ಕುಡುಕ

ಕುಡುಕ ಕುರುಡನ ಮೂಕ ಕಥೆ - ಭಾಗ ೧

ಕಲಾವಿದ(ಕುಡುಕ) ರಂಗ ಮಂದಿರದ ಮಧ್ಯಕ್ಕೆ ಬಂದು ಕೆಲವು ಸನ್ನೆಗಳನ್ನು ಮಾಡುವನು. ಪ್ರೇಕ್ಷಕರಿಗೆ ಅರ್ಥವಾಗದ್ದನ್ನು

ಮನಗೊಂಡು ಮಾತನಾಡಲು ಶುರು ಮಾಡುವನು.

 

ಕುಡುಕ :ಏನು ಅರ್ಥ ಆಗಲಿಲ್ಲ ತಾನೆ? ಸರಿ ನಾ ಮಾಡಿದ ಸನ್ನೆಗಳ ಅರ್ಥ ಹೇಳ್ತೀನಿ ಕೇಳಿ. ನಾನೇನು ಹೇಳ್ದೆ ಅಂದ್ರೆ, "ನಾನೇನೋ ಕುಡುಕ ನಿಜ. ಆದ್ರೆ ನಾನು ಕುರುಡಾನೂ ಅಲ್ಲ, ಮೂಕನೂ ಅಲ್ಲ. ಎರಡು ನಿಮಿಷ ಕಣ್ಮುಚ್ಕೊಂಡು ಸನ್ನೆ ಮಾಡಿದ್ರೆ, ನಾನು ಯಾವ್ ಕಡೆ ತಿರುಗಿದೀನಿ ಅಂತ ನನಗೆ ಗೊತ್ತಾಗ್ಲಿಲ್ಲಾ , ನಾನೇನು ಹೇಳ್ತಾ ಇದ್ದೀನಿ ಅಂತ ನಿಮ್ಗೆ ಗೊತ್ತಾಗ್ಲಿಲ್ಲ. ಬೇಕ ನಮಗೆ ಈ ಕುರುಡನ ಮೂಕ ಕಥೆ. ನಾಟಕದ ಹೆಸರೇನೋ 'ಕುಡುಕ ಕುರುಡನ ಮೂಕ ಕಥೆ ' ಅಂತ ಇರಬೋದು, ಆದ್ರೆ ನಮಗೆ ಅದ್ರ ಗೋಜೇ ಬೇಡ. ಸುಮ್ನೆ ಈ ಕುಡುಕನ ಕಥೆ ಕೇಳಿ ಮಜಾ ತೊಗೊಂಡು ಹೋಗಿ. ಕುರುಡನ ಮೂಕ ಕಥೆ ಹೇಳಕ್ಕೆ ನಾನೇನು Helen Kellerಉ ಅಲ್ಲ, ನಮ್ಮ ನಿರ್ದೇಶಕರು Annie Sullivan ತರಹದ Miracle Worker ಕೂಡ ಅಲ್ಲ. ಏನು ಹಂಗೆ ನೋಡ್ತಾ ಇದ್ದೀರಾ? ಅದೇ ನಮ್ಮ ಅಮಿತಾಬ್ ಬಚ್ಚನ್ ಮತ್ತು ರಾಣಿ ಮುಕರ್ಜಿ ಅವರು ಮಾಡಿರುವ Black movie ಇದ್ಯಲ್ಲ ಅದು ನಿಜವಾಗ್ಲೂ ಹೇಳ್ಬೇಕು ಅಂದ್ರೆ ಹಾಲಿವುಡ್ ನಲ್ಲಿ ಮಾಡಿದ Miracle Worker ಅನ್ನೋ ಚಿತ್ರದ ರಿಮೇಕ್. ಆ ಚಿತ್ರಕ್ಕೆ ಮೂಲ ಸ್ಪೂರ್ಥಿ ಈ  Annie Sullivan ಮತ್ತು Hellen Keller. ಆ ಚಿತ್ರದ ತರಾನೆ ನಮ್ ನಾಟಕ ಅನ್ಕೊಂಡ್ರ? ಇಲ್ಲ ಕಣ್ರೀ, ಹಳೇ ಕಾಲದ ಮೂಕಿ ಚಿತ್ರ ಅಲ್ಲ ನಮ್ದು ಈಗಿನ ಕಾಲದ ಟಾಕಿ ನಮ್ದು."

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಕುಡುಕ