ಹುರುಳಿಕಾಳಿನ ಕಡುಬು

1
ಬೇಕಿರುವ ಸಾಮಗ್ರಿ: 

ಅಕ್ಕಿ 1 ಕಪ್, ಹುರುಳಿಕಾಳು ಅರ್ಧ ಕಪ್, ಉದ್ದಿನಬೇಳೆ 4 ಚಮಚ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: 

ಹುರುಳಿಕಾಳನ್ನು 10ಗಂಟೆಗಳ ಕಾಲ ನೆನೆಸಿಡಿ, ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಎರಡು ಗಂಟೆ ನೆನಸಿಡಿ. ಅಕ್ಕಿಯನ್ನು ತರಿತರಿಯಾಗಿ, ಉದ್ದಿನಬೇಳೆಯನ್ನು ನುಣ್ಣಗೆ ರುಬ್ಬಿ, ಎರಡನ್ನೂ ಬೆರೆಸಿ ಹುದುಗಲು ಬಿಡಿ. ಹುರುಳಿಕಾಳನ್ನು ನುಣ್ಣಗೆ ರುಬ್ಬಿ , ಹುದುಗಿದ ಅಕ್ಕಿ, ಉದ್ದಿನಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಉಪ್ಪು ಸೇರಿಸಿ ಕಲಸಿಕೊಳ್ಳಿ, ತಕ್ಷಣ ಲೋಟದಲ್ಲಿ ಹಾಕಿ, ಕಡುಬಿನ ರೀತಿಯಲ್ಲಿ ಹಬೆಯಲ್ಲಿ ಬೇಯಿಸಿ. ಬಿಸಿಯಿರುವಾಗ ಮೃದುವಾದ ಈ ಸುರುಳಿ ಕಡುಬನ್ನು ಬೆಣ್ಣೆ ಮತ್ತು ಕಾಯಿ ಚಟ್ನಿಯೊಂದಿಗೆ ಸವಿಯಿರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.