ಸಾಕ್ಷಿ

0

ಸಾಕ್ಷಿ

*********
ಇತಿಹಾಸಗಳು ಸೊರಗಿ
ಹೊಸಬಟ್ಟೆ ತೊಟ್ಟು ಬೆತ್ತಲಾಗಿವೆ ಇಲ್ಲಿ
ದಾಖಲೆಗಳು ದಾಖಲಾಗದೆ ದಾಖಲೆಯಾಯ್ತು
ಬರೆದದ್ದೇ ಇತಿಹಾಸ,
ವಿತಂಡವಾದಿಗಳ ತಂಡೋಪತಂಡಗಳು
ಬಂದು ಕೆತ್ತಿದ್ದು ಶಾಸನ
ಅಲ್ಲಿ ಇಲ್ಲಿ ಹುಳುಕು ಹುಡುಕಿ, ಹುಳುಕನ್ನೇ ಹುಡುಕಿ
ಹುಳುಗಳಾಗಿ ಕಟ್ಟಿದ್ದು ಗೂಡು,
*****************
ಮಂದಿರದೊಳಗೆ ನಂದಿ
ಮೂಕವಾಗಿ ಬಂಧಿ
ನಾಕಾ ಬಂದಿ....
ನಾ... ಕಾ... ಬಂದಿ
ಯುರೋಪಿನ ಕಣ್ಣಲ್ಲಿ
ಇವರ ಇತಿಹಾಸ ಹುಡುಕಾಟ
****************
ಕೂದಲು ಕೆದರಿ ಹೊರಟವಳು
ಅನ್ವೇಶಕಿ, ಅವನು ಶಕಪುರುಷ
ಹೊಸೆಯುತ್ತಾರೆ ತಲೆಮಾರುಗಳ ಕಲೆ
ದಾಖಲೆ ಸಿಕ್ಕಷ್ಟೇ ಚರಿತ್ರೆ.. ಮಿಕ್ಕವು
ಮೂ...ಢ... ನಂಬಿಕೆ
ಅದೇ ದಾರಿಯ ದೀಪಗಳ ಬೆಳಕಲ್ಲಿ
ಓದುತ್ತವೆ ಬೀದಿಬುಡ್ಡಿಗಳು
ಶೋಧನೆಯಿಲ್ಲದ
ಶೋಧನೆಯೊಲ್ಲದ ಮರಿಬುದ್ಧಿ ಜೀವಿಗಳು
*******************
ಹುಂಜ ಕೂಗಿ
ಬೆಳಗಾಯ್ತೆನ್ನಲು ಎದ್ದ ಮಂದಿಗೆ ನಿದ್ದೆ
ವಕ್ರಗತಿಯ ಜಂತುವಿಗೆ
ತಿಕ್ಕಲುತನ...
ಕಂಡದ್ದೆಲ್ಲಾ ತಪ್ಪೆನ್ನುವ ತೀಟೆ
ಅಲ್ಲಿ ಇಲ್ಲಿ ಚೂರು ಪಾರು ಹರಕು ಮುರುಕು
ಓದಿ ಅಹರ್ನಿಶಿ ಊಳಿಡುತ್ತದೆ
ಕೊಬ್ಬಿದ ಗುಳ್ಳೆನರಿ
ನಿಧಾನಕ್ಕೆ ಅಮೇಧ್ಯದೊಳಗಿಂದ
ಮತ್ತೊಂದು ಮರಿ ತಲೆಯೆತ್ತುತ್ತದೆ
ಅತ್ತಿತ್ತ ನೋಡಿ ಆಕಳಿಸಿ
ಆನಂದ ಸ್ಥಿತಿಯನ್ನು ಹೊಂದಿ
ಬೆಚ್ಚಗಿನ ಭಾವದಲ್ಲೇ
ಬದುಕಿ ,ಇದು ಸತ್ಯ ಎನ್ನುತ್ಗದೆ.
ತಿಪ್ಪೆಗೆ , ಸುವಾಸನೆ ಹೊಲಸು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.