ಹಾರೈಕೆ

ಹೊಸವರ್ಷಕ್ಕೆ

೨೦೧೩ ಎಲ್ಲ ಸಂಪದಿಗರಿಗೂ ಸಂತಸ ನೆಮ್ಮದಿಗಳಿಂದ ಕೂಡಿರಲೆಂಬ ಹಾರೈಕೆಗಳೊಂದಿಗೆ ಎರಡು ಚೌಪದಿಗಳು:

ಚಂದದಾ ಮುಂಬೆಳಗ ಚುಮ್ಮೆನುವ ಚಳಿಯಲ್ಲಿ

ಚಂದಿರನು ಕಣ್ಣಿಂದ ಕಾಣದಾದ
ಸುಂದರಾಕಾಶದಲಿ ಹಾಕುತ್ತ ರಂಗೋಲಿ
ತಂದಿರಲು ನೇಸರನು ಮನಕೆ ಮೋದ

ಹೊಸತೇನು ಬಂತಿಲ್ಲಿ ಹೂವಿಲ್ಲ ಚಿಗುರಿಲ್ಲ ?
ತುಸು ಸೊಗಸು ಕಂಡಿಲ್ಲವೆಂದೆನ್ನಬೇಡ!
ಮುಸುಕಿದಾಗಸದಲ್ಲಿ  ರಂಗಿನೋಕುಳಿ ಚೆಲ್ಲಿ-
ಯೆಸೆವ ಹೊಸ ಭಾಸ್ಕರನ ಸೊಬಗ ನೋಡಾ!

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು

ಮಗುವ ನಗುವೇ ಜಗನಗುವು ಮಗುವ ಮೊಗವೇ ಜಗಮೊಗವು | ಮಗುವ ನಗುವೇ ಶಿವನಗುವು ಮಗುವ ಮೊಗವೇ ಶಿವಮೊಗವು || ಮಗುವ ಅಳಲೇ ಮಧುವಳಲು ಮಗುವ ಅಳಲೇ ಜಗದಳಲು | ಶಿವನ ಅಳಲೇ ಮಗುವಳಲು ಮಗುವ ಅಳಲೇ ಶಿವನಳಲು || ನಗುವ ಮೊಗದಲೆ ಆ ಜಗವು ಮಗುವ ಮೊಗದಲೇ ಆ ಶಿವವು ||
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ

ನಮ್ಮೂರ ಕಾಡೊಳಗೆ ಕಡೆದಿರುವ ಶಿಲ್ಪಗಳ ಅಂದವನು ನೋಡೋಣ ಬನ್ನಿ ನೀವು. ಕಲ್ಪನೆಯ ಕಲ್ಪಗಳು ಕಳೆದಿರುವ ಶಿಲ್ಪಗಳ ಇತಿಹಾಸವೃತ್ತಗಳ ತನ್ನಿ ನೀವು. ಹೂವೊಳಗೆ ತುಂಬಿರುವ ಮಕರಂದ ಕಲೆಹಾಕಿ ನಾಲಗೆಗೆ ಸವಿಯಿತ್ತ ಜೇನಿನಲ್ಲಿ. ಹಣ್ಣುಗಳೊಳಗಿನಾ ಬೀಜಗಳ ಬಿತ್ತುತ್ತ ತಿರುಳಗಳ ತಿನ್ನುವಾ ಹಕ್ಕಿಯಲ್ಲಿ. ಕೀಟಗಳು ಹೆಣೆದಿರುವ ಬಲೆಯ ಮೇಲ್ಗಡೆಯಲ್ಲಿ ಮುತ್ತಾಗಿ ಹೊಳೆದಿರುವ ಮಂಜಿನಲ್ಲಿ. ಆಟವಾಡಲು ಬಳ್ಳಿ ಹಿಡಿದಿರುವ ವಾನರರ ಚುರುಕುನೋಟದ ಕಣ್ಣ ಹೊಳಪಿನಲ್ಲಿ. ಸತ್ತಿರುವ ಎಲೆಯೊಳಗಿನಾ ಅಂತಃಸತ್ತ್ವವನು ಚಿಗುರೆಲೆಗೆ ಕಳುಹಿಸಿದಾ ಮಣ್ಣಿನಲ್ಲಿ. ಮಣ್ಣಿನಾ ಸತ್ತ್ವವನು ತನ್ನೊಳಗೆ ಕಲೆಸುತ್ತ ಬೇರೊಳಗೆ ಬೆರೆಸಿರುವ ನೀರಿನಲ್ಲಿ. ನೀರಡಿಕೆ ನೀಗಿದ ಮುಗಿಲುಗಳಾ ಅಪ್ಪುಗೆಗೆ ಮೈಚಾಚಿ ನಿಂತಿರುವ ಮರಗಳಲ್ಲಿ. ಮುಗಿಲುಗಳ ತಾ ಹೊತ್ತು ಮರಗಳಾ ಬಳಿಯಿತ್ತು ಒಪ್ಪಿಗೆಯನಿತ್ತಾ ತಂಗಾಳಿಯಲ್ಲಿ. ಬಿರುಗಾಳಿಗೆದೆಯೊಡ್ಡಿ ಮುರಿದಿರುವ ರೆಂಬೆಗಳ ಜೀವವನು ತಳೆದಿರುವ ಬೆಂಕಿಯಲ್ಲಿ. ಭಾವಗಳನುಕ್ಕಿಸುವ ರೂಪಗಳೊಳಹೊಕ್ಕು ಸಾವನರಿಯದಾ ಜೀವಜೀವಗಳಲಿ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
Subscribe to ಹಾರೈಕೆ