ಮಳೆಹನಿ

ಜುಗಲಬಂಧಿ

ತನುವ ತಾಕಿ ಮನಕೆ ಇಳಿದ ಮುಂಗಾರಿನ ಮಳೆಹನಿ
ಮಿಂಚ ಬೆಳಕ ಮೇಳದಲ್ಲಿ  ಮತ್ತೆ ಗುಡುಗ ಮಾರ್ಧನಿ
ಅರಿವಾಗದೆ ನಡೆಯಲಿ ಬಿಡು
ನನ್ನ ಕಣ್ಣ ನಿನ್ನ ಕಣ್ಣ ನಡುವೆ ಜುಗಲಬಂಧಿ

ನಡೆವ ಬಾ ಹಿಡಿದು ಕೈಯ್ಯ ಮಳೆಯಲಿ ನಾವ್ ನೆನೆಯುತ
ಮರೆವ ಬಾ ಜಗವ ಜೊತೆಗೆ ಮುತ್ತ ಮಳೆಯ ಸುರಿಸುತ
ಉರಿದು ನಮ್ಮ ಹಳಿದರೇನು
ನನ್ನ ಒಲವ ನಿನ್ನ ಚೆಲುವ ನೋಡಿ ಜಗದ ಮಂದಿ
ನಶೆಗಡಲನು ಕಡೆಯಲಿ ಬಿಡು
ನನ್ನ ಅಧರ ನಿನ್ನ ಅಧರ ನಡೆಸಿ ಜುಗಲಬಂಧಿ

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮಳೆಹನಿಯ ಚಿಟ ಪಟ!

 

 


ಚಿತ್ರ; ಅ೦ತರ್ಜಾಲದಿ೦ದ.

 

 

ಸುರಿವ  ಸ೦ಜೆ  ಮಳೆಹನಿಯ ಚಿಟ ಪಟ
ತ೦ತು ನಿನ್ನ ನೆನಪು ಏನಿದು ಈ ಮಾಟ

ಕಾಮನಬಿಲ್ಲು ನೆನಪಿಸುವ ನಿನ್ನ ಕಣ್ಣೋಟ
ನಲ್ಲೆ  ಬಾ ಬಳಿಗೆ  ಬಿಡು ನಿನ್ನ ತು೦ಟಾಟ

ಬಾನು  ಮುಗಿಲು ಒ೦ದಾದ ಈ ನೋಟ
ನೀನಿರಲು  ಬಾಳು ನಗುವ ಹೂ ತೋಟ.

ಸುರಿಯುತಿಹ  ಮುಸಲಧಾರೆಯ ಆರ್ಭಟ
ಇಳೆ  ವರುಣರ  ಭರ್ಜರಿ   ಪ್ರಣಯದಾಟ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to ಮಳೆಹನಿ