ಸವೆದು ಸೇವೆಸಲ್ಲಿಸುವ 'ಚಪ್ಪಲಿಗಳು'

4.666665

ಸವೆದು ಸೇವೆಸಲ್ಲಿಸುವ 'ಚಪ್ಪಲಿಗಳು'

ಅಯ್ಯೋ... ಅದು ಇಲ್ಲದೆ ಬೀದಿಗೆ ಕಾಲಿಡಲು ಸಾಧ್ಯವೇ? ಮಳೆ, ಬಿಸಿಲು, ಚಳಿ ಎಲ್ಲದಕ್ಕೂ ಅದು ಬೇಕೆ ಬೇಕು. ಅದೇನಂತೀರಾ...?
ಅದೇ ನಮ್ಮ ಜೀವನದುದ್ದಕ್ಕೂ ನಮ್ಮ ಕಾಲ ಅಡಿ ಸವಿಯುತ್ತಾ ಸೇವೆ ಸಲ್ಲಿಸುವ ಚಪ್ಪಲಿಗಳು.

ನಾನಾ ರೀತಿಯ ಚಪ್ಪಲಿಗಳು, ನಾನಾ ಕಂಪನಿಯ ಚಪ್ಪಲಿಗಳು. ಕುಳ್ಳಗೆ ಇರುವವರಿಗೆ ಎತ್ತರದ ಚಪ್ಪಲಿಗಳು, ಡಾಂಬರು ಹಾಕುವವರಿಗೆ ಟೈರಿನ ಚಪ್ಪಲಿ, ಎಷ್ಟೊ ಜನರಿಗೆ ಹವಾಯಿ ಚಪ್ಪಲಿಗಳು.

ಎಲ್ಲದಕ್ಕೂ ಒಂದೊಂದು ಇತಿಹಾಸವಿರುವ ಹಾಗೇ ತಮ್ಮ ಮನೆಗಳ ಮುಂದೆ ಬಿಸಾಡುವ ಈ ಚಪ್ಪಲಿಗಳಿಗೂ ಇತಿಹಾಸವಿದೆ ಅದರ ತುಂಬ ಕುತೂಹಲವೂ ಇದೆ.

ಸ್ಪೇನ್ ಮತ್ತು ಫ್ರಾನ್ಸ್ ದೇಶಗಳಲ್ಲಿ 15,000 ವರ್ಷಗಳ ಮುಂಚೆ ಬರೆದಿರುವ ಚಿತ್ರಗಳಲ್ಲಿ ಚಪ್ಪಲಿಗಳ ಚಿತ್ರಣವಿರುವುದು ತುಂಬ ಆಶ್ಚರ್ಯಕರ.

5,000 ವರ್ಷದ ಹಳೆಯ ದೇಹವನ್ನು ಸಂರಕ್ಷಿಸಿ ಅದಕ್ಕೆ 'ಐಸ್-ಮ್ಯಾನ್' ಎಂದು ಹೆಸರಿಟ್ಟಿರುವ ದೇಹದ ಪಾದದಲ್ಲೂ ಚಪ್ಪಲಿಗಳಿವೆ.

ನಾಗರೀಕತೆಯ ಅಂಚಿನಲ್ಲಿ ಮಾನವ ತನ್ನ ಕಾಲುಗಳಿಗೆ ಸುರಕ್ಷತೆ ಬಯಸಿ ನಾನಾ ಪ್ರಾಣಿಯ ಚರ್ಮಗಳನ್ನು ಬಳ್ಳಿ, ನಾರುಗಳಿಂದ ನೆಯ್ದು ತನ್ನ ಕಾಲಿಗೆ ತೊಡಲು ಶುರು ಮಾಡಿದ. ಈಗೇ ಶುರುವಾಗಿ 16 ನೇ ಶತಮಾನದಲ್ಲಿ ನಾವು ಇಂದು ಧರಿಸುವ ಚಪ್ಪಲಿಗಳು ಟರ್ಕಿ ದೇಶದಲ್ಲಿ ಉದಯವಾಯಿತು. ಇದು ಅಂದಿನ ರೊಮ್ ಮತ್ತು ಇಡೀ ಯುರೊಪನ್ನೇ ಆವರಿಸಿಕೊಂಡಿತು. ಮೊದಲು ಶ್ರೀಮಂತರ ಘನತೆಯಾಗಿದ್ದ ಚಪ್ಪಲಿಗಳು 18ನೇ ಶತಮಾನವಷ್ಟರಲ್ಲಿ ಜನಸಾಮಾನ್ಯರು ಧರಿಸುವಂತಾಯಿತು.

ಗ್ರೀಕ್ ನಾನಾ ರೀತಿಯ, ಎರಡು ಕಾಲುಗಳಿಗೂ ಕಂಫರ್ಟ್ ವೆನ್ನಿಸುವ ಚಪ್ಪಲಿಗಳನ್ನು ಉತ್ಪಾದಿಸಿದವು.

ಮೊಟ್ಟಮೊದಲಿಗೆ ಇಂಗ್ಲೆಂಡಿನ ತಾಮಸ್ ಪೆಂಡ್ಲೆಟಾನ್ ಎಂಬಾತ 1642ರಲ್ಲಿ ಚಪ್ಪಲಿಗಳು ಉತ್ಪಾದಿಸುವ ಕಂಪನಿ ತೆರೆದ. ಮೊದಲಿಗೆ 4,000 ಚಪ್ಪಲಿಗಳನ್ನು ಸೈನಿಕರಿಗೆ ನೀಡಿದ.

19ನೇ ಶತಮಾನ ಶುರುವಾಗುತ್ತಲೆ ಪ್ರಪಂಚದಲ್ಲಿ ಕೈಗಾರಿಕಾ ಕ್ರಾಂತಿ ಶುರುವಾಯಿತು. ಪ್ರತಿಯೊಂದಕ್ಕೂ ಮೆಷಿನ್ ಗಳು ಬಂದವು, ಚಪ್ಪಲಿಯ ತಯಾರಿಕೆಗೂ ಮೆಷಿನ್ ಗಳು ಬಂದವು.

ಆದರೆ ನಮ್ಮ ಭಾರತದಲ್ಲಿ ಚಪ್ಪಲಿಯ ಇತಿಹಾಸವೇ ಬೇರೆ, ನಮ್ಮ ವೇದಗಳಲ್ಲಿ ಚಪ್ಪಲಿಯನ್ನು 'ಉಪನಾತ್' ಎಂದು ಉಲ್ಲೇಖಿಸುತ್ತಾರೆ.
ಉಪನಾತ್ ಎಂದರೆ ಹುಲ್ಲು, ಮರ ಮತ್ತು ಚರ್ಮಗಳಿಂದ ತಯಾರಿಸಲ್ಪಟ್ಟ ಪಾದರಕ್ಷೆ.

ಭರತ ರಾಮನ ಪಾದರಕ್ಷೆಯನ್ನು ತಲೆ ಮೇಲೆ ಹೊತ್ತು, ಸಿಂಹಾಸನ ಮೇಲಿಟ್ಟು ರಾಜ್ಯವಾಳಿದ ಎಂದು ರಾಮಾಯಣದಲ್ಲಿ ಒದುತ್ತೆವೆ.

5ನೇ ಶತಮಾನದಲ್ಲಿ ತನ್ನೆಲ್ಲವನ್ನು ತ್ಯಜಿಸಿದ ಬುದ್ಧ ತನ್ನ ಪಾದರಕ್ಷೆಯನ್ನು ಮಾತ್ರ ಕೊಂಡೊಯ್ದ ಎಂದು ಕೇಳಿದ್ದೆವೆ.

ಇಂದಿಗೂ ನಮ್ಮ ಶಿಲೆಗಳಲ್ಲಿ, ಅಜಂತ ಗುಹೆಗಳಲ್ಲಿ ಚಪ್ಪಲಿಗಳ ಚಿತ್ರಣ ಗುರುತಿಸಬಹುದು.

ಮನೆಯ ಒಳಗೆ, ದೇವಸ್ಥಾನದ ಒಳಗೆ, ಹಿರಿಯರ ಮುಂದೆ, ಪವಿತ್ರ ಸ್ಥಳಗಳಲ್ಲಿ ಚಪ್ಪಲಿಯನ್ನು ತೊಡದೆ ಇರುವುದು ನಮ್ಮ ಪದ್ದತಿ. ಚಪ್ಪಲಿಯನ್ನು ತೊಟ್ಟರೆ ಕಾಲುಗಳನ್ನು ತೊಳೆದು ಮನೆ ಪ್ರವೇಶಿಸ ಬೇಕೆನ್ನುವುದು ಹಿಂದೂ ಸಂಪ್ರದಾಯ.

ಮಹಾತ್ಮ ಗಾಂಧಿ ದಕ್ಷಿಣ ಆಫ್ರಿಕಾದಲ್ಲಿರುವಾಗ ಚಪ್ಪಲಿ ನೇಯ್ಯುವುದನ್ನು ಕಲಿತು, ಅಲ್ಲಿನ ಸೆರೆವಾಸದಲ್ಲಿರುವಾಗ ಅಲ್ಲೆ ಚಪ್ಪಲಿ ನೇಯ್ದು, ಅದನ್ನ ಭಾರತೀಯರನ್ನು ಕೀಳಾಗಿ ನೋಡುತ್ತಿದ್ದ ಅಧಿಕಾರಿ ಸ್ಮಟ್ ಗೆ ಉಡುಗೊರೆ ನೀಡಿದ. ಸ್ಮಟ್ ಅದನ್ನ 24 ವರ್ಷ ತನ್ನೊಂದಿಗೆ ಇರಿಸಿಕೊಂಡು, ಗಾಂಧೀಜಿಯ 60ನೇ ಜನ್ಮದಿನಕ್ಕೆ ಹಿಂದಿರುಗಿಸಿ ಗಾಂಧಿಯ ಬಳಿ ಕ್ಷಮೆಯಾಚಿಸಿದರು.

ಈಗೇ ನಮಗೆ ಅತ್ಯಗತ್ಯವಾದ ಚಪ್ಪಲಿಯ ಕಥೆಯು ಮುಂದುವರಿಯುತ್ತಾ ಹೊಗುತ್ತದೆ. ಇಂದು ನನಗೆ ನನ್ನ ಚಪ್ಪಲಿ ನೋಡುವಾಗ ಇವೆಲ್ಲಾ ನೆನಪಿಗೆ ಬಂತು.

ಇನ್ನೂ ಮುಂದೆ ಚಪ್ಪಲಿಯೆಂದರೆ ಅಸಹ್ಯ ಪಡಬೇಡಿ. ಚಪ್ಪಲಿ ತಯಾರಿಕೆಗೆ ಒಂದು ಕೊರ್ಸ್ ಇದೆ, ಅದರಲ್ಲೂ ಡಿಗ್ರಿ ಇದೆ.

- ಮುರಳಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಚಪ್ಪಲಿ ಪುರಾಣ ಚೆನ್ನಾಗಿದೆ.
ಚಪ್ಪಲಿಯ ಇನ್ನೂ ಕೆಲವು ಉಪಯೋಗಗಳಿವೆ: 1. ಕೆಟ್ಟ ಕೆಲಸ ಮಾಡಿದವರಿಗೆ ಚಪ್ಪಲಿ ಪ್ರಯೋಗ ಮಾಡುವುದು, 2. ಅವಮಾನಿಸಲು ಚಪ್ಪಲಿಯ ಮೇಲೆ ದೇವರ ಚಿತ್ರಗಳನ್ನು ರಚಿಸುವುದು, 3. ಚಪ್ಪಲಿ ಕದಿಯುವ ಪ್ರಸಂಗಗಳು, 4. . . . .
ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
ನಿಮಗೆ ಈ ಪ್ರತಿಕ್ರಿಯೆ ಹೇಗನಿಸಿತು? ತಿಳಿಸಿ!
To prevent automated spam submissions leave this field empty.