ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೦

ಕಾಸಿಲ್ಲದಿದ್ದರೆ ಕ್ರಿಯಾಶೀಲತೆ! -- ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೦

(೬೦)


"ಕಲೆಗೂ ಜೀವನಕ್ಕೂ ಇರುವ ಒಂದೇ ಸಾಮ್ಯತೆ--ಅವುಗಳ ನಿಗೂಢತೆ. ಅವುಗಳ ಬಗ್ಗೆ ಎಲ್ಲ ತಿಳಿದವರು ಬದುಕುವುದರಲ್ಲಿ, ಕಲಾಸೃಷ್ಟಿಯಲ್ಲಿ ಆಸಕ್ತಿಯನ್ನೇ ಕಳೆದುಕೊಂಡುಬಿಡಬಹುದು. ಜನ್ಮಪೂರ್ತಿ ಬದುಕಲು ಆಗುವಷ್ಟು ಹಣ ದೊರಕಿಬಿಟ್ಟರೆ ಶೇಖಡ ೯೯ ಕಲಾವಿದರು ಕಲೆಯನ್ನು ಸೃಷ್ಟಿಸುವುದನ್ನು ಬಿಟ್ಟುಬಿಡುತ್ತಾರೆ"


"ಉಳಿದ ೧ ಶೇಖಡ?"


"ಖುಷಿಯಿಂದ ಹೃದಯಸ್ಥಂಭನವಾಗಿಬುಡುತ್ತದೆ!"


"ಅಂದರೆ ಚಿತ್ರಿಸುವುದು, ಹಾಡುವುದು, ಬರೆಯುವುದು, ಕುಣಿಯುವುದು, ಇವೆಲ್ಲ ಮಾಡುವುದು ವಿಚಿತ್ರವಾದ ಹಸಿವಿನಿಂದ. ಊಟದಿಂದ ತುಂಬದ, ಪಾನೀಯಗಳಿಂದ (ಎಲ್ಲ ರೀತಿಯ) ಸಂತೃಪ್ತವಾಗದ, ದೈಹಿಕ ಆಸೆಗಳ ಪೂರೈಕೆಯಿಂದ (ಮತ್ತೆ ಎಲ್ಲ ರೀತಿಯ--ನಿಯಮಬದ್ಧವಾದ, ನೀತಿಬದ್ಧವಾದ, ಕಾನೂನುಬದ್ಧವಾದ ಮತ್ತೂ ಇವೆಲ್ಲಕ್ಕಿಂತಲೂ ವ್ಯತಿರಿಕ್ತವಾದ!) ಶಮನವಾಗದ ಹಸಿವು ಇರುತ್ತದೆ ಮಾನವರಲ್ಲಿ. ಹಣ ಕಳೆದ ಐನೂರು ವರ್ಷಗಳಿಂದ ಅಥವ ಹೊಸ-ವಸಾಹತುಶಾಹಿತ್ವ ಹುಟ್ಟಿಕೊಂಡ ಮೇಲೆ, ಇವೆಲ್ಲಕ್ಕಿಂತಲೂ ಹೆಚ್ಚಿನ ’ರುಚಿ’ ತೋರಿಸಿದೆ ಎಲ್ಲರಿಗೂ.

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೨೦