ಮಾತು

ಪದಕಟ್ಟಣೆಯ‌ ಅವಾಂತರಗಳು

ಈಚೆಗೆ ಎಷ್ಟೋ ಕನ್ನಡಿಗರಲ್ಲಿ ಹೊಸ ಹೊಸ ಪದಗಳನ್ನು ಕಟ್ಟುವ ಹುಮ್ಮಸ್ಸು ಬಂದಿದೆ. ಒಳ್ಳೆಯ ವಿಷಯವೇ. ಮೆಚ್ಚಬೇಕಾದದ್ದೇ. ಆದರೆ, ಯಾವುದೇ ಇಂತಹ ಕೆಲಸದಲ್ಲೂ ಇರಬೇಕಾದ ವ್ಯವಧಾನ ಇಲ್ಲದೇ ಹೋದರೆ ಏನಾಗುತ್ತೆ ಅಂತ ಹೇಳಬೇಕಾಗಿಯೇ ಇಲ್ಲ. ಗಣೇಶನನ್ನ ಮಾಡಲು ಹೋಗಿ ಅವರಪ್ಪನ್ನ ಮಾಡಿದರು ಅಂತ ಗಾದೆಯೇ ಇಲ್ಲವೇ! ವೇದ ಸುಳ್ಳಾದರೂ ಗಾದೆ ಸುಳ್ಳಾಗೋಲ್ಲ ಬಿಡಿ. ಹತ್ತು ಕಟ್ಟೋಕೆ ಬದಲು ಒಂದು ಮುತ್ತು ಕಟ್ಟು ಅಂತ ಅದಕ್ಕೇನೆ ಗಾದೆ ಹೇಳೋದು. ಅಂದರೆ, ಈ ಪದ ಕಟ್ಟಣೆ , ನಿಧಾನವಾಗಿ, ಜೀವಂತವಾಗಿ, ಹುಟ್ಟಿ ಬಂದು ಬೆಳೆದರೆ, ಅದು ಸೊಗಸು. ಇಲ್ಲದೆ ಹೋದರೆ, ಯಾವುದೋ ಮೈಯಿಗೆ ಯಾವುದೋ ತಲೆ ಅಂಟಿಸಿದಂತೆ, ಅಥವಾ ಅವಳ ಬಟ್ಟೆ ಇವಳಿಗಿಟ್ಟು ಅಂತಲೋ ಏನೋ ಬಿ ಎಂ ಶ್ರೀ ಅವರು ಹೇಳಿದ್ದಾರಲ್ಲ, ಹಾಗಾಗುತ್ತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (4 votes)
To prevent automated spam submissions leave this field empty.

ಹರಿದಾಸ ಸಾಹಿತ್ಯದ ಮೇಲೊಂದು ಪಕ್ಷಿನೋಟ

ಇದು ಹಲವು ವರ್ಷಗಳ ಹಿಂದೆ ನಾನು ಒಂದು ಕನ್ನಡ ಸಾಹಿತ್ಯಾಸಕ್ತರ ಗುಂಪಿನಲ್ಲಿ ಹರಿದಾಸ ಸಾಹಿತ್ಯದ ಬಗ್ಗೆ ಮಾತಾಡಿದ್ದು. ಆಸಕ್ತರು ಕೇಳಬಹುದೆಂದು ಇಲ್ಲಿ ಹಾಕಿದ್ದೇನೆ. 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಮಾತು ಮತ್ತು ಮೌನದ ನಡುವೆ.....

ರಾತ್ರಿ ನಿದ್ದೆ ಮಾಡಬೇಕಾದರೆ ನಾನು ಈ ದಿನ ಏನೆಲ್ಲಾ ಮಾಡಿದೆ ಎಂಬುದನ್ನು ಒಮ್ಮೆ ಅವಲೋಕಿಸುವುದು ನನ್ನ ದಿನಚರಿಯ ಭಾಗಗಳಲ್ಲೊಂದು. ಹೀಗೆ ಆಲೋಚಿಸಬೇಕಾದರೆ ಸಿಗುವ ಉತ್ತರ ಬರೀ ಮಾತು..ಮಾತು..ಮಾತು. ಹೌದು, ದಿನಾ ನಾವು ಎಷ್ಟು ಮಾತಾಡುತ್ತೇವಲ್ವಾ? ಮಾತನಾಡದೆ ಕುಳಿತು ಕೊಳ್ಳುವುದು ಅಂತೂ ನನ್ನ ಪಾಲಿಗೆ ಅಸಾಧ್ಯದ ಮಾತು. ಹೇಗೋ ಮಾತು ಕಡಿಮೆ ಮಾಡಿ ಮೌನದ ಸುಖ ಅನುಭವಿಸಬೇಕು ಎಂದು ಕೊಂಡು ಒಂದು ಶುಭ ಗಳಿಗೆಯಲ್ಲಿ ನಿರ್ಧರಿಸಿದೆ. ನಿಜವಾಗಿಯೂ ಈ ಮೌನ ಒಂದು ಒಳ್ಳೆಯ ಅನುಭವವನ್ನೇ ನೀಡುತ್ತದೆ ಎಂದು ನನಗೆ ತಿಳಿದು ಬಂದದ್ದೇ ಈ ಮೌನ ಪ್ರಯೋಗದಿಂದ. ಮೌನದ ಒಳಹೊಕ್ಕಾಗ ನನಗೆ ಕೇಳಿಸಿದ ಶಬ್ದಗಳು ಅಷ್ಟಿಷ್ಟಲ್ಲ.

field_vote: 
Average: 2.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 
Subscribe to ಮಾತು