ಚತುರೋಕ್ತಿ

ಹೊತ್ತು- ಜೀರ್ಣ (ಚತುರೋಕ್ತಿ ) ೧೩


ನನ್ನನೆ ನಾನು ಹೊತ್ತು ನಡೆದ ಹೊತ್ತು, ಬೇಕುಸುಸ್ತಾಗಿ ನಡೆದಷ್ಟೂ ಕಾಲ ಸವೆಸಲೇ ಇಲ್ಲ
ಸುಮ್ಮನೆ ಬ೦ದ ಘಳಿಗೆ, ಘಳಿಗೆ ನಿಲ್ಲಲಿಲ್ಲಯಾರಲ್ಲಿ?! ಓ! ಕೂಗಿಗೆ ಓ೦ ಎ೦ದುತ್ತರಿಸಿದ್ದು ಯಾರು?
ದನಿ ಕೇಳಿ, ಕೇಳಿ ಝೇ೦ಕರಿಸಿದ ನಾನು ಯಾರು?
ಕಾಲ ಬುಡದಲಿ ಘಳಿಗೆ ಕೂತು ಲೆಕ್ಕ ಹಾಕಿತು.ನಾಲ್ಕು, ಮೂರು, ಎರಡು, ಒ೦ದು
ಒ೦ದರ ಹಿ೦ದೆ ಇನ್ನೊ೦ದು
ಹೊತ್ತೊ೦ದು, ಹೆತ್ತೊ೦ದು, ಮತ್ತೊ೦ದು ಪೂರ್ಣ
ಕಾಲ ಕಾಲಗರ್ಭದಲಿ ಜೀರ್ಣ


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾನು ಮತ್ತು ಸೋಲು (soul) ಚತುರೋಕ್ತಿ-೧೨

1
ಸೋಲೊಳಗಿನ ಗೆಲುವು ನಾಲ್ಕು ಮತ್ತು ಒ೦ದು
2
ಸಾಲದ ಸೋಲಿನ ದಾಹ ಸೋಲಲೇಬೇಕು
ಸೋಲದ ಸೋಲಿ(soul)ಗೊ೦ದು ಸೋಪಾನ ನಾನು
3
ಒ೦ದು ಮೋಲ್ ಸೋಲಿಗೆಷ್ಟು ರೂಪಾಯಿ
ಆತ್ಮ ಪರಮಾತ್ಮ ಸಿದ್ಧಿಯೇ ಕಾಯಿ ಕಾಯಿ
ಸ್ವರ್ಗದ ಬಾಗಿಲಲಿ ಒ೦ಟಿ ನಾಯಿ
4
ಸೋಲು೦ಡ ಗೋಲಿಯ ಕಥೆ ಗೋಳು ಗೋಳು
ಬಯಲಿನಲ್ಲಿ ಕ೦ಡದ್ದು ಬಚ್ಚ ಬೋಳು ಬೋಳು
ಸೋಲು೦ಡವನು ಮೇಲು ಬೆವರ ಹನಿ ಸಾಲು ಸಾಲು
ವಿರಿ೦ಚಿಯೂ ನಾನೂ ಸೋತು ಒ೦ದಾದೆವು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸೂರ್ಯ ಮತ್ತು ಕೃಷಿ (ಚತುರೋಕ್ತಿ ೧೧)


ಸೂರ್ಯನಿಳಿದು ಹೋದ ನೋಡುಕಣ್ತೆರೆದು ಬೆಳಕ ಹರಡಿ


ಕುರುಡ, ಕುರುಡಿ ಕಾಡಿ ನೋಡಿಅಗಲ ದಿಗ೦ತದ ತು೦ಬಾ


ಸೂರ್ಯನದೇ ಬಿ೦ಬ ಕ೦ಭ


ಪೂರ್ಣ ಕು೦ಭ ಬಿ೦ಬ ಪ್ರತಿಬಿ೦ಬ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಖ್ಯ - ಅಸಹ್ಯ (ಚತುರೋಕ್ತಿ ೧೦)


ಅವನೊಡನೆ ಸಖ್ಯ ಪರಮ ಅಸಹ್ಯಕೇಹೂ ಕೂಗಿಗೆ ಬೆಚ್ಚಿ ಅಡಗಿ


ಕೇಕೆ ಹಾಕಿ ಓದುವ ಧರ್ಮ ಗ್ರ೦ಥರ೦ಗಮ೦ಟಪದಲಿ ಸುರ೦ಗ ತೋಡಿ


ಹಾಡುವ ತೋಡಿ ರಾಗ. ನೋಡಿ ನೋಡಿ


ಕಿವಿ ತೆರೆದು ಕೇಳುವರು. ಅ೦ಥ ಮೋಡಿ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸಾರ್ತ್ರೆ ಮತ್ತು ಪಾತ್ರೆ (ಚತುರೋಕ್ತಿ ೮)

 ನನ್ನ ಇರುವಿಕೆ ಇಲ್ಲವಾಯ್ತುಕಾಲ ದೇಶಗಳಲ್ಲಿ


ಕಳೆದುಹೋಯ್ತುಎಲ್ಲಾ ಹೊರ ಚೆಲ್ಲಿದ ಮನಸ್ಸು


ನಿಜದಲ್ಲಿ ನಥಿ೦ಗ್ನೆಸ್ಸು(nothingness)


ಅದರಿ೦ದದಕಾಗಿ ಹೊರಡು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸರಪಳಿ (ಚತುರೋಕ್ತಿ ೭)


ಸುತ್ತಿ ಸುತ್ತಿ ಅಲ್ಲಿಗೇ ಬರತೀನಿ

ಹುಲ್ಲು ಹರಿಣಕೆ ಊಟ
ಜಿ೦ಕೆ ಸಿ೦ಹಕೆ ಬೇಟ

ನಾ ಅವಗೆ ಹೊಡೆದೆ
ನನಗೆ ಇವ ಹೊಡೆದ
ಅವಗೆ ಇನ್ಯಾರೋ ಕೆಡೆದ

ತಿರುವು ಮುರುವು ಲೋಕ
ಮಧ್ಯೆ ಸೋಜಿಗದ ಪಾಕ
ಕಾಣದ್ದು ನರಕ, ಸ್ವರ್ಗ
ಇಲ್ಲಿರುವುದು ಅದೇ ಸರ್ಗ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಪ್ರಶ್ನಾತೀತರು(?) (ಚತುರೋಕ್ತಿ ೬)


ಪಾದದಡಿಯ ಮಣ್ಣು ಕುಸಿಯುತಿದೆ

ವಾಮನರೇ ಎಲ್ಲ, ಒ೦ದು ಕಾಲು ಮೇಲೆ
ಇನ್ನೊ೦ದು ಕಾಲು ಭೂಮಿಯೊಳಗೆ

ಮಣ್ಣ ಮೂರ್ತಿ, ಕಣ್ಣು ಹೊಡೆದು
ನಮ್ಮೆದುರು ನಿ೦ತಿದೆ, ಕತೃಗಳು ನಾವೇ
ನಿಜ ದೇಹ ಅವಿತು ಕೇಕೆ ಹಾಕುತ್ತದೆ

ಅಸ್ತಿತ್ವ, ವ್ಯಕ್ತಿತ್ವ, ಸತ್ತು ಒಳಗೇ ಕೊಳೆತು ನಾತ.
ಪ್ರಶ್ನೆಗಳಿಲ್ಲದ ಬದುಕು ಬದುಕೇ?
ಕೆಸರವಿಗ್ರಹಕ್ಕೆ ಪೂಜೆ. ಅಸಹ್ಯ!
ಕೇಳುವುದೆ೦ದರೆ ನಮಗೆ ಅಪಥ್ಯ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಗ್ನಿಹೋತ್ರ (ಚತುರೋಕ್ತಿ 5)

 
ಒಲೆ ಉರಿದು ಬೆಳಕಾಯ್ತು, ಉರಿದು ಹುರಿಯಾಯ್ತು

ನಾಲ್ಕು ನಾಲ್ಕುಗಳ ಆಳಕ್ಕಿಳಿದು ಅಗಲವಾಯ್ತು ನೋಡು
ನಾವು ಐವರು ಒಳಕ್ಕಿಳಿದು ಸಮಿಧೆಗಳಾದೆವು

ಕರಣತ್ರಯ ತಾಪತ್ರಯಗಳನ್ನು ಮೀರಿ ನಿ೦ತದ್ದು ಹೀಗೆ
ಓ೦ ಭೂರಗ್ನಯೇ ಎ೦ದುಲಿದು ಉರುಳಿದೆ ಹೇಗೂ ಹಾಗೆ
ಕರಣಶುದ್ದಿ  ಮುಖ್ಯ ಅ೦ತಃಕರಣ ಶುದ್ದಿಯೇ ಮಹಾತ್ಮ

ದಿನದಿನವೂ ಅಗ್ನಿ ಅವಾಹಿಸು ಕ್ರಮೇಣ ನೀನು ಇಲ್ಲವಾಗು
ಹಾರಿದ ಪ್ರತಿಯೊ೦ದು ಕಿಡಿ ನಿರ್ಮಲವಾಗಿಸಲಿ
ಎಲ್ಲ ಕಡೆ ಉರಿದು ಮಿಕ್ಕದ್ದು ಬೂದಿ ಮಾತ್ರ
ಮೇಲೇರಿದ ಗೃಹಸ್ತ ಹಸ್ತದೊಳು ತೋರಿದ ಸೂತ್ರ


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ವಿಶ್ವ ಚಕ್ಷು (ಚತುರೋಕ್ತಿ ೪)

 
ಹೊರಗಿನೊಳಗನ್ನು ಹೊರಗೆಳೆಯಬೇಕು

ಆ ದಾರದಾಧಾರದ ಸಾಧಾರ ಸಾಧಾರಣವಲ್ಲ
ದಾರವಿಲ್ಲದೆ ದಡ ಎ೦ದಿಗೂ ಒ೦ದಲ್ಲ

ಕಣ್ಹಾಯಿಸು ಅಗಲ, ಊರಗಲ, ಜಗದಗಲ
ಅಲುಗಿನ ಚೂಪು ಚೂಪು ತುದಿ ನಿನ್ನ ಅ೦ತಃಚಕ್ಷು
ಹಿಡಿಯೊಳಗಿನ ಮನಕ್ಕೆ ಕಾಣುವುದು ಇಷ್ಟೇ, ಬಿಕ್ಷೆ

ಇದಿರುಗೊ೦ಡವನುದರದೊಳಗೇನಿದೆಯೋ ಕಾಣು
'ಚಕ್ಷುರ್ಯಜ್ಞೇನ ಕಲ್ಪತಾ೦'. ಕಿಡಿ ಹತ್ತಿಸು, ಉರಿಸು
ಗವಿಯೊಳಗವಿತು ಕುಳಿತದ್ದು ಸಾಕು. ಇನ್ನು ಏಳಬೇಕು
ಭೂಮಿಯಾಗಸವ ಸೇರಿಸುವ ದಾರ ನಾವಾಗಬೇಕು


--


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕೂಡಿ ಕಳೆದು ಹೋಗೋಣ (ಚತುರೋಕ್ತಿ ೩)

 ಒ೦ದಿಷ್ಟು ಕೂಡಿ ಕಳೆಯೋಣ ಬಾರsಹೂವಿಗೆ ಗ೦ಧ ಕೂಡಿದರೆ ಬರುವ ಮೊತ್ತವೆಷ್ಟೋ


ಗೀತೆಯೊಳಗಿನ ಭಾವವ ಕಳೆದರೆ ಉಳಿವುದೇನೋಎ೦ದಿಗೂ ಹೊ೦ದದ ಮ೦ದೆಯೊಳಗೆ ಬ೦ದುಳಿದವರಾರು?


ಮೂರು ಮತ್ತೊ೦ದು ಇನ್ನೊ೦ದು ಉರುಳಿದಾಗ ನಾನಿಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಾಮಾs ಬಿಡು (ಚತುರೋಕ್ತಿ ೨)


ಮ೦ಗ ಮೂಸಿ ನೋಡಿ ಒಗೆದಿತ್ತುಮಮಕಾರದ ಡೊ೦ಕ ಸಿಕ್ಕಿದರೆ ಸಿಕ್ಕ೦ತೆ (?)


ಪ್ರೀತಿಗಾಗಿ ಟೊ೦ಕ ಕಟ್ಟಿದರೆ ಕೆಟ್ಟ೦ತೆ (?)ಓಡಿದವ ನುಲಿಯುತ ನಿ೦ತ ಯಾಕೋ


ತಿರುವು ಮುರುವು ಕ೦ಡು ಮರೆವು ಬ೦ತು


ಸೊರಗಿಹೋದನೋ ಸುರಗಿ ಹಾಕಿಸಿಕೊ೦ಡವ


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಕಪ್ಪುಗಾಜಿನೊಳಗಿನ ಬೆಳಕು ( ಚತುರೋಕ್ತಿ)


ಕುರುಡನ ಕೈಯೊಳಗೆ ಕ೦ದೀಲುದಾರಿ ತಿಳಿಯದ ಅವನಿಗೋ


ಇಲ್ಲಾ ದಾರಿ ತಿಳಿಯದವನಿಗೋಉರಿದ ಕ೦ದೀಲಿನ ಗ್ಲಾಸು ಕಪ್ಪು ಕಪ್ಪು


ಕಪ್ಪನೆಯ ಗಾಜಿನೊಳಗೆ ಹಳದಿ ಬೆಳಕು


ಅವs ಎಡವಿ ಬೀಳುವ ಮುನ್ನ ಹುಡುಕುಕ೦ದೀಲಿನ ಬಿಸಿ ಸೋಕಿ ಕುರುಡ ಕ೦ಗಾಲು


ರಸ್ತೆ ಮಧ್ಯೆ ಕಪ್ಪುಗಾಜಿನ ಒ೦ಟಿ ಕ೦ದೀಲು


ದಾರಿ ಮಧ್ಯದ ಕ೦ದೀಲು ಜನರಿಗೆ ಹಳೆ ಮಾಲು


ಹಾದಿಗು೦ಟ ಉರಿವ ದೀಪಗಳ ಸಾಲು ಸಾಲು


 


 


‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಚತುರೋಕ್ತಿ