ನೀರು

ತೋಟದಾಚೆಯ ತೋಡು

ಜುಳು ಜುಳು ಹರಿಯುವ ನೀರು ಸಂಗೀತವನ್ನು ಹಾಡುತ್ತದೆ ಎನ್ನುತ್ತಾರೆ ಕವಿಗಳು. ದಟ್ಟವಾದ ಕಾಡಿನ ಮರಗಳು ಮೆಲ್ಲುಸಿರಿನ ಗಾನವನ್ನು ನುಡಿಯುತ್ತಿರುತ್ತವೆ ಎಂಬುದು ಭಾವಜೀವಿಗಳ ಅಂಬೋಣ. ತಣ್ಣನೆ ಬೀಸುವ ಮಂದ ಮಾರುತವೂ ಕವಿತೆಯೊಂದರ ಪಲುಕನ್ನು ಪಲ್ಲವಿಸುತ್ತಿರುತ್ತದೆ ಎಂದು ನಮಗೂ ಆಗಾಗ ಅನಿಸುತ್ತಿರುತ್ತದೆ ಅಲ್ಲವೆ? ಬೆಳದಿಂಗಳ ರಾತ್ರಿಯಲ್ಲಿ ಅಲುಗಾಡುವ ಗಿಡಮರಗಳ ಎಲೆಗಳು ಹನಿಗವನಗಳನ್ನು ನುಡಿಯುತ್ತಾ, ಎದೆಯಲ್ಲಿ ಬೆಚ್ಚನೆಯ ಭಾವನೆಗಳನ್ನು ಹುಟ್ಟಿಸುತ್ತವೆ. ಈ ಎಲ್ಲಾ ಮೂರ್ತ-ಅಮೂರ್ತ ಸಂಗೀತಾನುಭಗಳಲ್ಲಿ, ನೀರು ನುಡಿಸುವ ಗಾಯನವನ್ನು ಕಿವಿಯಾರೆ ಕೇಳಬಹುದು ಎಂಬುದು ನಿಜವಾದ ಸಂಗತಿ.

 

ನಮ್ಮ ಬೈಲಿನಿಂದಾಚೆ ಮತ್ತು ತೋಟದಿಂದಾಚೆ ಒಟ್ಟು ಎರಡು ತೋಡುಗಳು ಹರಿಯುತ್ತವೆ. ನಿಶ್ಶಬ್ದ ರಾತ್ರಿಯಲ್ಲಿ ಅಲ್ಲಿ ಹರಿಯುವ ನೀರಿನ ಜುಳು ಜುಳು ಶಬ್ದ ನಮ್ಮ ಮನೆಯ ತನಕ ಕೇಳುತ್ತದೆ. ಎಲ್ಲಾ ಗದ್ದೆಬೈಲುಗಳಿಗೆ ಸಮಾಂತರವಾಗಿ, ಹಾಡಿಯ ಪಕ್ಕದಲ್ಲಿ ಒಂದು ತೋಡು ಇರುವುದು ಒಂದು ಸಾಮಾನ್ಯ ಸಂಗತಿ. ಆದರೆ, ಆ ತೋಡಿನ ನೀರಿನಲ್ಲಿ ಗಾಯನದ ಇಂಪು ಅಥವಾ ಜೀವನದ ಕಂಪು ಕಂಡುಬಂದರೆ, ಅದು ಮನಸ್ಸಿನ ಮೂಲೆಯಲ್ಲಿ ಮೂಡುವ ಬೆಚ್ಚನೆಯ ನೆನಪಾಗಿ, ತನ್ನ ಛಾಪು ಒತ್ತಬಲ್ಲದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ ...!

ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಸತಿ-ಸುತರಿಗಾಗಿ ಏನಾದರೂ ಕೂಡಿಡಲೇ ಬೇಕಾಗಿದೆ. ನೀರಿಲ್ಲವೆ೦ದು ಬಾವಿಯನ್ನೇ ಮುಚ್ಚಿಸಲಾಗದು! ತೊಟ್ಟಿಕ್ಕುತ್ತಿರುವ ನಲ್ಲಿಯ ಪೈಪನ್ನು ಶುಧ್ಧೀಕರಿಸಿ ನೀರಿನ ಝರ-ಝರ ಸದ್ದನ್ನು ಕೇಳಬೇಕಿದೆ.. ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಸೋರುತ್ತಿರುವ ಮನೆಯ ಮಾಳಿಗೆಯನ್ನು ಭದ್ರಪಡಿಸಬೇಕಿದೆ... ಹನಿ ನೀರೂ ಒಳಬರದ೦ತೆ ಲೆಪ್ಪ ಹಾಕಬೇಕಿದೆ... ಸದಾ ಸೋರುವುದಾದರೂ ಸದ್ಯಕ್ಕೆ ಸೋರುವುದನ್ನು ತಡೆಗಟ್ಟಲೇ ಬೇಕಿದೆ.. ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ! ಊರುಗೋಲಿನ ಸಹಾಯವಿಲ್ಲದೇ ಸ್ವತ: ನಡೆಯಲು ದಿವ್ಯೌಷಧ ಒ೦ದನ್ನು ಹುಡುಕಬೇಕಿದೆ.. ಮಾಡುವ ಪ್ರಯತ್ನಗಳಿಗೆಲ್ಲಾ ನಿರಾಶೆಯೇ ಕಟ್ಟಿಟ್ಟ ಬುತ್ತಿಯಾದರೂ ಜಯಿಸುವ ದಾರಿಯನ್ನೀಗ ಹುಡುಕಬೇಕಿದೆ... ಸದ್ಯಕ್ಕಿಲ್ಲ ಬುದ್ಧನಾಗುವ ಇಚ್ಛೆ.. ಹತ್ತಾರು ದಾರಿಗಳ ನಡುವೆ ನನ್ನದೇ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾವೇನ್ ಮಾಡಬೇಕ್ರೀ ಯಜಮಾನ್ರೇ... ?

ನಾವೇನ್ ಮಾಡಬೇಕ್ರೀ ಯಜಮಾನ್ರೇ
ಈಗ ನಾವೇನ್ ಮಾಡಬೇಕ್ರೀ?
ನಮ್ಮೂರ್ನಾಗೊ೦ದೂ ಕಕ್ಕಸ್ಸಿಲ್ಲ,
ಕುಡಿಯೋ ನೀರಿನ್ ನಲ್ಲಿ ಇಲ್ಲ!
ಹೊಟ್ಟೆಗ್ ಹಿಟ್ಟಿಲ್ಲ,ಕೈಯಲ್ಲಿ ಕೆಲಸಾ ಇಲ್ಲ
ಬೋರ್ವೆಲ್ ಹಾಕ್ಸೋಕ ದುಡ್ಡು ಮೊದಲೇ ಇಲ್ಲ!
ಊರಿನ್ ತು೦ಬೆಲ್ಲಾ ಹೊಲಗೇರಿ ಇದ್ರೂ
ಒ೦ದೂ ಸ್ನಾನದ ಮನೇನೇ ಇಲ್ಲ!
ನಾವೇನ್ ಮಾಡ ಬೇಕ್ರೀ ಯಜಮಾನ್ರೇ ಈಗ?


 


ಅಲ್ರೀ ,ನಾವು ಆರ್ಸಿ ಕಳುಸ್ದೋರೆಲ್ಲಾ
ಹಿ೦ಗೇ ದಗಲ್ಬಾಜಿಗಳಾಗ್ತಾ ಇದ್ರೆ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?
 ಸಾಧು ಸ೦ತ ಅ೦ಥ ಆರ್ಸಿ ಕಳುಸ್ದೊ,
ಅವನಿವತ್ತು  ಗೊತ್ತೇ ಇಲ್ದವನ ಥರಾ ಇದಾನಲ್ಲ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?


 


ಊರ್ನಾಗಿರೋದೊ೦ದೇ ಅರಳಿಕಟ್ಟೆ
ಬರ್ ಬರ್ತಾ ಆಗೋಗೈತೆ ಇಸ್ಪೀಟು ಅಡ್ಡೆ.
ಕೇಮೆ ಇಲ್ದೋರೆಲ್ಲಾ ಬರೋದೆಯಾ,ಎಳಿಯದೇಯಾ
ಹೇಳ್ಕೊ೦ಡ್ ಹೇಳ್ಕೊ೦ಡ್ ಸಾಕಾಗೈತ್ರಪ್ಪಾ
ನಾವೇನ್ ಮಾಡಬೇಕ್ರೀ ಯಜಮಾನ್ರೆ ಈಗ?


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

"ಅಬ್ಬಿ ನೀರು" ಎಂಬ ಅಮೃತ

"ಅಬ್ಬಿ ನೀರುಪದ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (4 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 

ರಸ್ತೆ ಆಯ್ತು... ಇದೀಗ ಕುಡಿಯುವ ನೀರಿನ ಖಾಸಗಿಕರಣ....

ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದಕ್ಕೆ ಬದ್ದವಾಗಿರಬೇಕಿದ್ದ ರಾಜ್ಯ ಸರ್ಕಾರ ಇದೀಗ ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಗುಲ್ಬರ್ಗಾಗಳಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಮುಂದಿನ ದಿನಗಳಲ್ಲಿ ಯೋಜನೆಯನ್ನು ಹಂತ ಹಂತವಾಗಿ ರಾಜ್ಯದ ವಿವಿಧ ಪಟ್ಟಣಗಳಿಗೂ ವಿಸ್ತರಿಸಲಿದೆ ಎನ್ನುವ ವಿಚಾರ ಆಂತಕ ತರುವಂತಹದ್ದು ಅಲ್ಲದೆ ಇದನ್ನು ಹಲವಾರು ವೇದಿಕೆಗಳಲ್ಲಿ ಚರ್ಚಿಸುವುದು ಅಗತ್ಯವಾಗಿದೆ.

735 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಇದನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರಕ್ಕೆ ಯೋಜನೆಯ ಕಲ್ಪನೆಯೂ ಇಲ್ಲ ಬಿಡ್ಡಿಂಗ್್ಗಾಗಿ ದಾಖಲೆಗಳನ್ನು ಸಿದ್ದಪಡಿಸಲೂ ಸರ್ಕಾರದ ಅಧಿಕಾರಿಗಳಿಗೆ ಸಾಧ್ಯವಿಲ್ಲ ಇದನ್ನೂ ಖಾಸಗಿ ಕಂಪೆನಿಗೆ ವಹಿಸುತ್ತಿರುವುದನ್ನು ನೋಡಿದರೆ ಇದರ ಹಿಂದೆ ಬೇರಾವುದೊ ಹಿತಾಸಕ್ತಿ ಇರುವ ಅನುಮಾನ ನನಗೆ.

ಖಾಸಗಿ ಕಂಪೆನಿಗಳ ಕೈಗೆ ಕುಡಿಯುವ ನೀರಿನ ಹಿಡಿತ ನೀಡಲು ಮುಂದಾಗಿರುವ ಸರ್ಕಾರ ಸ್ಥಳೀಯ ನೀರಿನ ಮೂಲಗಳಾದ ಕೆರೆ, ಕಟ್ಟೆಗಳ ನಿಯಂತ್ರಣವನ್ನು ಖಾಸಗಿ ಕಂಪೆನಿಗಳಿಗೆ ವಹಿಸಲಿದೆ. ಮೂಲಭೂತ ಸೌಕರ್ಯ ನಿರ್ಮಾಣಗೊಂಡ ನಂತರ ಜನರಿಂದ ಹಣ ವಸೂಲಿಗೆ ಅವಕಾಶ ಕಲ್ಪಿಸಲಾಗುತ್ತದೆ.

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ನೀರು