ಧರ್ಮ

ಧರ್ಮೋ ರಕ್ಷತಿಃ ರಕ್ಷಿತಃ

ಬೈಬಲ್ ನ ನೋಅಃ ಮತ್ತು ಅವನ ನೌಕೆ ಹಾಗು ಭಾಗವತದ ಮತ್ಸ್ಯಾವತಾರ ತಿಳಿಸುವ ರೀತಿ, ಪದಗಳು, ಸಂದರ್ಭ ಬೇರೇ ಆದರೂ ಒಂದೇ ಸಾರಾಂಶವಲ್ಲವೇ? ಒಂದೇ ಸನ್ನಿವೇಶವನ್ನು ನೋಡುವ ವಿವಿಧ ದೃಷ್ಟಿಕೋಣಗಳಲ್ಲವೇ? ಒಂದರಲ್ಲಿ ದೀರ್ಘವಾಗಿ ಉಲ್ಲೇಖಿಸುವುದನ್ನು, ಮತ್ತೊಂದರಲ್ಲಿ ಸಂಕ್ಷಿಪ್ತವಾಗಿ ಹೇಳಿ, ಮತ್ತೊಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡುತ್ತಾರೆ ವಿನಃ ಇದನ್ನು ಆಳವಾಗಿ ಅಧ್ಯಯನ ಮಾಡದ ಮೂಡರಿಗೆ ಬೇರೆ ಬೇರೆಯಾಗಿ ಕಾಣುವುದರಲ್ಲಿ ಆಶ್ಚರ್ಯವೇನಿದೆ? ಮಕ್ಕಳ ಕಥೆಯ ಪುಸ್ತಕ ಓದಿದ ಹಾಗೆ ಬರಿ ಕಥೆಯಾಗಿ ಪರಿಗಣಿಸಿದರೆ, ಎರಡು ಅಚ್ಚಿನಂತೆ ಕಾಣದಿರಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಲದ ಕನ್ನಡಿ: ನಾವು ಮತ್ತು ನಮ್ಮ ಧರ್ಮ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಬಂತು ಮತ್ತೊಮ್ಮೆ ವ್ರತಾಚರಣೆಯ ಮಾಸ

ರಮದಾನ್, ಇಸ್ಲಾಮೀ ಪಂಚಾಂಗದ ಒಂಭತ್ತನೆ ತಿಂಗಳು ಮತ್ತು ಇಸ್ಲಾಮಿನ ಐದು ಸ್ಥಂಭಗಳಲ್ಲಿ ಮೂರನೆಯ ಸ್ಥಂಭವಾದ ರಮದಾನ್ ತಿಂಗಳಿನಲ್ಲಿ ಜಗತ್ತಿನ ಮುಸ್ಲಿಮರು ದಿನವಿಡೀ ಉಪವಾಸವಿದ್ದು ವಿಶೇಷ ಆರಾಧನೆಯಲ್ಲೂ, ಪವಿತ್ರ ಕುರಾನ್ ಪಾರಾಯಣದಲ್ಲೂ ತಮ್ಮ ಸಮಯ ಕಳೆಯುತ್ತಾರೆ. ಈ ಕಾರಣಕ್ಕಾಗಿ ಈ ಮಾಸವನ್ನು ದಾನದ, ಧ್ಯಾನದ ಮತ್ತು ಚಿಂತನೆಯ ಮಾಸವೆಂದು ಕರೆಯುತ್ತಾರೆ (month of charity, contemplation, and reflection). ಚಂದ್ರ ದರ್ಶನದೊಂದಿಗೆ ಆರಂಭವಾಗುವ ೩೦ ದಿನಗಳ ಈ ಉಪವಾಸ ವ್ರತ ಮುಸ್ಲಿಮ್ ಜಗತ್ತಿಗೆ ಹೊಸ ಚೈತನ್ಯವನ್ನೂ, ಧಾರ್ಮಿಕತೆಯನ್ನೂ ತುಂಬುತ್ತದೆ.

ನಮ್ಮನ್ನು ಸೃಷ್ಟಿಸಿದ ದೇವರಿಗೆ ಆರಾಧನೆ ಸಲ್ಲಿಸುವುದಕ್ಕೆ, ಪ್ರಾಮುಖ್ಯತೆ ಹೆಚ್ಚು. ಯಾವುದೇ ಪರಿಸ್ಥಿತಿಯಲ್ಲೂ ಐದು ಹೊತ್ತಿನ ನಮಾಜನ್ನು ನಿರ್ವಹಿಸಲೇಬೇಕು. ನಮಾಜ್ ಜೊತೆಗೆ ಕುರಾನ್ ಸೂಕ್ತಗಳನ್ನು ಪಠಿಸುವುದು, ಹಜ್ ಯಾತ್ರೆ, ಇವೂ ಸಹ ಆರಾಧನೆಯಲ್ಲೇ ಒಳಗೊಳ್ಳುತ್ತದೆ. ಆದರೆ ನಮಾಜ್, ಕುರಾನ್ ಪಠಣ, ಹಜ್ ಇತ್ಯಾದಿಗಳು  ತೋರಿಕೆಯ ಆರಾಧನೆಯಾಗಿಯೂ ಮಾರ್ಪಡಬಹುದು. ನಾನು ಧರ್ಮಿಷ್ಠ ಎಂದು ತೋರಿಸಲು ಎಲ್ಲರಿಗೂ ಕಾಣುವಂತೆ ಮಸ್ಜಿದ್ ಗೆ ಹೋಗುವುದು, ಹಜ್ ಯಾತ್ರೆ ಮಾಡುವುದು ಹೀಗೆ. ಆದರೆ ವ್ರತಾಚಾರಣೆ ಹಾಗಲ್ಲ. ಇದೊಂದು ರಹಸ್ಯ ಆರಾಧನೆ. ಉಪವಾಸವಿರುವವನ ಮತ್ತು ಅವನ ಪ್ರಭುವಿಗೆ ಮಾತ್ರ ತಿಳಿಯುವ ಆರಾಧನೆ. ಮೂರನೆಯ ವ್ಯಕ್ತಿಗೆ ಇದರ ಅರಿವಿರುವುದಿಲ್ಲ; ಹಾಗಾಗಿ ವ್ರತಾಚರಣೆಗೆ ಹೆಚ್ಚು ಮಹತ್ವ.    

field_vote: 
Average: 4.6 (5 votes)
To prevent automated spam submissions leave this field empty.
ಲೇಖನ ವರ್ಗ (Category): 

“ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ” ಪುಸ್ತಕ ಪರಿಚಯ

ಸಿ.ಎಸ್.ಎಲ್.ಸಿ

Smrti-Vismrti : Bharatiya Samskriti

ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾನಿಲಯದ Research Centre Vergelijkende Cultuurwetenschap (Comparative Science of Cultures) ನ ನಿರ್ದೇಶಕರಾಗಿರುವ ಹಾಗೂ ಬಾಲು ಎಂದು ಪರಿಚಿತರಾಗಿರುವ ಪ್ರೋ. ಬಾಲಗಂಗಾಧರ ಅವರ The Heathen in his Blindness…Asia the West and the Dynamics of Religion ಪ್ರಸ್ತುತ ಸಮಾಜ ವಿಜ್ಞಾನಗಳ ಚರ್ಚೆಯಲ್ಲಿ ಪ್ರಮುಖವಾಗಿ ಕಂಡುಬರುವ ಕೃತಿಯಾಗಿದೆ . ಕರ್ನಾಟಕದ ಸಮಾಜಶಾಸ್ತ್ರೀಯ ಬೌದ್ಧಿಕ ವಲಯದಲ್ಲೂ ಕೂಡ ಈ ಪುಸ್ತಕವು ಗಂಭೀರವಾಗಿ ಚರ್ಚೆಗೊಳಗಾಗುತ್ತಿರುವ ಕೃತಿ. ಬಾಲು ಅವರ ಚಿಂತನೆಗಳು ಕನ್ನಡಿಗರಿಗೂ ಪರಿಚಯವಾಗಲಿ ಇಲ್ಲೂ ಕೂಡ ಒಳ್ಳೆಯ ಚರ್ಚೆಗಳು ನಡೆಯಲಿ ಎಂಬ ಉದ್ದೇಶ ಹೊತ್ತು ಮೂಲ ಆಂಗ್ಲ ಭಾಷೆಯಲ್ಲಿರುವ ಕೃತಿಯನ್ನು “ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ ಎಂಬ ಶೀರ್ಷಿಕೆಯ ಅಡಿ ಕನ್ನಡಕ್ಕೆ ಅನುವಾದಿಸಲಾಗಿದೆ. . ಕನ್ನಡಕ್ಕೆ ಅನುವಾದಿಸಿ ಪರಿಚಯಿಸುವ ಕಾರ್ಯವನ್ನು ಕುವೆಂಪು ವಿಶ್ವವಿದ್ಯಾನಿಲದಲ್ಲಿನ ಸ್ಥಳೀಯ ಸಂಸ್ಕೃತಿಗಳ ಅದ್ಯಯನ ಕೆಂದ್ರದ ನಿರ್ದೇಶಕರಾಗಿರುವ ಪ್ರೊ. ರಾಜಾರಾಮ ಹೆಗಡೆಯವರು ಮಾಡಿದ್ದಾರೆ.

ಇಂದಿನವರೆಗೆ ಬಂದಿರುವ ಸಮಾಜ ವಿಜ್ಞಾನಗಳಲ್ಲಿನ ಪುಸ್ತಕಗಳಿಗಿಂತ ಈ ಪುಸ್ತಕವು ಭಿನ್ನವೇ ಎಂದು ಹೇಳಬಹುದು.. ತೀರಾ ಚುಟುಕಾಗಿ ಈ ಗ್ರಂಥದ ವಾದದ ತಿರುಳನ್ನು ತಿಳಿಸುವುದಾದರೆ, ಇಲ್ಲಿಯವರೆಗೂ ಬಂದಿರುವ ರಿಲಿಜನ್ ಅಧ್ಯಯನಗಳು/ಪಾಶ್ಚಿಮಾತ್ಯರು ತಿಳಿಸುವಂತೆ ಎಲ್ಲಾ ಸಂಸ್ಕೃತಿಗಳು ಒಂದಿಲ್ಲೊಂದು ಪ್ರಕಾರದ ರಿಲಿಜನ್ಗಳನ್ನು ಹೊಂದಿವೆ, ರಿಲಿಜನ್ಗಳಿಲ್ಲದ ಸಂಸ್ಕೃತಿಗಳೆ ಇಲ್ಲ ಎಂಬುದಾಗಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಪ್ರೊ. ಬಾಲಗಂಗಾಧರ ಅವರು ವಾದಿಸುವುದೆನೆಂದರೆ, ‘ರಿಲಿಜನ್ ಸಾಂಸ್ಕೃತಿಕ ಸಾರ್ವತ್ರಿಕವಲ್ಲ’, ಆದರೆ ಎಲ್ಲ ಸಂಸ್ಕೃತಿಗಳು ರಿಲಿಜನ್ ಹೊಂದಿವೆ ಎಂಬ ಪಾಶ್ಚಿಮಾತ್ಯರ ಗ್ರಹಿಕೆಯ ಬೇರುಗಳು ಪಾಶ್ಚಿಮಾತ್ಯರಲ್ಲಿಯೇ ಇವೆ ಎಂದು ವಾದಿಸಿದ್ದಾರೆ. ಅವರ ವಾದವು ಮುಂದುವರೆದು ಹೇಗೆ ಕ್ರಿಶ್ಚಿಯನ್ ಥಿಯಾಲಜಿಯು ಎಲ್ಲಾ ಸಂಸ್ಕೃತಿಗಳು ಒಂದಿಲ್ಲೊಂದು ಪ್ರಕಾರದ ರಿಲಿಜನ್ಗಳು ಹೊಂದಿವೆ ಎಂದು ಪಾಶ್ಚಿಮಾತ್ಯರು ಗ್ರಹಿಸಿಕೊಳ್ಳುವಂತೆ ಮಾಡಿತು ಹಾಗು ಅದರಿಂದುಟಾದ ಪರಿಣಾಮಗಳು ಏನು? ಎಂಬ ಪ್ರಶ್ನೆಯ ಕುರಿತು ತೀರಾ ತರ್ಕಬದ್ಧವಾಗಿ, ಹಾಗೂ ವಿವರಣಾತ್ಮಕವಾಗಿ ಚರ್ಚಿಸಿದ್ದಾರೆ. ಭಾರತದ ಇಂದಿನ ಸಂದರ್ಭದಲ್ಲಿ ಹಲವಾರು ಬಗೆಹರಿಯದ ಸಮಸ್ಯೆಗಳಿಗೂ ಕೂಡ ಈ ಪುಸ್ತಕವೂ ನೆರವಾಗುತ್ತದೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಭಾರತೀಯ ಬಹುಸಂಸ್ಕೃತಿಗಳು ಮತ್ತು ಸೆಕ್ಯುಲರ್ ವಾದ


Multicultural India and Secularism

ರಾಜಾರಾಮ ಹೆಗಡೆ

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಅನ್ಯವನ್ನು ಒಳಗೊಳ್ಳುವ ಕಷ್ಟ

 [The difficulty of accommodating the 'Other']

ಮಹೇಶ್ ಕುಮಾರ್ ಸಿ. ಎಸ್.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

"ಜಿಹಾದ್" ಎಂದರೇನು?

ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ "ಮದ್ರಸಾ" ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಪ್ರಪ್ರಥಮವಾಗಿ ಜಿಹಾದ್ ಎನ್ನುವ ಪದ ಕೇಳಿದ್ದು ೨೦೦೧ ರಲ್ಲಿ. ಅಮೆರಿಕೆಯ ಮೇಲೆ ನಡೆದ ಧಾಳಿಯಲ್ಲಿ ಅಮೇರಿಕಾ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ರಾಜಕೀಯ ಪಂಡಿತರುಗಳು ಉಪಯೋಗಿಸಿದ ಪದದಿಂದ ನನಗೆ ಪ್ರಥಮವಾಗಿ ಜಿಹಾದ್ ಪದದ ಪರಿಚಯವಾಯಿತು. ಇನ್ನು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳ ರೀತಿ ಜಿಹಾದ್ ಅನ್ನೂ ಹೇಳಿ ಕೊಟ್ಟು, ಜಿಹಾದ್ ಅಂದರೆ ಯುದ್ಧ, ಸಿಕ್ಕ ಸಿಕ್ಕವರನ್ನು ಕೊಲ್ಲುವುದು ಎಂದಿದ್ದರೆ ವಿಶ್ವ ಈ ರೀತಿಯಲ್ಲಿ ಖಂಡಿತಾ ಇರುತ್ತಿರಲಿಲ್ಲ.

field_vote: 
Average: 4.1 (9 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಧರ್ಮ