ಹೆಸರ್ಯಾಕೆ ಬೇಕು ನನಗೊಂದು

0

ಹೆಸರ್ಯಾಕೆ ಬೇಕು ನನಗೊಂದು
ಹೆಸರ್ಯಾಕೆ ಬೇಕು?
ಕೆಸರಲ್ಲಿ ಕೊಡರಾಡಲೆನಗೊಂದು ಹೆಸರ್ಯಾಕೆ ಬೇಕು?

ನೀರಡಿಸಿದಾ ಹುಲ್ಲೆ ನಡು ತೊರೆಯ
ಹುಡುಕುತಿರಲು  ನೋಡಿಕೊಂಬವನೊಬ್ಬ
ಕೊಡಮಾಡುವ ಹೆಸರ
ಹತ್ತು ಹರದಾರಿ ದಾಟಿ ಸಿಗದಿರಲು ನೀರು

ಹಸಿರ ಹಿಂದೆ ಹೋದವರಿಲ್ಲ
ಹೆಸರ ಕಚ್ಚಿಕೊಂಬವರೆಲ್ಲ
ಹೊಸ ಹಸಿವ ಹೀರಿ
ಹಿರಯನಾದೊಡೆ ಹೆಸರ್ಯಾಕೆ ಬೇಕೆನಗೆ
ಹೆಸರ್ಯಾಕೆ ಬೇಕು?

ಸತ್ತಂತೆ ಬದುಕುವೆಯಾ..
ಸತ್ತುಬದುಕುವೆಯಾ?
ಆರಡಿಗೆ ಮೂರಡಿಗೆ ಸುಂಕವ
ತೀರಿಸಲು ಹಿನ್ನಡೆಯೇಕೆ ಮನವೆ?

ಹೆಸರ್ಯಾಕೋ ನಿನಗೆ ಹೆಸರ್ಯಾಕೊ?
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೆಸರ ಹಿ೦ದೆ ಹೋದವರೆಲ್ಲಾ ಬಸಿರಾಗಿ ಬ೦ದರಯ್ಯಾ.... ಆರ೦ಭದಲ್ಲಿ “ನನಗೆ“ ಇದ್ದುದು ಅ೦ತ್ಯದಲ್ಲಿ “ನಿನಗೆ“ ಆಗಿದ್ದು ಏಕೆ...? ಬಹುಶ: ಆರ೦ಭದಲ್ಲಿ ಹೆಸರನ್ನು ಗಳಿಸುವತ್ತ ಮನಸ್ಸು ಮಾಡಿದ್ದ ಮನಸ್ಸು ... ಅ೦ತ್ಯದಲ್ಲಿ ತನ್ನನ್ನು ಗಟ್ಟಿಯಾಗಿಸಿಕೊ೦ಡು ಹೆಸರೆ೦ಬ ಮರೀಚಿಕೆಯ ಹಿ೦ದೆ ಓಡುವುದು ಬೇಡವೆ೦ಬ ನಿರ್ಧಾರಕ್ಕೆ ಬ೦ತೇನೋ! ಚೆನ್ನಾಗಿದೆ.. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ..