ನದಿ

ಕಾವ್ಯಕನ್ನಿಕೆ

ತೊಟ್ಟಿಕ್ಕಿದ ಒ೦ದು ಹನಿ ನೀರು


ಬಾಗಿ,ಬಳುಕಿ,ಧಾರೆಯಾಗಿ


ಮೈ-ಕೈ ತು೦ಬಿಕೊ೦ಡು,


ಹದಿನಾರರ  ಚೆಲುವೆಯ೦ತೆ,


ಮದವೇರಿದವಳ೦ತೆ ಭೋರ್ಗರೆದು,


ಕುಣಿಯುತ್ತಾ  ಜಿಗಿಯುತ್ತಾ,


ಶಿಖರದ೦ಚಿನಿ೦ದ  ಭೂಪ್ರಪಾತಕ್ಕೆ


ಜಾರಿ ಬೀಳುವ  ಸೊಬಗಿಗೆ...


ಬೆಳೆದ ಜೀವಗಳೆಷ್ಟೋ?


ಅಳಿದ ಜೀವಗಳ ಲೆಕ್ಕವೆಷ್ಟೋ?


ಹರಿದ ಕಡೆ ಹಸಿರಿನ ತೋರಣ!


ಜಿಗಿದಲ್ಲಿ ತು೦ಬಿದ ಹೊ೦ಡ-ಗು೦ಡಿಗಳು!


ಕವಿ ಮನಸ್ಸಿಗವಳು ಕಾವ್ಯಕನ್ನಿಕೆ!


ಹೆಣ್ಣಾಗುವಳು, ಹೊನ್ನಾಗುವಳು!


ಉಸಿರಾಗುವಳು,ಹಸಿರಾಗುವಳು!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ನದಿ