ಸೂರ್ಯ-ಸಾಗರ ಜೀವನ-ಸಾರ....

5

             ಸೂರ್ಯ-ಸಾಗರ ಜೀವನ-ಸಾರ....
 
ನಿಶೆಯ ನೀರವ ಗರ್ಭದಿಂದ ಮೂಡಣ ರವಿಯ ಚುಮು ಚುಮು ಬೆಳಗಿನ ಬೆಚ್ಚಗಿನ ಹೊಂಗಿರಣ ಸೋಕಿ ನಿಸರ್ಗ ಕೂಸು ತುಸು ತಡ ಮಾಡದೆ  ಸಾಗರದಲಿ ಸೆರೆಯಾಗಿ ಕಣ್ಸೂರೆ ಗೊಳಿಸಿತು. 
 
ಮಟ ಮಟ ಮಧ್ಯಾಹ್ನ ಹರೆಯದ ಹುರುಪಿನ ಸುಡು ಬಿಸಿಲ ನೀಲ ಗಗನ ಸಾಗರದಲೆಗಳ ಬಡಿದೆಬ್ಬಿಸಿ ಬಡಬಡನೆ ಬದಿಗೆ ಬಡಿದು ಮರಳ ಕೋಟೆಯನ್ನು ಉರುಳಿಸಿ ನೀಲ್ಗಡಲ ಒಡಲು ಮನವ ಕಲಕಿತು.
 
ಇಳಿ ಸಂಜೆಯ ಕಿತ್ತಲೆ ರಂಗಿನ ಪಡುವಣ ನೇಸರ ಮುಂಜಾವಿನ ಬೆಚ್ಚಗಿನ ಹೊಂಗಿರಣಗಳ ನೆನಪಿನಂಗಳಕೆ ತೂರಿ ವಾರಿಧಿಯ ಸರಹದ್ದನು ಮುದ್ದಿಸಿ ಜಾರಿತು.
 
ರವಿರಾಜ ರಜನಿಯ ಸೆರಗಿಡಿದು ರಜನೀಶನಲಿ ಮರೆಯಾದ ಮಿನುಗಿದ ಕನಸಿನ ತಾರೆಗಳು ಸಾಗರದ ಅಂಚಿನಲಿ ಮಿಂಚಿ ಶರಧಿಯ ಜಲಚರಗಳಿಗೆ ನೀರವತೆಯ ಅಲೆಗಳು ರಮಿಸಿ ಶಾಂತಿಯಲಿ ವಿರಮಿಸಿತು.
——Rukku 
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.