ಹೆಣ್ಣೇ ನಿನ್ನ ಆತ್ಮಬಲಕ್ಕೆ ಇದೋ ಜೈ.

5

 

ಓ ಹೆಣ್ಣೇ ನಿನಗದೆಷ್ಟು ರೂಪ
ಮಾತೆಯಾಗಿ ಮಮತೆಯ ಪ್ರತಿರೂಪ
ಮಗಳಾಗಿ ತೋರುವೆ ಅನುಕಂಪ
ಗೃಹಿಣಿಯಾಗಿ ಬೆಳಗುವೆ ನಂದಾದೀಪ.
 
ಪುರಾತನ ಕಾಲದಲ್ಲಿತ್ತು
ಹೆಣ್ಣಿಗದೆಂಥಾ ಮಾನ್ಯತೆ
ಹೆಣ್ಣು ಪೂಜಿಸಲ್ಪಡುವಲ್ಲಿ
ನೆಲೆಸುವಳೆಂದರು ದೇವತೆ.
 
ಬದಲಾದಳೇ ಹೆಣ್ಣು
ಕಾಲ ಸರಿದಂತೆ
ಭಾವನೆ ಬದಲಾಯಿತೆ
ಜನರು ಮುಂದುವರಿದಂತೆ.
 
ಹಡೆದ ತಾಯಿ ಹೆಣ್ಣಾದರೂ
ಹೆಣ್ಣು ಮಗುವ ಒಲ್ಲರು
ಧರೆಗಿಳಿವ ಮುನ್ನ ಹೊಸಕುವರು
ಬುದ್ಧಿ ಇರುವವರು, ಇಲ್ಲದವರು.
 
ಹಿಡಿಯಲಿಲ್ಲವೆ ಶಸ್ತ್ರ
ಸೌಟು ಹಿಡಿದ ಕೈ
ಆಳಲಿಲ್ಲವೆ ರಾಜ್ಯ
ತೊಟ್ಟಿಲ ತೂಗಿದ ಕೈ.
 
ಹಿಮಾಲಯ ಏರಲು ಸೈ
ಅಂತರಿಕ್ಷಯಾನಕ್ಕೂ ಸೈ
ರಕ್ಷಣೆ, ಹೋರಾಟ ಎಲ್ಲಕ್ಕು ಸೈ
ಹೆಣ್ಣೇ ನಿನ್ನ ಆತ್ಮಬಲಕ್ಕೆ ಇದೋ ಜೈ.
 
ಶಾರಿಸುತೆ.
ಚಿತ್ರ ಕೃಪೆ:ಅಂತರ್ಜಾಲ
 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.