ಹೊಸ ವರುಷವೆ ಬಾ ಹೊಸ ಹಸೆಗೆ ...

0

 

ಹೊಸ ವರುಷವೆ ಬಾ 
ಹೊಸ ಹಸೆಗೆ ...
 
ಹರಿಯಲಿ ಗಾನ ಸಂತಸ ತಾನ 
ಸುಖ ಸುಮ್ಮಾನ ದಿಶೆ ದಿಶೆಗೆ ;
ಬಾಳಲಿ ತುಂಬಿದೆ ಬರಿ ನೋವು 
ತರದಿರು ಮತ್ತೆ ಕಹಿ ಬೇವು;
 
ಮನ ಮನಗಳಲಿನ ಕತ್ತಲು ತೊಲಗಲಿ 
ಹೂವಿನ ಪರಿಯಲಿ ಜೀವನವರಳಲಿ 
ಜೀವಕೆ ಬೇಕು ಸಿಹಿ ಮಾವು...
 
ಹಸಿರಾಡಲಿ ನೆಲ ಹರಿದಾಡಲಿ ಜಲ 
ವರುಷ ಪೂರ್ತಿ ಸುಖವಿರಲಿ ಜನ;
 
ದ್ವೇಷದ ಛಲದುರಿಯಲಿ ಬೆಂದಿದೆ ನೆಲ 
ಒಲವು ಮೂಡಿಸುವ ವೃಷ್ಟಿಯಾಗಿಸು 
ಸಂತುಷ್ಟವಾಗಲಿ ಸಕಲಮನ...
-ಮಾಲು 
 
 
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.