದ್ದೆಹೋಗುತ್ತಿದ್ದೆ. ಅಮ್ಮನ ಗೊಡವೆಯೇ ಇಲ್ಲ, ಅವಳಿಗೆ ಅಪ್ಪ ಮಾತ್ರ ಸಾಕಿತ್ತು ಎಂದು ಅಮ್ಮ ಈಗಲೂ ನನ್ನ ಬಾಲ್ಯವನ್ನು ನೆನಪಿಸುತ್ತಾರೆ. ಆ ಬಾಲ್ಯವೇ ಅಂತದ್ದು, ಎಲ್ಲದಕ್ಕೂ ನಂಗೆ ಪಪ್ಪ ಬೇಕು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವೈದ್ಯೋ ನಾರಾಯಣೋ ................. ಯಮಃ ?

    ಅರೇ ಇದೆಲ್ಲಾ ಯಾಕೆ ನೆನಪಿಗೆ ಬರುತ್ತಾ ಇದೆ ಇವತ್ತು ಅರ್ಥವಾಗಲಿಲ್ಲ. ನಾನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಬೋನ್ಸಾಯ್ ಆಲ ಇನ್ನಿಲ್ಲವಾಗಿತ್ತು.ಎಷ್ಟುದಿನದಿಂದ ಅದರ ಬೇರು ಒಳಗೊಳಗೇ ಕೊಳೆಯುತ್ತಿತ್ತೋ ಗೊತ್ತಾಗಲೇ ಇಲ್ಲ.ನಲುವೂ ನೀರೂ ಸರಿಯಾಗಿಯೇ ಕ್ಲುಪ್ತ ಸಮಯದಲ್ಲಿ ಹಾಕುತ್ತಿದ್ದೆ. ಎರಡು ವರ್ಷಕ್ಕೊಮ್ಮೆ ಅದರ ಕುಂಡ ಸಹಾ ಬದಲಿಸುತ್ತಿದ್ದೆ, ಕಾಲಕಾಲಕ್ಕೆ ಔಷಧ ಸಹಾ, ಆದರೂ ಏನಾಯಿತೋ ಗೊತ್ತಿಲ್ಲ, ಬೇರು ಕೊಳೆತು...... ಅಕಾಸ್ಮಾತ್ತಾಗಿ ಇವತ್ತೇ ಗೊತ್ತಾಯ್ತು, ಮೊದಲೇ ಗೊತ್ತಾಗಿದ್ದರೆ ಏನಾದ್ರೂ ಮಾಡಬಹುದಿತ್ತೊ ಏನೊ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೇಸಿಗೆ ರಜಾ ಮಸ್ತ್ ಮಜಾ....

ಇನ್ನೇನು ಪರೀಕ್ಷೆಗಳೆಲ್ಲಾ ಮುಗಿದು ಎರಡು ತಿಂಗಳು ರಜಾ. ಏಪ್ರಿಲ್, ಮೇ ತಿಂಗಳಲ್ಲಿ ಸಿಗುವ ಬೇಸಿಗೆ ಕಾಲದ ರಜೆಯಾದರೂ ಆ ರಜೆಯಲ್ಲಿನ ಗಮ್ಮತ್ತೇ ಬೇರೆ. ರಜೆಯ ಮಜಾ ಸವಿಬೇಕಾದರೆ ಹಳ್ಳಿಯಲ್ಲಿ ಹುಟ್ಟಬೇಕು ಎಂಬುದು ನನ್ನ ಅಭಿಪ್ರಾಯ. ಹಳ್ಳಿಯಲ್ಲಿ ರಜಾ ಕಾಲ ಕಳೆದವರಿಗೇ ಗೊತ್ತು ಅದರ ಮಜಾ ಏನೆಂದು. ನಗರದಲ್ಲಿ ಬೆಳೆದ ಸಂಬಂಧಿಕರ ಮಕ್ಕಳು ಈ ರಜಾ ಬಂದ ಕೂಡಲೇ ಸ್ವಿಮಿಂಗ್ ಕ್ಲಾಸು, ಕರಾಟೆ ಕ್ಲಾಸು ಅಂತಾ ಬ್ಯುಸಿಯಾಗಿರುವುದನ್ನು ನೋಡಿದಾಗ ನನ್ನ ಬಾಲ್ಯ ಅದೆಷ್ಟು ಸುಂದರವಾಗಿತ್ತು ಅಂತಾ ಅನಿಸಿ ಬಿಡುತ್ತದೆ. ಶಾಲೆಯ ಹೋಂ ವರ್ಕ್, ಕಾಪಿ ಬರೆಯುವ ತಲೆಬಿಸಿ ಇಲ್ಲ. ಅಂದಿನ ಬೇಸಿಗೆ ರಜಾ ದಿನಗಳೇ ಅಂತದ್ದು. ಏಪ್ರಿಲ್ ಮೇ ತಿಂಗಳಲ್ಲಿ ಸುಡು ಬಿಸಿಲಾದರೂ ನಾವದನ್ನು ಕ್ಯಾರೇ ಮಾಡುತ್ತಿರಲಿಲ್ಲ. ಬೆಳಿಗ್ಗೆ ಎದ್ದು ಅಣ್ಣನ ಜೊತೆ ಸೈಕಲ್ ಸವಾರಿ ಎಷ್ಟು ಮಜಾ ಕೊಡ್ತಿತ್ತು ಗೊತ್ತಾ? ಮನೆಯ ಮುಂದಿರುವ ಮಾವಿನ ಮರದಲ್ಲಿ ಜೋಕಾಲಿ ಆಡಲು, ಮರ ಹತ್ತಿ ಮಂಗನಾಟ ಆಡುವುದು ...ಪೊಟರೆಯಲ್ಲಿ ಇಣುಕಿ ಹಕ್ಕಿ ಮೊಟ್ಟೆ ಇದೆಯಾ ಅಂತಾ ನೋಡುವುದು ಹೀಗೆ ಏನೆಲ್ಲಾ ಕಿತಾಪತಿಗಳು! 

ಆ ಬಾಲ್ಯ ಎಷ್ಟು ಸುಂದರವಾಗಿತ್ತು. ನನ್ನ ಅಣ್ಣ ಓರಗೆಯ ಹುಡುಗರ ಜೊತೆ ಕ್ರಿಕೆಟ್ ಆಡುವಾಗ ಬಾಲ್ ಎಲ್ಲಿ ಯಾವ ಹಿತ್ತಿಲಿಗೆ ಬೀಳುತ್ತದೆ ಎಂದು ನೋಡಿಕೊಳ್ಳುವುದು ನನ್ನ ಕೆಲಸ. ಅಲ್ಲಿ ತಂದಿಟ್ಟ ನೀರಿನ ಕೊಡದ ಪಕ್ಕ ನಾಯಿಯೋ ಕಾಗೆಯೋ ಬಂದರೆ ಅದನ್ನು ಓಡಿಸಬೇಕು, ಕೆಲವೊಮ್ಮೆ ಥರ್ಡ್ ಅಂಪೈರ್ ಥರಾ ಔಟ್ ಹೌದೋ ಅಲ್ಲವೋ ಅಂತಾ ಹೇಳ್ಬೇಕು. ಆದ್ರೂ ಹುಡುಗರೆಲ್ಲ ಕ್ರಿಕೆಟ್ ಆಡುವಾಗ ನಾನು ಹುಡುಗ ಆಗಿರುತ್ತಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಅಂತಾ ಅನಿಸಿ ಬಿಡ್ತಿತ್ತು. ಇನ್ನೇನು ಕೇವಲ ಬ್ಯಾಟ್್ನಷ್ಟೇ ಉದ್ದವಿರುವ ನೀನು ಹೇಗೆ ಬ್ಯಾಟಿಂಗ್ ಮಾಡ್ತೀಯಾ ಅಂತಾ ಅಣ್ಣ ತಮಾಷೆ ಮಾಡಿದಾಗ ಅಪ್ಪ ನನಗಾಗಿಯೇ ಕೊತ್ತಳಿಗೆಯ ಬ್ಯಾಟ್ ಮಾಡಿಕೊಟ್ಟಿದ್ರು. ಹಾಗೆ ನಾನು ಮತ್ತು ಅಪ್ಪ ನಮ್ಮ ಅಂಗಳದಲ್ಲೇ ಕ್ರಿಕೆಟ್ ಆಡ್ತಾ ಇರ್ಬೇರಾದ್ರೆ, ಸೆಗಣಿ ಸಾರಿಸಿದ ಅಂಗಳ ಹಾಳು ಮಾಡ್ಬೇಡಿ ಎಂದು ಅಮ್ಮ ಬೊಬ್ಬೆ ಹಾಕ್ತಿದ್ರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಭಿಮಾನಿಯ ಹರಕೆ ಫಲಿಸಿದಾಗ!

ಚಿನ್ ತೆಂಡೂಲ್ಕರ್ ಅಬ್ಬರದ ಆಟ ಮತ್ತು ದಾಖಲೆಗಳ ಬಗ್ಗೆ ಪತ್ರಿಕೆಗಳಲ್ಲಿ, ಬ್ಲಾಗ್್ಗಳಲ್ಲಿ ಸಾಕಷ್ಟುಜನ ಈಗಾಗಲೇ ಬರೆದಿದ್ದಾರೆ. ಆದರೆ ಸಚಿನ್ ಬಗ್ಗೆ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ವಿಷಯ ಇದ್ದೇ ಇರುತ್ತದೆ. ಇಂದು ಮುಂಜಾನೆ ರಾತ್ರಿ ಪಾಳಿ ಮುಗಿಸಿ ಆಫೀಸಿನಿಂದ ಹೊರಡಬೇಕು ಅನ್ನುವಷ್ಟು ಹೊತ್ತಿಗೆ ಅಂದ್ರೆ 3.30ಕ್ಕೆ ಇಂಡಿಯನ್ ಎಕ್ಸ್್ಪ್ರೆಸ್ ಪತ್ರಿಕೆಯ 15ನೇ ಪುಟದಲ್ಲಿ 20 years ago...ಅಂತಾ ಒಂದು ಸುದ್ದಿ ಓದಿದೆ. ಅದೂ 20 ವರ್ಷಗಳ ಹಿಂದೆ ಸಚಿನ್ ಬರೆದ ಒಂದು ಪತ್ರದ ಸುದ್ದಿ. ಆಗಲೇ ನನಗೆ ಸಚಿನ್ ಬರೆದ ಪತ್ರದ ಬಗ್ಗೆ ಬರೆಯೋಣ ಅಂತಾ ಅನಿಸಿದ್ದು. ಸಚಿನ್ ತೆಂಡೂಲ್ಕರ್್ನ್ನು ಈವರೆಗೆ ಟಿವಿಯಲ್ಲಿಯೇ ನೋಡಿದ್ದು. ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ವರೆಗೂ ಸಚಿನ್ ಆಟಗಳನ್ನು ತಪ್ಪದೆ ನೋಡುತ್ತಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಮ್ಯಾಚ್ ನೋಡೋಕೆ ಸಮಯ ಸಿಕ್ತಾ ಇಲ್ಲ. ಬರೀ ಸುದ್ದಿ ಮಾಡುವುದೇ ಆಯ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪಿನ ಮಳೆಯಲ್ಲಿ...ಮರೆಯಲಾಗದ ದಿನದ ನೆನಪು

ನಾನು ನಿರೀಕ್ಷಿಸಿದ್ದ ದಿನ ಇಷ್ಟು ಬೇಗ ಬಂದು ಬಿಡುತ್ತೆ ಎಂದು ನೆನೆಸಿರಲಿಲ್ಲ. ಕಳೆದ ವರ್ಷದ ಕ್ರಿಸ್್ಮಸ್್ಗೆ ಮುನ್ನ ಊರಿಗೆ ಹೋಗಿದ್ದಾಗ ನಮ್ಮೂರಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜನವರಿ 9, 10ನೇ ತಾರೀಖಿಗೆ ನಡೆಸಲು ನಿಗದಿಯಾಗಿದೆ ಎಂದು ತಿಳಿಯಿತು. ಆವಾಗಲೇ ಈ ಸಾಹಿತ್ಯ ಸಮ್ಮೇಳನದಲ್ಲಿ ನನ್ನ ಕವನ ಸಂಕಲನ ಬಿಡುಗಡೆ ಮಾಡಿದರೆ ಹೇಗೆ? ಎಂಬ ಯೋಚನೆ ಹೊಳೆದದ್ದು. ಅಪ್ಪ ಅಮ್ಮನಲ್ಲಿ ವಿಷಯ ಮಂಡಿಸಿಯಾಯಿತು. ಆದರೆ ಸಾಹಿತ್ಯ ಸಮ್ಮೇಳನಕ್ಕಿರುವುದು ಇನ್ನು ಕೇವಲ 20 ದಿನ. ಇದರಲ್ಲಿ ಕವನ ಸಂಕಲನ ಬಿಡುಗಡೆಯಾಬೇಕು. ಎಲ್ಲಾ ಹೇಗೆ? ಎಂಬ ಚಿಂತೆ ಹೆತ್ತವರಿಗೆ. ಏನೋ ಎಲ್ಲಾ ಸರಿ ಹೋಗುತ್ತೆ ಎಂದು ಕೂಡಲೇ ಚೆನ್ನೈಯಲ್ಲಿರುವ ನನ್ನ ಸಹೋದ್ಯೋಗಿಯಾಗಿದ್ದ ಮಿತ್ರರೊಬ್ಬರಿಗೆ ಫೋನ್ ಮಾಡಿ ವಿಷಯ ಹೇಳಿದೆ. ಅವರು ಕೂಡಲೇ ಸರಿ ನಾನು ಪ್ರಕಾಶಕರಲ್ಲಿ ಮಾತನಾಡುತ್ತೇನೆ ಎಂದು ಹೇಳಿದ್ದೇ ತಡ ಪುಸ್ತಕದ ಬಗ್ಗೆ ಯೋಚನೆ ನಡೆಸಿದೆ. ಪ್ರಕಾಶಕರು ಕವಿತೆ ನೋಡಿದ ಕೂಡಲೇ ಯಸ್ ಅಂದರು. ಆದರೆ ಸಮಯದ ಅಭಾವ ಬೇರೆ. ನಿನಗೆಲ್ಲಾ ಕೊನೆಯ ಗಳಿಗೆಯಲ್ಲೇ ಆಗ್ಬೇಕು. ನಾನು ಪರೀಕ್ಷೆಗೆ ಓದುತ್ತಿದ್ದುದು ಕೂಡ ಪರೀಕ್ಷೆಯ ಮುಂದಿನ ರಾತ್ರಿ. ಅದಕ್ಕೇ ಅಮ್ಮ ಆ ಎಲ್ಲಾ ಪುರಾಣವನ್ನು ಬಿಚ್ಚುತ್ತಿದ್ದರು. ಆದ್ರೆ ಅಪ್ಪ ಕೂಲ್. "ಏನೂ ಆಗಲ್ಲ... ಏಲ್ಲಾ ನೀನು ಅಂದು ಕೊಂಡಂತೆ ಆಗುತ್ತದೆ ಬಿಡು"ಅಂತಾ ಸಮಾಧಾನ ಮಾಡುತ್ತಿದ್ದರು.

ಪ್ರಕಾಶಕರು ಒಪ್ಪಿಕೊಂಡದ್ದಾಯ್ತು. ನೀನಿನ್ನು ಪುಸ್ತಕ ಬಿಡುಗಡೆಯ ಬಗ್ಗೆ ಚಿಂತಿಸಿದರೆ ಸಾಕು ಎಂದು ನನ್ನ ಮಿತ್ರರು ಫೋನಾಯಿಸಿ ಹೇಳಿದ್ದರು. ಸರಿ, ಕನ್ನಡ ಸಾಹಿತ್ಯ ಸಮ್ಮೇಳನದ ಸಂಯೋಜಕರಾದ ಕನ್ನಡ ಸಾಹಿತ್ಯ ಪರಿಷತ್ತು ಕಾಸರಗೋಡು ಗಡಿನಾಡ ಘಟಕದ ಅಧ್ಯಕ್ಷರು ಎಸ್ ವಿ ಭಟ್ಟರು ನನ್ನ ಗುರುಗಳು. ರಾತ್ರೋರಾತ್ರಿ ಅವರಿಗೆ ಫೋನಾಯಿಸಿ ಸರ್, ನನ್ನ ಕವನ ಸಂಕಲನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆ ಮಾಡ್ಬೇಕು ಎಂಬ ಆಸೆಯಿದೆ ಎಂದು ಹೇಳಿದೆ. ಸರಿ, ನೀನು ಮೊದಲೇ ಹೇಳ್ತಿದ್ದರೆ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಸೇರಿಸುತ್ತಿದ್ದೆ. ಪುಸ್ತಕ ರೆಡಿಯಾ? ಎಂದು ಕೇಳಿದಾಗ ಇಲ್ಲ ಸಾರ್, ಇನ್ನೂ ಪ್ರಿಂಟ್ ಆಗ್ಬೇಕು ಅಷ್ಟೇ. ನಿಮ್ಮ ಅನುಮತಿ ಸಿಕ್ಕಿದ ಮೇಲೆಯೇ ಪುಸ್ತಕ ಪ್ರಿಂಟ್ ಮಾಡಿಸೋಣ ಅಂತಾ ಇದ್ದೇನೆ ಎಂದು ಹೇಳಿದೆ. ಸರಿ...ನೀನು ಪುಸ್ತಕ ಪ್ರಿಂಟ್ ಮಾಡು, ಬಿಡುಗಡೆಯ ಜವಾಬ್ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ ಸಂತೋಷಕ್ಕೆ ಪಾರವೇ ಇಲ್ಲವಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನಸುಗಳನ್ನು ಕಾಣುವುದ ಕಲಿತೆ

ವಯಸ್ಸು ೧೬-೧೭ ಇರಬೇಕು.  ಅವನ ಕಣ್ಣಲ್ಲಿ ಅದೇನೋ ಜಗತ್ತನ್ನೇ ಗೆಲ್ಲಬಲ್ಲನೆಂಬ ಅದಮ್ಯವಾದ ಆತ್ಮ ವಿಶ್ವಾಸ, ಹಳೇ ಡ್ರೆಸ್, ಕೆದರಿದ ಕೂದಲು. ಕೆಲಸ ಹುಡುಕಿಕೊಂಡು ಬಂದಿದ್ದ.  ಇವನ ಕೈಯಲ್ಲಿ ಎಂತಹ ಕೆಲಸ ಮಾಡಿಸುವುದು, ಇನ್ನೂ ೧೮ ತುಂಬಿಲ್ಲ.  ಕಾನೂನಿನ ಪ್ರಕಾರ ಅಪರಾಧವಾಗಬಹುದೇನೋ ಎನ್ನುವುದು ನನ್ನ ಚಿಂತೆ.  ಅವನಾದರೋ ‘ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಮೇಡಮ್. ದಯವಿಟ್ಟು ನನಗೊಂದು ಕೆಲಸ ಕೊಡಿ, ಎಸ್ ಎಸ್ ಎಲ್ ಸಿ ೮೦% ನಲ್ಲಿ ಪಾಸಾಗಿದ್ದೀನಿ, ತಂದೆ ತೀರಿ ಹೋದರು, ಮನೆಯಲ್ಲಿ ಬಹಳ ಕಷ್ಟ, ನಾನೇ ಮೊದಲ ಮಗ, ಮುಂದೆ ಓದಲು ಸಾಧ್ಯವಾಗುತ್ತಿಲ್ಲ’ ಎಂದೆಲ್ಲಾ ಹೇಳುತ್ತಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಉತ್ತರ ಸಿಗದ ಪ್ರಶ್ನೆಗಳು....

ಮೊನ್ನೆ ಶುಕ್ರವಾರ ಅಪ್ಪ ನನಗೆ ಫೋನ್ ಮಾಡಿದ್ದರು.  ನಾನು ಕಳಿಸಿದ ಹಣ ತಲುಪಿ ಅದೇನೋ ಅರಿಯದ ಕಕ್ಕುಲಾತಿಯಿಂದ, ಅಪರೂಪದ ಪ್ರೀತಿಯಿಂದ "ಹೇಗಿದ್ದೀಯಪ್ಪಾ, ನಿನ್ನ ಆರೋಗ್ಯ ಹೇಗಿದೆ, ಕೆಲಸ ಹೇಗಿದೆ, ಕೋಪ ಕಡಿಮೆ ಮಾಡ್ಕೋ, ಕಾರು ಓಡಿಸುವಾಗ ಜಾಗ್ರತೆಯಾಗಿರು" ಅಂತೆಲ್ಲಾ ಹೇಳುತ್ತಿದ್ದವರ ಮಾತು ಕೇಳುತ್ತಾ ಕಣ್ಗಳಲ್ಲಿ ಕಂಬನಿ ತುಂಬಿ ಹರಿದಿತ್ತು. ಸುಮಾರು, ೧೯೮೩ರಲ್ಲಿ, ೨೬ ವರ್ಷಗಳ ಹಿಂದೆ, ನಡೆದ ಪ್ರಸಂಗ ನೆನಪಾಯಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಕಾರ್ಡಿನ ಕಥೆ

ಕಾರ್ಡು ಅಂದಾಗಲೇ ಪಕ್ಕನೆ ನೆನಪಿಗೆ ಬರುವುದೇ ಕ್ರೆಡಿಟ್ ಕಾರ್ಡು. ಹಣ ಪಾವತಿಸಲು ಬಾಕಿ ಇದ್ದರೆ ಕ್ರೆಡಿಟ್ ಕಾರ್ಡು ಎಂದು ಕೂಡಲೇ ಮಂಡೆಬಿಸಿಯಾಗುತ್ತೆ, ಸಂಬಳ ಬರುವ ದಿನವಾಗಿದ್ದರೆ ಡೆಬಿಟ್ ಕಾರ್ಡು ಸ್ವೈಪ್ ಮಾಡುವ ಸಂತಸ. ಆದರೆ ನಾನು ಹೇಳ ಹೊರಟಿರುವುದು ಕ್ರೆಡಿಟ್, ಡೆಬಿಟ್, ರೇಷನ್ ಕಾರ್ಡ್, ಐಡಿ ಕಾರ್ಡ್ ಅಥವಾ ನಮ್ಮ ವಿಸಿಟಿಂಗ್ ಕಾರ್ಡ್ ಬಗ್ಗೆ ಅಲ್ಲ. ಎಲ್ಲೋ ಮರೆತು ಹೋಗಿದ್ದ ಆ ಅಂಚೆ ಕಾರ್ಡ್ ಬಗ್ಗೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬದುಕು ಮತ್ತು ಒಂಟಿತನದ ನಡುವೆ...

ಬೆಂಗಳೂರು ಎಂಬ ಮಾಯಾನಗರಿಗೆ ಬಂದು ಒಂದೂವರೆ ವರ್ಷಗಳಾಗುತ್ತಾ ಬಂತು. ಓದು ಮುಗಿಸಿ, ಚೆನ್ನೈಯಲ್ಲಿ ಕೆಲಸ ಸಿಕ್ಕಿ ಮನೆಯಿಂದ ಹೊರಟು ನಿಂತಾಗ ಅಮ್ಮ ಹೇಳಿದ್ದು "ಲೈಫ್್ನಲ್ಲಿ ಇನ್ನಾದರೂ ಸೀರಿಯಸ್ಸಾಗಿರು. ಮಕ್ಕಳಾಟ ಸಾಕು". ಅಪ್ಪ ಹೇಳಿದ್ದು" ಲೈಫ್್ನಲ್ಲಿ ಏನೇ ಸಮಸ್ಯೆ ಬಂದರೂ ಕೂಲ್ ಆಗಿ ತೆಗೋ. ಬದುಕು ಯಾವಾಗಲೂ ಒಂದೇ ತರ ಇರಲ್ಲ. ಪ್ರತಿಯೊಂದು ಕ್ಷಣವೂ ನಿನಗೆ ಅಮೂಲ್ಯವಾದ್ದು, ಈ ಬದುಕು ನಿನಗೆ ಎಲ್ಲವನ್ನೂ ಕಲಿಸುತ್ತದೆ". ನಿಜ, ಬದುಕು ಎಂಬುದು ಏನೆಂದು ಸರಿಯಾಗಿ ಅರ್ಥವಾದದ್ದೇ ನಾನು ಒಂಟಿಯೆನಿಸಿಕೊಂಡಾಗ. ಅಲ್ಲಿಯವರೆಗೆ ಅಪ್ಪನನ್ನು ಬಿಟ್ಟು ದೂರ ಹೋಗಿರದ ನಾನು ಒಂದು ವರ್ಷ ಚೆನ್ನೈಯಲ್ಲಿ ಕಳೆದ. ಆದರೆ ಅಲ್ಲಿ ನಾನು ಒಂಟಿಯಾಗಿರಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (7 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಲಾಸ್ಟ್ ಬೆಂಚ್ ಲೀಲೆ...

ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ ಕುಳಿತದ್ದು. ಏನಿದ್ದರೂ ಕ್ಲಾಸಿನಲ್ಲಿ ಫಸ್ಟ್ ಬೆಂಚ್ ಸ್ಟೂಡೆಂಟ್ ಅಂತಾ ಹೇಳಿಕೊಳ್ಳುವುದರಲ್ಲಿ ಏನೋ ಒಂದು ರೀತಿ ಹೆಮ್ಮೆ. ಫಸ್ಟ್ ಬೆಂಚ್ ಅಂದರೆ ವಿಐಪಿಗಳ ಸೀಟು, ಅಲ್ಲಿ ಕುಳಿತುಕೊಳ್ಳುವವರೆಲ್ಲಾ ಬುದ್ಧಿವಂತರು, ಲಾಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವವರೆಲ್ಲರೂ ದಡ್ಡರು ಎಂಬುದು ಅಂಬೋಣ. ಅದಕ್ಕಾಗಿಯೇ ವಿದ್ಯಾರ್ಥಿ ದೆಸೆಯಲ್ಲಿ ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುವುದೆಂದರೆ ಏನೋ ಸಾಧನೆ ಮಾಡಿದಂತೆ. ಜೊತೆಗೆ ಹೆತ್ತವರಿಗೂ ತಮ್ಮ ಮಕ್ಕಳು ಫಸ್ಟ್ ಬೆಂಚ್್ನಲ್ಲಿ ಕುಳಿತುಕೊಳ್ಳುತ್ತಿದ್ದಾರೆ ಎಂದು ಹೇಳಲು ಹೆಮ್ಮೆಯ ವಿಷಯವೇ. ಫಸ್ಟ್ ಬೆಂಚಿನಲ್ಲಿ ಕುಳಿತುಕೊಳ್ಳುವವರೆಲ್ಲಾ ಜಾಣರು, ಅವರು ನಗುವುದು ಕಡಿಮೆ ಎಂದೆಲ್ಲಾ ಲಾಸ್ಟ್ ಬೆಂಚ್್ನವರು ಕಿರಿಕ್ ಮಾಡುತ್ತಾರೆ. ಅದು ನಿಜವೂ ಹೌದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.2 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಡತನದ ಸುಖ ಅಂದ್ರೆ....

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ. ನನ್ನ ಸಂಬಂಧಿಕರೊಬ್ಬರ ಮದುವೆಗೆ ಹೋಗ್ಬೇಕಾದರೆ ಯಾವ ಡ್ರೆಸ್ ಹಾಕಿಕೊಳ್ಳಲಿ? ಎಂದು ಕನ್್ಫ್ಯೂಸ್ ಆಗಿ ಕುಳಿತುಕೊಂಡಿರುವಾಗ ಅಪ್ಪ ಹೇಳಿದ ಮಾತುಗಳಿವು. ನಿಜ, ಈವಾಗ ನಾವು ಈ ಎಲ್ಲಾ ಸುಖಗಳನ್ನು ಅನುಭವಿಸಬೇಕಾದರೆ ನಮ್ಮ ಅಪ್ಪ ಅಮ್ಮ ಎಷ್ಟು ಕಷ್ಟ ಪಟ್ಟಿರಬೇಕು ಅಲ್ವಾ? ನನ್ನ ಅಪ್ಪ ನಗರದಲ್ಲಿ ಓದಿ ಬೆಳೆದವರು. ಆದರೆ ಮನೆಯಲ್ಲಿ ಬಡತನ. ಅಪ್ಪ ಹೇಳುವಂತೆ ಆ ಬಡತನದಲ್ಲೂ ಒಂದು ಸುಖವಿತ್ತು. ನಮ್ಮಜ್ಜಿಗೆ 6 ಜನ ಮಕ್ಕಳು. ತುಂಬು ಸಂಸಾರ. ಕೂಲಿ ಕೆಲಸ ಮಾಡಿಯೇ ಸಂಸಾರ ಸಾಗಬೇಕಾಗಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (13 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಳರಾತ್ರಿಯಲ್ಲಿ ಬಂದ ಕುಂಟು ಭಾಗ್ಯ!

ಜನರೇಟರ್ ರೂಮ್ ಈಗ ಆ ಕಾರ್ಖಾನೆಯ ಎಲ್ಲಾ ವಿಚಿತ್ರ ಆಗು ಹೋಗುಗಳಿಗೆ ಕೇಂದ್ರ ಬಿಂದುವಾಗತೊಡಗಿತ್ತು.  ಹಾಗೆ ಜಯವಂತನೊಡನೆ ಅಲ್ಲಿಗೆ ಬಂದ ನನಗೆ ಅಲ್ಲಿ ರಾತ್ರಿ ಪಾಳಿಯಲ್ಲಿರಬೇಕಾಗಿದ್ದ ಬಂಡಿ ನಾಗರಾಜ ಕಾಣಿಸಲಿಲ್ಲ.  ಅಲ್ಲಿ ಬಿದ್ದಿದ್ದ ಖಾಲಿ ಕುರ್ಚಿಯನ್ನೊಮ್ಮೆ ನೋಡಿ, ಹಾಗೇ ಸುತ್ತ ಮುತ್ತ ನೋಡುತ್ತಿದ್ದಾಗ, ದೂರದಲ್ಲಿ ಎದೆಯೆತ್ತರ ಬೆಳೆದಿದ್ದ ಹುಲ್ಲಿನ ನಡುವೆ ಏನೋ ಸರಿದಾಡಿದಂತೆ ಕಂಡಿತು, ಮತ್ತೊಮ್ಮೆ ನೋಡಿದೆ, ಹೌದು, ಆ ಜಾಗದಲ್ಲಿ ಮಾತ್ರ ಹುಲ್ಲು ಅಲುಗಾಡುತ್ತಿದೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮಾವಾಸ್ಯೆಯ ರಾತ್ರಿಯಲ್ಲಿ ,,,,೨

ಮರುದಿನ ಮಧ್ಯಾಹ್ನದ ಹೊತ್ತಿಗೆ ಭೀಮಯ್ಯನನ್ನು ದೆವ್ವ ಹಿಡಿದದ್ದು, ನಾನು ಅಲ್ಲಿಗೆ ಪ್ರವೇಶಿಸಿದ್ದನ್ನು ನೋಡಿ ಅವು ಮಾಯವಾಗಿದ್ದು ಆ  ಕಾರ್ಖಾನೆಯಲ್ಲಿ, ಪಕ್ಕದ ಕಣಿವೆ ಪುರದಲ್ಲಿ ದೊಡ್ಡ ಸುದ್ಧಿಯೇ ಆಗಿ ಹೋಯ್ತು.  ಆದರೆ ಭೀಮಯ್ಯನಿಗೆ ಸಕತ್ತಾಗಿ ಚಳಿ ಜ್ವರ ಅಮರಿಕೊಂಡು ಅವನನ್ನು ಚಿಕ್ಕಬಳ್ಳಾಪುರದ  ಸರ್ಕಾರೀ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮಾವಾಸ್ಯೆಯ ರಾತ್ರಿಯಲ್ಲಿ... ನಂದಿ ಬೆಟ್ಟದ ತಪ್ಪಲಿನಲ್ಲಿ.

ಅದೊಂದು ಅಮಾವಾಸ್ಯೆಯ ರಾತ್ರಿ!!  ನಂದಿ ಬೆಟ್ಟದ ಸುತ್ತಲಿದ್ದ ಹಲವಾರು ಬೆಟ್ಟಗಳ ನಡುವಿನಿಂದ ಸುಯ್ಯನೆ ಬೀಸುತ್ತಿದ್ದ ತಂಗಾಳಿಗೆ ಆ ಕಾರ್ಖಾನೆಯ ಮುಂದಿದ್ದ ಉದ್ಯಾನವನದಲ್ಲಿದ್ದ ಹಲವಾರು ಹೂ ಗಿಡಗಳಲ್ಲಿ ಅರಳಿದ್ದ ಸುಮಗಳ ಮಧುರ ವಾಸನೆ ಮನ ತುಂಬುತ್ತಿತ್ತು, ಕಚೇರಿಯ ಮುಂದಿದ್ದ ನೀಲಗಿರಿ ಮರ ತೊನೆದಾಡುತ್ತಾ, ಬಳುಕುವ ಸುಂದರಿಯ ಸೊಂಟವನ್ನು ನೆನಪಿಸುತ್ತಿತ್ತು.  ಸಮಯ ರಾತ್ರಿಯ ಹನ್ನೆರಡಾಗುವುದರಲ್ಲಿತ್ತು,  ಅಲ್ಲಿನ ಭದ್ರತಾ ವಿಭಾಗದ ಮುಖ್ಯಸ್ಥನಾಗಿದ್ದ ನಾನು ಕೆಲವು ದಿನಗಳಿಂದ ಹಲವು ವಿಶೇಷ ಕಾರಣಗಳಿಂದಾಗಿ ರಾತ್ರಿ ಪಾಳಿಯಲ್ಲಿ ಬಂದು ಆ ಕಾರ್ಖಾನೆಯ ರಾತ್ರಿ ಪಾಳಿಯ ಸಕಲ ಚಟುವಟಿಕೆಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿ, ಅತಿಯಾದ ಕುತೂಹಲದಿಂದ ನನ್ನ ಗಡಿಯಾರದ ಮುಳ್ಳು ಆ ಹನ್ನೆರಡು ಘಂಟೆಯ ಗಡಿಯನ್ನು ದಾಟುವುದಕ್ಕಾಗಿ ಕಾದು ಕು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾಂತ್ರಿಕ ಜೀವನದ ನಡುವೆ ಸಿಕ್ಕ ಸುವರ್ಣ ರಜಾದಿನಗಳು......

ದುಬೈನ ಯಾಂತ್ರಿಕ ಜೀವನದ ಏಕತಾನತೆಗೆ ಬೇಸತ್ತು ಹೋಗಿದ್ದ ಜೀವಕ್ಕೆ " ರಂಜಾನ್ " ಸಮಯದಲ್ಲಿ ಸಿಕ್ಕ ಸುಮಾರು ಹತ್ತು ದಿನಗಳ ಬಿಡುವು, ತನು ಮನಗಳಿಗೆಲ್ಲಾ ನವ ಚೈತನ್ಯ ತುಂಬಿದೆ. ರಜೆ ಸಿಕ್ಕದ್ದೇ ಸಾಕೆಂದು ಬೆಂಗಳೂರಿಗೆ ಓಡಿದ ನಾನು ಗುರುವಾರ, ೧೭/೦೯/೦೯ ರಂದು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ೧೮/೦೯/೦೯ರ ಶುಕ್ರವಾರ ಬೆಳಿಗ್ಗೆ, ಅಂದು " ಮಹಾಲಯ ಅಮಾವಾಸ್ಯೆ " ಅಗಲಿದ ಹಿರಿಯ ಆತ್ಮಗಳಿಗೆಲ್ಲಾ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸಿ ನನ್ನ ಕಾರು ಹತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯೋಗ್ಯ ರಾಗಿ ಭೋಗ್ಯ ಮ್ಯಾಗಿ!

"ಒಂದು ಬಾರಿ ಉಣ್ಣುವವನು ಯೋಗಿ .ಎರಡು ಬಾರಿ ಉಣ್ಣುವವನು ಜೋಗಿ . ಮೂರು ಬಾರಿ ಉಣ್ಣುವವನು ರೋಗಿ . ನಾಲ್ಕು ಬಾರಿ ಉಣ್ಣುವವನನ್ನ ಹೊತ್ಕೊಂಡು ಹೋಗಿ." ಎಂಬ ಉಕ್ತಿ ಇದೆ ಆದರೆ ನಮ್ಮ ಮನೇಲಿ ನಾಲ್ಕು ಬಾರಿ ಮಾಡೋದು ಬರಿ ಮ್ಯಾಗಿ!....

ಮ್ಯಾಗಿ ಈಗ ನಮ್ಮನೆಯ ಮಹಾಪ್ರಸಾದವಾಗಿ ಪರಿಣಮಿಸಿದೆ . ಮೊದ ಮೊದಲು ಈ ಮ್ಯಾಗಿಯನ್ನು ನಾನು ಕಂಡಿದ್ದು 8 ವರ್ಷಗಳ ಹಿಂದೆ ನನ್ನ ಗೆಳಯ ಶ್ರೀಧರ ಬೆಂಗಳೊರಿನಲ್ಲಿ ಒಂದು ಹೋಟೆಲ್ಲಿಗೆ ಕರೆದುಕೊಂಡು ಹೋಗಿದ್ದಾಗ. ಒಳಗೆ ಹೋಗುವ ಮೊದಲೇ ಇದು ಸಸ್ಯಾಹಾರಿ ಹೋಟೆಲ್ ಹೌದೋ ಅಲ್ಲವೋ ಎಂದು ದೃಡಪಡಿಸಿಕೊಂಡ ಮೇಲೆ ಒಳಗೆ ಹೋಗಿದ್ದು. ಏಕೆಂದರೆ , ಶ್ರೀಧರ ನಿಜವಾಗಿಯೂ ಜನಿವಾರದ ಹುಡುಗನೇ ಆಗಿದ್ದರು ಅನಂತರ Engineering ಕಲೆತು ಮುಗಿಸುವಸ್ಟರಲ್ಲೇ ಎಲ್ಲ ಜಾನುವಾರಗಳನ್ನು ಜಗಿದಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಋಣವಿದ್ದಷ್ಟೂ...2

ನಮ್ಮ ಮುದ್ದಿನ ಟೆಡ್ಡಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಪ್ಲಾಟ್ಗೆ ಬಂದಮೇಲೆ ಅದರ ದಿನಚರಿ ಬದಲಾಗಿತ್ತು. 3ನೇ ಮಹಡಿಯಿಂದ ಕೆಳಗೇನೋ ಇಳಿದು ಹೋಗೋದು ಮತ್ತೆ ಬರಕ್ಕೆ ಗೊತ್ತಾಗ್ತಾ ಇರಲಿಲ್ಲ. ಲಿಫ್ಟ್ ಮುಂದೆ ಕೂತ್ಕೊಂಡಿರ್ತಿತ್ತು. ವಾಚ್ಮನ್ ಮೇಲಕ್ಕೆ ಕರ್ಕೊಂಡು ಬಂದು ಬಿಡೋನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಂಗಳೂರು ಮಳೆ ಮತ್ತು ಆಟೋ ಸವಾರಿ

ಬೆಂಗಳೂರಿಗೆ ಮುಂಗಾರು ಕಾಲಿಟ್ಟಿದೆ. ಮುಂಗಾರು ಕಾಲೂರುವುದೇ ತಡ ಅದೆಷ್ಟೋ ಸಾವು ನೋವುಗಳು ಸಂಭವಿಸಿಯೂ ಆಯ್ತು. ಮಳೆ ಬಂದಾಗ ಯಾತ್ರೆ ಎಷ್ಟು ಕಷ್ಟಕರ ಎಂಬುದನ್ನು ಅನುಭವಿಸುತ್ತಾ ಇದ್ದೇನೆ. ಸೋರುವ ಬಿಎಂಟಿಸಿ ಬಸ್ ಒಂದೆಡೆಯಾದರೆ ರಸ್ತೆಯಲ್ಲಿ ತುಂಬಿ ಹರಿಯುತ್ತಿರುವ ನೀರು ಬೇರೆ. ಏನು ಹೇಳಿದರೂ ಇದು ಮಹಾನಗರವಲ್ಲವೇ? ಆದುದರಿಂದ ರಸ್ತೆಯಲ್ಲೇ ನೀರು ಹರಿಯುವುದು ಸಾಮಾನ್ಯ ಅನ್ನಬಹುದು.

ಮಳೆ 'ಧೋ' ಎಂದು ಸುರಿದರೆ ಸಾಕು ನಮ್ಮ ಆಟೋ ಚಾಲಕರಿಗೆ ಸುಗ್ಗಿಕಾಲ. ನಾವೇನೋ ಮಳೆಯಿಂದ ರಕ್ಷಣೆ ಪಡೆಯಲು ಆಟೋವನ್ನು ಆಶ್ರಯಿಸುತ್ತೇವೆ, ಅವರು ಕೇಳಿದಷ್ಟು ಹಣ ನೀಡಿ ನಮ್ಮ ಯಾತ್ರೆ ಮುಂದುವರಿಸುತ್ತೇವೆ. ಆದರೆ ಅದು ಸುಖವಾಗಿರಬೇಕಲ್ವಾ? ಮಳೆ ಆರಂಭವಾಗಿದ್ದರೂ ಇಲ್ಲಿನ ಆಟೋಗಳಿಗೆ ಟಾರ್ಪೋಲಿನ್ ಇಲ್ಲ. ರಸ್ತೆಯೇ ನೀರಿನಲ್ಲಿ ಮುಳುಗಿರುವಾಗ ಆ ಕಡೆ ಈ ಕಡೆಯಿಂದ ಇನ್ನೊಂದು ವಾಹನ ಚಿಮುಕಿಸುವ ನೀರು ಪ್ರಯಾಣಿಕರನ್ನು ಒದ್ದೆ ಮಾಡಿದರೂ ಪರ್ವಾಗಿಲ್ಲ ಎನ್ನುವ ಆಟೋ ಚಾಲಕರಿವರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸವಾರೀನೋ ಪಯಣವೋ

ನನ್ನ ಪಯಣ ತುಮಕೂರು ತಲುಪಿತ್ತು ಅಂತ ಹೇಳಿದ್ನಲ್ಲಾ. ಅದೇ ಹೆಣದ ವಿಚಾರ ಹೇಳ್ತಿದ್ದೆ. ಗುರುತೇ ಸಿಗದಂತಾಗಿತ್ತು. ಆದರೆ ಅದು ನಾಯಿ ಹೆಣ. ಅದನ್ನು ನೋಡುತ್ತಲೇ ಮನಸ್ಸು ರಾಕೆಟ್ ವೇಗದಲ್ಲಿ ಓಡಿತ್ತು. ಜೀವನದ ಬಗ್ಗೆ ಹಾಗೇ ಚಿಂತನೆ ನಡೆಸಿತ್ತು. ಎಲ್ಲರ ಬದುಕಿನ ಪಯಣ ಹುಟ್ಟಿನಿಂದ ಸಾವಿನ ಕಡೆಗಲ್ಲವೇ ? ಎಲ್ಲೆಲ್ಲೆ ಯಾರು ಹೇಗೆ ಸಾಯ್ತಾರೋ ಗೊತ್ತಿರಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಸರಣಿ: 

ಸವಾರೀನೋ ಪಯಣವೋ (ಭಾಗ-೨)

ಪಯಣ ಅಂದ್ರೆ ಇದೇನಾ !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಆ ಕಾಲ ಒಂದಿತ್ತು... ಬಾಲ್ಯವಾಗಿತ್ತು

ನಾಳೆಯಿಂದ ಶಾಲೆ ಪ್ರಾರಂಭವಾಗುತ್ತಿದೆ ಎಂದರೆ ಸಾಕು ಅಜ್ಜಿ ಮನೆಯಲ್ಲಿರುವ ನಮಗೆ ಏನೋ ಒಂದು ತರಥ ಬೇಸರ....

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಂತಾಕ್ಷರಿ ಆಡೋಣ ಬಾರಾ...

ಕಾಲೇಜು ಲೇಡೀಸ್ ಹಾಸ್ಟೆಲ್್ನಲ್ಲಿ ಕಾಲ ಕಳೆಯುವ ಮಜಾನೇ ಬೇರೆ ಅಲ್ವಾ. ಅಲ್ಲಿನ ಸುಖ ಅನುಭವಿಸಿದವರಿಗೇ ಗೊತ್ತು. ನಾನು ಡಿಗ್ರಿ ಕಲಿಯುವಾಗ ಒಂದು ವರ್ಷ(ಅಂತಿಮ ವರ್ಷ) ಹಾಸ್ಟೆಲ್್ನಲ್ಲಿದ್ದೆ. ಕಾಲೇಜು ಮನೆಯಿಂದ 10 ಕಿ ಮೀ ದೂರವಿದ್ದರೂ ಅಂತಿಮ ವರ್ಷದಲ್ಲಿ ಪ್ರೊಜೆಕ್ಟ್ ಮಾಡಲಿರುವ ಕಾರಣ ನಾನು ಹಾಸ್ಟೆಲ್ ಸೇರಿದ್ದೆ. ಮೊದ ಮೊದಲು ಹಾಸ್ಟೆಲ್ ಅಷ್ಟೊಂದು ಇಷ್ಟವಾಗಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪೂರ್ಣಯ್ಯನ ಛತ್ರ

ಥಟ್ ಅ೦ತ ಹೇಳಿ ಕಾರ್ಯಕ್ರಮದಲ್ಲಿ ನನಗೆ ನೆನಪಿರುವ೦ತೆ ಪೂರ್ಣಯ್ಯನ ಛತ್ರ ಎ೦ಬ ನುಡಿಗಟ್ಟಿಗೆ ನಾಸೋ ಅವರು ಕೊಟ್ಟ ಅರ್ಥ ಹೀಗಿತ್ತು "ಯಾರು ಬೇಕಾದರೂ ಹೇಳದೇ ಕೇಳದೇ ಬ೦ದು ಬಿಟ್ಟಿಯಾಗಿ ಉಪಯೋಗಿಸಿಕೊಳ್ಳುವ ಛತ್ರ" ಎ೦ದು. ಅ೦ತಹ ಒ೦ದು ಸನ್ನಿವೇಶವನ್ನು ಕಣ್ಣಾರೆ ಕ೦ಡ ನಾನು ಅದರ ಅನುಭವವನ್ನು ಇಲ್ಲಿ ಹ೦ಚಿಕೊ೦ಡಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲಿನಲ್ಲಿ ಮೂರು ಘಂಟೆ

ಏಪ್ರಿಲ್ ೧೨, ೨೦೦೯

ಬೆಂಗಳೂರಿನಲ್ಲಿ ಕಾರ್ಯಕ್ರಮ ಇದ್ದರಿಂದ ಸಂಜೆ ಹೊರಡುವ ಬದಲು ಬೆಳಿಗ್ಗೆ ೬:೪೫ಕ್ಕಿರುವ ಮೈಸೂರಿ-ಬೆಂಗಳೂರು ಚಾಮುಂಡಿ ಎಕ್ಸ್ಪ್ರೆಸ್ಸ್ ರೈಲು ಹತ್ತಿದೆ. ಹಿಂದಿನ ದಿನವೇ ಚೀಟಿ ತೆಗೆದುಕೊಂಡಿದ್ದರಿಂದ ಸೀದಾ ರೈಲು ಹತ್ತಿದೆ. ಮೊದಮೊದಲಿಗೆ ಜನ ಇಲ್ಲದಿದ್ದರೂ ನಂತರ ರೈಲು ತುಂಬಿಹೋಯಿತು. ನನ್ನ ಎದುರು ಒಬ್ಬ ೪೦ ವರುಷದ ವ್ಯಕ್ತಿಯೊಬ್ಬರು ಕುಳಿತಿದ್ದರು. ಇನ್ನೆನು ರೈಲು ಹೊರಡಬೇಕೆನ್ನುವಷ್ಟರಲ್ಲಿ ಯಾರೊ ಒಬ್ಬರು ಬಂದು ಮುಂದಿನ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯನ್ನು "ಇದು ರಿಸೆರ್ವ್ಡ್ ಸೀಟ್, ನೀವು ಏಳಿ" ಎಂದರು. ಆ ವ್ಯಕ್ತಿಗೆ ಸಿಕ್ಕಾಪಟ್ಟೆ ಕೋಪ ಬಂತು. "ಅಲ್ಲಯ್ಯ ಸುಮಾರ್ ವರ್ಷದಿಂದ ಇದೇ ರೈಲಲ್ಲಿ ಹೋಗ್ತಾ ಇದೀನಿ, ನೀನು ರಿಸೆರ್ವ್ಡ್ ಅಂತ ಜಗಳಕ್ಕೆ ಇಳಿತಿಯಲ್ಲಾ. ರಿಸೆರ್ವ್ಡ್ ಬೋಗಿ ಕಡೆಗಿರೋದು. ಬೇಕಾದರೆ ಟಿಟಿಇ ವಿಚಾರಿಸು" ಎಂದು ಜೋರು ಮಾಡಿದನು. ಸರಿ ರಿಸರ್ವ್ಡ್ ಚೀಟಿ ಇದ್ದವನು ಹೊರಕ್ಕೆ ಹೋಗಿ ಟಿಟಿಇ ವಿಚಾರಿಸಿದಾಗ, ರಿಸೆರ್ವ್ಡ್ ಬೋಗಿ ಬೇರೆ ಎಂದು ಹೇಳಿದನು. ಇದು ಮುಂದಿದ್ದ ವ್ಯಕ್ತಿಗೂ ತಿಳಿಯಿತು. ಸ್ವಲ್ಪ ಹೊತ್ತಿನ ನಂತರ ಅಲ್ಲಿದ್ದವರಲ್ಲಿ "ಸುಮಾರು ವರ್ಷದಿಂದ ಇದೇ ರೈಲ್ನಾಗೆ ಹೋಗ್ತಿವ್ನಿ. ಅಲ್ಲಾ ರಿಸೆರ್ವ್ಡ್ ಅಂತ ಜಗಳಕ್ಕೆ ಇಳಿತಾರೆ. ನಾವು ಸ್ವಲ್ಪ ಕಮ್ಮಿ ಒದೋರ್ತರ ಕಂಡ್ರು ಜಾಸ್ತಿ ದುಡ್ ಕೊಟ್ಟು ಹೋಗೊರ್ಗೆ ಈತರ ಮೋಸ ಮಾಡಲ್ಲ. ಇವ್ರು ಬಿಹಾರದ ಕಡೆ ಮಂದಿನ ನೋಡ್ಲಿ. ಅಲ್ಲಿ ರಿಸೆರ್ವ್ಡ್ ಅಂತ ಇದ್ರು ಅಲ್ಲಿನ್ ಜನ ದಬಾಯ್ಸಿ ಸುಮ್ನೆ ಆಚಿಕ್ಕೆ ಕಳಿಸ್ತಾರೆ" ಎಂದು ತನ್ನ ಬೇಸರ ವ್ಯಕ್ತಪಡಿಸಿದನು. ಹಾರ್ನ್ ಮಾಡುತ್ತಾ ನಿಗದಿತ ಸಮಯಕ್ಕೆ ರೈಲು ಹೊರಡಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನನ್ನ ಅನುಭವ (ಪುನರ್ಜನ್ಮ)............

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನಸುಗಳ ನನಸಾಗಿಸುತ್ತ - ೫ - ಪರೀಕ್ಷೆಗಳ ಅವಾಂತರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕ್ಷೇತ್ರ ಪರ್ಯಟನೆ: ಹಟ್ಟಿಯಂಗಡಿ, ಕೊಲ್ಲೂರು, ಕುಂಭಾಸಿ

ಮಾರ್ಚ್ ೨೯, ೨೦೦೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ದೇವ್ರು... ನಂಬಿಕೆ ... ಹಾಗೂ ನಮ್ಮಪ್ಪ..

ಸಂಪದದಲ್ಲಿ ಬೇಸಿಗೆಯ ಬಿಸಿಯಲ್ಲಿ ದೇವ್ರು, ನಂಬಿಕೆಗಳ ಬಗ್ಗೆ ಚರ್ಚೆಗಳು ಬಿಸಿಬಿಸಿಯಾಗಿಯೇ ನಡೀತಾ ಇವೆ..
ದೇವ್ರು ಇದ್ದಾನೋ ಇಲ್ಲವೋ ನನ್ಗೆ ಗೊತ್ತಿಲ್ಲಾ... ಅದು ನನಗೆ ಬೇಕಿಲ್ಲಾ...
ಆದ್ರೆ ಅವ್ನೊಬ್ಬನಿದ್ದಾನೆ ಅನ್ನೋ ನಂಬಿಕೆ, ಆ concept ನನ್ನ ಒಂಟಿತನಕ್ಕೆ ತುಂಬಾನೆ ಆತ್ಮಸ್ಥೈರ್ಯ್ಯ ಕೊಟ್ಟಿದೆ...
ಇದು ನನ್ನ ಸ್ವ ಅನುಭವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಳ್ಳಿಯಲ್ಲಿ ಇವತ್ತೂ ನೀರಿಲ್ಲ...

ಕಾಸರಗೋಡು ಸಿಟಿಯಲ್ಲಿರುವ ನನ್ನ ದೊಡ್ಡಮ್ಮನ ಮನೆಗೆ ಹೋದ ದಿನ. ಅಂದು ಅನಿವಾರ್ಯವಾಗಿ ಅಲ್ಲಿ ಉಳಕೊಳ್ಳಬೇಕಾಗಿ ಬಂದಿದ್ದರೂ ಅದೇಕೋ ಹಳ್ಳಿಯಲ್ಲಿರುವ ನನ್ನ ಮನೆಯಲ್ಲಿ ಆರಾಮವಾಗಿ ಮಲಗಿ ನಿದ್ದೆ ಹೋಗುವ ನನಗೆ ಅಲ್ಲಿನ ದೊಡ್ಡ ದೊಡ್ಡ ಸೊಳ್ಳೆ, ವಾಹನಗಳ ಗದ್ದಲದಿಂದ ಮಧ್ಯರಾತ್ರಿಯ ವರೆಗಂತೂ ನಿದ್ದೆ ಬರಲಿಲ್ಲ. ಆಮೇಲೆ ಯಾವಾಗ ನಿದ್ದೆ ಬಂತೋ ಎಂದು ಗೊತ್ತಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನಸುಗಳ ನನಸಾಗಿಸುತ್ತ - ೩ - ಮಾರ್ನಿಂಗ್ ರಾಗ

 

img_2786

 

ನನ್ನ ಈ ದಿನದ ಬೆಳಗನ್ನ ಸಂಗೀತದಲೆಯಲಿ ತೇಲಿಸಿದ ಕೊಳಲು

img_2771

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರಿಗೆ ಹಿಪ್ನಾಟಿಸಂ, ಹೀಗೊಂದು ನನ್ನ ಅನುಭವ.

ಮೊನ್ನೆ ಆಪ್ತಮಿತ್ರ ಚಲನಚಿತ್ರ ನೋಡುತ್ತಿದ್ದಾಗ ಕೊನೆಯ ದೃಶ್ಯದಲ್ಲಿ ಯು ಆರ್ ಗಂಗಾ, ಹೌ ಡು ಯು ಫೀಲ್ ಎಂಬ ಸಂಭಾಷಣೆ ಕೇಳಿದವನಿಗೆ ನನ್ನ ಕಾಲೇಜ್ ದಿನಗಳಲ್ಲಿ ನಡೆದ ಒಂದು ಪ್ರಸಂಗವನ್ನು ಬರಹದಲ್ಲಿ ಹಿಡಿದಿಡುವ ಮನಸ್ಸಾಯಿತು ಅದರ ಫಲವೆ ಈ ಲೇಖನ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಫೆಬ್ರವರಿ ೧೪ ೨೦೦೯

ಫೆಬ್ರವರಿ ೧೪ ೨೦೦೯

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂವಾದ

ಯಾವುದೋ ತಿರುಗಾಟದ ದೆಸೆಯಿಂದ ನಾನು, ನನ್ನ ಗೆಳೆಯರು ಶಿರಸಿಗೆ ಹೋಗಿದ್ದೆವು. ನಮ್ಮ ತಿರುಗಾಟ ಮುಗಿಸಿಕೊಂಡು ವಿ.ಅರ್.ಎಲ್.ನಲ್ಲಿ ಟಿಕೇಟು ಕಾದಿರಿಸಿ ಬಸ್ಸಿಗೆ ಕಾಯುತ್ತಾ ಕುಳಿತಿದ್ದೆವು. ಮಾಡುವುದಕ್ಕೇನೂ ಕೆಲಸವಿಲ್ಲದ್ದರಿಂದ ಎಂಟೂ ಮೂವತ್ತಕ್ಕೆ ಬಸ್ ನಿಲ್ದಾಣಕ್ಕೆ ಬಂದಿದ್ದೆವು. ಬಸ್ಸೋ ಎಂಟೂ ಮುಕ್ಕಾಲಿಗೆ ಬರಬೇಕಾಗಿದ್ದು ಒಂಭತ್ತೂ ಕಾಲಾದರೂ ಬಂದಿರಲಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೀ ಅಪ್ಪು ಮತ್ತು ಲಾಲಿ ಪಪ್ಪು

ಕುವೆಂಪು "ನೆನಪಿನ ದೋಣಿಯಲ್ಲಿ" ತಮ್ಮ ಅಜ್ಜಿಯನ್ನು ನೆನಪಿಸಿಕೊಳ್ಳುವ ಸಂದರ್ಭ ಸ್ವಾರಸ್ಯಕರವಾಗಿದೆ. ಅಡುಗೆ ಮನೆಯಲ್ಲಿ ಮೊಮ್ಮಗನಿಗಾಗಿ, ಅನ್ನ ಅಕ್ಕಿ ಹಿಟ್ಟಿಗೆ ಬಾಳೆಯ ಹಣ್ಣನ್ನು ಕಲಸಿ ನುರಿದು, ಸೀ ಅಪ್ಪು ತಯಾರಿಸುತ್ತಿರುತ್ತಾರೆ. ನಂತರ ದಪ್ಪ ರೊಟ್ಟಿ ತಟ್ಟಿ ಹೆಂಚಿನಲ್ಲಿ ಬೇಯಿಸುತ್ತಿರುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪಯಣ

ಸ್ವಲ್ಪ ದಿನಗಳ ಹಿಂದೆ ಕೆಲಸದಮೇಲೆ ನಾನು ಉತ್ತರ ಕರ್ನಾಟಕದ ಹೊಸಪೇಟೆಗೆ ಹೋಗಬೇಕಾಯಿತು. ಒಂದು ಹೊಸಾ ತಂತ್ರಾಂಶವನ್ನ ಅಲ್ಲಿಯ ಕಂಪನಿಯಲ್ಲಿ ಅಳವಡಿಸಿಕೊಡಬೇಕಾಗಿತ್ತು. ನಾನು ನಮ್ಮ ಕಾರ್ಯಾಲಯದಲ್ಲಿ ಅದನ್ನು ಒಮ್ಮೆ ಪರೀಕ್ಷಿಸಿದ್ದರೂ ಆ ವಾತಾವರಣಕ್ಕೆ, ಆ ಕಂಪನಿಯವರ ಬೇಡಿಕೆಗೆ ಈ ತಂತ್ರಾಂಶ ಹೊಂದಿಕೆಯಾಗುತ್ತದೋ ಇಲ್ಲವೋ ಅನ್ನುವ ಅನುಮಾನ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪುಟಾಣಿಗೆ ಭೂಮಿ ಕಷ್ಟವಂತೆ...!

(ಈ ಘಟನೆ ನಡೆದು ಸುಮಾರು ೬ ತಿಂಗಳ ಮೇಲಾಯ್ತು...)

ಆಗ ನಮ್ ಪುಟಾಣಿ ಮಾತಾಡೋಕೆ ಕಲಿತು ಒಂದು ೩-೪ ತಿಂಗಳಿರಬಹುದು...
ಸಾಮಾನ್ಯವಾಗಿ ಏನೇನೋ ಹೇಳ್ತಾ ಇರ್ತಾನೆ ಬಾಯಿಗೆ ಬಂದದ್ದು...
ಹೀಗೆ ಒಂದು ದಿನ, ಈ ಪುಟ್ಟ, " ಭೂಮಿ ಕಷ್ಟ ಆಗಿದೆ..." ಅಂದಂಗಾಯ್ತು...
ನಾನು ಇದನ್ನ ಕೇಳಿ ಶಾಕ್ ಆದೆ...ಸರಿಯಾಗಿ ಕೇಳಿಸಿತಾ ಅನ್ನೋ ಅನುಮಾನ..."ಏನೋ ಅದು?" ಅಂದೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಅಂಗೈಯಲ್ಲಿ ಅರಮನೆ

ಒಮ್ಮೆ ನಮ್ಮ ಮನೆಗೆ ನೆಂಟರು ಒಬ್ಬರು ಬಂದಿದ್ದರು.
ನಮ್ಮ ಮನೆಯಲ್ಲಿ ಪುಟಾಣಿ ಇರುವುದರಿಂದ, ಅವನಿಗಾಗಿ ಓಂದು ಪುಟ್ಟ ಪ್ಯಾಕೆಟ್ ತಂದಿದ್ದರು. ’ಇದರಲ್ಲಿ ಸ್ವೀಟ್ ಇದೆ ತೊಗೋ ಪುಟ್ಟಾ’ ಅಂದರು. ಅವರು ಸ್ವೀಟ್ ಕೊಟ್ಟ ಹೊತ್ತಿನಲ್ಲಿ ಪುಟಾಣಿಗೆ ಹೊಟ್ಟೆ ತುಂಬಿದ್ದರಿಂದ, ನಾವು ಪ್ಯಾಕೆಟ್ ತೆರೆಯದೇ ಹಾಗೆ ಎತ್ತಿಟ್ಟೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಪುಟ್ಟ ಗೂಡು

ಹಲೋ !!! ನಮಸ್ಕಾರ ಮೇಡಂ, ನಾನು ಪ್ರಶಾಂತ್, ನೆನ್ನೆ ಮನೆವಿಚಾರಕ್ಕೆ ಫೋನ್ ಮಾಡಿದ್ನಲ್ಲ....

ಇಲ್ಲ, ಅದನ್ನ ಕೊಟ್ಟಾಯ್ತು, ನೀವು ಲೇಟ್ ಮಾಡ್ಬಿಟ್ರಿ... ಹಾಗಂತ ಅತ್ತಕಡೆಯಿಂದ ಬಂದ ಧ್ವನಿ ನನ್ನ ಕನಸುಗಳಿಗೆ ಕತ್ತರಿಹಾಕಿತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹಿಮವದ್ ಗೋಪಾಲಸ್ವಾಮಿ ಬೆಟ್ಟ - ಪ್ರವಾಸ ಕಥನ

ಸುಮಾರು ೨-೩ ವರ್ಷಗಳಿಂದ ನಾವು ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹೋಗಬೇಕೆಂದುಕೊಂಡಿದ್ದರೂ, ಕಾರಣಾಂತರಗಳಿಂದ ಹೋಗಲಾಗಿರಲಿಲ್ಲ. ದಸರಾ ಸಮಯದಲ್ಲಿ, ನನ್ನ ಗೆಳೆಯನ ಮದುವೆ ಮೈಸೂರಿನಲ್ಲಿ ನಡೆಯಲಿದೆ ಎಂದು ಗೊತ್ತಾದಾಗ, ಇದೇ ಮೈಸೂರು ಮತ್ತು ಹಿಮವದ್ ಗೋಪಾಲನನ್ನು ನೋಡಲು ಸರಿ ಸಮಯ ಎಂದು ಲೆಕ್ಕ ಹಾಕಿದ ನಾವು, ಅದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡಿದೆವು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.

ಲೈಫ್ ಇನ್ ಮೆಟ್ರೋ…

ಚೆನ್ನೈನಲ್ಲಿ ಒಂದು ವರ್ಷ ದುಡಿದು ಇದೀಗ ಬೆಂಗಳೂರಿಗೆ ಬಂದಿದ್ದೇನೆ. ಅಲ್ಲಿನ ಉರಿಬಿಸಿಲಿಗೆ ಬೆವರು ಸುರಿಸಿ, ಸದ್ಯ ಬೆಂಗಳೂರಿನ ಚುಮು ಚುಮು ಚಳಿಗೆ ಮನಸಂತೂ ಪುಳಕಿತಗೊಂಡಿದೆ. ಆದ್ರೆ ಈ ಟ್ರಾಫಿಕ್ ಜಾಮ್ ನಲ್ಲಂತೂ ಮನಸ್ಸು ಬೇಜಾರಾಗಿ ಬಿಟ್ಟಿದೆ ಮಾರಾಯ್ರೆ. ಏನು ಮಾಡಲಿ? ಅದನ್ನಂತೂ ಯಾರಿಗೂ ತಪ್ಪಿಸಲು ಸಾಧ್ಯವಿಲ್ಲವಲ್ಲಾ …

ಈ ಟ್ರಾಫಿಕ್ ಜಾಮ್ ನಲ್ಲಿ ಒದ್ದಾಡುತ್ತಾ ಇರುವಾಗ ಚೆನ್ನೈ ಮೆಟ್ರೋ ರೈಲಿನ ಯಾತ್ರೆ ಮನಸ್ಸಲ್ಲಿ ಮೂಡಿಬರುತ್ತದೆ. ಅಲ್ಲಿ ಒಂದು ವರ್ಷ ಕಳೆದಿದ್ದರೂ ಮೆಟ್ರೋ ರೈಲಿನಲ್ಲೇ ನಾನು ಅನೇಕ ಬಾರಿ ಯಾತ್ರೆ ಮಾಡಿದ್ದು. ಅಲ್ಲಿನ ಬಸ್ ಯಾತ್ರೆ ನಂಗೆ ಇಷ್ಟವಿರಲ್ಲಿಲ್ಲ. ಯಾಕೆಂದ್ರೆ ಕಂಡಕ್ಟರ್ ಬಳಿಗೆ ನಾವೇ ಹೋಗಿ ಟಿಕೆಟ್ ಕೊಡ ಬೇಕು, ಆಮೇಲೆ ಭಾಷಾ ಸಮಸ್ಯೆ ಬೇರೆ. ಬಸ್ ನಂಬರ್ ನೋಡಿಕೊಂಡು ಹತ್ತಬೇಕು. ತಮಿಳಿನಲ್ಲಿ ಬರೆದ ಬಸ್ ಬೋರ್ಡ್ ಓದಲಿಕ್ಕಾಗುವುದಿಲ್ಲ. ಏನೆಲ್ಲಾ ಕಿರಿಕಿರಿ?. ಆದ್ರೆ ಟ್ರೈನಲ್ಲಿ ಅದರ ರಗಳೆಯೇ ಇಲ್ಲ. ಅದಕ್ಕೆ ಮೆಟ್ರೋ ಟ್ರೈನ್ ಅಂದ್ರೆ ಅಚ್ಚುಮೆಚ್ಚು.
ಆದ್ರೆ ಒಂದು ಮಾತು..ಟ್ರೈನ್ ಓಡಾಡದೇ ಇರುವ ಸ್ಥಳಕ್ಕೆ ಬಸ್ಸಲ್ಲೇ ಹೋಗಿದ್ದೆ .(ಅದು ಏನೋ ಸಾಹಸ ಮಾಡಿದಂಥ ಅನುಭವವನ್ನು ನೀಡುತ್ತಿತ್ತು). ಅದಲ್ಲಿರಲಿ, ಸದ್ಯ ನಾನು ಹೇಳ ಹೊರಟಿರುವುದು ಮೆಟ್ರೋ ಟ್ರೈನ್ ಅನುಭವದ ಬಗ್ಗೆ. ಅಲ್ಲಿನ ಮೆಟ್ರೋ ಟ್ರೈನ್ ಯಾವಾಗಲೂ ಜನರಿಂದ ತುಂಬಿ ತುಳುಕ್ಕುತ್ತಿರುತ್ತದೆ. ಐದು ನಿಮಿಷ ಅಥವಾ ಹತ್ತು ನಿಮಿಷಕ್ಕೊಮ್ಮೆ ಟ್ರೈನ್ ಇದ್ದರೂ ಜನರ ಗೌಜಿ ಇದ್ದೇ ಇರುತ್ತದೆ. ಬೆಳಗ್ಗಿನ ಹೊತ್ತು ಮತ್ತು ಸಂಜೆಯ ಸಮಯ ಜನ ಜಂಗುಳಿ ಹೇಳತೀರದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪತ ಪತ ಗುಡ್ಡೆ ಮತ್ತು ಅದರ ಜತೆಗೆ ನೆನಪಾದದ್ದು.

ಹೆಸರು ಕೇಳ್ದಾಗ್ಲೇ ನಂಗೆ ನಗು ಬರುತ್ತೆ. ಯಾಕಂದ್ರೆ ಅದ್ರ ಹಿಂದಿರೋ ಕತೆ ನಂಗೆ ಗೊತ್ತಲ್ವಾ. ನಿಮ್ಗೂ ಹೇಳ್ತೀನಿ.

ನಾನು ಒಂದು-ಎರಡು ವರ್ಷದ ಚಿಕ್ಕ - ಪುಟ್ಟ - ತುಂಟ ಹುಡುಗಿಯಾಗಿದ್ದಾಗಿನ ಕತೆ. ನಂಗೆ ಇದು ನಿಜಾನಾ ಅಂತ ನೆನಪಿಲ್ಲ. ಆದ್ರೆ ಅಮ್ಮ ಕೆಲವೊಮ್ಮೆ ನೆನಪಿಸ್ತಾರೆ.

1979-80ರ ಹೊತ್ತಿಗೆ ನಾವಿದ್ದದ್ದು ಮಂಗಳೂರಿನ ಕೊಟ್ಟಾರ ಕ್ರಾಸ್ ಬಳಿ. ಅದು ನನ್ನ ದೊಡ್ಡಮ್ಮನ ಮನೆಗೂ ಹತ್ರ. ದೊಡ್ಡಮ್ಮ ಅಂದ್ರೆ ನನ್ನ ಅಜ್ಜಿ. ಯಾಕೆ ಅಜ್ಜಿಯನ್ನು ದೊಡ್ಡಮ್ಮ ಅಂತ ಕರೀತಿದ್ನೋ ಗೊತ್ತಿಲ್ಲ. ಬಹುಶಃ, ಆಕೆ ಆಗ ಅಜ್ಜಿ ತರಹ ಕಾಣಿಸ್ತಾ ಇರ್ಲಿಲ್ವೇನೋ. ದೊಡ್ಡಮ್ಮನ ಮನೆ ಕತೆಗಳೂ ಚೆನ್ನಾಗಿವೆ. ಇನ್ನೊಂದ್ಸಲ ಹೇಳ್ತೀನಿ. ಈಗ ಪತ ಪತ ಗುಡ್ಡೆ ಹತ್ತೋಣ.

ನಮ್ಮ ಹಳೇ ಮನೆ ಇದ್ದ ಜಾಗದಿಂದ ಸ್ವಲ್ಪವೇ ದೂರದಲ್ಲಿ ಈ ಪತ ಪತ ಗುಡ್ಡೆ ಇದ್ದದ್ದು. ಗುಡ್ಡ ಅಂದ್ರೆ ಅಂಥ ದೊಡ್ಡ ಗುಡ್ಡೆ ಏನಲ್ಲ. ಈಗ ಏನಾದ್ರೂ ಈ ಗುಡ್ಡೆ ನೋಡಿದ್ರೆ.... ಇದಾ.... ಗುಡ್ಡೆ ಅಂತ ಅನ್ನಿಸುತ್ತೆ. 25-30 ವರ್ಷಗಳ ಹಿಂದೆ ಅಲ್ಲಿ ಮನೇನೂ ಇರ್ಲಿಲ್ಲ. ರಸ್ತೆ ಕೂಡಾ ಇರ್ಲಿಲ್ಲ. ಖಾಲಿ ಜಾಗ ಇತ್ತು. ಈಗ ರಾಷ್ಟ್ರೀಯ ಹೆದ್ದಾರಿ 17 ಪಕ್ಕದಲ್ಲೇ ಇದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವೃತ್ತಿಜೀವನದ ಹಂತಗಳು...

ಇವತ್ತಿವೆ ಸರಿ ಸುಮಾರು ೭ ವರುಷ ಕಳೆದಿದೆ, ನಾನು ನನ್ನೂರು ನನ್ನ ಜನರನ್ನ ಬಿಟ್ಟು ಬಂದು. ಕೆಲಸದ ಹುಡುಕಾಟದಲ್ಲಿ, ನನಗರಿವಿಲ್ಲದಂತೆ ನಾನೇ ವಲಸೆ ಬಂದಿದ್ದೇನೆ. ಇಂದಿಗೂ ಆ ನನ್ನ ಹಳೆಯ ನೆನಪುಗಳು ಕಾಡುತ್ತವೆ, ಕೊನೆತನಕ ಕಾಡುತ್ತಲೇ ಇರುತ್ತವೆ. ಮೈಸೂರಿನಲ್ಲಿ ೧.೫೦೦ ರೂಪಾಯಿಗೆ ಕೆಲಸ ಮಾಡುತ್ತಿದ್ದ ನಾನು ಇಂದು ಬೆಂಗಳೂರಿನಲ್ಲಿ ೫ ಅಂಕಿಯ ಸಂಬಳ ಪಡೆಯುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಳೆಯೇ ನಿನ್ನ ಮಾಯವಿದೇನೇ...

ನಮಸ್ಕಾರ,

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನನ್ನ ಗೆಳತಿ-೨

ಸದಾ ನಗು ನಗುತ್ತಿದ್ದ ನನ್ನ ಗೆಳತಿ ಅಂದು ಬೇಸರದಿಂದ ಮಾತನಾಡುತ್ತಿದ್ದಳು. ಅವಳ ಕಣ್ಣೀರು ಧರೆಗಿಳಿಯುತ್ತಿದ್ದವು. ನಾನು ಅವಳನ್ನು ಕಂಡಿಲ್ಲದಿದ್ದರೂ ನಾನವಳ ಏದುರಿನಲ್ಲೇ ನಿಂತು ಅವಳನ್ನ ಸಾಧಾನಿಸುತ್ತಿರುವಂತೆ ಅನಿಸುತ್ತುತ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮುಂದೇನಾಗಬಹುದು ???

ಉಸ್ಸಪ್ಪಾಪ್ಪಾಪ್ಪಾ !!!!

ಎಷ್ಟು ಕೆಲಸ ಇತ್ತು ಗೊತ್ತಾ, ಅದರ ಮಧ್ಯ Customer calls ಬೇರೆ !!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದಿನಚರಿಯ ಒಂದು ದಿನ...

ಒಮ್ಮೊಮ್ಮೆ ಹೀಗೂ ಆಗುವುದು, ಎಲ್ಲಿಯೋ ಮನಸು ಜಾರುವುದು... ಹೌದಲ್ವಾ ? ಕೆಲವೊಮ್ಮೆ ನಮಗರಿವಿಲ್ಲದೇ ನಾವು ಎಲ್ಲೋ ಯೋಚನೆಗಳ ಕಡಲಲ್ಲಿ ತೇಲಿ ಹೋಗಿರ್ತೀವಿ, ಯೋಚನೆಗಳಲ್ಲಿ ಮಾಡುವ, ಮಾಡಬೇಕಿರುವ ಕೆಲಸಗಳನ್ನೆಲ್ಲಾ ಮರೆತಿರುತ್ತೀವಿ. ಈ ರೀತಿ ಆಗಲಿಕ್ಕೆ ಕಾರಣ ಏನು ? ನನಗಂತೂ ಗೊತ್ತಿಲ್ಲ... ನಿಮ್ಗೆನಾದ್ರೂ... ????

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕನಸುಗಳ ನನಸಾಗಿಸುತ್ತ - ೨

ಅದೊಂದು ಹೊಸ ಅನುಭವ. ದಿನನಿತ್ಯದ ಕೆಲಸಗಳನ್ನು ಬಿಟ್ಟು ಹೊಸ ಕಾರ್ ತಗೊಂಡು ರಸ್ತೆಗಿಳಿದ ದಿನ. ಚಿಕ್ಕಂದಿನಿಂದ ಕೈನಲ್ಲಿ ಪ್ಲಾಸ್ಟಿಕ್ ಕಾರ್ ಹಿಡ್ಕೊಂಡು ಡ್ರೈವ್ ಮಾಡಿದ್ದೋ ಮಾಡಿದ್ದು. ಕಾಲೇಜಿಗೆ ಬರೋವರ್ಗು ಬೈಕ್ ಕೂಡ ಕೈಗೆ ಬಂದಿರಲಿಲ್ಲ. ಪಿ.ಯು ನಲ್ಲಿ ಲೈಸೆನ್ಸ್ ಇಲ್ಲದೆ ೩ ನಿಮಿಷದಲ್ಲಿ ಅಪ್ಪನ ಸ್ಕೂಟರ್ ನಲ್ಲಿ ಮನೆಯಿಂದ ಕಾಲೇಜ್ ತಲುಪೋದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಎಂದೂ ಮರೆಯದ ಆ ದಿನ

ಹೈಕೋರ್ಟ್ ಸಂಚಾರಿ ಪೀಠ ಜುಲೈ ೭ ರಿಂದ ಧಾರವಾಡ ಹಾಗೂ ಗುಲಬರ್ಗಾ ದಲ್ಲಿ ಆರಂಭಗೊಳ್ಳಲು
ಹೈ ಕೋರ್ಟ್ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಸುಮಾರು ೭ ವರ್ಷಗಳ ಹಿಂದೆ ನಡೆದ ಘಟನೆ ನೆನಪಿಗೆ ಬರುತ್ತಿದೆ.

ಅದಿನ್ನೂ ನಾನು ಕೆಲಸಕ್ಕೆ ಸೇರಿದ ಹೊಸತು. ಧಾರವಾಡ ನನಗಿನ್ನೂ ಒಗ್ಗಿರಲಿಲ್ಲ. ಪ್ರತಿ ಶುಕ್ರವಾರ ಸಂಜೆ ಶಿವಮೊಗ್ಗದ ಬಸ್ ಹತ್ತುತ್ತಿದ್ದ ನಾನು ಭಾನುವಾರ ರಾತ್ರಿ ಅಲ್ಲಿಂದ ಹೊರಡುತ್ತಿದ್ದೆ. ಅದು ಜುಲೈ ತಿಂಗಳ ಒಂದು ಭಾನುವಾರದ ರಾತ್ರಿ, ೧೧-೩೦ ಬಸ್ಸಿಗೆ ಒಬ್ಬಳೇ ಧಾರವಾಡಕ್ಕೆ ಹೊರಟಿದ್ದೆ. ಶಿವಮೊಗ್ಗದಲ್ಲೇ, ಧಾರವಾಡದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸ ಬೇಕೆಂಬ ಸಲುವಾಗಿ ಬಂದ್ ನಡೆಯುವುದರ ವಾಸನೆ ಬಡಿಯಿತು. ಬಂದ್ ಶುರುವಾಗುವುದು ಸಾಮಾನ್ಯವಾಗಿ ಬೆಳಿಗ್ಗೆ ೯ ರ ನಂತರ ಎಂಬ ಭಂಡ ದೈರ್ಯದ ಮೇಲೆ ಬಸ್ ಹತ್ತಿದೆ. ಅಪ್ಪ ಹೇಳಿದರು ಬೇಡ ಅಂತ, ಆದರೆ ನಾನು ಕೇಳ ಬೇಕಲ್ಲ.

ಚಳುವಳಿಕಾರರು ಬಸ್ಸನ್ನು ಹಾವೇರಿಯಿಂದ ಮುಂದೆ ಬಿಡಲಿಲ್ಲ. ಬಸ್ಸನ್ನು ಬೇರೆ ಮಾರ್ಗದ ಮೂಲಕ ಕಲಘಟಗಿಗೆ ಒಯ್ಯಲಾಯಿತು. ಬಹಳಷ್ಟು ಪ್ರಯಾಣಿಕರು ಅಲ್ಲೇ ಇಳಿದು ಬೇರೆ ವ್ಯವಸ್ಥೆ ಮಾಡಿಕೊಂಡರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೋಳದ ಹಿಟ್ಟು ಇದೆಯಾ...?

ಊರಿಂದ ಅಪ್ಪ-ಅಮ್ಮ ತಂದಿದ್ದ ಜೋಳದ ಹಿಟ್ಟು ಖಾಲಿಯಾಗಿದ್ದರಿಂದ, ಜೋಳ ತಗೊಂಡು ಗಿರಣಿ ಹಾಕಿಸೋಣ ಅನ್ಕೊಂಡಿದ್ದೆ, ಆದರೆ ರಾಗಿಮೇಲೆ ಹಾಕೋದ್ರಿಂದ ರೊಟ್ಟಿ ಸರಿಯಾಗಿ ಬರೋದಿಲ್ಲ ಅಂತ ಕೇಳ್ಪಟ್ಟೆ....ಸರಿಹಾಗಾದ್ರೆ ಎಲ್ಲಾ ಸಿಗುತ್ತೆ ಅಂತ ದೊಡ್ಡ-ದೊಡ್ಡ ಅಂಗಡಿಯವರು ಸಾಕಷ್ಟು ಜಾಹೀರಾತು ಹಾಕ್ತಾ ಇರ್ತಾರೆ...ಅಲ್ಲಿ ಸಿಗುತ್ತೆ...ಎಲ್ಲಾ ಈಗ "ಪಾಕೆಟ್"ನಲ್ಲಿ ಇಲ್ಲಿ ಸಿಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ತೇಲಿಬಂದ ಅಲೆ...

¸ÀÆ0iÀÄð£À QgÀtUÀ¼ÀÄ QlQ0iÀÄ vÀÆj ªÉÄʪÉÄÃ¯É ©zÁÝUÀ¯É JZÀÑgÀªÁzÀzÀÄÝ. J¯ÉèqÉ ¨É¼ÀPÉãÉÆ ZÉ°èvÀÄÛ,DzÀgÉ ªÀÄ£ÀzÁUÀ¸ÀzÀ°è PÁªÉÆðÃqÀ DªÀj¹vÀÄÛ. PÁgÀt K£ÀÆ CAvÀ UÉÆvÁÛUÀ°®è. M®èzÀ ªÀÄ£À¹ì¤AzÀ vÀ0iÀiÁgÁV PÀbÉÃjUÉ ºÉÆgÀqÀ®Ä ªÀģɬÄAzÀ ºÉÆgÀmÉ. PÁ°qÀ®Ä eÁUÀ«®èzÀ d£À¤©qÀ §¸ï£À°è ¹UÀzÀ ¹ÃmïUÁV ¥ÀjvÀ¦¸ÀÄvÁÛ ¤AvÀÄ §vÁð EzÉÝ. §¸ï CzsÀð zÁj ¸ÀªÉ¹zÀ ªÉÄÃ¯É JgÀqÀÄ ¹Ãmï SÁ°0iÀiÁzÀªÀÅ. QlQ0iÀÄ PÀqÉ ©Ã¸ÀÄwÛzÀÝ ªÀÄ£À vÀt¸ÀzÀ vÀAUÁ½UÉ ¨ÉøÀgÀzÀ ªÉÆUÀzÀÆr PÀÆvÉ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಅನುಭವ ಕಥನ

ಆಯ್ದ ಬರಹಗಳು

Sampada is a community of people passionate about literary activities in Kannada. Sampada is one of the largest Kannada communities on the Internet. ಸಂಪದ ಕನ್ನಡ ನಾಡು, ನುಡಿ, ಓದು ಸುತ್ತ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ ಹಾಗು ಕನ್ನಡದ ಮೊತ್ತ ಮೊದಲ ಆನ್ಲೈನ್ ಸಮುದಾಯಗಳಲ್ಲೊಂದು.

Powered by Drupal. Technology support by : Saaranga Infotech