ಹುಚ್ಚು ಹುಡುಗನ ಮೆಚ್ಚುವಂತ ಪ್ರೀತಿ

4.666665

ನನ್ನ  ಒಲವನು ನಿನ್ನ ಹೆಸರಲಿ ಬರೆದಾಗಿದೆ ಈ ಮನ,

ನೀ ಇಲ್ಲದೇ ಇರಲಾರೆ ನಾ ಒಂದು ಕ್ಷಣ,

ಒಲವೆ ಜೀವನ ಆ ಜೀವವೇ ನೀನೇನಾ,

ನಿನ್ನ ಈ ಪ್ರೀತಿ ನಾ ಮರೆಯಲು ಸಾಧ್ಯಾನ.


ನನ್ನ ಈ ನಗೂವಿಗೂ ನಿನ್ನ ಈ ಪ್ರೀತಿಯೇ ಕಾರಣ

ನೀ ಪ್ರೀತಿಸಿ ನನ್ನ,  ಎಲ್ಲಿ ಹೋದೆ ನೀ ಈ ದಿನ,

ಬಾರೆ ಗೆಳತಿಯೇ ನಾ ಹುಡುಕಲಾರೆ ನಿನ್ನ,

ಈ ಬದುಕನು ನಿನಗಾಗಿ ಅರ್ಪಿಸುವೆ ಓ ಚಿನ್ನ.


ನೀನು ಇಲ್ಲದೇ ನಾನೇಗೆ ಕಳೆಯಲಿ ಈ ದಿನ,

ಓ ಪ್ರೇಮವೇ ನೀ ಕೊಂಧೆಯಲ್ಲೇ ನನ್ನ,

ನಿನ್ನ  ಉಸಿರಲ್ಲೂ ಬಂದು ಕಾಡುವೆ ನಾ ನಿನ್ನ,

ಬಿಡೆನು ನಿನ್ನನು ನೀ ಮರೆತರು ನನ್ನ.


ಓ ಮನವೇ ಇಂದು ಬಾಡಿಹೋಯ್ತು ನನ್ನ ಈ ಪ್ರೇಮ

ನನ್ನ ಈ ಕ್ಷಣ ಇಂದು ನನಗೂ ಬೇಡವಾಯ್ತು ಈ ದಿನ,

ಓ ದೇವರೇ ಇದೆಲ್ಲಾ ನೀ ಮಾಡಿದ ಕುತಂತ್ರಾನ!

ಅಂತೂ ಮುಗಿಸಿದೆ ನನ್ನ ಈ  ಹುಚ್ಚು ಪ್ರೀತಿನಾ......

 

                                     ಸೋಮೇಶ್  ಗೌಡ.
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (9 votes)
To prevent automated spam submissions leave this field empty.