ಸುದ್ದಿ ವಾಹಿನಿಗಳು ತಿದ್ದಿಕೊಳ್ಳಬೇಕು

5

 
  ಕನ್ನಡದ ಕಿರುತೆರೆ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಕೆಲವೊಮ್ಮೆ ಎಷ್ಟು ಎಳಸಾಗಿ ಆಡುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.
  * ಜಿ.ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರಗೊಂಡ ಅವರ ಸಂದರ್ಶನದಲ್ಲಿ ವಾಹಿನಿಯ ವರದಿಗಾರ್ತಿಯು ಜಿವೆಂ ಅವರಿಗೆ ಕೇಳಿದ ಪ್ರಶ್ನೆ ಹೀಗಿತ್ತು. "ಈಗ ನಿಮಗೆ ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ, ಕನ್ನಡಕ್ಕೆ ಮುಂದೆ ಏನು ಕೆಲಸ ಮಾಡಬೇಕೂಂತಿದೀರಿ?"
    ಕನ್ನಡಕ್ಕಾಗಿ ದುಡಿಯುತ್ತಲೇ ೯೭ ವಸಂತಗಳನ್ನು ದಾಟಿರುವ ಹಿರಿಯ ಜೀವಕ್ಕೆ ಕೇಳುವ ಪ್ರಶ್ನೆಯೇ ಇದು? ಈ ಪ್ರಶ್ನೆ ಆಲಿಸಿ ಜಿವೆಂ ಅವರಿಗೆ ನಗು ಬಂತು. ಅವರು, "ನನಗೀಗ ೯೮ನೆಯ ವರ್ಷ. ಎಲ್ಲ ಕೆಲಸಗಳನ್ನೂ ನಿಲ್ಲಿಸಬೇಕೂಂತ ಇದ್ದೇನೆ", ಎಂದು ಉತ್ತರಿಸಿದರಾದರೂ, ಬೆನ್ನಿಗೇ, "ಅಧ್ಯಕ್ಷ ಪದವಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ", ಎಂದು ನುಡಿದು ಮುಂದಿನೆರಡು ವರ್ಷಗಳಲ್ಲಿ ತಾವು ಕೈಕೊಳ್ಳಬೇಕೆಂದಿರುವ ಕನ್ನಡದ ಕೆಲಸದ ಬಗ್ಗೆ ವಿವರಿಸಿ ಆ ವರದಿಗಾರ್ತಿಯ ಬೆಲೆ ಉಳಿಸಿದರು.
  * ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಮ್ಮಿಕೊಂಡಿದ್ದ ಪ್ರತಿಭಟನೆಯ ಬಗ್ಗೆ ಸಂಘದ ಇಬ್ಬರು ಪದಾಧಿಕಾರಿಗಳೊಡನೆ ಚರ್ಚೆಯನ್ನು ಪ್ರಸಾರ ಮಾಡಿದ ಇನ್ನೊಂದು ಸುದ್ದಿವಾಹಿನಿಯ ನಿರೂಪಕರು ಪದೇ ಪದೇ, "ಆಂಟಿ ಮೈನಾರಿಟಿ, ಆಂಟಿ ಕಾಂಗ್ರೆಸ್", ಎನ್ನುತ್ತ ಆ ಪದಾಧಿಕಾರಿಗಳ ತಲೆ ತಿನ್ನುತ್ತಿದ್ದರು. ಆರ್.ಎಸ್.ಎಸ್. ಎಂದರೆ ಇಷ್ಟೇ ಎಂದು ಅವರು ತೀರ್ಮಾನಿಸಿಬಿಟ್ಟಂತಿತ್ತು!
  * ಇದೇ ನಿರೂಪಕರು ತಮ್ಮ ಮಾಮೂಲು ಅಭ್ಯಾಸದಂತೆ ತಮ್ಮ ಮಾತಿನಲ್ಲಿ ಇಂಗ್ಲಿಷ್ ವಾಕ್ಯಗಳನ್ನು ಹೇರಳವಾಗಿ ಬಳಸುತ್ತಿದ್ದರು. ತಮ್ಮದು ಕನ್ನಡದ ವಾಹಿನಿ, ಇಂಗ್ಲಿಷ್ ಗೊತ್ತಿಲ್ಲದವರೂ ಕಾರ್ಯಕ್ರಮ ನೋಡುತ್ತಿರುತ್ತಾರೆ ಎಂಬ ಪ್ರಜ್ಞೆಯ ಕೊರತೆ ಅವರಿಗೆ!
  * ಅವರೊಡನೆ ಸಹನಿರೂಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯ ಬಗ್ಗೆಯಂತೂ ಬರೆಯಲಿಕ್ಕೇ ಮುಜುಗರವಾಗುತ್ತದೆ. ಭರ್ಜರಿ ಸೂಟು ಮತ್ತು ಮುಖದಮೇಲೆ ಕೃತಕ ನಗೆ ಬಿಟ್ಟು ಇನ್ನೇನೂ ಬಂಡವಾಳವಿಲ್ಲದ ಆ ವ್ಯಕ್ತಿ ಎಂದಿನ ತನ್ನ ಪಲಾಯನಸೂತ್ರದನುಸಾರ ಕಾರ್ಯಕ್ರಮದುದ್ದಕ್ಕೂ ಹುಸಿನಗೆ ನಗುವುದು, ಆಗಾಗ ಅರ್ಥಹೀನವಾಗಿ ತಮಾಷೆ ಮಾಡುವುದು ಮತ್ತು ತನ್ನ ವಿಷಯ ಅಜ್ಞಾನವನ್ನು ಮುಚ್ಚಿಕೊಳ್ಳಲು ಪದೇ ಪದೇ, "ಎಲ್ಲೋ ಒಂದು ಕಡೆ" ಎಂಬ ಪದಪ್ರಯೋಗ ಮಾಡುತ್ತ ಪರಮಜ್ಞಾನಿಯಂತೆ ಪೋಸು ಕೊಡುವುದು ಮಾಡುತ್ತಲೇ ಇದ್ದ!
    ಕನ್ನಡದ ಸುದ್ದಿ ವಾಹಿನಿಗಳು ತಿದ್ದಿಕೊಳ್ಳಬೇಕಾದ್ದು ಬಹಳ ಇದೆ.    

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಸ್ಸಂಕೋಚವಾದ ಮೊದಲ ಪ್ರತಿಕ್ರಿಯೆ: ಸುದ್ದಿ ವಾಹಿನಿ ಮತ್ತು ಅದರಲ್ಲಿ ಪಾಲ್ಗೊಂಡವರ ಹೆಸರುಗಳನ್ನು ಇಲ್ಲಿ ಪ್ರಕಟಿಸದೇ ಇರುವುದು ಇಷ್ಟವಾಗಿಲ್ಲ. ನೇರ ದಿಟ್ಟ ನಿರಂತರವಾದ ಸುದ್ದಿವಾಹಿನಿಯ ಬಗ್ಗೆ ಮ್ಮ ಅನಿಸಿಕೆಗಳೂ ನೇರ ಮತ್ತು ದಿಟ್ಟವಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು. ಇನ್ನು, ಬರಹದಲ್ಲಿನ ನಿಮ್ಮ ಮೂಲ ಅನಿಸಿಕೆಗಳಿಗೆ ನನ್ನ ಸಹಮತ ಇದೆ. <<ಇಂಗ್ಲಿಷ್ ಗೊತ್ತಿಲ್ಲದವರೂ ಕಾರ್ಯಕ್ರಮ ನೋಡುತ್ತಿರುತ್ತಾರೆ ಎಂಬ ಪ್ರಜ್ಞೆಯ ಕೊರತೆ ಅವರಿಗೆ!>> ಅವರ ಈ ಕಾರ್ಯಕ್ರಮಗಳನ್ನೂ ನೋಡುವವರು ಇದ್ದಾರೆ ಎಂಬ ಪ್ರಜ್ಞೆಯ ಕೊರತೆ ಅದು. :) - ಆಸು ಹೆಗ್ಡೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಾಸ್ತ್ರಿಗಳೇ, ೧.ಈ ಲೇಖನ ಬರೆದ್ಮೇಲೆ ಹೌ ಆರ್ ಯು ಫೀಲಿಂಗ್? ಏನ್ ಅನ್ನಿಸ್ತ ಇದೆ ನಿಮ್ಗೆ? ;) ೨.ಮಾಧ್ಯಮಗಳ ಸುಧಾರಣೆಗೆ ಹೇಗೆ ಕೆಲಸ ಮಾಡ್ಬೇಕು ಅಂತ ಇದ್ದೀರಾ? ೩.ನಿಮ್ಮ ಹೇಳಿಕೆ ನೋಡಿದ್ರೆ 'ಎಲ್ಲೋ ಒಂದು ಕಡೆ' ನಿಮ್ಗೆ ಸಿಟ್ಟು ಬಂದಿದ್ಯ ಅಂತ? ;) ತಲೆ ಕೆಟ್ಟ ಮಾಧ್ಯಮಗಳ ಬಗ್ಗೆ ಹೇಳೋಕೆ ತುಂಬಾ ಇದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹ ಹ.. "ಎಲ್ಲೋ ಒಂದು ಕಡೆ" ನಿಮ್ಮ ಲೇಖನ ಓದಿ ನಗು ಬರ್ತಾ ಇದೆ :) ಸೂಪರ್ :) "ಈ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಈಗ ನಮ್ಮ ಸಂಪರ್ಕದಲ್ಲಿ ಇದ್ದಾರೆ ಶ್ರೀಯುತ ಆನಂದ್ರಾಮ ಶಾಸ್ತ್ರಿಗಳು".. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಾಸ್ತ್ರಿಗಳಿಗೆ ಪ್ರಶ್ನೆಗಳು.. ೧) ಈ ಲೇಖನ ಬರೆಯಲು ನಿಮಗೆ ಪ್ರೇರೇಪಣೆ ಯಾರು? ೨) ನಿಮನ್ನ ಮೀಡಿಯಾ ವಿರೋಧಿ ಅಂತ ತೀರ್ಮಾನಿಸಬಹುದ? ೩) why ನೀವು ಈ article ಬರೆದಿದ್ದು? ೪) ನಿಮ್ಮ against ಯಾರಿದ್ದಾರೆ? so far ನಮ್ಮ questions ಗೆ answer ಮಾಡಕ್ಕೆ Try ಮಾಡಿದಕ್ಕೆ thanks.. ;)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಈ ರಾತ್ರಿಯ "ಜುಗಲ್ ಬಂಧಿ" ಮತ್ತು "ನೇರ ಕರೆಯ ಕಾರ್ಯಕ್ರಮ" ಗಳಿಗೆ ವಿಷಯ ಸಿಕ್ಕಂತಾಯ್ತು, ರಂಗನಾಥ ದ್ವಯರಿಗೆ. ಅವರನ್ನು ಯದ್ವಾ ತದ್ವಾ ಹೊಗಳುವ ಜಯಶ್ರೀಯವರು (ಕಿಕ್ಕಿಂಗ್ ಕಾಲಂ), ಇರುವಾಗ ಇನ್ನು ನಿಮ್ಮ ಮಾತನ್ನು ಯಾರಾದ್ರೂ ಯಾಕಾದ್ರೂ ಕೇಳ್ತಾರೆ ಹೇಳಿ. ಈ ರಾತ್ರಿ ನಿಮಗೂ ಕರೆ ಬರಬಹುದು ರಂಗನಾಥ ರಿಂದ (ಈ ರೀತಿ, ತಯಾರಾಗಿರಿ): "ನನ್ನದೊಂದು ನೇರವಾದ, ಸರಳವಾದ ಮತ್ತು ಸ್ಟ್ರೈಟ್ ಆದ ಪ್ರಶ್ನೆ ಶಾಸ್ತಿಗಳೇ, ನೀವೂ ನಮ್ ಚಾನೆಲಿನ ಪ್ರೋಗ್ರಾಮ್ ಗಳನ್ನು ನೋಡ್ತೀರೋ... " ಭಾರದ್ವಾಜ " ... ಅಲ್ಲಲ್ಲ... ಎಲ್ಲೋ ಒಂದು ಕಡೆ... ಇವ್ರೂ ಯಾರ್ದೋ ಮಾತ್ ಕೇಳ್ಕಂಡ್ ನಮ್ ಬಗ್ಗೆ ಬರ್ದ್ ಬಿಟ್ಟಿದಾರೇನೋ ಅಂತ..." ರಂಗನಾಥ್ " ಅದಲ್ಲ ... ರಂಗನಾಥ್ ... ಲೆಟ್ ಮೆ ಪುಟ್ ಇಟ್ ಸ್ಟ್ರೈಟ್ ... ಶಾಸ್ತ್ರಿಗಳೇ... ಹಲೋ... ಹಲೋ... ಐ ಥಿಂಕ್ ದೇರ್ ಈಸ್ ಸಮ್ ಟೆಕ್ನಿಕಲ್ ಪ್ರಾಬ್ಲಮ್... ನಾವು ಶಾಸ್ತ್ರಿಗಳನ್ನು ಆಮೇಲೆ ಹಿಡೀತೀವಿ... ಅವರಿಂದ ಉತ್ತರ ಪಡೆದು ಇಡೀ ಸ್ಟೇಟ್ ನ ಜನರ ಮುಂದೆ ಇಡ್ತೀವಿ... ರೈಟ್ ನೌ..."
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ನಿಮ್ಮ ಒಬ್ಸರ್ವೇಷನ್ ಟೋಟಲ್ಲಿ ಡಿಸ್ಗೈಸಿಂಗ್ ಆಗಿದೆ, ಮಿಸ್ಟರ್ ಆಸು ಹೆಗ್ಡೆ. :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ವ್ಹಾ ವ್ಹಾ ವ್ಹಾ! ಒಂದಕ್ಕಿಂತ ಒಂದು ಅದ್ಭುತ ಪ್ರತಿಕ್ರಿಯೆ! (ಹ)ಚಾ-ನೆಲ್ಲಿಗರ ಮುಂಡ ಮೋಚಿತು! (ದ್ವಿರುಕ್ತಿ!) :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ರಾಧಿಕಾ ರಾಣಿ ಅವರ ಬಗ್ಗೆ ಬರೆಯದೆ ಇದ್ದರೆ ಇದು ಅಪೂರ್ಣ ಎಂದೆನಿಸುತ್ತದೆ(ದ್ಯೇ).
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಸದ್ಯಕ್ಕೆ, ’ರಾಧಿಕೆ ನಿನ್ನ ಅಬ್ಬರ/ಗೊಬ್ಬರವಿದೇನೇ?!’ ಎಂದಷ್ಟೇ ಹೇಳಿ ಮುಗಿಸುತ್ತೇನೆ. :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಶಾಸ್ತಿಗಳೇ, ಸುದ್ದಿ ವಾಹಿನಿಗಳ ಎಳಸುತನದ ಕುಱಿತಾಗಿ ಒಮ್ಮೆ ಹರೀಶ್ ಆದೂರು ತಮ್ಮ ಬಾಗಿನಲ್ಲಿ ಬರೆದಿದ್ದರು. 'ನಿಮಗೆ ಈಗ ಏನನಿಸುತ್ತಿದೆ' ಎನ್ನುತ್ತ ಯಾರನ್ನೂ ಕೇಳಲು ಇವರು ಅಂಜರು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಹೌದು, ಓದಿದ್ದೇನೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.