ಬಾಲ್ಯದ ನೆನಪು

ಬೈಲುದಾರಿ

ನಸುಕಿನ ಚುಮು ಚುಮು ಬಿಸಿಲಿನಲ್ಲಿ ಆ ದಾರಿಯಲ್ಲಿ ನಡೆದರೆ ಅಕ್ಷರಶ: ವಜ್ರ ಮುತ್ತುಗಳನ್ನು ದಾರಿಯುದ್ದಕ್ಕೂ ಕಾಣಬಹುದು! ಇರುಳೆಲ್ಲ ಬಿದ್ದ ಇಬ್ಬನಿಯು ದಾರಿಯ ಇಕ್ಕೆಲಗಳಲ್ಲೂ ಹುಲ್ಲಿನ ಮೇಲೆ ಮುತ್ತಿನ ಮಣಿಗಳಂತೆ ಕೂತಿರುತ್ತಿದ್ದವು. ಬೆಳಗಿನ ಬಿಸಿಲಿನಲ್ಲಿ ಫಳಫಳನೆ ವಜ್ರಗಳಂತೆ ಮಿನುಗುತ್ತಿದ್ದವು. ಆ ದಾರಿಯಲ್ಲಿ ನಡೆದಂತೆಲ್ಲ ಆ ಮುತ್ತು - ವಜ್ರಗಳು ನಮ್ಮ ಕಾಲಿಗೆ ತಾಗಿ ನಲುಗಿ, ಪಾದಗಳನ್ನು ತೊಳೆಯುತ್ತಿದ್ದವು.

    ನಮ್ಮ ಮನೆಗೆ ಸಾಗುವ ಬೈಲುದಾರಿಯಲ್ಲಿ ನಡೆಯುವುದೆಂದರೆ, ಅದೊಂದು ವಿನೂತನ ಅನುಭವ; ಪ್ರಕೃತಿಯೊಂದಿಗೆ ಅನಿವಾರ್ಯವಾಗಿ ಬೆರೆಯುವ ಒಂದು ಅನುಭೂತಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಬಾಲ್ಯದ ನೆನಪು