ಚುಟುಕ

ಈ ಕಾಲದ್ದೊಂದು ಕಥೆ

ಈ ಕಾಲದೊಂದೂ ಕಥೆಯನ್ನು ಕೇಳೀ 
ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ 
ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ 
ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ

ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ
ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋಕೂ
ಇಷ್ಟೆಲ್ಲ ತಿಂದೂ ಕೊನೆಗೀತ ಅಂದಾ
ತೂಕಾನೆ ಯಾಕೋ ಇಳ್ಯೋದೆ ಇಲ್ಲಾ

-ಹಂಸಾನಂದಿ

ಕೊ: ಸುಮ್ನೆ ತಮಾಷೆಗಂತ ಬರೆದದ್ದು ಅಷ್ಟೆ! ಈ ಚುಟುಕಗಳು ಉಪಜಾತಿಯೆಂಬ ಸಾಂಪ್ರದಾಯಿಕ ಛಂದಸ್ಸಿನಲ್ಲಿವೆ - ಇಂದ್ರವಜ್ರ ಮತ್ತೆ ಉಪೇಂದ್ರವಜ್ರ ಎಂಬ ಎರಡೂ ವರ್ಣವೃತ್ತಗಳು ಕಲಬೆರಕೆಯಾದರೆ ಅದಕ್ಕೆ ಉಪಜಾತಿ ಅನ್ನುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

ಪಾರಿವಾಳದ ಜೊತೆಗೊಂದು ಸಂವಾದ

ParivaLa

ಸ್ಯಾನ್ ಅನ್ಟೋನಿಯೋ ದಲ್ಲಿ ವಿನುತ ಎಂ.ವಿ ತೆಗೆದ ಚಿತ್ರ...

ಸ್ಯಾನ್ ಅನ್ಟೋನಿಯೋ ದ ಪಾರಿವಾಳದೊಡಗಿನ ಸಂವಾದದ ಸಮಯದಲ್ಲಿ -
ಪಾರಿವಾಳ ಹೇಳಿದ್ದು…

ಸ್ಯಾನ್ ಅನ್ಟೋನಿಯೋ ದಲ್ಲಿ ನನ್ನ ಮನೆ…
ಇಲ್ಲೇ ಪಕ್ಕದಲ್ಲಿ…..
ಟ್ರಾಫಿಕ್ ಕಮ್ಮಿ ಕಣ್ರೀ….
ಅದಕ್ಕೇ ನಡೆದು ಹೋಗ್ತಿದ್ದೇನೆ…

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಂಪದಕಾಲ

ಸಂಪದಕಾಲ

ನಾನೊಬ್ಬ ಕನ್ನಡದ ಪರಮ ಪ್ರೇಮಿ
ಆಗಿರಲು ಆಕಾಂಕ್ಷೆ ಕನ್ನಡ ಕರ್ಮಿ
ಕನ್ನಡವೆಂದರೆ ನನಗತಿ ಹುಚ್ಚು
ಕನ್ನಡ ಭಾಷೆಯ ಕೃತಿ ಅಚ್ಚುಮೆಚ್ಚು!
ಬೆಂಗಳೂರ್’ಇನ ಹಳಬ ಪುರವಾಸಿ
’ಬರ್ಲಿನ್’ ಕಸಬಿನ ಪರದೇಸಿ
ನನ್ನ ಕಾವ್ಯನಾಮ ’ವಿಜಯಶೀಲ’
’ಸಂಪದ’ ತೆರೆದಿಹುದೆನಗೆ ನವಕಾಲ!

ವಿಜಯಶೀಲ (೦೮೦೬೦೯)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
ಸರಣಿ: 
Subscribe to ಚುಟುಕ