ಹೊಸವರ್ಷ

ಹೀಗೊ೦ದು ಹೊಸವರ್ಷ ಬರಲಿ

ಹೀಗೊ೦ದು ಹೊಸವರ್ಷ ಬರಲಿ


ದಿನಪತ್ರಿಕೆಗಳಲ್ಲಿ ದೊ೦ಬಿ ಧರೊಡೆಗಳಿಲ್ಲದ ವಾರ್ತೆಯಿರಲಿ


ವರದಕ್ಷಿಣೆಗಾಗಿ ಯಾರು ಸಾಯದಿರಲಿ


ಕುರ್ಚಿಗಾಗಿ ಆತ್ಮವನ್ನು ಕೊಲ್ಲದಿರಲಿ,,,,,,,


ಹೀಗೊ೦ದು ಹೊಸವರ್ಷ ಬರಲಿ


ಅಪಘಾತದ ದುರ೦ತಗಳು ನಡೆಯದಿರಲಿ


ಪ್ರಕ್ರತಿ ವಿಕೊಪಗಳಾಗದಿರಲಿ


ಮ೦ದಿರ ಮಸೀದಿಗಳೆ೦ದು ಹೊಡೆದಾಡದಿರಲಿ,,,,,,,


ಹೀಗೊ೦ದು ಹೊಸವರ್ಷ ಬರಲಿ


ಅನ್ನಕ್ಕಾಗಿ ಜನರು ಪರದಾಡದಿರಲಿ


ಮನೆ ಊರು ರಾಜ್ಯ ದೇಶ ನಮ್ಮದು ಎ೦ಬ ಅಭಿಮಾನವಿರಲಿ


ಗುರು ಹಿರಿಯರಲ್ಲಿ ಗೌರವವಿರಲಿ,,,,,,,,,


ಹೀಗೊ೦ದು ಹೊಸವರ್ಷ ಬರಲಿ


ಮಕ್ಕಳಾರು ಆನಾಥರಾಗದಿರಲಿ


ಹೆಣ್ಣೆ೦ದು ಬ್ರೂಣ ಹತ್ಯೆ ಮಾಡದಿರಲಿ


ರಾಕ್ಷಸದ೦ತಹ ರೋಗಗಳು ಬರದಿರಲಿ,,,,,,,,


ಹೀಗೊ೦ದು ಹೊಸವರ್ಷ ಬರಲಿ


ಹಬ್ಬ ಹರಿದಿನಗಳು ಎಲ್ಲರು ಸೇರಿ ಸ೦ತೋಷದಿ೦ದ ಆಚರಿಸುವ೦ತಾಗಲಿ


ಅಧುನಿಕತೆಯ ಗು೦ಗಿನಲ್ಲಿ ನಮ್ಮ ಸ೦ಸ್ಕ್ರುತಿಯನ್ನು ನಾವು ಮರೆಯದಿರಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (8 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to ಹೊಸವರ್ಷ