ಸುಂದರ ಶ್ರೀಮಂತ

5

ಸುಂದರ ಶ್ರೀಮಂತ
------------------------
ಸುಂದರ ಶ್ರೀಮಂತ
ಶಿಲ್ಪಕಲೆ ಬಲೆಯೊಳು ನಿಂತ
ಶ್ರೀ ಚನ್ನಕೇಶವಾ....|
ನಿತ್ಯ ನೂತನ ನಿತ್ಯ ಚೇತನ
ನಿತ್ಯ ವೈಭವವೀ ದೈವಸನ್ನಿದಾನ|
ಗಂಟೆ ಜಾಗಟೆಗಳಿಲ್ಲದ
ಅಪರೂಪದ ದೇವಸ್ಥಾನ||

ಕಲೆಯೋ ಇದು
ಕವಿಯ ಕಲ್ಪನೆಯೊ ಇದು
ಕಲ್ಲಲರಳಿದ ತರತರದ ಹೂಮಾಲೆಯೊ|
ಯುಗ ಯುಗಾಂತರದ
ಕಥಾ ಹಂದರದ ಅರಮನೆಯೊ|
ಮಹಾಕಾವ್ಯ
ರಾಮಾಯಣ, ಮಹಾಭಾರತದ
ಕಾವ್ಯವಾಚನವೊ|
ಹರಿಯ ಹತ್ತುಅವತಾರವ
ಚಿತ್ತಾರ ಮೂಡಿರುವ ಬ್ರಹ್ಮಾಂಡವೊ ಇದು
ಸನಾತನಧರ್ಮದ ಕೈಗನ್ನಡಿಯೊ||

ಬಳ್ಳಿಯಂದದಿ ಹಬ್ಬಿನಿಂತಿಹ
ಅಪ್ಸರೆಯರ ಅಂದಚೆಂದವೊ|
ದೇವಲೋಕವೊ ಇಂದ್ರಲೋಕವೊ
ರಂಬೆ ಮೇನಕೆಯರ ಭಂಗಿಯೊ|
ಶಿಲ್ಪ ಸ್ತಂಭದಲಿ ಸರಿಗಮ ಹೊಮ್ಮುವ
ಸಂಗೀತ ಸಾಕ್ಷತ್ಕಾರವೊ|
ಇದು ಅಕ್ಷರಸಹ ಆ ಬ್ರಹ್ಮಸುತ
ಶ್ರೀವಿಶ್ವಕರ್ಮನ ಅವಿಷ್ಕಾರವೊ||

-ಜಾನಕಿತನಯಾನಂದ

(ಆಯ್ಕೆ: ಜೀವನ ತರಂಗಗಳು ಕವನಸಂಕಲನ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.