ಸಣ್ಣ ಕತೆ

ಸೂಕರ ಸಂತತಿ

ಸೂಕರ ಸಂತತಿ

ತಿರುಪತಿಯ ಬೆಟ್ಟದ ತಪ್ಪಲಲ್ಲಿ ಒಂದು ಸಾಧುವಾದ, ಪುಣ್ಯಕೋಟಿಯಂಥ ಹಸು ತನ್ನ ಕರುವಿನೊಡನೆ ಕೊಟ್ಟಿಗೆಯೊಂದರಲ್ಲಿ ವಾಸಿಸುತ್ತಿತ್ತು. ಒಂದು ದಿನ ಧಾರಾಕಾರ ಮಳೆಯಲ್ಲಿ ತುಂಬುಗರ್ಭಿಣಿಯಾದ ಹಂದಿಯೊಂದು ನೆನೆಯುತ್ತಾ ಸಂಕಷ್ಟಪಡುವುದನ್ನು ನೋಡಿದ ಆ ಸಾಧುಹಸು, ತುಂಬ ಕರುಣೆಯಿಂದ ಆ ಗರ್ಭಿಣಿ ಹಂದಿಗೆ ತನ್ನ ಕೊಟ್ಟಿಗೆಯಲ್ಲಿ ಆಶ್ರಯ ನೀಡಿತು. ಸೈತಾನ(ಸ)ನ  ಅನುಗ್ರಹದಿಂದ ಆ ಹಂದಿ ಒಮ್ಮೆಗೇ 49 ಮರಿಗಳಿಗೆ ಜನ್ಮವಿತ್ತಿತು. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (10 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಣ್ಣಕತೆ : ಮನೆಗೆ ಬಂದ ಮೋಹಿನಿ

ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ ಚಾನಲ್ ನೋಡುತ್ತ ತೂಕಡಿಸುತ್ತ ಕುಳಿತಿರುವವರೆ ಜಾಸ್ತಿ. 

ಕಳೆದ ವಾರ ಹೀಗೆ ಆಯಿತು. ಮನೆಯಲ್ಲಿ ಹೆಂಡತಿ ಹಾಗು ಮಗಳು ರಾತ್ರಿ ಹತ್ತೂವರೆ ಆಯಿತೆಂದು ಹೋಗಿ ಮಲಗಿಬಿಟ್ಟರು, ನಾನು ವಿದೇಶಿ ಚಾನಲ್ ನ ಹಾರರ್ ಸಿನಿಮಾ ನೋಡುತ್ತ ಕುಳಿತಿದ್ದವನು, ಟೀವಿ ಆರಿಸಿ ಏಳುವಾಗ ಹನ್ನೆರಡು ರಾತ್ರಿ ದಾಟಿಯಾಗಿತ್ತು. 

ಟೀವಿ ಆರಿಸಿದೊಡನೆ  ಇದ್ದಕ್ಕಿದಂತೆ ಕವಿದ ಮೌನವನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಅತಿ ಸಣ್ಣ ಕತೆ - " ನನ್ನ ಹೆಸರು"

ಒಂದು ದಿನ ಬೆಳಿಗ್ಗೆ ಹೀಗೆ ನಗರದ ಯಾವುದೋ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ನನ್ನನ್ನು ಕಾಡತೊಡಗಿತು. ಏನಪ್ಪಾ ಅದು ಅಂಥಹ ಪ್ರಶ್ನೆ ಅಂದರೆ “ನನ್ನ ಹೆಸರೇನು ?” ಎಂಬುದು. ಯಾಕೋ ಏನೋ ಎಷ್ಟು ಪ್ರಯತ್ನಿಸಿದರೂ ನನ್ನ ಹೆಸರು ಮಾತ್ರ ನೆನಪಿಗೆ ಬರಲಿಲ್ಲ. ಎಷ್ಟೇ ತಿಪ್ಪರಲಾಗ ಹಾಕಿ ಯೋಚಿಸಿದರೂ ಅಷ್ಟೇ,  ನನ್ನ ಕಿಸೆ, ಫರ್ಸಿನೊಳಗಿನ ಹಳೆಯ ಕಾಗದದ ಚೂರುಗಳನ್ನು ಹುಡುಕಿದರೂ ಅಷ್ಟೆ, ನನ್ನ ಹೆಸರು ಮಾತ್ರ ನೆನಪಿಗೆ ಬರುತ್ತಿಲ್ಲ. ಹೋದರೆ ಹೋಗಲಿ ಅದಕ್ಯಾಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕು ಅಂದರೆ,  ತಲೆಯೊಳಗೆ ಹುಳದಂತೆ ಕೊರೆಯುತ್ತಿದ್ದ ಆ ಪ್ರಶ್ನೆ ನನ್ನನ್ನು ಬಿಡಬೇಕಲ್ಲ. ಅದು ಇನ್ನಷ್ಟು ಆಳವಾಗಿ ನನ್ನ ಮಿದುಳನ್ನು ಕೊರೆಯತೊಡಗಿತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಸಣ್ಣ ಕತೆ - ಪುಮ್ಮೀನು

ಗಾಳ ಹಾಕಿ ಮೀನು ಹಿಡಿಯುವುದು ಅವಳ ಮೋಜಿನ ಹವ್ಯಾಸವಾಗಿತ್ತು.
ಅಂದಮಾತ್ರಕ್ಕೆ ಅವಳೇನೂ ಬೆಸ್ತರವಳಲ್ಲ.
ಮೀನು ಹಿಡಿಯುವಂತಹ ಹಿಂಸ್ರಕ ಹವ್ಯಾಸ ಇರುವುದರಿಂದ ಜೈನಳೂ ಇರಲಿಕ್ಕಿಲ್ಲ.
ತಿನ್ನುವ ಉದ್ದೇಶವೂ ಇಲ್ಲದ್ದರಿಂದ, ಕೊಂದ ಪಾಪವನ್ನು ಬೇಯಿಸಿತಿಂದು ಕಳೆದುಕೊಳ್ಳುವ ಬೌದ್ಧಳೂ ಅಲ್ಲ.
ಆಗಾಗ, "ನಾನು ಮ್ಲೇಂಛಳಾಗಿ ಮತಾಂತರಗೊಂಡುಬಿಡುತ್ತೇನೆ" ಎನ್ನುತ್ತಿರುತ್ತಾಳಾದ್ದರಿಂದ...
"ಕೊಲ್ಲುವುದೆ ಕಸುಬಾದ ಉಗ್ರ-ಪ್ರವಾದಿಗಳ" ಮತಕ್ಕೆ ಸೇರಿದವಳೂ ಅಲ್ಲ.
ಬಹುಶಃ ಕ್ರತುವಿಗಾಗಿ ಕೊಲ್ಲುವ ಜಾತಿಯವಳೋ..?
ಗೊತ್ತಿಲ್ಲ! ಮೋಜಿಗಾಗಿ ಕೊಲ್ಲುವವರದ್ದೇ ಹೊಸದೊಂದು ಜಾತಿ ಇದ್ದರೂ ಇರಬಹುದು!
ಒಟ್ಟಿನಲ್ಲಿ ಗಾಳಕ್ಕೆ ಮೀನುಗಳು ಸಿಕ್ಕಿ ಚಡಪಡಿಸುವುದನ್ನು ನೋಡಿ ಆನಂದಿಸುವುದಷ್ಟೇ ಅವಳ ಉದ್ದೇಶ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (32 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕತೆ : ಸುಳ್ಳಾದ‌ ಭವಿಷ್ಯ

‘ಹಿರಿಯರು ಹೇಳಿರುವ ಮಾತು ಎಂದ ಮಾತ್ರಕ್ಕೆ ಅದನ್ನು ವಿಮರ್ಷಿಸಿದೆ ಸ್ವೀಕರಿಸಬೇಕೆ ಗುರುಗಳೆ?”

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.3 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ಕುರುಡ ಯಾರು ?

ಅಂದು ಬೆಳಿಗ್ಗೆ ಎಂದಿಗಿಂತ ತುಸು ಬೇಗನೆ ಎದ್ದಿದ್ದೆ.. ಮನದಲ್ಲಿ ಒಂಥರಾ ಸಂಭ್ರಮದ ವಾತಾವರಣ..ಇಂದಿಗೆ ನಾನು ಕೆಲ್ಸಕ್ಕೆ ಸೇರಿ ಒಂದು ವರ್ಷವಾಯ್ತು...ಖುಷಿ ಅದಕ್ಕಲ್ಲ! ಇವತ್ತು ಸಿಗುವ ಬೋನಸ್ ಮತ್ತು ಸಂಬಳದಲ್ಲಾಗುವ ಹೆಚ್ಚಳ...!
ಅದೊಂತರ ನನ್ನ ಪಾಲಿಗೆ ಡಬಲ್ ಧಮಾಕ.. ಅದಕ್ಕೆ ಮನಸ್ಸು ಹುಚ್ಚು ಕೋಡಿಯಾಗಿತ್ತು.. ಬೇಗನೆ ರೆಡಿಯಾಗಿ ಆಫೀಸಿಗೆ ಹೊರಟೆ.
ಬಸ್ಸಿನಿಂದ ಇಳಿದವನೇ ದರ ದರನೆ ಆಫೀಸಿನ ಕಡೆ ಹೆಜ್ಜೆ ಹಾಕಿದೆ. ಆಫೀಸಿಗೆ ಸೇರಿದ ಮೊದಲ ವಾರ ಮಾತ್ರ ಇಷ್ಟು ಬೇಗ ಬಂದಿರಬಹುದೇನೋ..? ಗೊತ್ತಿಲ್ಲ! ಮನಸ್ಸು ಸುಮ್ಮನಿರದೆ ಏನೇನೋ ಪರ್ಸಂಟೇಜ್ ಲೆಕ್ಕದಲ್ಲಿ calculation ಮಾಡುತ್ತಿತ್ತು!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.
ಸರಣಿ: 
Subscribe to ಸಣ್ಣ ಕತೆ