ಚರವಾಣಿ

ದೂರದ ಗೆಳೆಯನಿಗೆ...

ಗೆಳೆಯ, ನೀ ಎ೦ದು ಬರುವೆ?


ಇ೦ದೇಕೋ ನಿನ್ನ ನೆನಪಾಗುತ್ತಿದೆ.


ದೂರವಾಣಿ-ಚರವಾಣಿಗಳಿದ್ದರೂ,


ನಿನ್ನ ನೋಡಲೇ ಬೇಕೆನ್ನಿಸುತ್ತಿದೆ.


ಸತತ ಮೂರು ದಿನಗಳ ವಿರಾಮ!


ನಿನ್ನ ಕ್ರಿಯೆ-ಪ್ರತಿಕ್ರಿಯೆಗಳಿಗೆ


ಹಾಕಿದೆಯಾ ಅಲ್ಪವಿರಾಮ?


ಕ೦ಡರೂ, ಅದು ನಿನ್ನ ಭಾವಚಿತ್ರ !


ನೀನಲ್ಲವಲ್ಲ!


ಎದುರು ನೋಡುವ ಇ೦ಗಿತವೇನೂ


ಶಮನವಾಗುವುದಿಲ್ಲವಲ್ಲ!


ಒಮ್ಮೆ ನೋಡಿದರೆ ಸಾಕು!


ಮು೦ದಿನ ಘಳಿಗೆಗೂ ಬೇಕು!


ಆ   ನೆನಪು


ನನ್ನ ಮು೦ದಿನ  ಕ್ಷಣಗಳನ್ನು


ಸಹನೀಯಗೊಳಿಸಬಲ್ಲುದು!


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಚರವಾಣಿ