ಮಳೆ

ಮಳೆಯ ಹುರುಪು!

ಅಚಾನಕ್ ಮಳೆಯಲಿ ನೆನೆಯುವ ಸುಖ ಯಾವಾಗಲೂ, ಎಲ್ಲರಿಗೂ ಸಿಗೋದಿಲ್ಲ.

ಕೆಲವು ಬಾರಿ, ಅಚಾನಕ್ಕಾಗಿ ಸುರಿಯುವ ಮಳೆಯಲ್ಲಿ ನೆನೆಯುವುದೇ ಒಂದು ಸೌಭಾಗ್ಯವೆಂದು ಅನಿಸುವುದು. ಜಡ ಹಿಡಿದ ಮೈ-ಮನಗಳಿಗೆ ಹೊಸದಾದ ಹುರುಪು ನೀಡುತ್ತದೆ.

ಮಳೆಯಲ್ಲಿ ನೆನೆಯುವಾಗ ಮೈ-ಮನಗಳು ತುಂಬಾ ಚುರುಕಾಗುವುದು. ಹೊಸ ಯೋಚನೆಗಳು ಮನದಲ್ಲಿ ಮೂಡುವುದು, ಹೊಸ ವಿಚಾರಗಳು, ಹೊಸ ಆಸೆಗಳು, ಆಕಾಂಕ್ಷೆಗಳು ಮನಸೇರುವುದು. ಎಷ್ಟು ನೆನೆಯುವೆವೋ, ಅಷ್ಟು ಬುದ್ಧಿ ಚುರುಕಾಗುತ್ತದೆ.

ಕಳೆದ ಮೂರು ದಿನಗಳಿಂದ ಮಳೆಯಲ್ಲಿ ನೆನೆದು ಮೈ-ಮನಸು ಹಗುರಾಗಿ, ಚುರುಕಾಗಿ, ಹುರುಪಿನಿಂದ ತುಂಬಿದೆ. ಮನದಲ್ಲಿ ಕತೆಗಳು, ಕವಿತೆಗಳು ಹುಟ್ಟಿಕೊಂಡಿವೆ. ಅವುಗಳಲ್ಲಿ ಎಷ್ಟು ಬರವಣಿಗೆ ರೂಪದಲ್ಲಿ ಮೂಡುವುದೋ?

‪#‎feeling_refreshed‬

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.6 (7 votes)
To prevent automated spam submissions leave this field empty.

ಮಳೆಗಾಲದ ಅಗಲಿಕೆ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಳೆಗಾಲದ ಅಗಲಿಕೆ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಸ್ವರ್ಗ-ನರಕ

ಆಹಾ...
ತಂಪಾದ ಗಾಳಿ
ತಿಳಿ ತುಂತುರು
ಸ್ವರ್ಗಕ್ಕೆ ಮೂರೇ ಗೇಣು
ಎಂದಿತು ನನ್ನುಸಿರು

ಸದ್ದಿಲ್ಲದೇ
ತಿಳಿಗಾಳಿಯಂತೆ
ಪಕ್ಕದಲ್ಲೇ
ವೇಗವಾಗಿ ಸಾಗಿದ
ಕಾರೊಂದು
ಹಾರಿಸಿತು
ಕೊಚ್ಚೆ-ಕಲೆ-ಕೆಸರು!

--ಶ್ರೀ

 

ಜಿಟಿ ಜಿಟಿ ಮಳೆಯಲ್ಲಿ ನೆನೆಯುತ್ತಾ, ನಡೆಯುತ್ತಿದ್ದಾಗ ಹೊಳೆದಿದ್ದು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬೆಂಗಳೂರು ಮಳೆಯಲ್ಲಿ…

ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರೋ ಪಂಜಾಬಿ ಮೆಸ್ಗೆ ಹೋಗೋಣ ಅಂದ.ಸರಿ ಅಂತ ಹೊರಟ್ವು.ಬಹುಶ ಅರ್ಧ ದಾರಿ ಹೋಗಿದ್ವು.ಹೊಟ್ಟೆ ಚುರು ಚುರು ಅನ್ನೋಕೆ ಶುರು ಆಗಿತ್ತು.ಶುರುವಾಯ್ತು ಭರ್ಜರಿ ಗಾಳಿ,ಮಳೆ.ಅಲ್ಲೇ ಒಂದು ಕಡೆ ಹೋಗಿ ನಿಂತು ಮಳೆ ಯಾವಾಗ ನಿಲ್ಲುತ್ತೋ ಅಂತ ಕಾಯ್ತಾ ಇದ್ವಿ.೧ ಗಂಟೆ ಕಳೆದರು ಮಳೆ ನಿಲ್ಲೋ ಹಾಗೆ ಕಾಣಲಿಲ್ಲ. ‘ಲೇ,ಇಲ್ಲೇ ನಿಂತ್ರೆ ಊಟ ಸಿಗೋಲ್ಲ,ಬಾ ಮಳೆಲಿ ಹೋಗಿ ಊಟ ಇದ್ರೆ ಪಾರ್ಸೆಲ್ ತಗೊಂಡು ಹೋಗೋಣ’ ಅಂದೇ.ಸರಿ ಅಂತೇಳಿ ನಾವ್ ಅಲ್ಲಿ ಹೋಗೋ ಅಷ್ಟೊತ್ತಿಗೆ ಅವ್ರು ಬಾಗಿಲು ಹಾಕಿದ್ರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ದೇವರು ಹೊಸೆದ ಪ್ರೇಮದ ದಾರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಳೆ ಎಂದರೆ ಬಾಲ್ಯದ ನೆನಪು ಕಣಾ...

ಮುಂಗಾರು ಶುರುವಾಗಿದೆ. ಜೊತೆಗೆ, ನೆನಪುಗಳ ಮಳೆಯೂ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಳೆಭೈರವ ರೋಷ

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ
ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಭಾನುವಾರದ ಮಳೆ, ಪಾಟೀಲರ ನಾಟಕ

ಜಯಲಕ್ಷ್ಮಿ ಪಾಟೀಲರು 'ನನ್ನದೊಂದು ನಾಟಕ ಇದೆ' ಎಂದು ಬರೆದದ್ದು ಸಮುದಾಯದ ಹೊಸಬರಲ್ಲಿ ಅಚ್ಚರಿ ಮೂಡಿಸಿರಲಿಕ್ಕೂ ಸಾಕು. ನಾಟಕದ ಕುರಿತು ನಡೆಸಿಕೊಡುತ್ತಿರುವವರೇ ಬರೆದು ಆಮಂತ್ರಣ ನೀಡುವುದು ಹಲವರಿಗೆ ಹೊಸತೆನಿಸಬಹುದು. ಆದರೆ ಹಲವು ವರ್ಷಗಳ ಕಾಲ ಹಲವು ಸಮುದಾಯಗಳಲ್ಲಿ ಪಾಲ್ಗೊಂಡವರಿಗೆ ಗೊತ್ತಿರುತ್ತದೆ, ಎಲ್ಲರೊಂದಿಗೆ ಬೆರೆತು ಎಲ್ಲರನ್ನೂ ಆಮಂತ್ರಿಸುವ ಈ ರೀತಿ ಸಮುದಾಯಗಳಲ್ಲಿ ಹೊಸತೇನಲ್ಲ ಎಂಬುದು. ಸಮುದಾಯದಲ್ಲಿ ಸಮಾನತೆ ಕಾಣಿಸುವ ಹಲವು ವಿಷಯಗಳಲ್ಲಿ ಇದೂ ಒಂದು.

ಅಂದು 'ನಾಟಕ ಇದೆ, ಬನ್ನಿ' ಎಂದು ಬರೆದ ಲೇಖನ ಸರಿಯಾಗಿ ಪ್ರಕಟವಾಗಿಲ್ಲವೆಂದು ಜಯಲಕ್ಷ್ಮಿಯವರು ಸಂಪರ್ಕಿಸಿದಾಗ ಅದನ್ನು ಸರಿಪಡಿಸುವುದು ಹೇಗೆಂದು ತಿಳಿಸಿ "ನಾವೂ ಬರುತ್ತೇವೆ" ಅಂದಿದ್ದೆ. "ಬರ್ತೀರಾ?" ಎಂದು ಎರಡೆರಡು ಸಾರಿ ಕೇಳಿದ್ದರು, ಇವರೆಲ್ಲ ಕಂಪ್ಯೂಟರ್ ಬಿಟ್ಟು ಹೊರಗೆ ಹೋಗುವುದೇ ನಂಬಲಾಗದು ಎಂಬಂತೆ.

ಭಾನುವಾರ ಬಂತು, ನಾಟಕ ನೋಡೋಕೆ ಹೊರಟಿದ್ದೇನೋ ಸೈ, ಆದರೆ ಎಂದಿನಂತೆ ನಮ್ಮ ಪ್ರೋಗ್ರಾಮಿನಲ್ಲಿ twists ಎಂಡ್ turnsಉ. ಅರವಿಂದ ಮೈಸೂರಿನಿಂದ ಬಂದಿದ್ದ, ಅವ ಹಿಂದಿನ ದಿನ ಫೋನ್ ಮಾಡಿ "ಶ್ರೀನಗರದಲ್ಲಿದೀನಿ, ಸಿಗೋಣ್ವ?" ಅಂದಿದ್ದ.

ದಾರಿಯುದ್ದಕ್ಕು ಮಳೆ ಬೇರೆ ಭೋರ್ ಎಂದು ಹೊಡೆಯುತ್ತಿತ್ತು. ಪಾಲನಿಗೆ "ನೀನು ಆಶ್ರಮ ಬಸ್ ಸ್ಟಾಪಿಗೆ ಬಂದುಬಿಡು" ಎಂದು ಹೇಳಿ ಘಂಟೆಗಳೇ ಆಗಿಹೋಗಿತ್ತು. ಅವ ನಾಲ್ಕೈದು ಕಾಫಿ ಕುಡಿಯುತ್ತ, ನಮಗೆ ಕಾಯುತ್ತ ತಾಳ್ಮೆಯನ್ನು ಪರೀಕ್ಷೆಗೆ ಹಚ್ಚಿದ್ದ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮಳೆಯ ಮರೆಯಲ್ಲಿ

ಮಳೆರಾಯನ ಆಟ ನೋಡ್ಲಿಕ್ಕೆಂದು ಹೊರಟ ನಾನು ಕಂಡದ್ದು ಮಬ್ಬಾದ ಬಾನು. ಅಲ್ಲೇ ಅಡಗಿದ್ದ ಸಣ್ಣಗಿನ ನೀರ ದನಿ ಅದರೊಡನೆ ಸುಂದರ ನೀರ ತರಂಗಗಳು. ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಈ ಚಿತ್ರಣ ಕಂಡು ನನ್ನ ಮನಸ್ಸಿನಲ್ಲಿ ಏಳುತ್ತಿದೆ ಎನೋ ಒಂಥರಾ ತಳಮಳ. ಒಂದರ ಮೇಲೊಂದರಂತೆ ಬೀಳುತ್ತಿದ್ದ ಹನಿಗಳಿಂದಾದ ಆ ಕಂಪನ ಕಂಡು ಎಂಥದೋ ಒಂಥರಾ ವಿದ್ಯುತ್ ಸಂಚಾರ.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಳೆಗೆ ಮುನ್ನ

ಮೈಸೂರಲ್ಲಿ ಇವತ್ತು ಮದ್ಯಾನದಿಂದ್ಲೇ ಮಳೆ ಬರೋ ಹಾಗೆ ಆಗಿತ್ತು... ವಾತಾವರಣ ಆಹ್ಲಾದಕರವಾಗಿತ್ತು...

ರೂಮಿಗೆ ಬರುವಾಗ ಮಳೆ ಶುರುವಾದರೂ ಚೆನ್ನಾಗಿರುತ್ತೆ ಅಂತ ಬೈಕ್ ಓಡಿಸುತ್ತಾ ನೆನೆದುಕೊಂಡು ಬಂದೆ... 

ಈ ಫೋಟೋ ಮಳೆ ಶುರುವಾಗುವ ಐದು ನಿಮಿಷ ಮುಂಚೆ ತೆಗೆದಿದ್ದು... :)

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮೈಸೂರಲ್ಮಳೆ ಬಂತು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೀರು ಹರಿಯುವುದು ಕಡಲಿನ ಕಡೆಗೆ

ರೂಪ ಅವರು ಹಾಕಿದ್ದ  ಆಲದ ಮರದ ಬಿಳಲುಗಳ ಚಿತ್ರವನ್ನು ನೋಡಿದಾಗ ಏಕೋ ಈ ಸುಭಾಷಿತ ನೆನಪಾಯಿತು. ಅಥವಾ, ಇವತ್ತು ಇಲ್ಲಿ ಬೆಟ್ಟದ ಮೇಲೆ ಬೀಳುತ್ತಿರುವ ಮಂಜಿನಿಂದಲೋ? ಯಾಕೋ ಬಗೆಹರಿಯದು. ಬಿಡಿ. ಒಂದು ಒಳ್ಳೇ ಮಾತು ಹೇಳಲು ಪೀಠಿಕೆ ಬೇರೆ ಬೇಕಾ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ತಲೆನೋವು

ಇಂದು ಸಂಜೆ ಕಛೇರಿಯಿಂದ ಮನೆಗೆ ಹೊರಟಾಗ ಮಳೆ ಬರುತ್ತಿತ್ತು... ಕಾರಿನಲ್ಲಿ ಆಫೀಸ್ ಗೆ ಹೋಗಿದ್ದರಿಂದ ಮಳೆಯಲ್ಲಿ ನೆನೆಯದೆಯೇ ಮನೆಗೆ ಬಂದೆ... ಮನೆಗೆ ಬಂದ ಕೂಡಲೇ ಅಮ್ಮ "ಏನೋ, ಈ ದಿನ ಇಷ್ಟು ಬೇಗ ಮನೆಗೆ ಬಂದೆ? ಅದಕ್ಕೇ ಅನ್ಸುತ್ತೆ ಮಳೆ ಬರ್ತಾ ಇದೆ" ಅಂತ ಹೇಳಿ ನಕ್ಕರು. ನಾನು "ಹಾಗೇನಿಲ್ಲ, ಸ್ವಲ್ಪ ತಲೆ ನೋವು. ಅದಕ್ಕೆ ಬೇಗ ಬಂದೆ. ಬಿಸಿ ಬಿಸಿ ಸ್ಟ್ರಾಂಗ್ ಕಾಫಿ ಕೊಡು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಿಹಾರದಲ್ಲಿ ಪ್ರವಾಹ

ನೇಪಾಳ ಗಡಿಭಾಗದ ಕುಶಾದಲ್ಲಿ ಕೋಸಿ ನದಿಗೆ ಕಟ್ಟಿದ ಒಡ್ಡು ಒಡೆದ ಪರಿಣಾಮ ಕೆಲವೇ ಗಂಟೆಗಳಲ್ಲಿ ಉತ್ತರ ಬಿಹಾರದ ಐದು ಜಿಲ್ಲೆಗಳಾದ ಸುಪೌಲ್, ಅರಾರಿಯ, ಸಹರ್ಸಾ, ಮಾಧೇಪುರ ಮತ್ತು ಪುರ್ನಿಯಾ ಅಸ್ತಿತ್ವವೇ ಇಲ್ಲದಂತೆ ಜಲಾವೃತಗೊಂಡವು. ಈ ಪ್ರಾಂತಗಳು ಪ್ರತಿ ವರ್ಷ ಎದುರಿಸುತ್ತಿದ್ದ ಪ್ರವಾಹಕ್ಕಿಂತ ದುಪ್ಪಟ್ಟು ನಷ್ಟವನ್ನು ಈ ಬಾರಿಯ ವಿಪತ್ತು ತಂದೊಡ್ಡಿದೆ. ಬಿಹಾರದ ಕಣ್ಣೀರ ನದಿಯೆಂದೆ ಜನಜನಿತವಾಗಿರುವ ಕೋಸಿ ನದಿಯ ಪ್ರವಾಹದಿಂದಾಗಿ ಬಿಹಾರದ ಜನತೆ ಅಕ್ಷರಶಃ ತಮ್ಮ ಜೀವನದೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಲಕ್ಷಾಂತರ ಮಂದಿ ಪ್ರವಾಹದಿಂದಾಗಿ ತಮ್ಮ ಮನೆಮಠ, ಕುಟುಂಬಿಕರು, ಸಂಬಂಧಿಗಳು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಭೀಕರ ಪ್ರವಾಹದ ಪರಿಣಾಮ ಬಿಹಾರದ ಜನತೆ ತುಂಬಲಾರದ ನಷ್ಟಕ್ಕೀಡಾಗಿದ್ದಾರೆ; ಎಲ್ಲವನ್ನೂ ನೆರೆ ಕೊಚ್ಚಿಕೊಂಡು ಹೋಗಿದೆ. ಪ್ರವಾಹದ ಬಲಿಪಶುಗಳಲ್ಲಿ ಹೆಚ್ಚಿನವರು ಮಕ್ಕಳು. ಸಾವಿರಾರು ಮಕ್ಕಳು ನಿರ್ಗತಿಕರಾಗಿದ್ದಾರೆ. ನೇಪಾಳದಲ್ಲಿ ಪ್ರವಾಹ ತಡೆಗಾಗಿ ನಿರ್ಮಿಸಿದ್ದ ಮೊರಿಯು ಒಡೆದ ಕಾರಣ ಕೋಸಿ ನದಿ ಉಕ್ಕಿ ಹರಿಯುತ್ತಿದ್ದು, ಬಿಹಾರದ 16 ಜಿಲ್ಲೆಗಳು ಸಂಕಷ್ಟಕ್ಕೀಡಾಗಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕಿಟಕಿಯಾಚೆಯ ಚಿತ್ರ

ಸಣ್ಣಗೇ ಮಳೆ ಸುರಿಯುತ್ತಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾತಕ್ಕೆ ಮಳೆ ಹೋದವೋ...

ಮೋಡಗಳು ಮುನಿಸಿಕೊಂಡಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

"ಭಿಷ್ಟಿ ಪೊಡೇ ಟಪುರ್ ಟುಪುರ್"

ಮಳೆಯಿಲ್ಲದೆ ಮಳೆನೀರ ಹನಿಯ ಸದ್ದು.

ಈ ಶೀರ್ಷಿಕೆ, ಒಂದು ಬಂಗಾಳಿ ಹಾಡಿನ ಸಾಲು. ಟಪ್, ಟಪ್ ಮಳೆ ಬೀಳುತ್ತಿದೆ ಅಂತ ಇದರ ಅರ್ಥ. ಬಾಲ್ಯದಲ್ಲಿ ಕೇಳಿದ ಹಾಡು ಇದು.

ಬೆಂಗಳೂರ್ನಲ್ಲಿ ಬಿಟ್ರೆ ಮಳೆ ಮತ್ತೆಲ್ಲಿ ಶುರುವಾಗಿದ್ಯೋ ಗೊತ್ತಿಲ್ವಲ್ಲ!!. ಇಲ್ಲಿ ತೀರ್ಥಳ್ಳೀಲಿ ಏಪ್ರಿಲ್ ತಿಂಗ್ಳಲ್ಲಿ ಸ್ವಲ್ಪ ಮುಖಹಾಕಿ,"ತಡೀರಿ, ಬರ್ತೀನಿ" ಅಂದಿದ್ದೆ ಅದೆಲ್ಲಿಗ್ಹೋಯ್ತೋ? ಹೆಚ್ಚಿನಂಶ ಮಲೆನಾಡ ಅಡಿಕೆ ಬೆಳೆಗಾರ್ರ ಹಿಡಿಶಾಪಕ್ಕೆ ರೋಸಿ ಎಲ್ಲೋ ಗುಳೇ ಹೋಗಿರ್ಬೇಕು.
ಬೆಂಗ್ಳೂರು ಬೇಡ ಅಂತ ಬಯಸಿ ಬಯ್ಸಿ ನಾನು ಇಲ್ಲಿಗೆ ಬಂದಾಗ ಏನು ಜಲಸಿರಿ!! ಅಬ್ಬಾ ನೆನಸ್ಕೊಂಡ್ರೆ ಮೈಯೆಲ್ಲ ಪುಳಕ ಬರತ್ತೆ! ನನ್ನ ಬಾಲ್ಯಕಾಲದ ಅನೇಕ ನೆನೆಪುಗ್ಳು ಮಳೆ, ಪ್ರವಾಹ, ಮಳೆನೀರಿನ ಸದ್ದು, ಕೊಚ್ಚೆರಾಡಿ ಇವುಗ್ಳ ಜೊತೇನೇ ತೆಕ್ಕೆಯಾಗಿವೆ. ಬಾಲ್ಯಕಾಲದಲ್ಲಿ ಶಿವಮೊಗ್ಗಾದಲ್ಲಿ ಎಷ್ಟು ಮಳೆ ಬರಿತ್ತು ಅಂದ್ರೆ ಹೇಳೋದೇ ಬೇಡ. ದಿನ ಬಿಟ್ದಿನ ಶಾಲೆಗೆ ರಜೆ ಇರ್ತಿತ್ತು. ನದಿ ದಡ್ದಲ್ಲಿ ನಿಂತು ದಡ ಕೊರೀತಾ ಕೆಂಪು ರಾಡಿಯಾಗಿ ಹರಿಯೋ ತುಂಗೆ ನೋಡಿದ್ರೆ ಅದ್ಯಾವ ಪುಣ್ಯಾತ್ಮ "ತುಂಗಾ ಪಾನಂ" ಅಂದ್ನೋ ಅನ್ಸೋದು. ನಮ್ಮ ಮನೆಯ ಹತ್ರಾನೇ ಇದ್ದ ಒಂದು ದೊಡ್ಡ ಮೋರಿ- ವೈತರಣಿ ಅಂತ್ಲೇ ಕರೀತಿದ್ವಿ ಅದನ್ನ- ತುಂಬಿ ನೀರೆಲ್ಲ ಅಕ್ಕ ಪಕ್ಕದ ವಠಾರಕ್ಕೆ ನುಗ್ಗಿ ಒಳ್ಳೇ ಫಜೀತಿ. ನಮ್ಮೂರ ದೇವರ ಅರ್ಚಕರಾದ ರಾಂಭಟ್ರು ತಮ್ಮ ಧಡೂತಿ ಹೆಂಡ್ತೀನ ಅನಾಮತ್ತಾಗಿ ತೋಳಲ್ಲಿ ಬಳಸಿ ಎತ್ಕೊಂಡು ಸೊಂಟಮಟ್ಟ ನೀರಲ್ಲಿ ಅವ್ರನ್ನು ಸುರಕ್ಷಿತ ಜಾಗಕ್ಕೆ ಕರ್ಕೊಂಡ್ಹೋಗ್ತಿದ್ದ ದೃಶ್ಯ ಯಾವತ್ಗೂ ಮರ್ಯೋದೇ ಇಲ್ಲ. ಸೀಗೇಹಟ್ಟಿ ಅನ್ನೋ ಶಿವಮೊಗ್ಗದ ಎಕ್ಸ್‌ಟೆನ್ಶನ್ ಸದಾ ಮಳೆಗಾಲದಲ್ಲಿ ಸುದ್ದಿಯಲ್ಲಿರ್ತಿತ್ತು. ನಾಲ್ಕಾಣೆ ಕೊಟ್ರೆ ಸಾಕು ಪ್ರೈವೇಟ್ ಬಸ್ನೋರು ಗಿಟ್ಟಿಗಿರಿದು ಜನತುಂಬ್ಕೊಡು ಸೀಗೇಹಟ್ಟಿ, ಹರಕೆರೆ, ಗಾಜನೂರು ಎಲ್ಲ ಕಡೆ ಪ್ರವಾಹದ ದೃಶ್ಯ ತೋರ್ಸೋರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೀಗೇ ಅತ್ತು, ಸುಮ್ಮನಾಗುವ ಹೊತ್ತು!

ನಿನ್ನೆ ಬೆಳಿಗ್ಗೆಯಿಂದ ಏಕೋ ಖಿನ್ನತೆ.

ಒಂದು ಸುತ್ತು ಅತ್ತು ಸುಮ್ಮನಾಗಿದ್ದರೂ ದುಃಖ ಮಡುಗಟ್ಟಿದಂತಿರುವ ಮೋಡ ಯಾವಾಗ ಬೇಕಾದರೂ ಅಳಲು ಸಿದ್ಧವಾಗಿದೆ. ಹೊರಗೆ ಮಂಕು ಆಕಾಶ. ವಸುಂಧರೆಗೆ ಬೈದ ನಾಚಿಕೆಯೇನೋ, ಸೂರ್ಯ ತಲೆ ಮರೆಸಿಕೊಂಡಿದ್ದಾನೆ. ಹಸಿರು ತುಂಬಿದ ರಸ್ತೆಗಳು ಮೋಡದ ಕಣ್ಣೀರಿಗೆ ತೋಯ್ದು ಕಪ್ಪಾಗಿ ಕಾಣುತ್ತಿವೆ. ಒಳಗೆ ಅವ್ವ ಒಗ್ಗರಣೆ ಕೊಡುವ ಸದ್ದು. ಗಾಳಿಯಲ್ಲಿ ಹಿತವಾದ ಘಮ. ಆಕಾಶವಾಣಿ ಧಾರವಾಡದಲ್ಲಿ ಚೌಡಿಕೆ ಪದದ ರಣನ. ಅಪ್ಪ ಪೇಪರ್‌ ಓದುತ್ತಿರಬೇಕು. ನಾನು ಮೌನವಾಗಿ ಕೂತು ಖಿನ್ನತೆಯನ್ನು ಅಕ್ಷರಗಳನ್ನಾಗಿಸುತ್ತಿದ್ದೇನೆ.

ಏಕೋ ಬೇಸರ. ಅಡಿಗರು ನೆನಪಾಗುತ್ತಾರೆ. ’ಮತ್ತದೇ ಬೇಸರ, ಏನೋ ಕಾಡಲು, ಏನೋ ತೀಡಲು ಹೊತ್ತಿ ಉರಿವುದು ಕಾತರ’ (ಪೂರ್ತಿ ನುಡಿ ನೆನಪಾಗುತ್ತಿಲ್ಲ). ನನ್ನ ಮನದಲ್ಲಿ ಬೇಸರವೊಂದಿದೆ. ಆದರೆ, ಕಾತರ ಇಲ್ಲವಾದಂತಿದೆ.

ಐ-ಪಾಡ್‌ನಿಂದ ಸೋಸಿ ಬರುತ್ತಿದೆ ’ಭಾವಸಂಗಮ’ದಲ್ಲಿಯ ಕವನ. ’ದೂರದೊಂದು ತೀರದಿಂದ, ತೇಲಿ ಪಾರಿಜಾತ ಬಂಧ, ದಾಟಿ ಬಂತು ಬೇಲಿ ಸಾಲ, ಮೀಟಿ ಹಳೆಯ ಮಧುರ ನೋವ’. ಮನಸ್ಸಿನೊಳಗಿಂದ ಖಿನ್ನತೆ ಮತ್ತಷ್ಟು ಒಸರುತ್ತದೆ. ’ಎಲ್ಲಿ ಜಾರಿತೋ ಮನವು...!’

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನೆನಪು ಚಿಗುರುವ ಸಮಯ

ಇವತ್ತು ಬೆಂಗಳೂರಿನಲ್ಲಿ ಹದವಾದ ಮಳೆ ಬಿತ್ತು.

ನಾನು, ರೇಖಾ ಹಾಗೂ ಮಗಳು ಗೌರಿ ಮನೆಯ ದೊಡ್ಡ ಗೇಟಿನ ಸರಳಿಗೆ ಮುಖವಾನಿಸಿಕೊಂಡು ನಿಂತು, ಸಣ್ಣಗೆ ಬೀಳುತ್ತಿದ್ದ ಮಳೆ ನೋಡಿದೆವು. ಡಾಂಬರ್‌ ಬಳಿದುಕೊಂಡು ಚೆಂದವಾದ ರಸ್ತೆಯಲ್ಲಿ, ಹಳದಿ ದೀಪದ ಪ್ರತಿಫಲನ. ಅದು ರಂಗಸ್ಥಳವೇನೋ ಎಂಬಂತೆ ಮಳೆ ಹನಿಗಳು ಉಲ್ಲಾಸದಿಂದ ಸಿಡಿದು, ಚದುರಿ ಮಾಯವಾಗುತ್ತಿದ್ದ ಅಪೂರ್ವ ದೃಶ್ಯವನ್ನು ಗೌರಿ ತನ್ನ ಪುಟ್ಟ ಮನಸ್ಸಿನ ಕುತೂಹಲದಿಂದ ನೋಡಿದಳು.

ನನಗೆ ಊರು ನೆನಪಾಯಿತು.

ಮೇ ತಿಂಗಳಿನ ಈ ದಿನಗಳಲ್ಲಿ ಕೊಪ್ಪಳ ತಾಲ್ಲೂಕಿನ ನನ್ನೂರು ಅಳವಂಡಿಯಲ್ಲಿ ಕಡು ಬೇಸಿಗೆ. ಫೆಬ್ರುವರಿ ತಿಂಗಳಿಂದಲೇ ಚುಚ್ಚತೊಡಗುವ ಬಿಸಿಲಿಗೆ ಮಾರ್ಚ್‌ ತಿಂಗಳ ಹೊತ್ತಿಗೆ ತುಂಬು ಪ್ರಾಯ. ಏಪ್ರಿಲ್‌-ಮೇ ತಿಂಗಳಲ್ಲಂತೂ ಕಡು ಬೇಸಿಗೆ. ಎಂಥಾ ಮಳೆಯನ್ನೂ ಮೊಗೆದು ಕುಡಿದು ಮತ್ತೆ ಒಣಗಿ ನಿಲ್ಲುವ ಬಿಸಿಲ ಬಯಲುಗಳು. ಕಾಲಿನ ಮೀನಖಂಡದವರೆಗೂ ನುಂಗಬಲ್ಲ, ಕಪ್ಪು ಮಣ್ಣಿನ ಬಿರುಕುಗಳು. ಮಸಾರಿ (ಕೆಂಪು) ಹೊಲದ ಬೆಣಚುಕಲ್ಲುಗಳು ಕಾಯ್ದು ಹೆಂಚಿನಂತೆ ಧಗಿಸುತ್ತವೆ. ನಮ್ಮ ಬಡಬಾಲ್ಯದ ಬರಿಗಾಲನ್ನು ಅವು ಅದೆಷ್ಟು ಸಾರಿ ಸುಟ್ಟು ಬೊಬ್ಬೆ ಏಳಿಸಿದ್ದವೋ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಗುಡುಗು ಸಿಡಿಲಿನ ಮಳೆ ಹಿಡಿದ ಬೆಂಗಳೂರು

ಬೆಳಿಗ್ಗಿನಿಂದಲೇ ನನ್ನ ಡೆಸ್ಕ್ ಟಾಪಿನ ಮೇಲೆ ವೆದರ್ ರಿಪೋರ್ಟ್ ತಿಳಿಸುವ ಪುಟ್ಟ ಅಪ್ಲಿಕೇಶನ್ನು "ಥಂಡರ್ ಸ್ಟಾರ್ಮ್" ಎಂದೇ ಕಪ್ಪು ಮೋಡದ ಐಕಾನ್ ಸೂಚಿಸುತ್ತ ಮುಸುಕಹಾಕಿಕೊಂಡಿತ್ತು. ಮಳೆ ಬರುತ್ತಿದೆಯೋ ಏನೋ ಎಂದುಕೊಂಡು ಹೊರಬಂದು ಹಲವು ಸಾರಿ ನೋಡಿದರೂ ತಿಳಿ ಬಿಸಿಲೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಮಳೆ