ನಿಸರ್ಗ

ತೋಟದಾಚೆಯ ತೋಡು

ಜುಳು ಜುಳು ಹರಿಯುವ ನೀರು ಸಂಗೀತವನ್ನು ಹಾಡುತ್ತದೆ ಎನ್ನುತ್ತಾರೆ ಕವಿಗಳು. ದಟ್ಟವಾದ ಕಾಡಿನ ಮರಗಳು ಮೆಲ್ಲುಸಿರಿನ ಗಾನವನ್ನು ನುಡಿಯುತ್ತಿರುತ್ತವೆ ಎಂಬುದು ಭಾವಜೀವಿಗಳ ಅಂಬೋಣ. ತಣ್ಣನೆ ಬೀಸುವ ಮಂದ ಮಾರುತವೂ ಕವಿತೆಯೊಂದರ ಪಲುಕನ್ನು ಪಲ್ಲವಿಸುತ್ತಿರುತ್ತದೆ ಎಂದು ನಮಗೂ ಆಗಾಗ ಅನಿಸುತ್ತಿರುತ್ತದೆ ಅಲ್ಲವೆ? ಬೆಳದಿಂಗಳ ರಾತ್ರಿಯಲ್ಲಿ ಅಲುಗಾಡುವ ಗಿಡಮರಗಳ ಎಲೆಗಳು ಹನಿಗವನಗಳನ್ನು ನುಡಿಯುತ್ತಾ, ಎದೆಯಲ್ಲಿ ಬೆಚ್ಚನೆಯ ಭಾವನೆಗಳನ್ನು ಹುಟ್ಟಿಸುತ್ತವೆ. ಈ ಎಲ್ಲಾ ಮೂರ್ತ-ಅಮೂರ್ತ ಸಂಗೀತಾನುಭಗಳಲ್ಲಿ, ನೀರು ನುಡಿಸುವ ಗಾಯನವನ್ನು ಕಿವಿಯಾರೆ ಕೇಳಬಹುದು ಎಂಬುದು ನಿಜವಾದ ಸಂಗತಿ.

 

ನಮ್ಮ ಬೈಲಿನಿಂದಾಚೆ ಮತ್ತು ತೋಟದಿಂದಾಚೆ ಒಟ್ಟು ಎರಡು ತೋಡುಗಳು ಹರಿಯುತ್ತವೆ. ನಿಶ್ಶಬ್ದ ರಾತ್ರಿಯಲ್ಲಿ ಅಲ್ಲಿ ಹರಿಯುವ ನೀರಿನ ಜುಳು ಜುಳು ಶಬ್ದ ನಮ್ಮ ಮನೆಯ ತನಕ ಕೇಳುತ್ತದೆ. ಎಲ್ಲಾ ಗದ್ದೆಬೈಲುಗಳಿಗೆ ಸಮಾಂತರವಾಗಿ, ಹಾಡಿಯ ಪಕ್ಕದಲ್ಲಿ ಒಂದು ತೋಡು ಇರುವುದು ಒಂದು ಸಾಮಾನ್ಯ ಸಂಗತಿ. ಆದರೆ, ಆ ತೋಡಿನ ನೀರಿನಲ್ಲಿ ಗಾಯನದ ಇಂಪು ಅಥವಾ ಜೀವನದ ಕಂಪು ಕಂಡುಬಂದರೆ, ಅದು ಮನಸ್ಸಿನ ಮೂಲೆಯಲ್ಲಿ ಮೂಡುವ ಬೆಚ್ಚನೆಯ ನೆನಪಾಗಿ, ತನ್ನ ಛಾಪು ಒತ್ತಬಲ್ಲದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಈ ಬ್ಲಾಗನ್ನೊಮ್ಮೆ ನೋಡಿ

ಸಂಪದ ಬಳಗದಲ್ಲಿ ಕೆಲವು ಹವ್ಯಾಸಿ ಛಾಯಾಗ್ರಾಹಕರನ್ನೂ, "ಡಬ್ಬ" ಕ್ಯಾಮೆರಾದ ಮೂಲಕ ನಿಸರ್ಗದ ವಿಸ್ಮಯವನ್ನು ಸೆರೆಹಿಡಿಯುವ ಉತ್ಸಾಹಿಗಳನ್ನೂ ಕಂಡಿದ್ದೇನೆ. ಹೀಗೇ browse ಮಾಡುತ್ತಿದ್ದಾಗ ಈ ಬ್ಲಾಗ್ ಸೈಟ್ ಕಾಣ ಸಿಕ್ಕಿತು.   

ಕೆಳಗಿದೆ ನೋಡಿ ಕೊಂಡಿ:

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
Subscribe to ನಿಸರ್ಗ