ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೨

ಪ್ರಕ್ಷುಬ್ಧ ಮೋಕ್ಷದ ಕಥಾಲೋಕಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೨

(೩೯)


’ಪ್ರಕ್ಷುಬ್ಧ’ ಅಥವ ಪವನ್ ಕುಮಾರ್ ಭಟ್ಟಾಚಾರ್ಯ ನಿಜಕ್ಕೂ ಪ್ರಕ್ಷುಬ್ಧ ವ್ಯಕ್ತಿತ್ವದವ. "ನನಗೆ ಮೋಕ್ಷ ದೊರಕಿದೆ" ಎಂದು ಆಗಾಗ ಹೇಳಿಕೊಳ್ಳುತ್ತಿದ್ದ. ನಾನು ನಗುತ್ತಿದ್ದೆ. ಆದರೆ ಆತ ಅಕ್ಷೇಪಿಸುತ್ತಿರಲಿಲ್ಲ. "ನೀನು ಮೊರ್ಖ, ನಾನು ಸುಳ್ಳ" ಎಂಬೆರಡು ವ್ಯತಿರಿಕ್ತ ಅರ್ಥ ಕೊಡುವಂತಹ ನಗೆ ಸೂಸುತ್ತಿದ್ದ. ಆ ನಗುವನ್ನು ನಾನು ’ಆರ್ಕಾಯಿಕ್ ನಗು’ ಎಂದು ವಿಂಗಡನೆ ಮಾಡಿದ್ದೆ. ಗ್ರೀಕ್ ಶಿಲ್ಪಗಳು ಆರಂಭಗೊಳ್ಳುತ್ತಿದ್ದ ಕಾಲಕ್ಕೆ, ಅವುಗಳ ಮುಖದಲ್ಲಿದ್ದ ನಿಗೂಢ ಮಂದಹಾಸವನ್ನು ’ಆರ್ಕಾಯಿಕ್ ನಗು’ ಎಂದು ಕಲಾಇತಿಹಾಸದಲ್ಲಿ ಗುರ್ತಿಸಲಾಗುತ್ತದೆ.


"ನಿನ್ನ ಬಗ್ಗೆ ನೀನೇ ನಿಯತ್ತಾಗಿ ಪರಿಚಯ ಮಾಡಿಕೋ ವತ್ಸ" ಎಂದು ಡಿಮ್ಯಾಂಡ್ ಮಾಡಿದ್ದೆ ಒಮ್ಮೆ.


"ನಾನೇ ಮೋಕ್ಷ" ಎಂದಿದ್ದ, ಮತ್ತೆ ಆರ್ಕಾಯಿಕ್ ನಗುವಿನಲ್ಲಿ.


"ಓಕೆ. ನಿನಗೇ ನಿರ್ದಿಷ್ಟವಾದ ಮೋಕ್ಷವನ್ನು ವಿವರಿಸು" ಎಂದೆ, ನಾನೂ ಸಹ ಆರ್ಕಾಯಿಕ್ ನಗುವನ್ನು ಸೂಸುತ್ತ.

field_vote: 
Average: 4.7 (6 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆಃ ಭಾಗ ೧೨