ಸಹೋದರಿಯರೇ ಎಚ್ಚರ!! ಮಾವಿನ ಕಾಯಿಗೆ ಕಲ್ಲೆಸೆಯುವ ಪಡ್ಡೆ ಹುಡುಗರಿದ್ದಾರೆ!!

4.363635

 

ಮಾವಿನ ಮಿಡಿ ಕಾಯಿಯಾಗುವ ಮೊದಲೇ ಕಲ್ಲೆಸೆಯುವ ಪಡ್ಡೆ ಹುಡುಗರಿದ್ದಾರೆ!. ವಿನೋದಕ್ಕಾಗಿ ಹಣ್ಣಾಗುವ ಮೊದಲೇ ಕಾಯಿಗೆ ಕಲ್ಲೆಸೆದು ಬೀಳಿಸುತ್ತಾರೆ. ಪಾಪ ಮಾವಿನ ಕಾಯಿ ಎಲ್ಲರಿಗು ಮೊದಲು ಲೋಕ ನೋಡಲಿದ್ದೇನೆ ಎಂಬ ಆಸೆಯಿಂದ, ಅಥವಾ ಹುಟ್ಟಿನಿಂದ ತನ್ನನ್ನು ಜೊತೆಗೆ ಹಿಡಿದಿಟ್ಟುಕೊಂಡು ಬೇರ್ಪಡಲು ಬಿಡದೆ ಇರುವ ಕೊಂಬೆಯ ಮೇಲಿನ ಕೋಪದಿಂದ, ಪಡ್ಡೆ ಹುಡುಗರು ಎಸೆಯುವ ಪ್ರತೀ ಕಲ್ಲನ್ನು ತನಗೆ ತಾಕಲಿ ಅಂತ ಆಸೆಯಿಂದ ಸ್ವೀಕರಿಸುತ್ತದೆ. ಆದರೆ ಕೆಸರಿಗೆ ಬಿದ್ದ ಮೇಲಷ್ಟೇ ಪಶ್ಚಾತಾಪ ಪಡುತ್ತದೆ, ತನ್ನನ್ನು ಹಣ್ಣಾಗುವ ವರೆಗೆ ಕೈಬಿಡದೆ ಕೊಂಬೆ ತನ್ನ ಜೊತೆಗಿಟ್ಟುಕೊಂಡದ್ದು ರಕ್ಷಣೆಗೆಂದು.
 
ಪ್ರೀತಿ ಪ್ರೇಮವನ್ನು ಹೆಣ್ಣು ಗಂಡಿನ ಅನ್ಯೊನ್ಯತೆಯನ್ನು ರಾಜಕೀಯ ಲೆಪನೀಡುವ ಕೆಟ್ಟ ಚಾಳಿ ಬಗ್ಗೆ ಏನಾದರು ಬರೆಯಬೇಕೆಂದುಕೊಂಡಿದ್ದ ನನಗೆ ಅದರ ಹಿಂದೆ ಹೋದಾಗ ಸಿಕ್ಕಿತು ಅದೆರೀತಿಯ ಇನ್ನೊಂದು ವಸ್ತು! ಹೊಸ ವಿಷಯವೇನಲ್ಲ ಎಲ್ಲರಿಗೂ ತಿಳಿದದ್ದೇ ಆದರೆ ಚರ್ಚೆಗೆ ಹೆಚ್ಚು ಬಾರದೆ ಇರುವಂತದ್ದು. ಅಪ್ರಾಪ್ತ ವಯಸ್ಸಿನ ಪ್ರೇಮ. 
 
ಪ್ರೇಮದ ಬಗ್ಗೆ ಹೇಳ ಹೊರಟವನಲ್ಲ ನಾನು, ಆದರೆ ಒಂದು ಅಪರಾದದ ಬಗ್ಗೆ ಹೇಳ ಹೊರಟಿದ್ದೇನೆ. "LOVE CRIME". ಪ್ರೇಮ ನಾಟಕವಾಗಿ ಧರ್ಮ ಪರಿವರ್ತನೆ ಮಾಡಲಾಗುತ್ತಿದೆ ಎಂಬ ವಿಚಾರ ಬಹಳಷ್ಟು ಚರ್ಚಿತವಾಗುತ್ತಿರುವ ವಿಚಾರ, ಯಾಕೆಂದರೆ ಅದು ರಾಜಕೀಯ ಲಾಭ ಇರುವ ವಿಚಾರ. ಆದರೆ  ಲವ್ ಕ್ರೈಂ ನಂತಹ ವಿಚಾರಗಳು ಚರ್ಚೆಗೆ ಬಾರದೆ ಮುಚ್ಚಿಹೊಗಿತ್ತಿದೆ. ಅದು ಸಾಮಾಜಿಕ ಪೀಡೆ ಎಂದರೂ ತಪ್ಪಾಗದು. ಪ್ರೇಮದ ನಾಟಕವಾಡಿ ಹರೆಯ ಹುಡಿಗಿಯರನ್ನು ಮೋಸಮಾಡುವ ಜಾಲವಿದೆ, ಮೋಸವಲ್ಲ ಅನ್ಯಾಯ ಅಥವಾ ಅಪರಾದ ಮಾಡುವ ಜಾಲ!. ಇದು ನಡೆಯುತ್ತಿರುದು ಎಲ್ಲರಿಗೂ ತಿಳಿದ ವಿಚಾರ. ಅನ್ಯಾಯಕ್ಕೊಳಗಾದವರ ಸಂಖ್ಯೆಗಳೂ ಬಹಳಷ್ಟಿದೆ, ಪ್ರತಿಷ್ಠೆ ಕಾರಣ ಎಲ್ಲವೂ ಮುಚ್ಚಿಹೊಗುತ್ತಿದೆ, ಕೆಲವೊಂದು ಮಾತ್ರ ಬೆಳಕಿಗೆ ಬರುತ್ತಿದೆ. ಆದರೂ ವಿಷಯ ಚರ್ಚೆಯಲ್ಲಿಲ್ಲ!
 
ಹತ್ತು ಇಪ್ಪತ್ತು ರುಪಾಯಿ ಮೊಬೈಲ್ ರಿಚಾರ್ಜ್ ನಿಂದ ಹಿಡಿದು ಅಶ್ಲೀಲ ಚಿತ್ರಗಳು ಮಾಡಿ ಪಸರಿಸುವವರೆಗೆ ಈ ಪ್ರೇಮ ನಾಟಕವನ್ನು ಬಳಸಲಾಗುತ್ತದೆ. ಹದಿಹರೆಯದ ಅದರಲ್ಲೂ ಅಪ್ರಾಪ್ತ ಹುಡುಗಿಯರು ಈ ಜಾಲದಲ್ಲಿ ಸಿಕ್ಕಿ ಕೊಳ್ಳುತ್ತಿದ್ದಾರೆ. ಇದಕ್ಕಾಗಿ,ಸರ್ವರ ಕಾಲಹರಣ ತಾಣವಾದ ಫೇಸ್ಬುಕ್ ನಂತಹ ಸಾಮಾಜಿಕ ಸಂಪರ್ಕ ತಾಣಗಳು, ಮೊಬೈಲ್, ಎಸೆಮ್ಮೆಸ್ ಮುಂತಾದವುಗಳನ್ನು ಬಳಸಲಾಗುತ್ತಿದೆ.
 
ಅದ್ಹೇಗೋ ಹುಡುಗಿಯರ ನಂಬ್ರ, facebook id ಗಳನ್ನು ಸಂಗ್ರಹಿಸುವ ಈ ಹುಡುಗರು, ಮೊದಲು ಹುಡುಗಿಯ ಆತ್ಮೀಯತೆಯನ್ನು ಗಳಿಸುತ್ತಾರೆ. ಇದಕ್ಕಾಗಿ ಹಲವು ಕಸರತ್ತುಗಳನ್ನು  ತೋರಿಸುತ್ತಾರೆ. ತಾನು ಸಮಸ್ಯೆಯಲ್ಲಿ ರುವುದಾಗಿಯೂ ತನಗೆ ಕೆಲವು ಸಲಹೆಗಳು ಬೇಕಾಗಿಯೂ ಹೇಳಿ ಆರಂಬಿಸುತ್ತಾನೆ, ಇಲ್ಲ ಮನೆಯಲ್ಲಿ ಸಮಸ್ಯೆಗಳಿದೆ ನೋವು ಹಂಚಿಕೊಳ್ಳಲು ಸ್ನೇಹಿತರಿಲ್ಲ ಎಂದೋ, ಹೀಗೆ ಹಲವು ಕಥೆಗಳನ್ನು ಹೇಳಿ ಕೊನೆಗೆ ಪ್ರೀತಿಸುವ ನಾಟಕವಾಡುತ್ತಾನೆ. ಹುಡುಗಿ ಪ್ರೀತಿ ಬಲೆಗೆ ಬೀಳುವವರೆಗೂ ಪ್ರಯತ್ನ ಮುಂದುವರಿಸುತ್ತಾನೆ, ಅಷ್ಟಾಗಲೇ ಆತ ಹುಡುಗಿಯ ಎಲ್ಲ ಮಾಹಿತಿ ಕಳೆ ಹಾಕಿರುತ್ತಾನೆ. ಮತ್ತು  ಮನೆಯ ವಿಳಾಸ, ಫೋಟೋ, ಹೀಗೆ ಹಲವು ವೆಯ್ಯುಕ್ತಿಕ ವಿಚಾರಗಳನ್ನು ಸಂಗ್ರಹಿಸಿರುತ್ತಾನೆ. ಈ ಹೊತ್ತಿಗಾಗಲೇ ಆಕೆ ಆತನ ಬಲೆಯಲ್ಲಿ ಪೂರ್ತಿ ಸಿಕ್ಕಿಹಾಕಿಕೊಂಡ ಹಾಗೆ. ಹದಿಹರೆಯದ ಆಕರ್ಷಣೆ ಎಷ್ಟಿರುತ್ತದೆ ಎಂದರೆ  ಆತನ ಜೊತೆ ಮಾತನಾಡದೆ ಇರಲಾಗದು ಎಂಬ ಹಂತಕ್ಕೆ ಬಂದಿರುತ್ತದೆ. ಈ ಹೊತ್ತಿಗೆ ಆತ ಬೇಟಿ ಮಾಡುವ ಇರಾದೆ ಇಡುತ್ತಾನೆ, ಆಕೆಯನ್ನು ಒಪ್ಪಿಸುವಲ್ಲಿ ಯಶಸ್ವಿಯಾಗುತ್ತಾನೆ. ಮೊದಲೆಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಭೇಟಿಯಾಗುವ ಇವರು ಕ್ರಮೇಣ ಅರೆ ಖಾಸಾಗಿ ಸ್ಥಳಗಳಲ್ಲಿ ಅಂದರೆ ಜ್ಯೂಸು ಅಂಗಡಿ, ಹೋಟೆಲ್  ಮುಂತಾದೆಡೆ ಕೂಡುತ್ತಾರೆ. ಅನಂತರ ಸಂಪೂರ್ಣ ಖಾಸಗಿತನ ದೊರಗುವ ಸೈಬರ್ ಮುಂತಾದ ಕಡೆಗಳಲ್ಲಿ ಬೇಟಿಯಾಗುವಲ್ಲಿಗೆ ತಲುಪುತ್ತದೆ. ಇಲ್ಲಿಂದ ಅನಾಹುತಗಳು ಆರಂಭವಾಗುತ್ತದೆ.
 
ಒಂದು ವೇಳೆ ಈ ಯಾವುದೇ ಹಂತಗಳಲ್ಲಿ ಹುಡುಗಿ ತಾನು ಮಾಡುವ ತಪ್ಪುಗಳನ್ನು ಅರಿತು, ಹಿಂದೆ ಸರಿದರೆ ತನ್ನಲ್ಲಿರುವ ಮಾಹಿತಿ, ಫೋಟೋ ಗಳನ್ನೂ ಮುಂದಿಟ್ಟು, ಅವಳ ಹೆತ್ತವರಿಗೆ ಎಲ್ಲ ಮಾಹಿತಿ ರವಾನಿಸುವುದಾಗಿಯೂ, ಅವಳ ಬಗ್ಗೆ ತಪ್ಪು ತಪ್ಪಾಗಿ ಸಾವಜನಿಕವಾಗಿ ಬಿತ್ತರಿಸುವುದಾಗಿಯೂ ಬೆದರಿಸಿ ತಾನು ಇಚ್ಚಿಸುವ ರೀತಿಗೆ ಹುಡುಗಿಯನ್ನು ತರುತ್ತ್ತಾನೆ. ಮೊದಲೇ ಬಲೆಗೆ ಬಿದ್ದ ಹುಡುಗಿ, ಪಂಜರಕ್ಕೆ ತಳ್ಳಲ್ಪಡುತ್ತಾಳೆ.
 
ಆಮೇಲೆ ನಡೆಯುವುದಾವುದು ಅವಳ ಇಷ್ಟದಂತಿರುವುದಿಲ್ಲ, ಅವಳಿಗದು ಅನಿವಾರ್ಯವಾಗುತ್ತದೆ. ಒಂದು ವೇಳೆ ಒಬ್ಬ ಹುಡುಗಿ ಹೀಗೆ ಸಿಕ್ಕಿ ಹಾಕಿಕೊಂಡಲ್ಲಿ ಅವಳ ಮೂಲಕ ಅವಳ ಸುತ್ತಿ ಇರುವ ಹಲವರನ್ನು ತಮ್ಮ ಬಲೆಗೆ ಹಾಕಲು ಹುಡುಗ ಸಫಲನಾಗುತ್ತಾನೆ. ಅಥವಾ ಸುಲಭವಾಗಿ  ಬಲೆಗೆ ಬೀಳುತ್ತ್ತಾಳೆ ಎಂಬುದು ತಿಳಿದು ಹಲವು ಪಡ್ಡೆ ಹುಡುಗರು ಇವಳ ಹಿಂದೆ ಬೀಳುತ್ತಾರೆ. 
 
ಇವೆಲ್ಲವೂ ಎಷ್ಟು ಅತಿರೇಕಕ್ಕೆ ಹೋಗುತ್ತದೆ ಎಂಬುದು ಹುಡುಗನ ಸಬ್ಯತನಕ್ಕೆ ಹೊಂದಿಕೊಂಡಿದೆ. ಮತ್ತು ಇವೆಲ್ಲವೂ ಕೇವಲ ಹದಿಹರೆಯದ ಆಕರ್ಷಣೆಯ ಮಾತ್ರವಾಗಿದ್ದರೆ ಕಥೆ ಇಲ್ಲಿಗೆ ಮುಕ್ತಾಯವಾಗುದ್ದದೆ, ಅಂದರೆ ಹುಡುಗಿ ಅದೃಷ್ಟವಂತೆ. ಆದರೆ ವ್ಯವಸ್ತಿತ ಜಾಲದಲ್ಲಿ ಸಿಕ್ಕಿ ಹಾಕಿ ಕೊಂಡಿದ್ದಾದರೆ ಅದೆಂತ ಅನಾಹುತಗಲಾಗಬಹುದು ಎಂಬುದನ್ನು ಊಹಿಸಲೂ ಆಗದು. 
 
ಮುಂದೆ ಹೆತ್ತವರಿಗೆ ವಿಷಯ ತಿಳಿದಾಗ ಸಮಯ ಮೀರಿರಬಹುದು, ಇಲ್ಲ ಎಲ್ಲ ಕೈ ಮೀರಿರಬಹುದು. ಸಮಾಜದಲ್ಲಿ ಗೌರವವನ್ನು ಯೋಚಿಸಿ ಎಲ್ಲವೂ ಮುಚ್ಚಿ ಹೋಗುತ್ತದೆ. ಪಡ್ಡೆ ಹುಡುಗರು ಮತ್ತೊಂದು ಮಾವಿನ ಕಾಯಿಗೆ ಗುರಿ ಹಾಕುತ್ತಾರೆ!
 
ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತದೆ, ಕೆಲವು ಅಶ್ಲೀಲ ಚಿತ್ರಗಳಾಗಿ ಟಿವಿ ಯಲ್ಲೋ ವಾರ್ತೆಯಲ್ಲೋ ನೋಡುತ್ತೇವೆ. ಇನ್ನೂ ಕೆಲವು ಆತ್ಮ ಹತ್ಯೆಯಲ್ಲಿ ಮುಗಿಯುತ್ತದೆ. ಸುಮ್ನೆ ಹೀಗೆ ನಿಮ್ಮ ಊರಿನ ಹೆಸರು ಹಾಕಿ 'ಮಲ್ಲಿಗೆ' ಅಂತ ಸೇರಿಸಿ ಗೂಗಲ್ ಮಾಡಿ, ನಿಮ್ಮೂರಿನ ಬಗ್ಗೆ ನಿಮಗೆ ತಿಳಿಯದ ಅಚ್ಚರಿಗಳು ಗೂಗಲ್ ನಿಮ್ಮ ಮುಂದಿಡುತ್ತದೆ.
 
ಇಂದು ಚರ್ಚಿಸಬೇಕಾದ ವಿಚಾರ ಇದಾಗಿದೆ. ನಮ್ಮ ಸಹೋದರಿಯರಲ್ಲಿ ಅರಿವು ಮೂಡಿಸಬೇಕಾಗಿದೆ, ಇಂತಹ ವಿಷಯಗಳಿಂದ ಜಾಗೃರಾಗಲು ತಿಳಿಸಬೇಕಿದೆ. ಒಂದು ವಿಚಿತ್ರ ಸಂಗತಿಯೆಂದರೆ, ಈ ಅಶ್ಲೀಲತೆ ಹರಡುವುದಲ್ಲಿ ಜಾತಿ ಧರ್ಮದ ಬೇದವಿಲ್ಲ. ಇದು ಯಾವುದೇ ಧರ್ಮ, ಜಾತಿಗೆ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ. ಎಲ್ಲರೂ ತಮ್ಮ ಸಹೋದರಿಯರನ್ನು ರಕ್ಷಣೆಯಲ್ಲಿ ಇಟ್ಟುಕೊಳ್ಳುವುದು ಮಾಡಬೇಕು. ಸಹೋದರಿಯರಲ್ಲಿ ಅರಿವು ಮೂಡಿಸಬೇಕು.  ಅದರಲ್ಲೂ ಅಪ್ರಾಪ್ತ ಹುಡುಗಿಯರು ಈ ಜಾಲದಲ್ಲಿ ಸಿಕ್ಕಿಕ್ಕೊಳ್ಳುತ್ತಿರುವುದು  ದುರಂತ. ಅವರಲ್ಲಿ ಅವರ ವಯಸ್ಸಿನಲ್ಲಾಗುವ ಮಾನಸಿಕ ಹಾಗು ದೈಹಿಕ ಬದಲಾವಣೆಗಳ ಬಗ್ಗೆ ಅರಿವು ಮೂಡಿಸುವುದು ಅಗತ್ಯ, ಹೆತ್ತವರು ಅದನ್ನು ನಾಜೂಕಾಗಿ ವಿರ್ವಹಿಸಬೇಕು, ಸಾಧ್ಯವಾಗದಿದ್ದರೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.
 
ಸಹೋದರಿಯರು ಗಮನಿಸಿ.
  • ಅಪರಿಚಿತ ವ್ಯಕ್ತಿಯ ಜೊತೆ ಸ್ನೇಹ ಸಂಬಂಧವಿಟ್ಟುಕೊಲ್ಲಬೇಡಿ.
  • ನಿಮ್ಮ ವೈಯ್ಯುಕ್ತಿಕ ವಿಚಾರಗಳು, ಮೊಬೈಲ್ ನಂಬರ್, ಫೋಟೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ.
  • ನಿಮ್ಮ ಹೆತ್ತವರಿಗೆ ತಿಳಿಯದ, ಅವರು ಇಷ್ಟಪಡದ ಯಾವುದೇ ಸ್ನೇಹ ಸಂಬಂಧಗಳು ನಿಮಗೆ ಬೇಡ. ಅದು ತಪ್ಪು ಆದ್ದರಿಂದಲೇ ನೀವು ಹೆತ್ತವರಿಂದ ಅದನ್ನು ಮುಚ್ಚಿಇಟ್ಟಿದ್ದೀರಿ.
  • ಸ್ನೇಹ ಸಂಬಂಧಗಳು ಜೀವನವನ್ನು ಆನಂದವಾಗಿದುತ್ತದೆ ಸತ್ಯ, ಆದರೆ ನಿಮಗೆ ನೇರ ಪರಿಚಯ ಇರುವವರ ಜೊತೆ ಮಾತ್ರ ಗೆಳೆತನ ಮಾಡಿ.
  • ಶಾಲೆ, ಕಾಲೇಜುಗಳಲ್ಲಿ ನಿಮಗೆ ಸಾಕಷ್ಟು  ಸ್ನೇಹಿತರಿದ್ದಾರೆ. ಆದರೆ ನಿಮ್ಮ ಎಲ್ಲ ಸ್ನೇಹ ಸಂಬಂಧಗಳ ಬಗ್ಗೆ ಹೆತ್ತವರು, ಸಹೋದರ - ಸಹೋದರಿಯರಲ್ಲಿ ಹಂಚಿಕೊಳ್ಳಿ, ಅವರಿಗೂ ಪರಿಚಯಿಸಿ ಕೊಡಿ.
  • ನಿಮ್ಮ ಸಾಮಾಜಿಕ ಬಾದ್ಯತೆಯನ್ನು ಮರೆಯದಿರಿ, ಹಲವು ವ್ಯಕ್ತಿಗಳು ಸೇರಿ ಸಮಾಜ. ನಿಮ್ಮ ವೈಯ್ಯುಕ್ತಿಕ ವಿಚಾರಗಳು ನಾಳೆ ಸಾಮಾಜಿಕ ವಿಚಾರವಾಗುತ್ತದೆ.
 
ಪ್ರತೀ ಮಾವಿನ ಕಾಯಿಗಳು ತನ್ನನ್ನು ರಕ್ಷಿಸುತ್ತಿರುವ ಕೊಂಬೆಯ ಮೇಲೆ ವಿಶ್ವಾಸವಿಡಬೇಕು. ಪಡ್ಡೆ ಹುಡುಗರ ಕಣ್ಣಿಂದ ಎಳೆಗಳ ಹಿಂದೆ ಅವಿತುಕೊಂಡು ತಪ್ಪಿಸಿಕೊಳ್ಳಬೇಕು. ಮುಂದೆ ಹಣ್ಣಾದಾಗ ನೀವು "ಮಧುರ ಹೃದಯ"ಗಳಾಗುತ್ತೀರ! ಆಗ ಮರವೇ ನಿಮ್ಮನ್ನ್ನು ನೋಡಿ ಹೆಮ್ಮೆ ಪಡುತ್ತದೆ. ಸಮಯ ಬಂದಾಗ ಕೊಂಬೆಯೇ ನಿಮ್ಮ ಜೊತೆಗಿದ್ದು ಸುರಕ್ಷಿತ ಕೈಗಲ್ಲಿ ಸೇರಿಸುತ್ತದೆ. ಆಗ ಕೊಂಬೆಗಳು ಹೆಮ್ಮೆಯಿಂದ ಹೇಳುತ್ತದೆ ಅದು ನನ್ನ ಮಗಳೆಂದು, ಸಹೋದರಿಯೆಂದು!!
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಒಳ್ಳೆಯ ಲೇಖನ ರಶೀದ್ ರವರೇ , ಇಂದಿನ ಪೀಳಿಗೆಯ ಹೆಣ್ಣು ಮಕ್ಕಳಿಗೆ ಒಳ್ಳೆ ಸಂದೇಶ ಧನ್ಯವಾದಗಳೊಂದಿಗೆ......ಸತೀಶ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಉತ್ತಮ ಲೇಖನ ಅನ್ನೋದು ನಿಜ ... ಈ ಜಾಲದಲ್ಲಿ ಬಿದ್ದು ಅರಿವಿಲ್ಲದೆ ಒದ್ದಾಡುತ್ತಿರುವವರಿಗೆ ಇಂತಹ ಲೇಖನ ಓದಲು ವ್ಯವಧಾನವಿಲ್ಲ ... ಮನೆಯವರು ಹೇಳ ಹೋದರೆ ಅವರನ್ನು ಅಸಡ್ಡೆಯಿಂದ ಕಾಣುತ್ತಾರೆ ... ಹೇಳಿದರೆ ಅರ್ಥವಾಗೋಲ್ಲ, ಸ್ವಂತ ಬುದ್ದಿಯಿಲ್ಲ :-((
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು . . ಈ ಜಾಲದಲ್ಲಿ ಬಿದ್ದು ಅರಿವಿಲ್ಲದೆ ಒದ್ದಾಡುತ್ತಿರುವವರು ಆದಷ್ಟು ಬೇಗ ತಮ್ಮ ಹೆತ್ತವರಿಗೆ ವಿಷಯ ತಿಳಿಸಿ ತಮ್ಮನ್ನು ರಕ್ಷಿಸಿಕೊಳ್ಳಬೇಕು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.