ಕ್ಯಾನ್ಸರ್ ಪೀಡಿತ ಹೆಣ್ಣೊಬ್ಬಳ ಜೀವನ ಕತೆ ಮನಸಿನ ವ್ಯಥೆ

ಕತೆ : ಸುನಂದ

'ಸುನಂದ ಮೇಡಮ್ , ಸಾರ್ ನಿಮ್ಮನ್ನು ಕರಿ ಅಂತ ಹೇಳಿದ್ರು' . ಕೆಲಸದಲ್ಲಿ ಮುಳುಗಿದ್ದ ಸುನಂದ ತಲೆ ಎತ್ತಿ ನೋಡಿದಳು. ಅಟೆಂಡರ್ ರಂಗಣ್ಣ , ಇವಳ ಮುಖ ನೋಡಿ ಹೊರಟು ಹೋದ 'ಏಕಿರಬಹುದು, ಬಾಸ್ ಕರೆಯುತ್ತಿರುವುದು. ತುಂಬಾ ದಿನವಾಯಿತು ಅವರು ಚೇಂಬರ್ ಒಳಗೆ ಕರೆದು ', ಎಂದು ನೆನೆಯುತ್ತ ಸುನಂದ ನಿದಾನಕ್ಕೆ ಎದ್ದು, ಅವಳ ಬಾಸ್ ಮಹೇಶ್ ಕುಳಿತ್ತಿದ್ದ ರೂಮಿನತ್ತ ಹೊರಟಳು. ಫ್ಲಾಪ್ ಡೋರನ್ನು ತಳ್ಳುತ್ತ ನಿದಾನಕ್ಕೆ ಒಳಗೆ ಹೋಗಿ ಎದಿರು ನಿಂತು. 'ಸಾರ್ ಕರೆದಿರ" ಎಂದಳು. ಅವನು ಒಮ್ಮೆ ತಲೆ ಎತ್ತಿ ಇವಳತ್ತ ನೋಡಿದ ನಂತರ ಅವನ ಎದುರಿಗಿದ್ದ , ಕಂಪ್ಯೂಟರ್ ಪರದೆಯತ್ತ ಅವನ ದೃಷ್ಟಿ ತಿರುಗಿತು. 'ಈಗ ಹೇಗಿದ್ದೀರಿ" ಅವನ ಪ್ರಶ್ನೆ. ಮೊದಲಾದರೆ ಸುನಂದಳ ಮುಖ ನೋಡುವಾಗಲೆ ಅವನ ಮುಖವು ಅರಳುತ್ತಿತ್ತು, ಕುಳಿತುಕೊಳ್ಳಿ ಎಂದು ಎದುರಿನ ಖುರ್ಚಿ ತೋರಿಸುತ್ತಿದ್ದ. ಅವಳು ಅದನ್ನು ನೆನೆಯುತ್ತ "ತೊಂದರೆ ಇಲ್ಲ ಚೆನ್ನಾಗಿದ್ದೇನೆ" ಎಂದಳು, ಮಹೇಶ್.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to ಕ್ಯಾನ್ಸರ್ ಪೀಡಿತ ಹೆಣ್ಣೊಬ್ಬಳ ಜೀವನ ಕತೆ ಮನಸಿನ ವ್ಯಥೆ