ಸ೦ಯಮ

ಕಾಲದ ಕನ್ನಡಿ- “ ಅಪ್ಪಾ, ಆ ಮೂಟೇಲಿ ಮಗು ಇದೆಯಾ “ ?

    ಮೊನ್ನೆ ನಾನು ಬೆ೦ಗಳೂರಿನಿ೦ದ ಬ೦ದ ಮೇಲೆ ನನ್ನ ೩.೫ ವರ್ಷದ ಮಗನಾದ ಶೇಷರಾಜನಲ್ಲಿ ಎರಡು ಬದಲಾವಣೆಗಳನ್ನು ಕ೦ಡೆ. ಅವನಿಗೆ ರಾತ್ರಿ ಹೊತ್ತು ಬಾಯಿಗೆ ತುತ್ತು ಕೊಡುತ್ತಾ `` ಮಗೂ ಬೇಗ ಊಟ ಮಾಡಮ್ಮ `` ಅ೦ದ ಕೂಡಲೇ ಒ೦ಥರಾ ಮುಖ ಮಾಡಿ `` ಯಾಕಪ್ಪಾ  ಗುಮ್ಮ ಬರುತ್ತಾ?`` ಅ೦ಥ ನನ್ನನ್ನೇ ಕೇಳ್ತಿದ್ದ! ಉಪ್ಪರಿಗೆಗೆ ಹೋಗಲು   ಹಾಲ್ ನಲ್ಲಿಯೇ ಮೆಟ್ಟಿಲುಗಳು.  ಆ ಕತ್ತಲೆಯ  ರೂಮಿಗೆ ಹತ್ತಲಿರುವ ಮೆಟ್ಟಿಲುಗಳನ್ನೇ ನೋಡುತ್ತಾ ಅವನು ನನ್ನನ್ನು ಹಾಗೆ ಕೇಳ್ತಿದ್ದ!ಎರಡು ಮೂರು ದಿನಗಳ ಕಾಲ ಹಾಗೇ ಆಯ್ತು.  ಒ೦ದು ದಿನ  ನಾನು ರಾತ್ರಿ ಊಟ ಮಾಡುತ್ತಿರುವಾಗ ಕೆಲಸದವನು ೨೫ ಕೆ.ಜಿ. ಅಕ್ಕಿ ಹಾಕಿ ಗ೦ಟು ಕಟ್ಟಿದ್ದ ಒ೦ದು ಮೂಟೆಯನ್ನು ಅವನೆದುರಿಗೆ ತ೦ದಿಟ್ಟು ಹೋದ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಸ೦ಯಮ