ಸುಖ ಪಯಣ

5

ವಿಮಾನದಲಿ ಕೂತಾ ಹೊತ್ತು 
ಗೊತ್ತಾ ತಟ್ಟನೆ ಕಳವಳ ?
ಕಳಚಿ ಬಿದ್ದಂತೆ ತಳಕೆ, ಪಾತಾಳಕೆ
ನೆಲವೊ? ನೀರೊ? ಪಂಚ ಭೂತಗಳಾಳ ||

ಹಾರುವಾಗಸದಲಿಲ್ಲ ಅಡೆ ತಡೆ
ಸಂದಣಿ ಸಂಕೇತ ದೀಪ ಸದಾ ಹಸಿರು
ವಿಹಾರದಲಲುಗದಂತೆ ಕುಡಿದ ನೀರು
ಹಾರದೆ ಜಾರೆ, ಕಂಡವರಾರು ಕನಸು ? ||

ಸುಖ ಪಯಣ, ವೇಗದ ಲೆಕ್ಕ ಪಕ್ಕಾ
ಆವೇಗದಲಿ ತಾನೆ ಅಡೆತಡೆ ಕರ್ಕಶ..
ಹೇಳಿಯೊ ಹೇಳದೆಯೊ ಬಂದೇರಿದ್ದು ನಿಜ
ಒಂಟಿ ಜಂಟಿ ಗಣಿಸದೆ ಯಾನ ತಟ್ಟುವ ಕದ ||

ಏನೋ ಹತ್ತಿಳಿದಂತೆ ಮೋಡದ ಜಲ್ಲಿ ಕಲ್ಲ
ಉಬ್ಬು ತಗ್ಗಿಲ್ಲದ ಗಾಳಿರಸ್ತೆಗು ಕುಲುಕಾಟ
ನಡುಕಾಟವೆ, ನಖಶಿಖಾಂತ ಕುಸಿದ ಹೊತ್ತು
ತೊಗಲ ಬಿಟ್ಟೆ ಒಳಗು ಕುಸಿದಂತೆ ಪಾತಾಳ ||

ಹಾಳು ಏನದ್ಭುತ ತಾಂತ್ರಿಕ ಪ್ರಗತಿ..!
ಉದುರಿ ಬಿದ್ದ ಜಾಗವೂ ಸಿಗದು ತಳಾರ..
ಬಿಡಲಿಕ್ಕುಂಟೇನು ಹಾರುವ ಅನಿವಾರ್ಯ ?
ಅಂಜಿಕೆಯದದೆ ಎಣಿಕೆ, ಈ ಪಾಳಿ ಸುರಕ್ಷಿತ ||

ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಅದಕ್ಕಾಗಿಯೇ ಎಲ್ಲರೂ 'ಸುಖಪಯಣ'ವಾಗಲೆಂದು ಹರಸುವುದು! ತಳಮಳದ ಸುಂದರ ಚಿತ್ರಣ ಮೂಡಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಇದನ್ನು ಬರೆದದ್ದು ವಿಮಾನದಲ್ಲಿ ಕೂತಿದ್ದಾಗಲೆ! ಈಚೆಗೆ ತಟ್ಟನೆ ಮಾಯವಾಗುವ ವಿಮಾನಗಳು ಎಲ್ಲಿ ಮರೆಯಾದವೆಂದು ಹುಡುಕಾಡಲು ತಿಣುಕಾಡುವುದು ಕಂಡಾಗ, ಈ ಅದ್ಭುತ ತಾಂತ್ರಿಕ ಪ್ರಗತಿಯ ಮಿತಿಯನ್ನು ಕಂಡು ಒಂದೆಡೆ ಅಚ್ಚರಿ ಮತ್ತೊಂದೆಡೆ ಭೀತಿ. ಆ ಮಿಶ್ರ ಭಾವದ ಭೀತಿಯೆ ಬರೆಯಲು ಪ್ರೇರೇಪಿಸಿತು - ನಡುವಲೊಂದು 'ಕಚ್ಛಾರಸ್ತೆಯ' ಹವಾ-ಕುಲುಕಾಟದ ಅನುಭವವಾದಾಗ..!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.