ಪೋರ

ಹದಿಮೂರರ ಪೋರ, ಕೆಚ್ಚೆದೆಯ ವೀರ

 
ಮೊದಲ ವಿಶ್ವ ಮಹಾಯುದ್ಧ ದಲ್ಲಿ ಮಡಿದ ಸೈನಿಕರ ಸ್ಮಾರಕ ಸ್ಥಳಕ್ಕೆ ಹೋದ British National Party (BNP) ನಾಯಕ ನಿಕ್ ಗ್ರಿಫ್ಫಿನ್ ತಬ್ಬಿಬ್ಬಾಗಿ, ಅವಮಾನಕ್ಕೊಳಗಾದರು. ತನ್ನ ಧ್ವೇಷಪೂರಿತ ರಾಜಕಾರಣಕ್ಕೆ ಸವಾಲು ನುರಿತ ವರದಿಗಾರರಿಂದ ಅಲ್ಲ ಶಾಲೆಯಲ್ಲಿ ಕಲಿಯುತ್ತಿರುವ ತನ್ನದೇ ದೇಶದ ಕೇವಲ ೧೩ ರ ಪೋರ ವಿಲಿಯಂ ರೊಬಿ ಇಂದ ಬರಬಹುದು ಎಂದು ಗ್ರಿಫ್ಫಿನ್ ಕನಸಿನಲ್ಲೂ ನೆನಸಿರಲಿಲ್ಲ. ಫೋಟೋ ತೆಗೆಯುತ್ತಾ "ಇದು ನಿಮ್ಮ ಪಕ್ಷದ ಧೋರಣೆಗೆ ವಿರುದ್ಧವಲ್ಲವೇ ( BNP, ಬಿಳಿಯರು ಶ್ರೇಷ್ಠ ಎಂದು ನಂಬುವ ಪಕ್ಷ), ನಿಮ್ಮದು ಧ್ವೇಷದ ತಳಹದಿಯ ಮೇಲೆ ನಿಂತಿರುವ ಪಕ್ಷ" ಎಂದು ಗ್ರಿಫ್ಫಿನ್ ರನ್ನು ತರಾಟೆಗೆ ತೆಗೆದುಕೊಂಡು ತನ್ನ ಎಳೆಯ ವಯಸ್ಸನ್ನು ಮೀರುವ ಪ್ರಬುದ್ಧತೆಯನ್ನು ಸಾರಿದ ವಿಲ್ಲಿಯಮ್. ಈ ಮಾತನ್ನು ಆ ಹುಡುಗ ಹೇಳಲು ಕಾರಣ ಅವಿಭಜಿತ ಭಾರತದ ಸೈನಿಕರು ವಿಶೇಷವಾಗಿ 40th Pathans ರೆಜಿಮೆಂಟಿಗೆ ಸೇರಿದ ಯೋಧರು ಸಾಕಷ್ಟು ಸಂಖ್ಯೆಯಲ್ಲಿ ಈ ಯುದ್ಧದಲ್ಲಿ ಬಲಿಯಾಗಿದ್ದರು.    

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಪೋರ