ಮೌನ

ಜೊತೆಗಿರುವವರು..

ಎಲ್ಲಿಯೋ ಹುಟ್ಟಿದೆ, ಎಲ್ಲಿಯೋ ಬೆಳೆದೆ


ಎಲ್ಲಿಯೋ ನಡೆದೆ, ಎಲ್ಲಿಗೋ ಸೇರಿದೆ


ಒ೦ದೂ ಎಣಿಕೆಯ೦ತಾಗಲಿಲ್ಲ


ಎಲ್ಲರೂ ಇದ್ದರೂ ಯಾರೂ ಇರದಿದ್ದ೦ತೆ,


ತಬ್ಬಿದರು, ದೂರ ಸರಿಸಿದರು.


ಪೂಜಿಸಿದರು, ಬೀಳಿಸಿದರು.


ಯಾರಿಗೂ ಕೇಳದಿದ್ದರೂ


ಎಲ್ಲವನೂ ಹೇಳಿದರು.


ಎಲ್ಲವನ್ನೂ ಮಾಡಿದರು!


ಹತ್ತಿರವಿರಲೇಬೇಕಾದಾಗ


ದೂರ ಸರಿದ೦ತೆ!


ದೂರ ಸರಿಸಿಕೊ೦ಡಷ್ಟೂ


ಸನಿಹ ಬ೦ದ೦ತೆ!


ಬಾಳಿನ ಹಾದಿಯಲ್ಲಿ ಒಮ್ಮೊಮ್ಮೆ


ದಾರಿ ತಪ್ಪಿದರೂ,


ಕುಹಕಗಳಿಗೆ ಧೃತಿ ಗೆಟ್ಟರೂ,


ನಡೆಯುವುದನ್ನು ಕೈಬಿಡಲಿಲ್ಲ.


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಾತು ಮತ್ತು ಮೌನದ ನಡುವೆ.....

ರಾತ್ರಿ ನಿದ್ದೆ ಮಾಡಬೇಕಾದರೆ ನಾನು ಈ ದಿನ ಏನೆಲ್ಲಾ ಮಾಡಿದೆ ಎಂಬುದನ್ನು ಒಮ್ಮೆ ಅವಲೋಕಿಸುವುದು ನನ್ನ ದಿನಚರಿಯ ಭಾಗಗಳಲ್ಲೊಂದು. ಹೀಗೆ ಆಲೋಚಿಸಬೇಕಾದರೆ ಸಿಗುವ ಉತ್ತರ ಬರೀ ಮಾತು..ಮಾತು..ಮಾತು. ಹೌದು, ದಿನಾ ನಾವು ಎಷ್ಟು ಮಾತಾಡುತ್ತೇವಲ್ವಾ? ಮಾತನಾಡದೆ ಕುಳಿತು ಕೊಳ್ಳುವುದು ಅಂತೂ ನನ್ನ ಪಾಲಿಗೆ ಅಸಾಧ್ಯದ ಮಾತು. ಹೇಗೋ ಮಾತು ಕಡಿಮೆ ಮಾಡಿ ಮೌನದ ಸುಖ ಅನುಭವಿಸಬೇಕು ಎಂದು ಕೊಂಡು ಒಂದು ಶುಭ ಗಳಿಗೆಯಲ್ಲಿ ನಿರ್ಧರಿಸಿದೆ. ನಿಜವಾಗಿಯೂ ಈ ಮೌನ ಒಂದು ಒಳ್ಳೆಯ ಅನುಭವವನ್ನೇ ನೀಡುತ್ತದೆ ಎಂದು ನನಗೆ ತಿಳಿದು ಬಂದದ್ದೇ ಈ ಮೌನ ಪ್ರಯೋಗದಿಂದ. ಮೌನದ ಒಳಹೊಕ್ಕಾಗ ನನಗೆ ಕೇಳಿಸಿದ ಶಬ್ದಗಳು ಅಷ್ಟಿಷ್ಟಲ್ಲ.

field_vote: 
Average: 2.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 
Subscribe to ಮೌನ