ಜಾನಪದ

ಮಾಹಿತಿ ಬೇಕಾಗಿದೆ

ಎಲ್ಲಾ ಸಂಪದಗರಿಗೂ ನಮಸ್ಕಾರಗಳು ಸುಮಾರು ದಿನಗಳ ನಂತರ ಸಂಪದ ಮರಳಿ ಯಥಾಸ್ಥಿತಿಗೆ ಹೊಸ ರೂಪದಲ್ಲಿ ಬಂದದ್ದು ನೋಡಿ ತುಂಬಾ ತುಂಬಾ ಸಂತೋಷವಾಯಿತು.

 

ನಾವು ಕರ್ನಾಟಕದಲ್ಲಿ ಜಾನಪದ ಗೀತೆಗಳ ಕಲಾವಿದರೊಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದ್ದು ಅದಕ್ಕೆ ಸಂಬಂದಿಸಿದಂತೆ ಕಲಾವಿದರನ್ನು ಸಂಪರ್ಕಿಸಬೇಕಾಗಿದೆ. ದಯವಿಟ್ಟು ನಿಮ್ಮ ಬಳಿ ಜಾನಪದ ಕಲಾವಿದರ ಮಾಹಿತಿ ಇದ್ದರೆ ಹಂಚಿಕೊಳ್ಳಿ. ಕಲಾವಿದರ ಹೆಸರು, ವಿಳಾಸ, ಯಾವ ರೀತಿಯ ಕಲಾವಿದರು ಅಂತ ಸಿಕ್ಕರೆ ಇನ್ನೂ ಉತ್ತಮ ಜೊತೆಗೆ ಸಂಪರ್ಕ ವಿಳಾಸ ಇದ್ದರೆ ನೀಡಿ ಅವರನ್ನು ಬೇಟಿ ಮಾಡಬೇಕಾಗಿದೆ.

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಗಾದೆಗಳು : ಬೀದಿಯಲ್ಲೇ ಹುಟ್ಟಿದರೂ, ತೋರಿಸುವುದು ರಾಜಮಾರ್ಗ!

"ಶ್ರೀಮಂತರಿಗೆ ಕೊಡುವ ಗೌರವ ಬಡವರಿಗೆ ಯಾರೂ ಎಂದೂ ತೋರಿಸುವುದಿಲ್ಲ, ತೋರಿಸಬೇಕೆಂಬ ಕಾನೂನೇನು ಇಲ್ಲ. ರಾಮೇಗೌಡ್ರು ಬಂದ್ರೆ ಜಮಖಾನೆ ಹಾಸಿ ಉಪಚರಿಸುವ ಜನ, ದಿನಗೂಲಿ ಮಾಡುವ ’ರಾಮ್ಯಾ’ ಬಂದರೆ ತೋರಿಸುವುದಿಲ್ಲ. ಹಣ ಇದ್ರೆ ಎಲ್ರು ನಮ್ಮವ್ರು ತಮ್ಮವ್ರು ಅಂತಾರೆ. ಗುಣ ಒಂದೇ ಇದ್ರೆ ಸಾಲ್ದು, ಸ್ವಲ್ಪ ಹಣ ಸಹ ಬೇಕು ಮರ್ಯಾದೆ ಗಿಟ್ಟಿಸಿಕೊಳ್ಳೋಕೆ. ಹಣ, ಐಶ್ವರ್ಯ ಇದ್ದವನೇ ದೊಡ್ಡವನು, ಇಲ್ಲದಿದ್ರೆ ದೇವರೇ ಗತಿ." ಇಷ್ಟೆಲ್ಲಾ ಉದ್ದುದ್ದಾದ ಅರ್ಥ ಬಿಡಿಬಿಡಿಸಿ ಹೇಳೊ ಬದಲು,

"ದೊಡ್ಡವರು ಬಂದ್ರೆ ಒದರಿ ಹಾಸ್ತೀವಿ
ಬಡವರು ಬಂದ್ರೆ ಬಾಗ್ಲಲ್ ನಿಲ್ಲಿಸ್ತೀವಿ"

ಅಂದ್ರೆ ಎಷ್ಟು ಚನ್ನ? [ಒದರಿ = ಕೂಗಿ]. ಇದೇ ಗಾದೆ(Proverb)ಗಿರುವ ಶಕ್ತಿ.  "ಮಾಡಿದ್ದುಣ್ಣೊ ಮಹರಾಯ", "ಹಾಸಿಗೆ ಇದ್ದಷ್ಟು ಕಾಲು ಚಾಚು", "ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ", "ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ", ಎಂಬ ಅನೇಕ ಗಾದೆಗಳು ಜೀವನಾನುಭವವನ್ನು, ಅತ್ಯಂತ ಸಂಕ್ಷಿಪ್ತವಾಗಿ, ವಿವೇಕಪೂರ್ಣವಾಗಿ, ಪರಿಣಾಮಕಾರಿಯಾಗಿ ಹೇಳಬಲ್ಲವು.  "ಗಾದೆಗಳು ಅನುಭವದ ಸಾಂದ್ರತೆಗೆ, ವಸ್ತುವೈವಿಧ್ಯತೆಗೆ, ಸಂಸ್ಕೃತಿ ಸಂಪನ್ನತೆಗೆ, ವಿಚಾರ ವೈಭವಕ್ಕೆ ಹೆಸರಾದುವು." ಯಾವುದೇ ಜನಾಂಗದ ಆತ್ಮಚರಿತ್ರೆ, ತಕ್ಕಮಟ್ಟಿಗೆ ಬಾಹ್ಯಚರಿತ್ರೆ ಕೂಡ ಆ ಜನಾಂಗದ ಗಾದೆಗಳಲ್ಲಿ ಗೋಚರಿಸುತ್ತದೆ. ಉಪ್ಪು ಊಟಕ್ಕೆ ಹೇಗೆ ಅಗತ್ಯವೋ ಹಾಗೆ ಗಾದೆ ಮಾತಿಗೆ ಅವಶ್ಯಕ. ಗಾದೆಗಳಿಲ್ಲದ ದೇಶವಿಲ್ಲ, ಗಾದೆಗಳಿಂದ ದೂರವಾದ ಭಾಷೆಯಿಲ್ಲ. ಗಾದೆಗಳನ್ನು ಬಳಸದ ಮನುಷ್ಯನಿಲ್ಲ.

field_vote: 
Average: 3.6 (39 votes)
To prevent automated spam submissions leave this field empty.
ಲೇಖನ ವರ್ಗ (Category): 

ಕರ್ನಾಟಕದ ಗದ್ದರ್ ಪಿಚ್ಚಳ್ಳಿ ಶ್ರೀನಿವಾಸ್

ಭಾನುವಾರ ನೀರನಿಶ್ಚಿಂತೆ ಕಾರ್ಯಕ್ರಮಕ್ಕೆ ಕೋಲಾರಕ್ಕೆ ಹೋದಾಗ ಸುಂದರವಾದ ಅಂತರಗಂಗೆಯ ಬೆಟ್ಟದ ತಪ್ಪಲಿನಲ್ಲಿರುವ ಶಿವಗಂಗೆಗೆ ಬೇಟಿ ನೀಡಿದ್ದೆವು. ಶಿವಗಂಗೆಯಲ್ಲಿ "ಆದಿಮ" ಸಂಸ್ಥೆ ನೆಲೆಯೂರಿದೆ. 

ಆದಿಮವನ್ನು ಮತ್ತು ಅಲ್ಲಿನ ಸೊಬಗನ್ನು ನೋಡಿದ ಕೋಲಾರಕ್ಕೆ ಬೇಟಿ ನೀಡಿದ ನಮ್ಮಸಂಪದ ಬಳಗ ಪೋಟೋಗಳನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಜೊತೆಗೆ ಗೋಡಂಬಿ, ದ್ರಾಕ್ಷಿ ಮಿಶ್ರಿತ ಪಾಯಸ ಕುಡಿಯುತ್ತಾ ಸ್ವಲ್ಪ ಸ್ವಲ್ಪವೇ ಹೊಟ್ಟೆಯೊಳಗೆ ಇಳಿಸುತ್ತಾ ಫೋಟೋ ಕ್ಲಿಕ್ಕಿಸುತ್ತಿರಬೇಕಾದ್ರೆ ಅಲ್ಲಿಗೆ ಆದಿಮ ಸಂಸ್ಥೆಯ ಸಂಸ್ಥಾಪಕ 'ಕೋಟಗಾನಹಳ್ಳಿ ರಾಮಯ್ಯ' ಮತ್ತು 'ಪಿಚ್ಚಳ್ಳಿ ಶ್ರೀನಿವಾಸ್' ಬಂದರು. ಅವರನ್ನೂ ಸಹ ಕ್ಯಾಮರಾಗಳು ಸೆರೆ ಹಿಡಿದವು. ಇದಾದ ನಂತರ ಸ್ವಲ್ಪ ಮಾತುಕಥೆ, ಕಪ್ಪು ಟೀ - ಹೀಗೆ ನಡೆಯಿತು. ನಂತರ ಬೆಟ್ಟಿಂದ ಕೆಳಗೆ ಇಳಿಯಬೇಕಾದ್ರೆ ನಾನಿದ್ದ ಕಾರಿನೊಳೆಗೆ ಪಿಚ್ಚಳ್ಳಿ ಶ್ರೀನಿವಾಸ್ ಬೆಟ್ಟದಿಂದ ಕೆಳಗಿನವರೆಗೆ ಡ್ರಾಪ್ಗೆ ಅಂತ ಬಂದ್ರು, ಪಕ್ಕದಲ್ಲಿದ್ದ ಶ್ರೀನಿವಾಸ್ ರವರೊಟ್ಟಿಗೆ ನಾನು ಮಾತಿಗಿಳಿದೆ. ಇದ್ಯಾಕೆ ಇದೆಲ್ಲಾ ಅಂತೀರಾ ಸುಮ್ಮನೇ ಬರೆದೆ ಅಷ್ಟೆ.

field_vote: 
Average: 5 (3 votes)
To prevent automated spam submissions leave this field empty.
Subscribe to ಜಾನಪದ