ಕ್ರಿಕೆಟ್

ಸಚಿನ್ ಶತಕ ಹೊಡೆದ್ರೆ ಭಾರತ ಸೋಲುತ್ತ೦ತೆ..!!

ಸಚಿನ್ ಏಕದಿನ ಪ೦ದ್ಯದಲ್ಲಿ  ಮೊದಲ ದ್ವಿಶತಕ ದಾಖಲಿಸಿದಾಗ


 

 

ಮನುಷ್ಯನ ನ೦ಬಿಕೆಯೇ ಅ೦ಥಾದ್ದು! ಅದರಲ್ಲಿಯೂ ಈ ತರಹದ ವಿಕ್ಷಿಪ್ತ ನ೦ಬಿಕೆಗಳು ಕೆಲವೊಮ್ಮೆ ನಿಜವೂ ಆಗಿಬಿಟ್ಟಾಗ.. ಮತ್ತಷ್ಟು ಆ ನ೦ಬಿಕೆಗಳ ಬುಡ ಭದ್ರ.. ಈ ಜನರೂ ಹಾಗೆಯೇ... ಒ೦ದೇ ವ್ಯಕ್ತಿಯ ಮೇಲೆ ನ೦ಬಿಕೆ ಹಾಗೂ ಅಪನ೦ಬಿಕೆ ಎರಡನ್ನೂ ಬೆಳೆಸಿಕೊ೦ಡು ಬಿಟ್ಟಿರುತ್ತಾರೆ.. ಸ೦ಪೂರ್ಣವಾಗಿ ನ೦ಬಿಕೆಯನ್ನೂ ಇಟ್ಟಿರುವುದಿಲ್ಲ ಯಾ ಸ೦ಪೂರ್ಣವಾಗಿ ಅವನ ಮೇಲೆ ಅಪನ೦ಬಿಕೆಯನ್ನೂ ಪಡುವುದಿಲ್ಲ.. ಕೆಲವೊಮ್ಮೆ ನ೦ಬಿಕೆಯಿದ್ದರೂ ಅದರ ಮೇಲೆ ಅಪನ೦ಬಿಕೆಯೊ೦ದು ಸುಖಾ ಸುಮ್ಮನೆ ಅಧಿಪತ್ಯ ಸ್ಥಾಪಿಸಿ ಬಿಡುತ್ತದೆ! ಆ ಅಪನ೦ಬಿಕೆಯ ಪರಿಹಾರ ಸುಲಭ ಸಾಧ್ಯವಲ್ಲ. ಸಚಿನ್ ವಿಚಾರದಲ್ಲಿಯೂ ಆಗಿರುವುದು ಇದೇ..

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಾವೇಕೆ ಸೋಲಬೇಕು?

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕ್ರಿಕೆಟ್ ನ ಜ್ವರ ನನ್ನನ್ನು ಬಿಟ್ಟು ಹಲವು ವರ್ಷಗಳೇ ಕಳೆದವು. ಆದರೆ ಭಾರತದಲ್ಲಿ ಇದರ ಹುಚ್ಚನ್ನು ಅರಿತ ನನಗೆ ಗೊತ್ತು ಯಾವ ರೀತಿಯ ಯಾತನೆಯನ್ನು ಕ್ರೀಡಾ, ಕ್ಷಮಿಸಿ ಕ್ರಿಕೆಟ್ ಪ್ರೇಮಿಗಳು ಅನುಭವಿಸುತ್ತಿದ್ದಾರೆಂದು. ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತಾ ನನ್ನ ಭಾವನಿಗೆ ಫೋನಾಯಿಸಿದೆ. ಅವರ ಅರ್ಧ ಸತ್ತ ಸ್ವರ ಕೇಳಿ ಯಾರಾದರೂ ಬೇಕಾದವರು ಗೊಟಕ್ ಅಂದು ಬಿಟ್ಟರಾ ಎಂದು ಗಾಭರಿಯಾದೆ. ನೋಡಿದರೆ ಭಾರತ ಸೋತದ್ದಕ್ಕೆ ಆಕಾಶ ತಲೆ ಮೇಲೆ ಬಿದ್ದವರಂತೆ ಮಾತನಾಡುತ್ತಿದ್ದರು ನನ್ನ ಭಾವ. ಆಗಲೇ ನನಗೆ ಗೊತ್ತಾಗಿದ್ದು ಭಾರತ ಸೋತ ವಿಷಯ. ಸುದೈವವಶಾತ್ ನನ್ನ ತಲೆ ಮೇಲೆ ಆಗಸ ಬಂದು ಬೀಳಲಿಲ್ಲ, ಬದಲಿಗೆ ಆದದ್ದು ಒಂದು ರೀತಿಯ ಸಂತೋಷವೇ. ನಾವು ಸೋಲಬೇಕು. ಹೌದು ನಾವು ಸೋಲಬೇಕು. I am not mincing my words. ಬರೀ ಈ ಪಂದ್ಯಾವಳಿಯಲ್ಲಿ ಮಾತ್ರವಲ್ಲ, ಇನ್ನು ಬರಲಿರುವ  ಹತ್ತು ಹಲವು ಪಂದ್ಯಾವಳಿ ಗಳಲ್ಲಿ ನಮಗೆ ಸೋಲನ್ನುಣಿಸಿ ನಮ್ಮ ಕ್ರಿಕೆಟಿಗರು ನಮಗೆ ಮತ್ತು ನಮ್ಮ ದೇಶಕ್ಕೆ ಒಂದು ಮಹದುಪಕಾರವನ್ನು ಮಾಡಬೇಕು. ಸತ್ತು ಹೋದ, ಸಾವಿನಂಚಿನಲ್ಲಿರುವ ನಮ್ಮ ದೇಸೀ ಕ್ರೀಡೆಗಳಿಗೆ ಒಂದು ಮರುಜನ್ಮ ಬರಬೇಕಾದರೆ ಕ್ರಿಕೆಟ್ನ ಸಾವು ಅತ್ಯವಶ್ಯಕ. ಹೀಗೆ ಮೇಲಿಂದ ಮೇಲೆ ಈ ರೀತಿಯ ಸೋಲುಗಳನ್ನು ನಮ್ಮ ಕ್ರಿಕೆಟ್ ಕಲಿಗಳು ನಮ್ಮ ಹೊಸ್ತಿಲಿನ ಮುಂದೆ ತಂದು ಸುರಿದಾಗ ಗತಿಯಿಲ್ಲದೆ ನಾವು ಮನೋರಂಜನೆಗೆ ಇನ್ಯಾವುದಾದರೂ ಕ್ರೀಡೆಗಳನ್ನು ಆರಿಸಿಕೊಳ್ಳುತ್ತೇವೆ, ಪೋಷಿಸುತ್ತೇವೆ. ಕಂಗಾಲಾಗಿ, ಕರುಬುತ್ತಾ ಸಿರಿವಂತ ಕ್ರಿಕೆಟಿಗರನ್ನು ನೋಡುವ ನಮ್ಮ ಹಾಕಿ ಪಟುಗಳು, ಮತ್ತು ಇತರೆ ಕ್ರೀಡಾ ಪಟುಗಳು ಹೊಸ ಎತ್ತರ ಏರಲು ಸಹಾಯ ಮಾಡುತ್ತೇವೆ. ಅವರಲ್ಲಿ ಹುರುಪನ್ನು ತುಂಬುತ್ತೇವೆ.          

field_vote: 
Average: 4.9 (9 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಭಿಮಾನಿಯ ಹರಕೆ ಫಲಿಸಿದಾಗ!

ಚಿನ್ ತೆಂಡೂಲ್ಕರ್ ಅಬ್ಬರದ ಆಟ ಮತ್ತು ದಾಖಲೆಗಳ ಬಗ್ಗೆ ಪತ್ರಿಕೆಗಳಲ್ಲಿ, ಬ್ಲಾಗ್್ಗಳಲ್ಲಿ ಸಾಕಷ್ಟುಜನ ಈಗಾಗಲೇ ಬರೆದಿದ್ದಾರೆ. ಆದರೆ ಸಚಿನ್ ಬಗ್ಗೆ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ವಿಷಯ ಇದ್ದೇ ಇರುತ್ತದೆ. ಇಂದು ಮುಂಜಾನೆ ರಾತ್ರಿ ಪಾಳಿ ಮುಗಿಸಿ ಆಫೀಸಿನಿಂದ ಹೊರಡಬೇಕು ಅನ್ನುವಷ್ಟು ಹೊತ್ತಿಗೆ ಅಂದ್ರೆ 3.30ಕ್ಕೆ ಇಂಡಿಯನ್ ಎಕ್ಸ್್ಪ್ರೆಸ್ ಪತ್ರಿಕೆಯ 15ನೇ ಪುಟದಲ್ಲಿ 20 years ago...ಅಂತಾ ಒಂದು ಸುದ್ದಿ ಓದಿದೆ. ಅದೂ 20 ವರ್ಷಗಳ ಹಿಂದೆ ಸಚಿನ್ ಬರೆದ ಒಂದು ಪತ್ರದ ಸುದ್ದಿ. ಆಗಲೇ ನನಗೆ ಸಚಿನ್ ಬರೆದ ಪತ್ರದ ಬಗ್ಗೆ ಬರೆಯೋಣ ಅಂತಾ ಅನಿಸಿದ್ದು. ಸಚಿನ್ ತೆಂಡೂಲ್ಕರ್್ನ್ನು ಈವರೆಗೆ ಟಿವಿಯಲ್ಲಿಯೇ ನೋಡಿದ್ದು. ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ವರೆಗೂ ಸಚಿನ್ ಆಟಗಳನ್ನು ತಪ್ಪದೆ ನೋಡುತ್ತಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಮ್ಯಾಚ್ ನೋಡೋಕೆ ಸಮಯ ಸಿಕ್ತಾ ಇಲ್ಲ. ಬರೀ ಸುದ್ದಿ ಮಾಡುವುದೇ ಆಯ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (5 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಎಂದ ಕೂಡಲೇ ಒಂದೊಮ್ಮೆ ನೆನಪಿಗೆ ಬರುತ್ತಿದ್ದುದು ಕುರಿಗಳು, ಜಾನುವಾರುಗಳು, ಮತ್ತು ಕ್ರಿಕೆಟ್. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಅವ್ಯಾಹತ ಹಲ್ಲೆ ಮತ್ತು ಕೊಲೆ ಆಸ್ಟ್ರೇಲಿಯನ್ನರ ಮತ್ತೊಂದು ರೂಪದ ಪರಿಚಯ ಮಾಡಿಕೊಡುತ್ತಿದೆ. ಭಾರತೀಯರ ವಿರುದ್ಧದ ಪ್ರತಿ ಆಕ್ರಮಣಕ್ಕೂ "ಜನಾಂಗ ಬೇಧ "ನೀತಿಯ ಅರ್ಥ ಕಲ್ಪಿಸಬೇಡಿ ಎಂದು ಅಲ್ಲಿನ ಮಂತ್ರಿ ಮಹೋದಯರ ಹೇಳಿಕೆ ಓದುತ್ತಿದ್ದಾಗಲೇ ಆಸ್ಟ್ರೇಲಿಯಾ ದೇಶದ ಮನಮೋಹಕ, ರಮಣೀಯ ಚಿತ್ರಗಳ ಬ್ಲಾಗ್ ಒಂದು ಕಣ್ಣಿಗೆ ಬಿತ್ತು. ತನ್ನದೇ ಸೃಷ್ಟಿಗಳಾದ ಮನುಷ್ಯನಲ್ಲಿ ಅಸಹನೆಯನ್ನೂ, ಕ್ರೌರ್ಯವನ್ನೂ, ಮತ್ತು ನಿಸರ್ಗದಲ್ಲಿ ಬೆರಗನ್ನೂ, ಬೆಡಗನ್ನೂ ಇಟ್ಟ ಆ ಭಗವಂತನ ಮರ್ಮವಾದರೂ ಏನು?      

ಕೆಳಗಿನ ಕೊಂಡಿ ಕ್ಲಿಕ್ಕಿಸಿ, ನೋಡಿ ಕಾಂಗರೂ ನಾಡಿನ ಬೆಡಗನ್ನು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕನ್ನಡಿಗ ಅಭಿಮನ್ಯು ಮಿಥುನ್ ದ.ಅಫ್ರಿಕ ಸರಣೆಗೆ ಅಯ್ಕೆ...

ರಾಹುಲ್, ಭಾರಧ್ವಜ್ ನಂತರ ಯಾರು...?


ಭಾರತ ಕ್ರಿಕೆಟ್ ಲೋಕದಲ್ಲಿ ಕರ್ನಾಟಕದ ಬಗ್ಗೆ ಮೂಡಿದ ಪ್ರಶ್ನೆ ಇವು. ಅದರೆ ನೆನ್ನೆ (೨೮ ಜನವರಿ) ನೆಡೆದ ದ.ಅಫ್ರಿಕ ಟೆಸ್ಟ್ ಸರಣೆ ಅಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕನ್ನಡದ ಹುಡುಗ, ಬೆಂಗಳೂರಿನ ಪೀಣ್ಯ-ದಾಸರಹಳ್ಳಿ ಯ ಪ್ರತಿಭೆ ಅಭಿಮನ್ಯು ಮಿಥುನ್ ೧೫ ಜನ ಸದಸ್ಯರ ತಂಡದಲ್ಲಿ ಅಯ್ಕೆಯಾಗಿ ಕನ್ನಡಿಗರಿಗೆ ಖುಷಿ ತಂದಿದ್ದಾನೆ. ಕೇವಲ "ಉತ್ತರ ಭಾರತ" ಮಯವಾಗಿದ್ದ ಇತ್ತೀಚಿಗಿನ ಕ್ರಿಕೆಟ್ ಅಯ್ಕೆ ಪ್ರಕ್ರಿಯೆ ನಮ್ಮ "ಕ್ರಿಶ್" ಶ್ರೀಕಂತ್ ರವರು ಬಂದ ಮೇಲೆ ದಕ್ಷಿಣದ ಮೇಲೆ ಕಣ್ಣು ಹಾಯಿಸಲು ಶುರು ಮಾಡಿದೆ. ಅದರ ಪ್ರತಿಫಲವೇ ನಮ್ಮ ಮಿಥುನಿನ ಅಯ್ಕೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕ್ರಿಕೆಟ್