ಹೆಣ್ಮನದ ಹವಾಗುಣ....!

0

ಕವಿ ಭಾವ:

ಹೆಣ್ಣಿನ ಮನಸನ್ನು ಸರಿಯಾಗಿ ಅರಿತವರಾರು? ಅದೊಂದು ವಿಶಾಲವಾದ ಅಷ್ಟೆ ಆಳವಾದ ಶರಧಿಯ ಹಾಗೆ ನಿಕ್ಷಿಪ್ತ ನಿಕ್ಷೇಪ. ಆ ಕಾರಣದಿಂದಲೆ ಏನೊ ಹೆಣ್ಣಿನ ನಡುವಳಿಕೆ ಮನೋಭಾವನೆಗಳಲ್ಲಿ ಎಲ್ಲಾ ತರಹದ ಬಗೆ ಬಗೆಯ ಬಣ್ಣಗಳು ಕಾಣುತ್ತಿರುತ್ತವೆ. ಪರಿಸರದಲ್ಲಿನ ಹವಾಮಾನದಂತೆ ಊಹಿಸಲಾಗದ, ತಟ್ಟನೆ ಬದಲಾಗುವ ಗುಣಾವಗುಣಗಾಲ ಸಂಕಲನವನ್ನೆತ್ತಿ ಕಟ್ಟಿಡುವ ಯತ್ನ ಈ ಕವನದಲ್ಲಿದೆ.

 
 
ಹೆಣ್ಮನದ ಹವಾಗುಣ....
-------------------------------------------------
 
ಹೆಣ್ಮನದ ಹವಾಗುಣ ಮೋಡದ ತರ 
ಕವಿದಿರಬಹುದು ವಿಸ್ತಾರ ಮಳೆಬಾರದೆ ಪೂರ 
ಚೀರಾಡಿ ಬಿಡಬಹುದು ಮುಸಲಾಧಾರೆಯ ವಾರ!
 
ಉತ್ಸಾಹದ ಬುಗ್ಗೆ ಉದ್ವೇಗದ ಸುಗ್ಗಿಸರ 
ಚಟಪಟ ಅರಳು ಹುರಿದಂತೆ ಮಾತಾಡಿ ತೀರ 
ವರುಷದ ಸರಕೆಲ್ಲ ಒಂದೆ ದಿನ ಹೊರಹಾಕುವವರ!
 
ಹುಮ್ಮಸ್ಸು ಕುಗ್ಗೆ ಕಾರಣವಿರದಿದ್ದರು ಜಡೆ  
ಸುಮ್ಮನೆ ಮಾತಾಡದೆ ಕೂತುಬಿಟ್ಟು ಒಂದೇಕಡೆ 
ತಿನಿಸಿಗು ಮುನಿಸಿಕೊಂಡು ಎಣ್ಣೆ ಸೀಗೆ ಹಗೆತನ ಕಾಡೆ!
 
ಏನು ಮಾಡದವರ ಮೇಲೆಲ್ಲಾ ಚೀರಾಟ  
ಸಣ್ಣಪುಟ್ಟ ಕಳ್ಳೆಪಿಳ್ಳೆ ನೆಪಗಳಿಗೆಲ್ಲ ಹೋರಾಟ 
ಅತ್ತು ಕರೆದು ಭೋರ್ಗರೆದು ಅಕಟ ಹೇಳಬಾರದೆ ಸಂಕಟ!
 
ಇದ್ದಕ್ಕಿದ್ದಂತೆ ಪ್ರೀತಿ ಕರುಣೆ ಪ್ರೇಮ ಧರಿತ್ರಿ 
ಊರಿನೆಲ್ಲ ಸಂತಸಗಳ ಹೊತ್ತು ಸುರಿವಾ ಸೌಮಿತ್ರಿ 
ತಿಂಗಳೊಂದರ ಒಪ್ಪತ್ತಿನ ಅಡಿಗೆಯದೊಂದೆ ದಿನದಲಿ ಖಾತ್ರಿ!
 
ಒಂದಿನ ಸಿಂಗಾರದಲಿ ರಮಣಿ ರಸಭರಿತ ಖನಿ 
ಖಿನ್ನತೆ ಹಲ್ಕಿರಿದಾಗ ತಲೆಯೂ ಬಾಚದ ದನಿ ರಜನಿ 
ಎರಡರ ಮಧ್ಯೆ ಏನು ಮಾಡಲರಿಯದ ಮೊಂಡಿನ ಭಗಿನಿ!
 
ಹೆಣ್ಮನವೆ ಹೀಗೆ ಪ್ರತಿಕ್ಷಣ ಬದಲಾಗುವ ಬಗೆ 
ಕಣ್ಣೊಳಗೆ ಕಾಣುವ ಬಗೆ ಕೆಳೆಯೊ ಹಗೆತನವೊ ಹೇಗೆ 
ಅರಿವಾಗದ ಚಂಚಲತೆ ಕೂಗೆ ಬಿಟ್ಟು ಬಿಡದೆ ಮನದೊಳಗೆ!
 
-------------------------------------------------------------------
ನಾಗೇಶ ಮೈಸೂರು, ೧೪.ಅಕ್ಟೋಬರ.೨೦೧೨ 
-------------------------------------------------------------------
 


ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

:) ಹೆಣ್ಣಿನ ಮನ ಮೀನಿನ ಹೆಜ್ಜೆ ಗುರುತಿನಂತೆ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು ಕವಿನಾಗರಾಜರೆ, ಕಾವ್ಯಾ / ಲೋಕಾನುಭವದ ಮಾತು :-) ಆದರೆ ಈ ತರಹದ ಕಾವ್ಯಾಭಿಪ್ರಾಯಗಳೆಲ್ಲ ಪುರುಷ ದೃಷ್ಟಿಕೋನದಿಂದ ಬಂದಿದ್ದೆ ಹೆಚ್ಚು;  ಸ್ತ್ರೀ ದೃಷ್ಟಿ ಕೋನದಿಂದಲೂ (ಬಹುಶಃ ಕವಯತ್ರಿಗಳ ಮೂಲಕ) ವಿಶ್ಲೇಷಣೆ ನಡೆದರೆ / ಕಾವ್ಯಗಳಾಗಿ ಬಂದರೆ ಚೆನ್ನಾಗಿರುತ್ತದೆ ಅನಿಸುತ್ತದೆ :-) - ನಾಗೇಶ ಮೈಸೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

"ಏನು ಮಾಡದವರ ಮೇಲೆಲ್ಲಾ ಚೀರಾಟ ಸಣ್ಣಪುಟ್ಟ ಕಳ್ಳೆಪಿಳ್ಳೆ ನೆಪಗಳಿಗೆಲ್ಲ ಹೋರಾಟ ಅತ್ತು ಕರೆದು ಭೋರ್ಗರೆದು ಅಕಟ ಹೇಳಬಾರದೆ ಸಂಕಟ!" ;())) ಹವಾಗುಣದ‌ ಬಗ್ಗೆ ಮುನ್ನೆಚ್ಹ್ಹರಿಕೆ ಸಿಗುವುದು... ಆದರೆ ಹೆಣ್ ಮನದ‌ ಅನ್ತರ್ಯ‌ ....... ಕಸ್ಟ ಕಸ್ಟ..!! ಶ್ಹುಭವಾಗಲಿ \|/
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರಾಯಶಃ ಸ್ತ್ರೀಯ ಆ ಪ್ರಕೃತಿ ಸಹಜ ಗುಣಗಳೆ ವ್ಯಕ್ತಿತ್ವ ವಿಶೇಷಣದ ಮೊತ್ತವಾಗಿ ಆಕರ್ಷಣೆಯ ಪರಿಧಿಯತ್ತ ಪುರುಷರನ್ನು ಸೆಳೆಯುವ ಅಂಶವೂ ಆಗಿದೆಯೆಂದು ಕಾಣುತ್ತದೆ. ಈ ಗುಣ ವ್ಯತ್ಯಾಸಗಳೆ ಇರದಿದ್ದರೆ ಪರಸ್ಪರರ ಆಕರ್ಷಣೆಗೆ ತಾವಿರುತ್ತಿತ್ತೊ ಇಲ್ಲವೊ ಅನುಮಾನ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.