ಹೆಸರು ಬೇಳೆ ಇಡ್ಲಿ

4.5
ಬೇಕಿರುವ ಸಾಮಗ್ರಿ: 

‍೧ ಅಳತೆ ಹೆಸರು ಬೇಳೆ

‍‍೧ ಅಳತೆ‍ ದಪ್ಪ ಅವಲಕ್ಕಿ

‍೩ ಅಳತೆ ಅಕ್ಕಿ/ಇಡ್ಲಿ ರವೆ

ತಯಾರಿಸುವ ವಿಧಾನ: 

ಬೆಳಗ್ಗೆ ಹೆಸರು ಬೇಳೆ ಮತ್ತು ಅವಲಕ್ಕಿ ಸೇರಿಸಿ, ನೆನೆಯಲು ಇಡಿ. 

‍ಮಧ್ಯಾಹ್ನದ ವೇಳೆ ಬೇಕಾಗುವಷ್ಟು ನೀರು ಸೇರಿಸಿ, mixer/grinder ‍ನಲ್ಲಿ ತಿರುವಿ, ಹಿಟ್ಟು ತಯಾರಿಸಿಕೊಳ್ಳಿ. 

‍ಹಿಟ್ಟಿಗೆ ಅಕ್ಕಿ ರವೆ ಸೇರಿಸಿ, ಬೆರೆಸಿಕೊಳ್ಳಿ. 

‍ಮಾರನೆ ದಿನಕ್ಕೆ ರುಚಿಯಾದ ಇಡ್ಲಿ ತಯಾರಿಸಲು, ಹಿಟ್ಟು ಉಕ್ಕಿರುತ್ತದೆ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಇಡ್ಲಿ ಅಟ್ಟಕ್ಕೆ ಹಿಟ್ಟು ಹೊಯ್ದು, ಬಿಸಿ ಬಿಸಿ ಇಡ್ಲಿ ತಯಾರಿಸಿ, ಚಟ್ನಿ/ಸಾಂಬಾರ್ ನೊಂದಿಗೆ ಬಡಿಸಿ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಉದ್ದಿನ ಬದಲು ಹೆಸರು ಬೇಳೆ+ ಅವಲಕ್ಕಿ...ಕಾಂಬಿನೇಶನ್ ಚೆನ್ನಾಗಿದೆ, ಮಾಡಿನೋಡಬೇಕು. ಧನ್ಯವಾದ ಸುಮ ಅವರೆ.

ಹದಿನೈದು ದಿನಗಳ ಹಿಂದಷ್ಟೇ ಈ ಆಲೋಚನೆ ನನಗೆ ಬಂದಿತ್ತು - ಇಡ್ಲಿ ಮಾಡುವಾಗ ಉದ್ದಿನ ಬೇಳೆಯ ಬದಲು ಇತರ ಬೇಳೆಗಳನ್ನು ಬಳಸಿದರೆ ಹೇಗೆ ಅಂತ! ಸರಿ, ನವೆಂಬರ್ ೧೫ ಶನಿವಾರ ರಜದ ದಿನ ಹೆಸರು ಬೇಳೆ ಇಡ್ಲಿಯನ್ನು ತಯಾರಿಸಿಯೇ ಬಿಟ್ಟೆ (ಹಿಂದಿನ ದಿನ ನೆನೆ ಹಾಕಿದ್ದು). ಭಾನುವಾರ ನೋಡಿದರೆ ಸಂಪದದಲ್ಲಿ ಹೆಸರು ಬೇಳೆ ಇಡ್ಲಿ ಪ್ರತ್ಯಕ್ಷವಾಗಿದೆ! ವ್ಯತ್ಯಾಸವೆಂದರೆ ನಾನು ಅವಲಕ್ಕಿ ಬಳಸಿರಲಿಲ್ಲ. ಮೇಲಾಗಿ ಇಡ್ಲಿ ಬೇಯಿಸುವಾಗ ಅಡುಗೆ ಸೋಡ ಅಥವ ಇನೋ ಬಳಸದೆ ಇದ್ದ ಕಾರಣ, ಇಡ್ಲಿ ಉದ್ದಿನಬೇಳೆ ಇಡ್ಲಿಯಷ್ಟು ಮೃದುವಾಗಿ ಬರಲಿಲ್ಲ. ಬಹುಶಃ ಉದ್ದಿನಷ್ಟು ಹುದುಗು ಹೆಸರುಬೇಳೆಯಿಂದ ಬರದಿರುವುದೂ ಕಾರಣವಿರಬಹುದು!
ಇನ್ನು ರುಚಿಯಲ್ಲಿ ಹೇಳುವುದಾದರೆ ಬರೇ ಇಡ್ಲಿಯನ್ನು ತಿಂದರೆ ಅಕ್ಕಿಯ ರುಚಿಯ ಹಿನ್ನೆಲೆಯಲ್ಲಿ ಹೆಸರುಬೇಳೆಯ ರುಚಿಯೂ ನಾಲಿಗೆಗೆ ತಿಳಿಯುತ್ತಿತ್ತು. ಚಟ್ಣಿಯ ಜೊತೆ ತಿಂದಾಗ ಮಾತ್ರ ಮಾಮೂಲಿ ಇಡ್ಲಿಯ ರುಚಿಯಂತೆಯೇ.
ಮುಂಬರುವ ವಾರಗಳಲ್ಲಿ ಕಡಲೆಬೇಳೆ ಮತ್ತು ತೊಗರಿ ಬೇಳೆ ಇಡ್ಲಿಗಳ ಪ್ರಯೋಗವೂ ಪಟ್ಟಿಯಲ್ಲಿದೆ. ಆದರೆ ನನಗನಿಸುವಂತೆ ಈ ೪ ಬೇಳೆಗಳಲ್ಲಿ ಉದ್ದನ್ನು ಹೊರತುಪಡಿಸಿ ಮಿಕ್ಕ ೩ಕ್ಕೂ ತಮ್ಮದೇ ಆದ ರುಚಿ ಸ್ವಲ್ಪ ಬಲವಾಗಿಯೇ ಇರುವುದರಿಂದ ಉದ್ದಿನ ಬೇಳೆ ಇಡ್ಲಿಯ ನ್ಯೂಟ್ರಲ್ ರುಚಿ ಅವುಗಳಿಗೆ ಬರುವುದಿಲ್ಲವೇನೋ! ಪ್ರಯೋಗ ಮಾಡಲಂತೂ ಅಡ್ಡಿಯಿಲ್ಲ!

ಧನ್ಯವಾದಗಳು ಸುಮಾ ಅವರೆ! ನಿಮ್ಮ ಪಾಕಪ್ರಯೋಗ ಹೀಗೆಯೆ ಮುಂದುವರೆಯಲಿ!

- ಕೇಶವಮೈಸೂರು