ಚಿಂತನ

ಕರುಣಾಳು ಬಾ ಬೆಳಕೇ......


ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು. . . .ಕವಿ ಬೆಳಕನ್ನು ಆರ್ತವಾಗಿ ಪ್ರಾರ್ಥಸಿದ್ದಾನೆ. ಬೆಳಕೆಂಬುದು ಭಗವಂತನ ನೆರಳು ಅಂದವನು ಗ್ರೀಕ್  ದಾರ್ಶನಿಕ ಪ್ಲೇಟೋ. ಭೌತಿಕ ವಸ್ತುಗಳ ನೆರಳು ಕಪ್ಪನೆಯ ಬಣ್ನದಲ್ಲಿದ್ದರೆ ಭಗವಂತನ ನೆರಳು ಬೆಳಕಿನ ರೂಪದಲ್ಲಿರುತ್ತದೆ ಎನ್ನುತ್ತ್ತಾನೆ ಒಬ್ಬ ಭಕ್ತಿ ಕವಿ. ಸ್ವಯಂ ಪ್ರಕಾಶನೆಂದು ವೇದಗಳು ಪ್ರಮಾಣಿಸಿರುವ ಭಗವಂತನ ನೆರಳೇ ಬೆಳಕಿನ ರೂಪದಲ್ಲಿ ಈ ಜಗತ್ತನ್ನು ಕಾಪಿಡುತ್ತಿದೆಯೆಂದು ನಂಬಿದವರೂ ಬಹಳ ಜನರಿದ್ದಾರೆ. ಲೋಕ ಜೀವನದ ಸಾತತ್ಯವನ್ನು ಕೆಡದಂತೆ ನಡೆಸಿಕೊಡುವುದೇ ಬೆಳಕಿನ ಮೂಲಸ್ವರೂಪನಾದ ಸೂರ್ಯನ ಕೆಲಸವೂ ಆಗಿರುವುದರಿಂದ ಸೂರ್ಯನನ್ನೇ ಭಗವಂತನೆಂದು ಕರೆಯಲೂ ಅಡ್ಡಿಯಿಲ್ಲ.

 

field_vote: 
Average: 3 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಮೌನವೆಂಬ ಮಹಾನಿಧಿ

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ ಅನುಭವದ ಮೂಲಕವೇ ಸಕಲಕ್ಕೂ ಉತ್ತರಕೊಡಬಲ್ಲ ತಾಕತ್ತು ಮೌನಕ್ಕಿದೆ. ಸರಿಯಾದ ಮಾತುಗಳು ಹುಟ್ಟುವುದೂ ಮೌನದ ಗರ್ಭದಲ್ಲೇ!

 

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಅದನ್ನು ಕೆಳಗೆ ಬಿಡಿಒಬ್ಬ ಅಧ್ಯಾಪಕರು ತನ್ನ ಕೈಯ್ಯಲ್ಲೊಂದು ನೀರು ತುಂಬಿದ ಗಾಜಿನ ಲೋಟವೊಂದನ್ನು ಹಿಡಿದು ತನ್ನ ಪಾಠ ಆರಂಭಿಸಿದ್ದರು.
ಈ ಗಾಜಿನ ಲೋಟ ಎಷ್ಟು ಭಾರ ಇರಬಹುದು?
ನೂರು ಗ್ರಾಂ ,  ನೂರೈವತ್ತು..?  ಅಲ್ಲ ಇನ್ನೂರು..!!" ವಿದ್ಯಾರ್ಥಿಗಳಿಂದ ತರಹೇ ವಾರೀ ಉತ್ತರ.
"ಇದನ್ನು ತೂಕ  ಮಾಡುವವರೆಗೆ ನಿಜವಾದ ತೂಕ ಸರಿಯಾಗಿ ನಾನೂ ಹೇಳಲಾರೆ,  ಆದರೆ ನನ್ನ ಪ್ರಶ್ನೆ ಇದಲ್ಲ.."  ಅಧ್ಯಾಪಕರೆಂದರು.  
"ನಾನೀ ಲೋಟವನ್ನು ಕೆಲವು ಸಮಯದವರೆಗೆ ಹೀಗೆ ಹಿಡಿದೇ ಇದ್ದರೆ ಏನಾಗುತ್ತದೆ?"
"ಏನೂ ಆಗಲ್ಲ"  ಎಂದನೊಬ್ಬ ವಿದ್ಯಾರ್ಥಿ
"ಅದು ನಿಜ,  ಆದರೆ, ಹೀಗೇ ಒಂದು ಗಂಟೆ ಹಿಡಿದುಕೊಂಡಿದ್ದರೆ..?"
"ನಿಮಗೆ ಕೈ ನೋವು ಬರಬಹುದು" ಎಂದನು ಮತ್ತೊಬ್ಬ

field_vote: 
Average: 5 (5 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಚಿಂತನ